ವಿಷಯಕ್ಕೆ ಹೋಗು

ಜೇಮ್ಸ್ ಮೆಕ್‍ಕೀನ್ ಕ್ಯಾಟೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇಮ್ಸ್ ಮೆಕ್‍ಕೀನ್ ಕ್ಯಾಟೆಲ್
ಜನನ(೧೮೬೦-ಮೇ-೨೫)೨೫ ಮೇ ೧೮೬೦
Easton, Pennsylvania, U.S.
ಮರಣJanuary 20, 1944(1944-01-20) (aged 83)
Lancaster, Pennsylvania, U.S.
ಕಾರ್ಯಕ್ಷೇತ್ರPsychology, psychometrics
ಸಂಸ್ಥೆಗಳುUniversity of Cambridge
University of Pennsylvania
Columbia University
ಅಭ್ಯಸಿಸಿದ ವಿದ್ಯಾಪೀಠLafayette College (BA, MA)
University of Leipzig (PhD)
ಡಾಕ್ಟರೇಟ್ ಸಲಹೆಗಾರರುWilhelm Wundt
ಡಾಕ್ಟರೇಟ್ ವಿದ್ಯಾರ್ಥಿಗಳುWalter Dearborn
Harry L. Hollingworth
Shepherd Ivory Franz
Edward Thorndike
Edward Kellog Strong Jr.
John Dashiell
ಪತ್ನಿ/ಪತಿJosephine Owen(m. ೧೮೮೮)
ಮಕ್ಕಳು7, including Psyche
ತಂದೆWilliam Cassady Cattell

ಜೇಮ್ಸ್ ಮೆಕ್‍ಕೀನ್ ಕ್ಯಾಟೆಲ್ 1860-1944. ಅಮೆರಿಕನ್ ಮನಃಶಾಸ್ತ್ರಜ್ಞ. ವಸ್ತುನಿಷ್ಠ ಕ್ರಮಗಳು, ವೈಯಕ್ತಿಕ ಭಿನ್ನತೆಗಳ ಅಧ್ಯಯನ, ಮಾನಸಿಕ ಮಟ್ಟಗಳನ್ನಳೆವ ವಿಧಾನಗಳು, ವ್ಯಾವಹಾರಿಕ ವಿಷಯಗಳಿಗೆ ಮನಃಶಾಸ್ತ್ರದ ಅನ್ವಯ-ಈ ವಿಷಯಗಳಲ್ಲಿ ಈತ ತೋರಿದ ಆಸಕ್ತಿ ಮತ್ತು ಬೀರಿದ ಪ್ರಭಾವದಿಂದಾಗಿ ಅಮೆರಿಕದ ಮನಃಶಾಸ್ತ್ರ ಹೊಸ ದಾರಿಯಲ್ಲಿ ಬೆಳೆಯಲನುಕೂಲವಾಯಿತು.

ವಿದ್ಯಾಭ್ಯಾಸ

[ಬದಲಾಯಿಸಿ]

ಲಾಫಯೆಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ 1880ರಲ್ಲಿ ಯೂರೋಪಿಗೆ ತೆರಳಿ ಗೊಯಟ್ಟಿಂಗೆನ್ನಿನ ಲೋಟ್ಸೆ ಮತ್ತು ಲೀಪ್‍ಜಿಗ್‍ನಲ್ಲಿ ವಿದ್ವಾಂಸ ವೂಂಟ್‍ನ ಬಳಿ ಶಿಷ್ಯವೃತ್ತಿ ಮಾಡಿದ.

ಸಾಧನೆಗಳು

[ಬದಲಾಯಿಸಿ]

