ವಿಷಯಕ್ಕೆ ಹೋಗು

ಜ್ಞಾನ ನೆಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣಕ ವಿಜ್ಞಾನದಲ್ಲಿ, ಜ್ಞಾನ ನೆಲೆ (ನಾಲೆಜ್ ಬೇಸ್) ಎನ್ನುವುದು ವಾಕ್ಯಗಳ ಗುಂಪಾಗಿದ್ದು, ಪ್ರತಿಯೊಂದು ವಾಕ್ಯವನ್ನು ಜ್ಞಾನ ಪ್ರಾತಿನಿಧ್ಯ ಭಾಷೆಯಲ್ಲಿ ರಚಿಸಲಾಗಿದೆ ಮತ್ತು ಇದು ಸ್ವಚಾಲಿತವಾಗಿ ಹೊಸ ವಾಕ್ಯಗಳನ್ನು ಹೇಳಲು ಮತ್ತು ತಿಳಿದಿರುವ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಸಂಪರ್ಕವಾತಾವರಣಗಳನ್ನು (Interface ) ಹೊಂದಿದೆ. ಇದು ಕಂಪ್ಯೂಟರ್ ನಿಂದ ಬಳಸಲಾಗುವ ಸಂಕೀರ್ಣ ರಚನಾತ್ಮಕ ಡೇಟಾವನ್ನು ಸಂಗ್ರಹಿಸಲು ಬಳಸುವ ತಂತ್ರಜ್ಞಾನವಾಗಿದೆ.[]

ಪದದ ಮೂಲ ಬಳಕೆ

[ಬದಲಾಯಿಸಿ]

ಜ್ಞಾನ ನೆಲೆ ಗೆ ನೊಲೆಜ್ ಬೇಸ್ ಎಂಬ ಆಂಗ್ಲ ಭಾಷೆ ಪದ ಬಳಸಲಾಗುತ್ತದೆ. ಜ್ಞಾನ-ಮೂಲ ವ್ಯವಸ್ಥೆಯು ಪ್ರಪಂಚದ ಬಗ್ಗೆ ಸತ್ಯಗಳನ್ನು ಪ್ರತಿನಿಧಿಸುವ ಜ್ಞಾನ- ನೆಲೆಯನ್ನು ಮತ್ತು ಹೊಸ ವಿಷಯಗಳನ್ನು ನಿರ್ಣಯಿಸಲು ಅಥವಾ ಅಸಂಗತತೆಗಳನ್ನು ಎತ್ತಿ ತೋರಿಸಲು, ಆ ಸಂಗತಿಗಳ ಬಗ್ಗೆ ತಾರ್ಕಿಕ ವಿಧಾನಗಳನ್ನು ಒಳಗೊಂಡಿದೆ.[]

ಜ್ಞಾನ ನೆಲೆ ವ್ಯವಸ್ಥೆಗಳ ವಿಧಗಳು

[ಬದಲಾಯಿಸಿ]

ಜ್ಞಾನ ನೆಲೆ ವ್ಯವಸ್ಥೆಗಳಲ್ಲಿ ಎರಡು ವಿಧಗಳಿವೆ:

  • ಆಂತರಿಕ ಜ್ಞಾನ ನೆಲೆ ( Internal Knowledge Base): ಈ ರೀತಿಯ ಜ್ಞಾನ ಕೇಂದ್ರಗಳನ್ನು ಒಂದು ಸಂಸ್ಥೆಯೊಳಗಿನ ಉದ್ಯೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕಾರ್ಪೊರೇಟ್ ವಿಕಿಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದನ್ನು ಮುಖ್ಯವಾಗಿ: ಹೊಸ ನೇಮಕಾತಿಗಳನ್ನು ಸೇರಿಸುವುದು, ಆಂತರಿಕ ನೀತಿಗಳನ್ನು ದಾಖಲಿಸುವುದು ಮತ್ತು ಉದ್ಯೋಗಿಗಳ ಬೇಡಿಕೆಗಳಿಗೆ ತ್ವರಿತ ಉತ್ತರಗಳನ್ನು ನೀಡುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಳಸಬಹುದು.
  • ಬಾಹ್ಯ ಜ್ಞಾನ ನೆಲೆ (External Knowledge Base): ಇದು ಆಂತರಿಕ ಜ್ಞಾನ ನೆಲೆಗೆ ನೇರ ವಿರುದ್ಧವಾಗಿ ಕೆಲಸ ಮಾಡುತ್ತದೆ ಮತ್ತು ಇದನ್ನು ಗ್ರಾಹಕರು, ಸಂಭಾವ್ಯರು ಮತ್ತು ಕೆಲವು ಸಾರ್ವಜನಿಕರಿಗಾಗಿ ರಚಿಸಲಾಗಿದೆ. ಗ್ರಾಹಕ ಕೆಲಸದ ಹೊರೆ ಕಡಿಮೆ ಮಾಡುವುದು, ಪರಿಣಾಮಕಾರಿ ಸಲಹೆ ನೀಡುವುದು ಮತ್ತು ಒಟ್ಟಾರೆ ಬಳಕೆದಾರ ಅನುಭವವನ್ನು ಹೆಚ್ಚಿಸುವುದು ಈ ನೆಲೆಯ ಮುಖ್ಯ ಗುರಿಯಾಗಿದೆ.[]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Russell, Stuart J. (2021). "Knowledge-based agents". Artificial intelligence: a modern approach. Peter Norvig, Ming-Wei Chang, Jacob Devlin, Anca Dragan, David Forsyth, Ian Goodfellow, Jitendra Malik, Vikash Mansinghka, Judea Pearl, Michael J. Wooldridge (Fourth ed.). Hoboken, NJ: Pearson. ISBN 978-0-13-461099-3. OCLC 1124776132.
  2. Hayes-Roth, Frederick; Donald Waterman; Douglas Lenat (1983). Building Expert Systems. Addison-Wesley. ISBN 0-201-10686-8.
  3. Knowledge Base: How to Keep Information That Took Years to Build