ಜೇಮ್ಸ್ ಪೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಸ್‌ಬಾಡೆನ್‌ನಲ್ಲಿರುವ ಮನೆಯಲ್ಲಿ ಜೇಮ್ಸ್ ಪೀಸ್

ಕೆನ್ನೆತ್ ಜೇಮ್ಸ್ ಪೀಸ್ (ಆಂಗ್ಲ: Kenneth James Peace), ದಿನಾಂಕ ಸೆಪ್ಟೆಂಬರ್ ೨೮, ೧೯೬೩ ರಂದು ಪೇಸ್ಲೀಯಲ್ಲಿ (ಆಂಗ್ಲ: Paisley) ಜನಿಸಿದರು. ಅವರೊಬ್ಬ ಸಂಯೋಜಕರು, ಪಿಯಾನೋ ವಾದಕರು ಹಾಗೂ ದೃಶ್ಯ ಕಲಾವಿದರು.

ಜೀವನ[ಬದಲಾಯಿಸಿ]

ಕೆನ್ನೆತ್ ಜೇಮ್ಸ್ ಪೀಸ್ ಸೆಪ್ಟೆಂಬರ್ ೨೮, ೧೯೬೩ ರಂದು ಸ್ಕಾಟ್ಲ್ಯಾಂಡ್‌ನ ಪೇಸ್ಲೀಯಲ್ಲಿ ಜನಿಸಿದರು.[೧][೨] ಅವರು ತಮ್ಮ ಬಾಲ್ಯದ ಹೆಚ್ಚಿನ ಭಾಗವನ್ನು ಪಶ್ಚಿಮ ಸ್ಕಾಟ್ಲ್ಯಾಂಡಿನ ಸಮುದ್ರ ತೀರದಲ್ಲಿರುವ ಹೆಲೆನ್ಸ್‌ಬರಾದಲ್ಲಿ (ಆಂಗ್ಲ: Helensburgh) ಕಳೆದರು.[೧][೩] ಅವರ ಕುಟುಂಬದಲ್ಲಿ ಅನೇಕ ಕಲಾವಿದರಿದ್ದರು (ಆಂಗ್ಲ: John McGhie). ಅವರು ಇಪ್ಪತ್ತನೆಯ ಶತಮಾನದ ಪ್ರಥಮಾರ್ಧದ ಜನಪ್ರಿಯ ನೃತ್ಯ ಸಂಗೀತ ಸಂಯೋಜಕರಾಗಿದ್ದ ಫೆಲಿಕ್ಸ್ ಬರ್ನ್ಸ್‌ರ (ಆಂಗ್ಲ: Felix Burns) ಸಂಬಂಧಿ. ತಮ್ಮ ಎಂಟನೆಯ ವಯಸ್ಸಿನಲ್ಲಿ ಪಿಯಾನೋ ಕಲಿಕೆಯನ್ನು ಪ್ರಾರಂಭಿಸಿ ಹದಿನಾಲ್ಕನೇ ವಯಸ್ಸಿನಲ್ಲಿ ಸ್ಕಾಟ್ ಜಾಪ್ಲಿನ್ (ಆಂಗ್ಲ: Scott Joplin) ಅವರ ಸಂಗೀತದೊಂದಿಗೆ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಅದಾದ ಎರಡು ವರ್ಷಗಳ ನಂತರ ಸಂಗೀತ ಮತ್ತು ನಾಟಕಗಳ ರಾಯಲ್ ಸ್ಕಾಟಿಷ್ ಅಕಾಡೆಮಿಯಲ್ಲಿ ಅತ್ಯಂತ ಕಿರಿಯ ಪೂರ್ಣಾವಧಿ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು (ಈಗ ಅದಕ್ಕೆ ರಾಜಮನೆತನದ ಸಂರಕ್ಷಣಾಲಯ ಎಂಬ ಹೆಸರಿದೆ - ಆಂಗ್ಲ: Royal Conservatoire of Scotland).[೧][೨][೩][೪] ೧೯೮೩ ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದಿಂದ (ಅಂಗ್ಲ: Glasgow University) ಪಿಯಾನೋ ಬೋಧನೆಯಲ್ಲಿ B.A.,[೪][೫] ಪದವಿ ಪಡೆದರು. ಮರುವರ್ಷವೇ ಆರ್‌ಎಸ್‌ಎಎಮ್‌ಡಿ ವಾದ್ಯವೃಂದದಲ್ಲಿ ಮೆಂಡೆಲ್‌ಸನ್ ಪಿಯಾನೊ ಕಛೇರಿ ನಡೆಸಿಕೊಡುವುದರೊಂದಿಗೆ ಸಂಗೀತ ನಿರ್ವಹಣೆಯಲ್ಲಿ ಡಿಪ್ಲೊಮಾ ಪಡೆದರು.[೧] ಸಾಂಪ್ರದಾಯಿಕ ಓದನ್ನು ನಿಲ್ಲಿಸಿದಮೇಲೆ ಪಿಯಾನೋ ವಾದಕರಾಗಿ ಬಹು ಬೇಡಿಕೆಯಲ್ಲಿದ್ದು ೧೯೮೧ ರಿಂದ ೧೯೯೧ ರವರೆಗೆ ಎಡಿನ್‌ಬರಾದಲ್ಲಿ ವಾಸವಾಗಿದ್ದರು.[೧][೩]

