ವಿಷಯಕ್ಕೆ ಹೋಗು

ಟಿ.ಎನ್. ಶೇಷಗೋಪಾಲನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ.ಎನ್. ಶೇಷಗೋಪಾಲನ್
ಹಿನ್ನೆಲೆ ಮಾಹಿತಿ
ಜನನ೫ನೇ ಸೆಪ್ಟೆಂಬರ್ ೧೯೪೮
ನಾಗಪಟ್ಟಣಂ, ಮದ್ರಾಸ್, ತಮಿಳುನಾಡು, ಭಾರತ
ಸಂಗೀತ ಶೈಲಿಕರ್ನಾಟಕ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕ
ಸಕ್ರಿಯ ವರ್ಷಗಳು1970ರಿಂದ

ಮಧುರೈ ತಿರುಮಲೈ ನಂಬಿ ಶೇಷಗೋಪಾಲನ್ (ಜನನ, ಸೆಪ್ಟೆಂಬರ್ ೫, ೧೯೪೮) ಒಬ್ಬ ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕರು, ಸಂಗೀತಗಾರು ಮತ್ತು ಸಂಯೋಜಕರು. [] ಅವರಿಗೆ ೨೦೦೬ ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಲಾಯಿತು. ವೀಣೆ ಮತ್ತು ಹಾರ್ಮೋನಿಯಂನಲ್ಲಿ ಪ್ರವೀಣರಾಗುವುದರ ಜೊತೆಗೆ, ಅವರು ಹರಿಕಥೆಯ ಪ್ರತಿಪಾದಕರು.

ಆರಂಭಿಕ ಜೀವನ

[ಬದಲಾಯಿಸಿ]

ಟಿ.ಎನ್. ಶೇಷಗೋಪಾಲನ್ ತಮ್ಮ ಹೆಸರಿನ ಮುಂದೆ 'ಮಧುರೈ' ಎಂದು ಬಳಸುತ್ತಿದ್ದರೂ, ಅವರು ತಮಿಳುನಾಡಿನ ನಾಗಪಟ್ಟಣಂನಲ್ಲಿ ತಿರುಮಲೈ ನಂಬಿ ಅಯ್ಯಂಗಾರ್ ಮತ್ತು ತಿರುವೆಂಕಟವಳ್ಳಿ ಅಮ್ಮಾಳ್ ದಂಪತಿಯ ಪುತ್ರ. ಅವರು ಮೊದಲು ತಮ್ಮ ತಾಯಿಯ ಬಳಿ ಸಂಗೀತ ಕಲಿತರು. ನಂತರ ರಾಮನಾಥಪುರಂ ಸಿ.ಎಸ್. ಶಂಕರಶಿವನ್ ಅವರ ಆಶ್ರಯದಲ್ಲಿ ಸಂಗೀತ ಕಲಿತರು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಮತ್ತು ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಪದವಿ ಪಡೆದಿದ್ದಾರೆ. ನಂತರ ಸಂಗೀತ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು.

ವೃತ್ತಿಜೀವನ

[ಬದಲಾಯಿಸಿ]

ಅವರು ಹರಿಕಥೆಯನ್ನು ನಿರೂಪಿಸುವಲ್ಲಿ ಪ್ರವೀಣರಾಗಿದ್ದಾರೆ. ಹರಿಕೇಶನಲ್ಲೂರು ಮುತ್ತಯ್ಯ ಭಾಗವತರ ಗುರುಪರಂಪರೆಯ ಪ್ರಕಾರ ಹರಿಕಥೆಯ ಪ್ರದರ್ಶನ ನೀಡುತ್ತಾರೆ. ಶೇಷಗೋಪಾಲನ್ ತಮ್ಮದೇ ಆದ ಸಂಯೋಜನೆಗಳೊಂದಿಗೆ ತಮ್ಮ ವ್ಯಾಪಕ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮದೇ ಆದ ಸೊಗಸಾದ ತಿಲ್ಲಾನಗಳು, ಭಜನೆಗಳು, ನಾಮಾವಳಿಗಳು ಮತ್ತು ಅಭಾಂಗ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಉತ್ತರ ಭಾರತೀಯ ರಾಗಗಳೊಂದಿಗೆ ಸಮಾನವಾಗಿ ಪರಿಚಿತರು ಮತ್ತು ಹಲವಾರು ಜುಗಲ್ಬಂಧಿಗಳಲ್ಲಿ ಭಾಗವಹಿಸಿದ್ದಾರೆ. ಪ್ರಸಿದ್ಧ ಗಾಯಕಿ ಗಾಯತ್ರಿ ಗಿರೀಶ್ ಅವರು ಶೇಷಗೋಪಾಲನ್ ಅವರ ಶಿಷ್ಯೆ.

