ವಿಷಯಕ್ಕೆ ಹೋಗು

ಜೇಮ್ಸ್ ಚ್ಯಾಡ್‍ವಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಡ್‍ವಿಕ್ ಸು. ೧೯೪೫ರಲ್ಲಿ

ಸರ್ ಜೇಮ್ಸ್ ಚಾಡ್‌ವಿಕ್ (1891-1974) ಕೇಂಬ್ರಿಜಿನ ಒಬ್ಬ ಖ್ಯಾತ ಭೌತವಿಜ್ಞಾನಿ.

ಜೀವನ, ಸಾಧನೆಗಳು

[ಬದಲಾಯಿಸಿ]

1891ರ ಅಕ್ಟೋಬರ್ 20ರಂದು ಚೆಷೈರಿನಲ್ಲಿ ಜನನ.[][] ಅಲ್ಲಿನ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ 1908ರಲ್ಲಿ ವಿಕ್ಟೋರಿಯ ವಿಶ್ವವಿದ್ಯಾಲಯವನ್ನು ಸೇರಿದ. ಅದೇ ಸುಮಾರಿಗೆ 1910ರಲ್ಲಿ ಆ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಬೋಧಕನಾಗಿದ್ದ, ರುದರ್‌ಫರ್ಡನ (1871-1937) ಪರಿಚಯವಾಯಿತು. ಚಾಡ್‌ವಿಕ್ ಸ್ನಾತಕೋತ್ತರ ಪದವಿಯನ್ನು ಪಡೆದು ಮುಂದೆ ರುದರ್‌ಫರ್ಡನ ಸಂಶೋಧನಾಲಯವನ್ನು ಪ್ರವೇಶಿಸಿ ಅಲ್ಲಿ ಪರಮಾಣು ಸಂಶೋಧನೆಯಲ್ಲಿ ನಿರತನಾದ. ಈತನಿಗೆ 1913ರಲ್ಲಿ ಬರ್ಲಿನಿನ ಚಾರ್ಲೊಟೆನ್‍ಬರ್ಗ್ ವಿದ್ಯಾಸಂಸ್ಥೆಯ ಸಂಶೋಧನಾ ವೇತನ ದೊರೆತದ್ದರಿಂದ ಅಲ್ಲಿಗೆ ತೆರಳಿ ಹ್ಯಾನ್ಸ್ ಗೈಗರನ (1882-1945) ನಿರ್ದೇಶನದಲ್ಲಿ ವಿಕಿರಣಪಟುತ್ವದ ಬಗ್ಗೆ ಸಂಶೋಧನೆಯನ್ನು ಮುಂದುವರಿಸಿದ.[] ಆದರೆ ಅದೇ ಸುಮಾರಿಗೆ ಆರಂಭವಾದ ಒಂದನೆಯ ಮಹಾಯುದ್ಧ (1914-1918) ಸಂಶೋಧನೆಯ ಪ್ರಗತಿಗೆ ಬಿರಿ ಹಾಕಿತು. ಯುದ್ಧಾನಂತರ ಚಾಡ್‌ವಿಕ್ ಸ್ವದೇಶಕ್ಕೆ ಮರಳಿ ಕ್ಯಾವೆಂಡಿಷ್ ಪ್ರಯೋಗಶಾಲೆಯಲ್ಲಿ ರುದರ್‌ಫರ್ಡನ ಜೊತೆಗೂಡಿ ಸಂಶೋಧನೆಯನ್ನು ಮುಂದುವರಿಸಿದ. ತತ್ಪರಿಣಾಮವಾಗಿ ಇವನಿಗೆ ಪಿ.ಎಚ್.ಡಿ. ಪದವಿ ದೊರೆಯಿತು (1921).[]

ರುದರ್‌ಫರ್ಡ್ ಮತ್ತು ಚಾಡ್‌ವಿಕ್ ಜೋಡಿ α -ಕಣಗಳನ್ನು ತಾಡಿಸಿ ಧಾತುಗಳನ್ನು ಪರಿವರ್ತನೆಗೊಳಿಸುವ (ಟ್ರಾನ್ಸ್‌ಮ್ಯುಟೇಷನ್) ಸಮಸ್ಯೆಯನ್ನು ಅಧ್ಯಯಿಸಿತು. ಇದರಿಂದ ಪರಮಾಣು ನ್ಯೂಕ್ಲಿಯದ ಬಗ್ಗೆ ಸಾಕಷ್ಟು ಮಾಹಿತಿ ಲಭಿಸಿತು. ಇದರ ಆಧಾರದ ಮೇಲೆ ರುದರ್‌ಫರ್ಡ್ ಹೈಡ್ರೋಜನ್ ಪರಮಾಣುವಿನ ನ್ಯೂಕ್ಲಿಯಸ್ ಆದ ಪ್ರೋಟಾನನ್ನು ಆವಿಷ್ಕರಿಸಿ ಹಾಗೆಂದು ಹೆಸರಿಸಿದ.[]: 23 [] ಧಾತುಗಳ ಎಕ್ಸ್‌-ಕಿರಣ ರೋಹಿತದ ಅಧ್ಯಯನದ ಬಗೆಗಿನ ನಿಗಮನಗಳನ್ನು (ಡಿಡಕ್ಷನ್ಸ್) ಚಾಡ್‌ವಿಕ್ ಪ್ರಾಯೋಗಿಕವಾಗಿ ಸಮರ್ಥಿಸಿದ.

