ಜೋಳಿಗೆ ಪವಾಡ

ವಿಕಿಪೀಡಿಯ ಇಂದ
Jump to navigation Jump to search
'ಜೋಳಿಗೆ ಪವಾಡ-ಸ್ವಾಮೀಜಿಯವರ ಆತ್ಮ ಚರಿತ್ರೆ'

ಜೋಳಿಗೆ ಪವಾಡ, ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳುಗಳ ಆತ್ಮಕಥೆ. ಅವರ ಜೊತೆ ಹಲವು ದಶಕಗಳಕಾಲ ಒಡನಾಡಿದ ಹಲವಾರು ಶ್ರದ್ಧಾಳುಗಳಿಗೆ, ಮತ್ತು ಅವರ ಬಳಿ ನಿಕಟವಾಗಿ ಸಂಬಂಧಹೊಂದಿದ್ದ ಆಶ್ರಮ ವಾಸಿಗಳಿಗೆ ಸ್ವಾಮೀಜಿಯವರ ಜೀವನವನ್ನು ಪರಿಚಯಿಸುವ ಪುಸ್ತಕ. ಬಹಳ ದಿನಗಳಿಂಅ ಸ್ವಾಮೀಜಿಯವರ ಬಾಲ್ಯ, ಜನ್ಮಸ್ಥಳಗಳ, ಅವರ ಜೀವನದ ಬಗ್ಗೆ ತಿಳಿಯುವ ಆಸಕ್ತಿ ಎಲ್ಲರಿಗೂ ಇತ್ತು. ಬಹಳ ವರ್ಷಗಳ ಕಾಲ ಇದು ಲಭ್ಯವಾಗಿರಲಿಲ್ಲ. ಆದರೆ ೧೯೯೧ ರಲ್ಲಿ, ಸ್ವಾಮೀಜಿಯವರ 'ಹುಟ್ಟುಹಬ್ಬದ ಶತಮಾನೋತ್ಸವ'ದ ಸಮಯದಲ್ಲಿ ಪ್ರಕಟವಾದ ಅವರ 'ಕಿರು ಜೀವನ ಚರಿತ್ರೆ,"ಆತ್ಮ ನಿವೇದನೆಯಲ್ಲಿ ಸ್ವಲ್ಪ ವಿಷಯಗಳು ತಿಳಿದವು. 'ಶಿವರಾಮ ಕಾರಂತ'ರ ಬಾಲ್ಯದ ದಿನಗಳ ವಿವರಗಳು ಬಹಳ ಭಿನ್ನವಾಗಿರುವುದು ತಿಳಿದುಬರುತ್ತದೆ; ಮತ್ತು ಕಾರಂತರು ತಮ್ಮಮುಂದಿನ ಜೀವನದಲ್ಲಿ ಸುಧಾರಣೆಗಳನ್ನು ತಂದುಕೊಂಡು,ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ಕೊಟ್ಟರು.

'ಜೋಳಿಗೆ ಪವಾಡ'[ಬದಲಾಯಿಸಿ]

ಸ್ವಾಮೀಜಿಯವರ ಅಪಾರ ಭಕ್ತವೃಂದದವರು 'ಆತ್ಮ ನಿವೇದನೆ,' ಯಲ್ಲಿ ತಿಳಿಸಿದ ಸಂಗತಿಗಳಿಗಿಂತ ಹೆಚ್ಚಿನ ವಿವರಗಳನ್ನು ತಿಳಿಯಲು ಉತ್ಸುಕರಾಗಿದ್ದರು. ಸ್ವಾಮೀಜಿಯವರು ಅದ್ಯಯನ ನಡೆಸಿ ಜನರನ್ನು ಸಂಪರ್ಕಿಸಿ ಬರೆದ ಅತ್ಯಂತ ವಸ್ತುನಿಷ್ಠವಾದ ಮತ್ತು ಹಲವಾರು ಘಟನೆಗಳಿಗೆ ಪ್ರೇರಣೆಯಾದ ಸನ್ನಿವೇಷಗಳನ್ನು 'ಜೋಳಿಗೆ ಪವಾಡ'ದಲ್ಲಿ ಅತ್ಯಂತ ರಸವತ್ತಾಗಿ ನಿರೂಪಿಸಿದ್ದಾರೆ. ಕೆಲವು ಸಂಗತಿಗಳು, ಸ್ವಾತಂತ್ರ್ಯ ಪೂರ್ವ, ಮತ್ತು ಸ್ವತಂತ್ರ್ಯದ ನಂತರದ ಘಟನೆಗಳು. ಅವು, ಅತ್ಯಂತ ಖಾತ್ರಿ, ಮತ್ತು ನಂಬಿಕೆಗೆ ಯೋಗ್ಯವಾದ ದಾಖಲೆಗಳೆಂದು ಪರಿಗಣಿಸಬಹುದು.