ಜೇಮ್ಸ್ ಪೀಸ್ ೧೯೯೧ರಿಂದ ೨೦೦೯ ರವರೆಗೆ ಜರ್ಮನಿಯ (ಜರ್ಮನ್: Bundesrepublik Deutschland) ಬದ್‌ನೌಹೀಮ್‌ನಲ್ಲಿ ನೆಲೆಸಿದ್ದರು.[೬][೭][೮] ೧೯೯೮ ರಿಂದ ಟ್ಯಾಂಗೊ ಕುರಿತು ಅಭ್ಯಾಸ ಮಾಡಿ ಸ್ವಯಂ ಸ್ಫೂರ್ತಿಯಿಂದ ಪಿಯಾನೊ ಸಂಯೋಜನೆಯ "ಟ್ಯಾಂಗೊ ಎಸ್ಕೋಸಿಸ್" (ಆಂಗ್ಲ: Scottish Tango)[೮][೯] ಎಂಬ ಸಿ.ಡಿ.ಯನ್ನು ನಿರ್ಮಾಣ ಮಾಡಿದರು, ಮತ್ತು ೨೦೦೨ ರಲ್ಲಿ ವಿಕ್ಟೋರಿಯಾ ಸಂಗೀತ ಕಾಲೇಜಿನ (ಆಂಗ್ಲ: Victoria College of Music) ಗೌರವ ಸದಸ್ಯರಾದರು.[೩][೮] ಅದೇ ವರ್ಷ ಸೆಪ್ಟೆಂಬರ್/ ಅಕ್ಟೋಬರ್ ತಿಂಗಳಿನಲ್ಲಿ ಉತ್ತರ ಜರ್ಮನಿಯಲ್ಲಿ ಏಕವ್ಯಕ್ತಿ ಪ್ರದರ್ಶನ ಪ್ರವಾಸವನ್ನು ಕೈಗೊಂಡರು, ಮತ್ತು ನವೆಂಬರ್ ತಿಂಗಳಿನಲ್ಲಿ ಪೂರ್ವ ದೇಶಗಳತ್ತ ಹೊರಟು ಹಾಂಗ್‌ಕಾಂಗ್‍ನಲ್ಲಿ "ಟ್ಯಾಂಗೊ ೧೭" ಮೊದಲ ಪ್ರದರ್ಶನವನ್ನು ನೀಡಿದರು.[೮][೧೦][೧೧]