ಚಾಡ್‌ವಿಕ್ 1923ರಲ್ಲಿ ವಿಶ್ವವಿದ್ಯಾಲಯದ ಉಪನ್ಯಾಸಕನಾಗಿಯೂ, ಕ್ಯಾವೆಂಡಿಷ್ ಸಂಶೋಧನಾಲಯದ ಸಹನಿರ್ದೇಶಕನಾಗಿಯೂ ನೇಮಕಗೊಂಡ. ರಾಯಲ್ ಸೊಸೈಟಿಯ ಫೆಲೋ ಆಗಿ 1927ರಲ್ಲಿ ಚುನಾಯಿತನಾದ.[]

ಜರ್ಮನಿಯ ಭೌತವಿಜ್ಞಾನಿ ವಾಲ್ಟರ್ ಬೋಹ್‌ತ (1891-1957) 1930ರಲ್ಲಿಯೂ, ಫ್ರೆಂಚ್ ವಿಜ್ಞಾನಿಗಳಾದ ಫ್ರೆಡ್ರಿಕ್ ಜ಼ೋಲಿಯೊ ಮತ್ತು ಐರೀನ್ ಜ಼ೋಲಿಯೊ (ಕ್ಯೂರಿ-ದಂಪತಿಗಳು) 1932ರಲ್ಲಿಯೂ ಹಗುರ ಲೋಹ ಬೆರಿಲಿಯಮನ್ನು γ-ಕಣಗಳಿಂದ ತಾಡಿಸಿ ನಡೆಸಿದ್ದ ಸಂಶೋಧನೆಗಳು ಚಾಡ್‌ವಿಕ್‍ನ ಗಮನವನ್ನು ಸೆಳೆದುವು (1932). ಹೀಗೆ ಬೆರಿಲಿಯಮನ್ನು γ-ಕಣಗಳಿಂದ ತಾಡಿಸಿದಾಗ ವಸ್ತುಗಳ ಮೂಲಕ ತೂರಬಲ್ಲ ತೀಕ್ಷ್ಣ ಶಕ್ತಿಯುತ ಕಣಗಳ ಸಮೂಹ ವಿಕಿರಣ ರೂಪದಲ್ಲಿ ಹೊರಬರುತ್ತದೆ ಎಂಬುದನ್ನು ಚಾಡ್‌ವಿಕ್ ಆವಿಷ್ಕರಿಸಿದ. ಹೊರಬರುವ ಪ್ರತಿಯೊಂದು ಕಣದ ದ್ರವ್ಯರಾಶಿ ಹೆಚ್ಚುಕಡಿಮೆ ಪ್ರೋಟಾನಿನಷ್ಟೇ ಇದ್ದು ಅದರ ವಿದ್ಯುದಾವೇಶ ಮಾತ್ರ ತಟಸ್ಥವಾಗಿರುವುದೆಂಬುದನ್ನು ಪ್ರಕಟಿಸಿ, ಕೆಲವಾರು ವರ್ಷಗಳ ಹಿಂದೆಯೇ ರುದರ್‌ಫರ್ಡ್ ಊಹಿಸಿದ್ದ ನ್ಯೂಟ್ರಾನ್ ಇದೇ ಎಂದು ನಿರ್ಧರಿಸಿದ.[][] ಪರಮಾಣುವಿನ ಮೂರನೆಯ ಕಣದ ಈ ಅನ್ವೇಷಣೆ ಪರಮಾಣು ರಚನೆಯ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಲು ಸಹಕಾರಿಯಾಯಿತು. ಈ ಮಹತ್ಕಾರ್ಯ ಚಾಡ್‌ವಿಕ್‍ನಿಗೆ ಹ್ಯೂಸ್ ಪಾರಿತೋಷಕವನ್ನೂ (1932), ಭೌತಶಾಸ್ತ್ರ ವಿಭಾಗದ ನೊಬೆಲ್ ಪಾರಿತೋಷಕವನ್ನೂ (1935) ಗಳಿಸಿಕೊಟ್ಟಿತು.[೧೦] ಚಾಡ್‌ವಿಕ್ ಮತ್ತು ಎಂ. ಗೋಲ್ಡಾಬರ್ ವಿಜ್ಞಾನಿಗಳು ಡ್ಯೂಟೀರಿಯಮ್ ನ್ಯೂಕ್ಲಿಯಸನ್ನು γ-ಕಿರಣಗಳಿಂದ ತಾಡಿಸಿ ಶಿಥಿಲಗೊಳಿಸಬಹುದೆಂದು 1934ರಲ್ಲಿ ಕಂಡುಹಿಡಿದರು.

