ಜೇಮ್ಸ್ ಗ್ರಾಂಟ್

ಜೇಮ್ಸ್ ಗ್ರಾಂಟ್ ಎನ್ನುವವನು ಸ್ಕಾಟ್ಲೆಂಡಿನ ಒಬ್ಬ ಕಾದಂಬರಿಕಾರ. ತಾಯಿಯ ಕಡೆಯಿಂದ ವಾಲ್ಟರ್ ಸ್ಕಾಟನಿಗೆ ಸಂಬಂಧಿ.
ಜೀವನ
[ಬದಲಾಯಿಸಿ]ಹುಟ್ಟಿದ್ದು ಎಡಿನ್‌ಬರದಲ್ಲಿ. ತಂದೆ ಬ್ರಿಟಿಷ್ ಸೈನ್ಯದಲ್ಲಿ ಒಬ್ಬ ಚಾಪ್ಲೆನ್ ಆಗಿದ್ದ. ತಂದೆಯೊಂದಿಗೆ ಈತ 6 ವರ್ಷ ಕಾಲ ನ್ಯೂಫೌಂಡ್‌ಲೆಂಡಿನಲ್ಲಿದ್ದು 1839 ರಲ್ಲಿ ಸ್ವದೇಶಕ್ಕೆ ಹಿಂತಿರುಗಿದ.[೧] ಸೈನ್ಯದಲ್ಲಿ ಬಾವುಟದ ಸಿಪಾಯಿಯಾಗಿ ಸ್ವಲ್ಪ ಕಾಲ ಕೆಲಸ ಮಾಡಿ, ಕೆಲಸಕ್ಕೆ ರಾಜೀನಾಮೆ ಇತ್ತು ಲೇಖನವೃತ್ತಿಯನ್ನು ಅವಲಂಬಿಸಿದ.
ಕೃತಿಗಳು
[ಬದಲಾಯಿಸಿ]ಈತ ಸುಮಾರು 50 ಕಾದಂಬರಿಗಳನ್ನು ಬರೆದಿದ್ದಾನೆ. ಅವುಗಳ ಕಥಾವಸ್ತು ಬಹುಮಟ್ಟಿಗೆ ಸೈನಿಕ ಜೀವನವನ್ನು ಕುರಿತದ್ದು. ಅನೇಕ ಕಡೆ ಉಲ್ಲಾಸ ಮತ್ತು ಘಟನೆಗಳ ಶ್ರೀಮಂತಿಕೆಯನ್ನು ಕಾಣಬಹುದು. ಇವನ ಕಾದಂಬರಿಗಳಲ್ಲಿ ಉತ್ತಮಾದವೆಂದರೆ ಅಡ್ವೆಂಚರ್ಸ್ ಆಫ್ ಎನ್ ಏಡ್ - ಡ- ಕ್ಯಾಂಪ್ (1848), ಬಾತ್‌ವೆಲ್ (1851), ಫ್ರಾಂಕ್ ಹಿಲ್ಟನ್ (1855), ದ ಯೆಲ್ಲೊ ಫ್ರಿಗೇಟ್ (1855) ಹ್ಯಾರಿ ಆಗಿಲ್ವಿ (1856), ಆರು ಸಂಪುಟಗಳ ಓಲ್ಡ್ ಅಂಡ್ ನ್ಯೂ ಎಡಿನ್‌ಬರ,[೨][೩] ದ ರೋಮ್ಯಾನ್ಸ್ ಆಫ್ ವಾರ್ ಇವೂ ಚೆನ್ನಾಗಿವೆ. ಕಿರ್ಕಾಲ್ಡಿ ಆಫ್ ಗ್ರಾಂಜ್ (1849), ಮಾಂಟ್ರೊಸ್ (1858) ಎಂಬವು ಜೀವನಚರಿತ್ರೆಗಳು. ಬ್ರಿಟಿಷ್ ಬ್ಯಾಟಲ್ಸ್ ಆನ್ ಲ್ಯಾಂಡ್ ಅಂಡ್ ಸೀ ಎಂಬುದು ಚಾರಿತ್ರಿಕ ಪ್ರಾಮುಖ್ಯವನ್ನುಳ್ಳ ಕೃತಿ.
ಉಲ್ಲೇಖಗಳು
[ಬದಲಾಯಿಸಿ]- ↑ Watkins 1890, p. 391.
- ↑ Grant 1880s, Old and New Edinburgh.
- ↑ Over thirty thousand copies of Old and New Edinburgh were sold in the United States (Watkins 1890, p. 392).
ಗ್ರಂಥಸೂಚಿ
[ಬದಲಾಯಿಸಿ]- Watkins, M. G.; Brown, Douglas (reviewer) (2004). "Grant, James (1822–1887)', rev.". Oxford Dictionary of National Biography (online ed.). Oxford University Press. doi:10.1093/ref:odnb/11265.
{{cite encyclopedia}}: Cite has empty unknown parameters:|HIDE_PARAMETER15=,|HIDE_PARAMETER21=,|HIDE_PARAMETER30=,|HIDE_PARAMETER17=,|HIDE_PARAMETER32=,|HIDE_PARAMETER16=,|HIDE_PARAMETER25=,|HIDE_PARAMETER24=,|HIDE_PARAMETER9=,|HIDE_PARAMETER11=,|HIDE_PARAMETER4=,|HIDE_PARAMETER2=,|HIDE_PARAMETER28=,|HIDE_PARAMETER18=,|HIDE_PARAMETER20=,|HIDE_PARAMETER5=,|HIDE_PARAMETER7=,|HIDE_PARAMETER10=,|HIDE_PARAMETER33=,|HIDE_PARAMETER31=,|HIDE_PARAMETER29=,|HIDE_PARAMETER8=,|HIDE_PARAMETER26=,|HIDE_PARAMETER19=,|HIDE_PARAMETER13=,|HIDE_PARAMETER23=, and|HIDE_PARAMETER3=(help); Invalid|ref=harv(help) (Subscription or UK public library membership required.) - Grant, James (1880s). Old And New Edinburgh (volumes 1–3 or 1–6, edition dependent ed.). Cassell. (published as a periodical): Online edition