Tango XVIII by James Peace (James Peace, piano)

ಮುಂದಿನ ವರ್ಷಗಳಲ್ಲಿ ಅವರು ಪ್ರದರ್ಶನಗಳನ್ನು ಯೂರೋಪಿನಲ್ಲಿಯೇ ಕೇಂದ್ರೀಕರಿಸಿದರು. ಟ್ಯಾಂಗೊದ ಅವರ ಸ್ವಂತ ರಚನೆಗಳನ್ನು ಈ ಕೆಳಕಂಡ ರಾಜಧಾನಿ ನಗರಗಳಲ್ಲಿ ಪ್ರದರ್ಶಿಸಿದರು: ಆಮ್ಸ್‌ಟರ್‌ಡ್ಯಾಮ್, ಅಥೆನ್ಸ್,[೧೨] ಬರ್ಲಿನ್,[೧೩] ಬ್ರುಸಲ್ಸ್, ಹೆಲ್ಸಿಂಕಿ,[೧೪] ಲಿಸ್ಬನ್,[೧೫] ಲಂಡನ್, ಮಡ್ರಿಡ್,[೧೬] ಓಸ್ಲೋ,[೧೭][೧೮] ರೀಕಾವಿಕ್[೧೯] ಮತ್ತು ವಿಯೆನ್ನ.[೨೦]

Tango Milonga op. 26 no. 3 by James Peace

ಟ್ಯಾಂಗೊ ಸಂಗೀತ ಪ್ರಕಾರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ೨೦೦೮ ರಲ್ಲಿ ಲಂಡನ್ ಸಂಗೀತ ಕಾಲೇಜು (ಆಂಗ್ಲ: London College of Music) ಇವರಿಗೆ ಗೌರವ ಸದಸ್ಯತ್ವ ನೀಡಿತು.[೧]

ಕೆಲಕಾಲದ ಎಡಿನ್‌ಬರಾ ವಾಸದ ನಂತರ ಫೆಬ್ರುವರಿ,[೩] ೨೦೧೦ ರಲ್ಲಿ ವೀಸ್‌ಬಾಡೆನ್‌ನಲ್ಲಿ (ಜರ್ಮನ್: Wiesbaden) ನೆಲೆಸಲು ಅವರು ಜರ್ಮನಿಗೆ ಹಿಂತಿರುಗಿದರು.[೧][೨] ಇದು ಅವರಿಗೆ ಹೊಸ ಕ್ರಿಯಾಶೀಲತೆಯನ್ನು ನೀಡಿತು. ತಮ್ಮದೇ ರಚನೆಗಳ ಕಿರುಚಲನಚಿತ್ರಗಳನ್ನು ಮಾಡಿದರು. ಈ ಪ್ರಕಾರದಲ್ಲಿ "ವೀಸ್‌ಬಾಡೆನ್‌ನಲ್ಲಿ ಜೇಮ್ಸ್ ಪೀಸ್" ಎಂಬ ಸಾಕ್ಷ್ಯಚಿತ್ರ ಪ್ರಮುಖವಾದುದು.[೨೧][೨೨]

ಪ್ರಶಸ್ತಿಗಳು ಮತ್ತು ಬಹುಮಾನಗಳು[ಬದಲಾಯಿಸಿ]

●     ಮೊದಲ ಬಹುಮಾನ, "ಆಗ್ನೆಸ್ ಮಿಲ್ಲರ್" ಸ್ಪರ್ಧೆ (ಆಂಗ್ಲ: Agnes Millar Prize for sight-reading). ಗ್ಲಾಸ್ಗೊ, ೧೯೮೩[೪]

●    ಮೊದಲ ಬಹುಮಾನ, "ಡನ್‌ಬಾರ್ಟನ್‌ಷೈರ್ ಇ.ಐ.ಎಸ್" ಸ್ಪರ್ಧೆ (ಆಂಗ್ಲ: Dunbartonshire E.I.S. Prize for piano accompaniment). ಗ್ಲಾಸ್ಗೊ, ೧೯೮೪[೪]