ಚಾಡ್‌ವಿಕ್ 1935ರಿಂದ 1948ರವರೆಗೆ ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿದ. 1950ರಲ್ಲಿ ಕಾಪ್ಲೆ ಪಾರಿತೋಷಕವನ್ನೂ, 1951ರಲ್ಲಿ ಫ್ರಾಂಕ್ಲಿನ್ ಪಾರಿತೋಷಕವನ್ನೂ ಪಡೆದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಬರ್ಕ್‌ಷೈರ್ ಡಿಡ್‌ಕಾಟ್‍ನ ಪರಮಾಣು ಶಕ್ತಿ ಸಂಶೋಧನಾ ಕೇಂದ್ರದ ಮುಖ್ಯಸ್ಥನಾಗಿ ಕೆಲಸ ನಿರ್ವಹಿಸಿದ. 1948ರಲ್ಲಿ ಕೇಂಬ್ರಿಜಿನ ಗಾನ್‌ವಿಲ್ಲೆ ಮತ್ತು ಕಾಯಸ್ ಕಾಲೇಜಿನ ಬೋಧಕನಾಗಿ ಚುನಾಯಿತನಾದ. ಮಹಾಯುದ್ಧದ ಸಮಯದಲ್ಲಿ ಯುರೇನಿಯಮ್ ನ್ಯೂಕ್ಲಿಯದ ವಿದಳನದ ಸರಪಳಿ ಕ್ರಿಯೆಯ ಅಧ್ಯಯನ ಪ್ರಾರಂಭಿಸಿದ. ಈ ಅಧ್ಯಯನ ಪರಮಾಣು ಬಾಂಬನ್ನು ತಯಾರಿಸಲು ಸಹಕಾರಿಯಾಯಿತು.[೧೧] ಈತ ವಿಕರಣ ಮತ್ತು ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಮೇಲೆ ಕೆಲವು ಲೇಖನಗಳನ್ನು ಪ್ರಕಟಿಸಿದ್ದಾನೆ. ರುದರ್‌ಫರ್ಡ್ ಮತ್ತು ಸರ್ ಚಾರ್ಲ್ಸ್ ಎಲ್ಲಿಸ್ ಇವರೊಡಗೂಡಿ ವಿಕಿರಣಪಟು ವಸ್ತುಗಳಿಂದ ವಿಕಿರಣಗಳು (Radiations from Radioactive Substances) ಎಂಬ ಪುಸ್ತಕವನ್ನು ಬರೆದ (1930).[೧೨] ಅಲ್ಲದೇ ರುದರ್‌ಫರ್ಡ್ ಮತ್ತು ನೆಲ್ಸನ್ ಇವರುಗಳ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾನೆ (1962).

1974ರ ಜುಲೈ ತಿಂಗಳ 24 ರಂದು ಮರಣಿಸಿದನು.[೧೩]

ಉಲ್ಲೇಖಗಳು

[ಬದಲಾಯಿಸಿ]
  1. Falconer 2004.
  2. Oliphant 1974.
  3. Brown 1997, pp. 16–21.
  4. Brown 1997, pp. 43–50.
  5. Stuewer, Roger H. (1983). "The Nuclear Electron Hypothesis". In Shea, William R. (ed.). Otto Hahn and the Rise of Nuclear Physics. Dordrecht: Springer Netherlands. pp. 19–67. doi:10.1007/978-94-009-7133-2_2. ISBN 978-94-009-7135-6.
  6. Petrucci, R. H.; Harwood, W. S.; Herring, F. G. (2002). General Chemistry (8th ed.). Upper Saddle River, N.J. : Prentice Hall. p. 41. ISBN 978-0-13-033445-9.
  7. Massey & Feather 1976, p. 11.
  8. Brown 1997, pp. 95–97.
  9. Chadwick 1932a.
  10. "James Chadwick – Biography". The Nobel Foundation. Retrieved 21 April 2013.
  11. Gowing 1964, pp. 39–41.
  12. Compton, Arthur H. (1931). "Review of Radiations from Radioactive Substances". Nature. 128 (3218): 3–4. doi:10.1038/128003a0. ISSN 0028-0836. S2CID 4140704.
  13. Brown 1997, pp. 360–363.


ಗ್ರಂಥಸೂಚಿ

[ಬದಲಾಯಿಸಿ]
  • {{cite encyclopedia

 |encyclopedia=Oxford Dictionary of National Biography  |edition=online  |publisher=Oxford University Press  |ref=harv

 |last    =  |last1    =Falconer  |author  =  |author1  =  |authors  =

 |first    =  |first1  =Isobel

 |authorlink  =  |author-link  =  |HIDE_PARAMETER10=  |authorlink1  =    |last2    =  |author2  =  |first2    =

 |authorlink2  =  |HIDE_PARAMETER16=

 |last3    =  |author3  =  |first3    =

 |authorlink3  =  |HIDE_PARAMETER21=

 |title    =Chadwick, Sir James (1891–1974)  |title    =  |url      =

 |doi        =10.1093/ref:odnb/30912

 |origyear    =  |year        =2004  |date        =  |month      =  |HIDE_PARAMETER30=

 |HIDE_PARAMETER31=  |separator  =  |mode        =


   |HIDE_PARAMETER38=

}} (Subscription or UK public library membership required.)