ಪ್ರವಾಸಗಳು

[ಬದಲಾಯಿಸಿ]

೧೯೮೪ ರಲ್ಲಿ ಅವರನ್ನು ಆಸ್ಟ್ರೇಲಿಯಾದ ಅಡಿಲೇಡ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಹಾಡಲು ಆಹ್ವಾನಿಸಲಾಯಿತು (ಮತ್ತು ಪರ್ತ್, ಅಡಿಲೇಡ್, ಸಿಡ್ನಿ ಮತ್ತು ನ್ಯೂಜಿಲೆಂಡ್ ಪ್ರದರ್ಶನಗಳನ್ನು ಒಳಗೊಂಡಂತೆ). ೧೯೮೭ ರಲ್ಲಿ ರಷ್ಯಾದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಅವರು ಸಿಂಗಾಪುರ, ಮಲೇಷ್ಯಾ, ಬಹ್ರೇನ್ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ಹಲವಾರು ಬಾರಿ ಭೇಟಿ ನೀಡಿ ಪ್ರದರ್ಶನ ನೀಡಿದ್ದಾರೆ.

ಚಲನಚಿತ್ರ

[ಬದಲಾಯಿಸಿ]

೧೯೮೩ ರಲ್ಲಿ ಅವರು "ತೋಡಿ ರಾಗಂ" ಎಂಬ ತಮಿಳು ಚಿತ್ರವನ್ನು ನಿರ್ಮಿಸಿ ನಾಯಕನ ಪಾತ್ರದಲ್ಲಿ ನಟಿಸಿದರು. ೨೦೦೬ ರಲ್ಲಿ ಬಿಡುಗಡೆಯಾದ ಜಾಂಬವನ್ ಚಿತ್ರದಲ್ಲಿ ಪ್ರಶಾಂತ್ ಅವರ ತಂದೆಯಾಗಿಯೂ ನಟಿಸಿದರು.

ಆತ್ಮ ಎಂಬ ತಮಿಳು ಚಲನಚಿತ್ರದ "ಇನ್ನರುಲ್ ತಾರುಂ ಅನ್ನಪೂರಿ" ಹಾಡಿಗೆ ಟಿಎನ್ ಶೇಷಗೋಪಾಲನ್ ಅವರು ಧ್ವನಿ ನೀಡಿದ್ದಾರೆ. ಈ ಚಲನಚಿತ್ರವನ್ನು ಪ್ರತಾಪ್ ಪೋತನ್ ನಿರ್ದೇಶಿಸಿದ್ದು ಇಳಯರಾಜ ಅವರ ಸಂಗೀತ ಸಂಯೋಜನೆ ಇದೆ. ವಾಲಿ ಅವರು ಸಾಹಿತ್ಯವನ್ನು ನೇಡಿದ್ದಾರೆ ಈ ಹಾಡು ಅನ್ನಪೂರಣಿ ದೇವಿಗೆ ಸಮರ್ಪಿತವಾದ ಭಕ್ತಿಗೀತೆಯಾಗಿದ್ದು, ಗೌರವವನ್ನು ವ್ಯಕ್ತಪಡಿಸುತ್ತದೆ ಮತ್ತು ಅವಳ ಆಶೀರ್ವಾದವನ್ನು ಕೋರುತ್ತದೆ.