●    ಮೊದಲ ಬಹುಮಾನ, ಸಿಬೆಲಿಯಸ್ ಪ್ರಬಂಧ ಸ್ಪರ್ಧೆ. ಗ್ಲಾಸ್ಗೊ, ೧೯೮೫[೪]

●    ಡಿಪ್ಲೊಮಾ, ಟಿ.ಐ.ಎಮ್. ಅಂತಾರಾಷ್ಟ್ರೀಯ ಸಂಯೋಜನಾ ಸ್ಪರ್ಧೆ (ಇಟಾಲಿಯನ್: Torneo Internazionale di Musica). ರೋಮ್, ೨೦೦೦[೧][೨][೫]

●    ಡಿಪ್ಲೊಮಾ, ಐಬಿಎಲ್‌ಎ ಫೌಂಡೇಷನ್. ನ್ಯೂ ಯಾರ್ಕ್, ೨೦೦೨[೧][೨][೫]

●    ಸಂಸ್ಮರಣಾ ಪದಕ (ಮೊದಲ ದರ್ಜೆ), ಅಂತಾರಾಷ್ಟ್ರೀಯ ಪಿಯಾನೊ ಡ್ಯೂಯೊ ಸಂಘ. ಟೋಕಿಯೊ, ೨೦೦೨[೧][೩][೫][೮][೨೩]

●    ಚಿನ್ನದ ಪದಕ, ಲೂಟೀಸ್ ಅಂತಾರಾಷ್ಟ್ರೀಯ ಸಂಘ (ಫ್ರೆಂಚ್: Internationale Académie de Lutèce). ಪ್ಯಾರಿಸ್, ೨೦೦೫[೧][೩]

ಮುಖ್ಯ ರಚನೆಗಳು[ಬದಲಾಯಿಸಿ]

James Peace - Idylls Op.4b

• ಜಲಪಾತ (ಆಂಗ್ಲ: The Waterfall)[೨೪]

• ಐಡಿಲ್ (ಆಂಗ್ಲ: Idyll)

• ಉದಯ ರಾಗ (ಫ್ರೆಂಚ್: Aubade)

• ಮೌನ ಕಣ್ಣೀರು (ಆಂಗ್ಲ: Silent Tears)

• ಮರೆತುಹೋದ ಎಲೆಗಳು (ಆಂಗ್ಲ: Forgotten Leaves)

• ಓಬೋ ಸೊನಾಟಾ (ಆಂಗ್ಲ: Oboe Sonata)

• ಬ್ಯಾಲಡ್ (ಆಂಗ್ಲ: Ballade)

• ಉತ್ಸವದ ಮೆರವಣಿಗೆ - ೧ (ಆಂಗ್ಲ: Ceremonial March No.1)

• ಉತ್ಸವದ ಮೆರವಣಿಗೆ - ೨ (ಆಂಗ್ಲ: Ceremonial March No.2)

• ಶರತ್ಕಾಲದ ಚಿನ್ನ (ಆಂಗ್ಲ :Autumn Gold)[೨೫]

• ಶಾಶ್ವತ ಗೀತೆ (ಆಂಗ್ಲ: Eternal Song)[೧]

• ಜಾರ್ಜಿಯಾಗಾಗಿ (ಜಾರ್ಜಿಯಾ ಭಾಷೆ: საქართველოსთვის)

  ಸಾಹಿತ್ಯ: ತಮರ್ ಚಿಕ್ವಾಯ್ಜ್, ಝುರಚ್ ಚಿಕ್ವಾಯ್ಜ್ ಮತ್ತು ಜೇಮ್ಸ್ ಪೀಸ್

• ಏಕವ್ಯಕ್ತಿ ಪಿಯಾನೊದಿಂದ ೨೪ ಟ್ಯಾಂಗೊಗಳು[೧][೯][೨೧][೨೨]

