ವಿಷಯಕ್ಕೆ ಹೋಗು

ಜೋಳಿಗೆ ಪವಾಡ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Jo.pavada.jpg
'ಜೋಳಿಗೆ ಪವಾಡ-ಸ್ವಾಮೀಜಿಯವರ ಆತ್ಮ ಚರಿತ್ರೆ'

ಜೋಳಿಗೆ ಪವಾಡ, [] ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳುಗಳ ಆತ್ಮಕಥೆ [] ಅವರ ಜೊತೆ ಹಲವು ದಶಕಗಳಕಾಲ ಒಡನಾಡಿದ ಹಲವಾರು ಶ್ರದ್ಧಾಳುಗಳಿಗೆ, ಮತ್ತು ಅವರ ಬಳಿ ನಿಕಟವಾಗಿ ಸಂಬಂಧಹೊಂದಿದ್ದ ಆಶ್ರಮ ವಾಸಿಗಳಿಗೆ ಸ್ವಾಮೀಜಿಯವರ ಜೀವನವನ್ನು ಪರಿಚಯಿಸುವ ಪುಸ್ತಕ. ಸ್ವಾಮೀಜಿಯವರ ಬಾಲ್ಯ, ಜನ್ಮಸ್ಥಳಗಳ, ಅವರ ಜೀವನದ ಬಗ್ಗೆ ತಿಳಿಯುವ ಆಸಕ್ತಿ ಎಲ್ಲರಿಗೂ ಇತ್ತು. ಬಹಳ ವರ್ಷಗಳ ಕಾಲ ಇದು ಲಭ್ಯವಾಗಿರಲಿಲ್ಲ. ಆದರೆ ೧೯೯೧ ರಲ್ಲಿ, ಸ್ವಾಮೀಜಿಯವರ 'ಹುಟ್ಟುಹಬ್ಬದ ಶತಮಾನೋತ್ಸವ'ದ ಸಮಯದಲ್ಲಿ ಪ್ರಕಟವಾದ ಅವರ ಕಿರು ಜೀವನ ಚರಿತ್ರೆ,"ಆತ್ಮ ನಿವೇದನೆ" ಯಲ್ಲಿ ಸ್ವಲ್ಪ ವಿಷಯಗಳು ತಿಳಿದವು. ರಾಘವೇಂದ್ರ ಸ್ವಾಮೀಜಿಯವರ ಜೊತೆ ಶಿವರಾಮ ಕಾರಂತರ ಒಡನಾಟದ ಹಲವಾರು ವಿವರಗಳು ಪುಸ್ತಕದಲ್ಲಿ ದಾಖಲಾಗಿವೆ.

ಸ್ವಾಮೀಜಿಯವರ ಅಪಾರ ಭಕ್ತವೃಂದದವರು 'ಆತ್ಮ ನಿವೇದನೆ,'ಯಲ್ಲಿ ತಿಳಿಸಿದ ಸಂಗತಿಗಳಿಗಿಂತ ಹೆಚ್ಚಿನ ವಿವರಗಳನ್ನು ತಿಳಿಯಲು ಉತ್ಸುಕರಾಗಿದ್ದರು. ಸ್ವಾಮೀಜಿಯವರು ಅದ್ಯಯನ ನಡೆಸಿ ಜನರನ್ನು ಸಂಪರ್ಕಿಸಿ, ಬರೆದ ಅತ್ಯಂತ ವಸ್ತುನಿಷ್ಠವಾದ ಮತ್ತು ಹಲವಾರು ಘಟನೆಗಳಿಗೆ ಪ್ರೇರಣೆಯಾದ ಸನ್ನಿವೇಷಗಳನ್ನು 'ಜೋಳಿಗೆ ಪವಾಡ'ದಲ್ಲಿ ಅತ್ಯಂತ ರಸವತ್ತಾಗಿ ನಿರೂಪಿಸಿದ್ದಾರೆ. ಕೆಲವು ಸಂಗತಿಗಳು, ಸ್ವಾತಂತ್ರ್ಯ ಪೂರ್ವ, ಮತ್ತು ಸ್ವತಂತ್ರ್ಯದ ನಂತರದ ಘಟನೆಗಳು. ಅವು, ಅತ್ಯಂತ ಖಾತ್ರಿ, ಮತ್ತು ನಂಬಿಕೆಗೆ ಯೋಗ್ಯವಾದ ದಾಖಲೆಗಳೆಂದು ಪರಿಗಣಿಸಬಹುದೆಂಬುದು ತಜ್ಞರ ಅಭಿಪ್ರಾಯ.

ಉಲ್ಲೇಖಗಳು

[ಬದಲಾಯಿಸಿ]
  1. ["ಜೋಳಿಗೆ ಪವಾಡ"(೧೮೯೧-೧೯೯೩)-ತಿರುಕ, ಪ್ರಥಮ ಮುದ್ರಣ-೧೯೯೪]
  2. ""ಜೋಳಿಗೆಯ ಪವಾಡ "- ಶ್ರೀ. ಶ್ರೀ. ರಾಘವೇಂದ್ರ ಸ್ವಾಮಿಯವರ ಆತ್ಮ ನಿವೇದನೆ -ತಿರುಕ (೧೮೯೧-೧೯೯೩)". Archived from the original on 2021-07-19. Retrieved 2021-07-19.