ಪ್ರಶಸ್ತಿಗಳು ಮತ್ತು ಶೀರ್ಷಿಕೆಗಳು

[ಬದಲಾಯಿಸಿ]
  • ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿಯವರ ಸನ್ನಿಧಿಯಲ್ಲಿ ಕೃಷ್ಣ ಗಾನ ಸಭಾ ವತಿಯಿಂದ ಹರಿಕಥಾ ಚೂಡಾಮಣಿ ಪುರಸ್ಕಾರವನ್ನು ೨೦೧೪ರಲ್ಲಿ ಪಡೆದಿದ್ದಾರೆ.
  • ಜನವರಿ ೨೦೦೭ರಲ್ಲಿ ಮೈಸೂರಿನ ಚೋಡಿಯ ಸ್ಮಾರಕ ಟ್ರಸ್ಟ್‌ನಿಂದ ನೀಡಲಾದ ಗಾಯಕ ಸಿಖಾಮಣಿ ಪ್ರಶಸ್ತಿ ಪಡೆದಿದ್ದಾರೆ.
  • ಮದ್ರಾಸ್ ಸಂಗೀತ ಅಕಾಡೆಮಿಯಿಂದ ೨೦೦೬ ರಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದಿದ್ದಾರೆ.[]
  • ೨೦೦೪ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. []
  • CMANA, NJ, USA 2007ರಿಂದ "ಸಂಗೀತಸಾಗರ" ಪ್ರಶಸ್ತಿಯನ್ನು ಪಡೆದಿದ್ದಾರೆ.
  • HH ಶ್ರೀಮದ್ ಆಂಡವನ್ ಸ್ವಾಮಿಗಳು ಶ್ರೀರಂಗಂ ಅವರಿಂದ ಸುಲಕ್ಷಣ ಗಾನ ವಿಚಕ್ಷಣಪ್ರಶಸ್ತಿಯನ್ನು ೧೯೯೩ರಲ್ಲಿ ಪಡೆದಿದ್ದಾರೆ.
  • ದಿ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ, ಚೆನ್ನೈ ಇವರಿಂದ ೨೦೦೦ದಲ್ಲಿ ಸಂಗೀತ ಕಲಾಶಿಖಾಮಣಿ ಪ್ರಶಸ್ತಿಯನ್ನು ಪಡೆದಿದ್ದಾರೆ.
  • ಕುಮಾರಗಂಧರ್ವ ಫೌಂಡೇಶನ್ ಮುಂಬೈ ಇವರಿಂದ ೨೦೦೨ರಲ್ಲಿ ಕುಮಾರಗಂಧರ್ವ ರಾಷ್ಟ್ರೀಯ ಸನ್ಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ.
  • ಭಾರತೀಯ ಲಲಿತಕಲೆಗಳು ಟೆಕ್ಸಾಸ್ ಯುಎಸ್ಎ ಇವರು ನಾಧಬ್ರಹ್ಮಂ ಪ್ರಶಸ್ತಿಯನ್ನು ೨೦೦೨ರಲ್ಲಿ ನೀಡಿದ್ದಾರೆ.
  • ಸಂಗೀತ ನಾಟಕ ಅಕಾಡೆಮಿಯಿಂದ ೧೯೯೯-೨೦೦೦ ರ ಸಾಲಿನ ವರ್ಷದ ಸಂಗೀತಗಾರ ಪ್ರಶಸ್ತಿ ಪಡೆದಿದ್ದಾರೆ.
  • ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿಯಿಂದ ೨೦೦೦ ನೇ ಸಾಲಿನ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದಾರೆ.
  • ೧೯೬೪ ರಲ್ಲಿ ತಿರುಪ್ಪುಗಳ್ ಮಣಿ ಪ್ರಶಸ್ತಿ ಪಡೆದಿದ್ದಾರೆ.
  • ೧೯೬೭ರಲ್ಲಿ ಒಲವಕೋಡಿನ ತಮಿಳು ಸಂಗಮ್ ಅವರಿಂದ ಗಾನ ಭೂಪತಿ ಪ್ರಶಸ್ತಿ ಪಡೆದಿದ್ದಾರೆ.
  • ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಅವರಿಂದ ಸಂಗೀತ ಕಲಾ ಸಾಗರಂ ಪ್ರಶಸ್ತಿ ಪಡೆದಿದ್ದಾರೆ.
  • ೧೯೮೪ರಲ್ಲಿ ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ ಪಡೆದಿದ್ದಾರೆ.
  • ತಮಿಳುನಾಡು ಮುಖ್ಯಮಂತ್ರಿ ಶ್ರೀ ಕರುಣಾನಿಧಿ ಅವರಿಂದ ಇಸೈ ಸೆಲ್ವಂ ಪ್ರಶಸ್ತಿ ಪಡೆದಿದ್ದಾರೆ.
  • ಆಸ್ಟ್ರೇಲಿಯನ್ ಫೌಂಡೇಶನ್ ಆಫ್ ಕ್ಯಾನ್‌ಬೆರಾದಿಂದ ಇಸೈ ಕಲೈ ವೆಂಡನ್ ಪ್ರಶಸ್ತಿಯನ್ನು ೧೯೯೮ರಲ್ಲಿ ಪಡೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://web.archive.org/web/20080628113240/http://www.hinduonnet.com/thehindu/thscrip/print.pl?file=2005061703440200.htm&date=2005/06/17/&prd=fr&
  2. https://sangeetnatak.gov.in/public/uploads/awardees/docs/T_N_Seshgopalan.pdf
  3. "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.


ಬಾಹ್ಯ ಕೊಂಡಿ

[ಬದಲಾಯಿಸಿ]