ಬಾಹ್ಯ ಕೊಂಡಿಗಳು[ಬದಲಾಯಿಸಿ]

Souvenir de Buenos Aires (ಪಿಯಾನೋ), YouTube

Autumn Gold, YouTube

Lento Lacrimoso, YouTube

ಉಲ್ಲೇಖಗಳು[ಬದಲಾಯಿಸಿ]

  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ Birgitta Lampert. “ಕರ್ಕಶ ಶಬ್ದವಿಲ್ಲದೆ”. Wiesbadener Tagblatt (ಜರ್ಮನ್ ವೃತ್ತಪತ್ರಿಕೆ), ೧೦ ಫೆಬ್ರುವರಿ, ೨೦೧೧
  2. ೨.೦ ೨.೧ ೨.೨ ೨.೩ ೨.೪ Julia Anderton. “ಸಿಹಿಕಹಿ ಕತೆಯಂತೆ ಟ್ಯಾಂಗೊ”. Wiesbadener Kurier (ಜರ್ಮನ್ ವೃತ್ತಪತ್ರಿಕೆ), ೨೪ ಮಾರ್ಚ್ ೨೦೧೨
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ Sabine Klein. “ನನ್ನ ಸಂಗೀತ ನನ್ನಂತೆ ಬಹಳ ರಮ್ಯ”. Frankfurter Rundschau (ಜರ್ಮನ್ ವೃತ್ತಪತ್ರಿಕೆ), ೧೯೯೨. ಸಂಚಿಕೆ ಸಂಖ್ಯೆ ೨೫೪, ಪುಟ ೨
  4. ೪.೦ ೪.೧ ೪.೨ ೪.೩ ೪.೪ G. Müller. “ಪಿಯಾನೊದ ಆತ್ಮ ಟ್ಯಾಂಗೊ ನರ್ತನ ಮಾಡುತ್ತದೆ”. Kulturspiegel (ಜರ್ಮನ್ ವೃತ್ತಪತ್ರಿಕೆ), ೧೭ ವೆುೕ, ೨೦೦೧. ಪುಟ ೨
  5. ೫.೦ ೫.೧ ೫.೨ ೫.೩ Deutsche Nationalbibliothek. “ಜೇಮ್ಸ್ ಪೀಸ್”
  6. ಜೇಮ್ಸ್ ಪೀಸ್. FRIZZ (ಜರ್ಮನ್ ವೃತ್ತಪತ್ರಿಕೆ). ಜನವರಿ, ೨೦೦೨, ಪುಟ ೫
  7. Manfred Merz. “ಕಲಾಭಿಜ್ಞತೆ ಮತ್ತು ಸೂಕ್ಷ್ಮತೆಯಿಂದ ಕೂಡಿದ ವರ್ಣಮಯ ರಮ್ಯಲೋಕ”. Wetterauer Zeitung (ಜರ್ಮನ್ ವೃತ್ತಪತ್ರಿಕೆ). ೧೨ ಡಿಸೆಂಬರ್, ೧೯೯೨, ಪುಟ ೧೯
  8. ೮.೦ ೮.೧ ೮.೨ ೮.೩ ೮.೪ “ಜೇಮ್ಸ್ ಪೀಸ್”. The Tango Times (ನ್ಯೂಯಾರ್ಕ್ ವೃತ್ತಪತ್ರಿಕೆ), ಚಳಿಗಾಲದ ಸಂಚಿಕೆ ೨೦೦೨/೨೦೦೩. ಸಂಚಿಕೆ ಸಂಖ್ಯೆ ೩೯, ಪುಟಗಳು ೧‒೫
  9. ೯.೦ ೯.೧ National Library of Scotland. “Tango escocès”