1882ರಲ್ಲಿ ಅಮೆರಿಕ ಹಿಂದಿರುಗಿ ಸ್ಟಾನ್ಲಿಹಾಲ್‍ನ ಶಿಷ್ಯನಾಗಿ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಲ್ಲಿದ್ದ. ಮರುವರ್ಷ ಲೀಪ್‍ಜಿಗ್‍ಗೆ ಮರಳಿ ವೂಂಟ್‍ನ ಸಹೋದ್ಯೋಗಿಯಾಗಿ ಮೂರು ವರ್ಷ ಕೆಲಸ ಮಾಡಿದ. ಪ್ರತಿಕೃತಿಯ ಕಾಲ (ಆರ್.ಟಿ.) ಮತ್ತು ವೈಯಕ್ತಿಕ ವೈವಿಧ್ಯಗಳ ಮೇಲೆ ಸಂಶೋಧನೆಗಳನ್ನು ನಡೆಸಿದ. ಅಮೆರಿಕಕ್ಕೆ ಮರಳಿ ಪೆನ್ಸಿಲ್‍ವೇನಿಯ, ಕೊಲಂಬಿಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ. 1891ರಲ್ಲಿ ಕೊಲಂಬಿಯದಲ್ಲಿ ಪ್ರಾಯೋಗಿಕ ಮನಃಶಾಸ್ತ್ರ ಶಾಲೆಯೊಂದನ್ನು ವ್ಯವಸ್ಥೆ ಮಾಡಿ ಇಪ್ಪತ್ತಾರು ವರ್ಷಗಳು ಅದರ ಅಧಿಕಾರಿಯಾಗಿದ್ದ. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಫ್ರಾನ್ಸಿಸ್ ಗಾಲ್ಟನ್ನನ ಜೊತೆಗೂ ಕೊಲಂಬಿಯದಲ್ಲಿ ಬಾಲ್ಡ್‍ವಿನ್ನನ ಜೊತೆಗೂ ಕೆಲಸ ಮಾಡಿದ. ಅಮೆರಿಕದಲ್ಲಿ ಮನಃಶಾಸ್ತ್ರಕ್ಕೆ ವೈಜ್ಞಾನಿಕ ಸ್ಥಾನವನ್ನು ಒದಗಿಸಿಕೊಟ್ಟವನೀತನೇ. 1929ರಲ್ಲಿ ನವಮ ಅಂತರರಾಷ್ಟ್ರ ಮನೋವಿಜ್ಞಾನ ಸಮ್ಮೇಳನ ನಡೆದಾಗ ಇವನೇ ಅದರ ಅಧ್ಯಕ್ಷನಾಗಿದ್ದ. ನಿಯಂತ್ರಿತ ಸಂಯೋಜನೆ, ಸ್ವಚ್ಛಂದ ಸಂಯೋಜನೆ, ಪ್ರತಿಕ್ರಿಯೆಯ ವೇಗ, ಅವಧಾನದ ಪರಿಮಿತಿ, ಮುಂತಾದ ಕ್ಷೇತ್ರಗಳಲ್ಲಿ ಈತ ಕೆಲಸ ಮಾಡಿದ್ದಾನೆ. ಇ.ಎಲ್.ಕಾರ್ನ್‍ಡೈಕ್, ಆರ್.ಎಸ್.ಉಡ್‍ವರ್ತ್, ಡಬ್ಲ್ಯೂ, ಎಫ್. ಡಿಯರ್‍ಬಾರ್ನ್, ಇ.ಕೆ.ಸ್ಟ್ರಾಂಗ್, ಎ,ಟಿ.ಪಾಫೆನ್‍ಬರ್ಗರ್, ಎ,ಐ.ಗೇಟ್ಸ್ ಮುಂತಾದ ಪ್ರಸಿದ್ಧ ಮನಃಶಾಸ್ತ್ರಜ್ಞರು ಈತನ ಶಿಷ್ಯರು.

ವೈಯ್ಯುಕ್ತಿಕ ಜೀವನ

[ಬದಲಾಯಿಸಿ]

ಕ್ಯಾಟೆಲ್ ೧೮೮೮ ರಲ್ಲಿ ಇಂಗ್ಲಿಷ್ ವ್ಯಾಪಾರಿಯ ಮಗಳು ಜೋಸೆಫೀನ್ ಓವನ್ ಅವರನ್ನು ವಿವಾಹವಾದರು. ಅವರ ಏಳು ಮಕ್ಕಳು ತಮ್ಮ ಪೂರ್ವ-ಕಾಲೇಜು ಶಿಕ್ಷಣವನ್ನು ಮನೆಯಲ್ಲಿಯೇ ಪಡೆದರು, ಅವರ ಪೋಷಕರು ಬೋಧಕರಾಗಿ ಕೆಲಸ ಮಾಡಿದರು. ಇಡೀ ಕುಟುಂಬವು ಕ್ಯಾಟೆಲ್ ಅವರ ಸಂಪಾದಕೀಯ ಕೆಲಸದಲ್ಲಿ ಹಂಚಿಕೊಂಡರು. [3] ಒಬ್ಬ ಮಗಳು, ಸೈಕ್ ಕ್ಯಾಟೆಲ್ (೧೮೯೩–೧೯೮೯), ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ, ಪೆನ್ಸಿಲ್ವೇನಿಯಾದ ಲ್ಯಾಂಕಾಸ್ಟರ್‌ನಲ್ಲಿ ಸಣ್ಣ ಮಕ್ಕಳ ಮನೋವಿಜ್ಞಾನ ಅಭ್ಯಾಸವನ್ನು ಸ್ಥಾಪಿಸಿದಳು ಮತ್ತು ಶಿಶುಗಳ ಬುದ್ಧಿಮತ್ತೆಯನ್ನು ನಿರ್ಣಯಿಸಲು ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಿದಳು.[]

ಕ್ಯಾಟೆಲ್ ಜನವರಿ 20, 1944 ರಂದು 83 ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಲ್ಯಾಂಕಾಸ್ಟರ್‌ನಲ್ಲಿರುವ ಲ್ಯಾಂಕಾಸ್ಟರ್ ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು[]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Cattell, Psyche (1940). The Measurement of Intelligence of Infants and Young Children (1st ed.). New York, New York: The Psychological Corporation.
  2. "Dr. James M. Cattell". Harrisburg Telegraph. 21 January 1944. p. 3. Retrieved 2021-05-03 via Newspapers.com.