  10. TangoTang (ಸುದ್ದಿಪತ್ರ). ಹಾಂಗ್ ಕಾಂಗ್, ೮ ಅಕ್ಟೋಬರ್, ೨೦೦೨
  11. “ಜೇಮ್ಸ್ ಪೀಸ್”. South China Morning Post (ಹಾಂಕಾಂಗ್ ವೃತ್ತಪತ್ರಿಕೆ). ೯ ಅಕ್ಟೋಬರ್, ೨೦೦೨
  12. ಸಂಗೀತ ಕಾರ್ಯಕ್ರಮದ ಕರಪತ್ರ {Για σένα, Αγγελική}. ಅಥೆನ್ಸ್, ೨೭ ಅಕ್ಟೋಬರ್, ೨೦೧೬
  13. Tangodanza (ಜರ್ಮನ್ ವೃತ್ತಪತ್ರಿಕೆ). ಸಂಚಿಕೆ ಸಂಖ್ಯೆ ೧/೨೦೦೨, ಪುಟ ೯
  14. ಸಂಗೀತ ಕಛೇರಿಯ ಪೋಸ್ಟರ್ (ಫಿನ್ಲೆಂಡ್ ಸಂಗೀತ ಪ್ರದರ್ಶನ ಪ್ರವಾಸ, ೨೦೧೪)
  15. ಸಂಗೀತ ಕಛೇರಿಯ ಪೋಸ್ಟರ್ (ಪೋರ್ಚುಗಲ್ ಸಂಗೀತ ಪ್ರದರ್ಶನ ಪ್ರವಾಸ, ೨೦೧೬)
  16. ಸಂಗೀತ ಕಛೇರಿಯ ಪೋಸ್ಟರ್, “¡Feliz cincuenta cumpleaños - 2013!” (ಸ್ಪೇನ್ ಸಂಗೀತ ಪ್ರದರ್ಶನ ಪ್ರವಾಸ)
  17. La Cadena (ಡಚ್ ನಿಯತಕಾಲಿಕೆ). ಸೆಪ್ಟೆಂಬರ್ ೨೦೦೨, ಪುಟ ೨೬
  18. Listen.no.: Konsert, ಜೇಮ್ಸ್ ಪೀಸ್ (ಪಿಯಾನೋ). Munch Museum (ಓಸ್ಲೋ). ೧೬ ಅಕ್ಟೋಬರ್, ೨೦೦೪
  19. Ríkarður Ö. Pálsson. “Skozkir Slaghörputangoár”. Morgunblaðið (mbl). ರೀಕಾವಿಕ್, ೧೪ ಅಕ್ಟೋಬರ್, ೨೦೦೪
  20. ಸಂಗೀತ ಕಾರ್ಯಕ್ರಮದ ಕರಪತ್ರ. ವಿಯೆನ್ನಾ. ೨೩ ಜನವರಿ, ೨೦೦೫
  21. ೨೧.೦ ೨೧.೧ National Library of Scotland. “James Peace in Wiesbaden”
  22. ೨೨.೦ ೨೨.೧ Deutsche Nationalbibliothek. “James Peace in Wiesbaden”
  23. ಅಂತಾರಾಷ್ಟ್ರೀಯ ಪಿಯಾನೊ ಸಂಘ (ಟೋಕಿಯೊ) ಬಹುಮಾನ ವಿಜೇತರ ಯಾದಿ, ೨೦೦೨
  24. Staatstheater Wiesbaden (ಸಂಗೀತ ಕಾರ್ಯಕ್ರಮದ ಕರಪತ್ರ). ೧೨/೧೯ ಸೆಪ್ಟೆಂಬರ್, ೨೦೨೧
  25. Schwäbische Post. “ಪಿಟೀಲಿನ ಶಬ್ದ ವಾದ್ಯಸಂಗೀತದ ಮೇಲೇರಿದೆ”. ೪ ಜೂನ್, ೧೯೯೪