ಜೆಮಿಮಾ ರೊಡ್ರಿಗಸ್

ವಿಕಿಪೀಡಿಯ ಇಂದ
Jump to navigation Jump to search
ಜೆಮಿಮಾ ರೊಡ್ರಿಗಸ್
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುಜೆಮಿಮಾ ಐವನ್ ರೊಡ್ರಿಗಸ್
ಜನನ (2000-09-05) 5 September 2000 (age 19)
Bhandup, ಮುಂಬಯಿ
ಬ್ಯಾಟಿಂ ಶೈಲಿRight-hand bat
ಬೌಲಿಂಗ್ ಶೈಲಿRight-arm offbreak
International information
ದೇಶದ ಕಡೆ
ಓಡಿಐ ಚೊಚ್ಚಲ ಪಂದ್ಯ೧೨ ಮಾರ್ಚ್ ೨೦೧೮ v ಆಸ್ಟ್ರೇಲಿಯಾ
ಕೊನೆಯ ಓಡಿಐ೨೮ ಫೆಬ್ರವರಿ ೨೦೧೯ v ಇಂಗ್ಲೆಂಡ್
T20I debut೧೩ ಫೆಬ್ರವರಿ ೨೦೧೮ v ದಕ್ಷಿಣ ಆಫ್ರಿಕಾ
ಕೊನೆಯ T20I೯ ಮಾರ್ಚ್ ೨೦೧೯ v ಇಂಗ್ಲೆಂಡ್
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
೨೦೧೯ -IPL Supernovas
2019Yorkshire Diamonds
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WODI WT20I
ಪಂದ್ಯಗಳು ೧೦ ೨೫
ಗಳಿಸಿದ ರನ್‌ಗಳು ೧೮೬ ೬೦೮
ಬ್ಯಾಟಿಂಗ್ ಸರಾಸರಿ ೨೦.೬೬ ೩೦.೪೦
100ಗಳು/50ಗಳು -/೧ -/೫
ಅತ್ಯುತ್ತಮ ಸ್ಕೋರ್ ೮೧* ೭೨
ಎಸೆದ ಚೆಂಡುಗಳು ೧೮
ವಿಕೆಟ್ಗಳು - -
ಬೌಲಿಂಗ್ ಸರಾಸರಿ - -
5 ವಿಕೆಟ್‌ಗಳು (ಇನ್ನಿಂಗ್ಸ್) - -
10 ವಿಕೆಟ್‌ಗಳು (ಪಂದ್ಯ) - -
ಅತ್ಯುತ್ತಮ ಬೌಲಿಂಗ್ - -
ಕ್ಯಾಚುಗಳು/ಸ್ಟಂಪಿಂಗ್‌ಗಳು ೧೨
ಮೂಲ: ESPNcricinfo, 9 March 2019

ಜೆಮಿಮಾ ಇವಾನ್ ರೊಡ್ರಿಗಸ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಮುಂಬೈ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ.[೧]


ಆರಂಭಿಕ ಜೀವನ[ಬದಲಾಯಿಸಿ]

ಜೆಮಿಮಾ ರೊಡ್ರಿಗಸ್ ರವರು ಸೆಪ್ಟಂಬರ್ ೦೫, ೨೦೦೦ರಂದು ಮುಂಬೈ, ಮಹಾರಾಷ್ಟ್ರದಲ್ಲಿ ಜನಿಸಿದರು.ಜೆಮಿಮಾ ತಮ್ಮ ಇಬ್ಬರು ಸಹೋದರರಾದ ಇನೋಚ್ ಮತ್ತು ಎಲಿಯೊಂದಿಗೆ ಮುಂಬೈನ ಭಂಡಪ್‌‍ನಲ್ಲಿ ಬೆಳೆದರು. ನಾಲ್ಕು ವರ್ಷದ ವಯಸ್ಸಿನಲ್ಲಿ, ಇವರು ಋತುವಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಉತ್ತಮ ಕ್ರೀಡಾ ಸೌಕರ್ಯಗಳನ್ನು ಪಡೆಯಲು ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ನಗರದ ಮತ್ತೊಂದು ಕಡೆಗೆ ಸ್ಥಳಾಂತರಗೊಂಡರು. ಇವರ ತಂದೆ, ಇವಾನ್ ರೊಡ್ರಿಗಸ್ ತಮ್ಮ ಶಾಲೆಯಲ್ಲಿ ಜೂನಿಯರ್ ತರಬೇತುದಾರರಾಗಿದ್ದರು ಮತ್ತು ಇವರು ತಮ್ಮ ಸಹೋದರರಿಗೆ ಬೌಲಿಂಗ್ ಮಾಡುತ್ತ ಕ್ರಿಕೆಟ್ ಕಲಿಯಲಾರಂಭಿಸಿದರು. ಜೆಮಿಮಾ ರವರ ತಂದೆ, ಇವಾನ್, ಬಹಳ ಮೊದಲಿನಿಂದಲೇ ತರಬೇತಿ ನೀಡುತ್ತ ಬಂದು, ತಮ್ಮ ಶಾಲೆಯಲ್ಲಿ ಹುಡುಗಿಯರ ಕ್ರಿಕೆಟ್ ತಂಡವನ್ನು ಪ್ರಾರಂಭಿಸಿದರು. ಜೆಮಿಮಾ ಹಾಕಿ ಮತ್ತು ಕ್ರಿಕೆಟ್ ಎರಡನ್ನೂ ಆಡುತಿದ್ದರು.

ಜೆಮಿಮಾ ರೊಡ್ರಿಗಸ್ ರವರು ಮುಂಬೈನ ಸೇಂಟ್ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ರಿಜ್ವಿ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಲ್ಲಿ ತಮ್ಮ ಅಧ್ಯಯನ ಮುಂದುವರಿಸಿದ್ದರು.[೨][೩]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ಜೆಮಿಮಾ ರೊಡ್ರಿಗಸ್‌ರನ್ನು ಮಹಾರಾಷ್ಟ್ರ ಅಂಡರ್-೧೭ ಹಾಗು ಅಂಡರ್-೧೯ ಹಾಕಿ ತಂಡಗಳಿಗೆ ಆಯ್ಕೆ ಮಾಡಿತ್ತು. ೨೦೧೨-೧೩ರಲ್ಲಿ ಇವರು ತಮ್ಮ ೧೨ ವರ್ಷ ಹಾಗು ೦೬ ತಿಂಗಳಿನ ವಯಸ್ಸಿನಲ್ಲೆ ಅಂಡರ್-೧೯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ನಂತರ ತಮ್ಮ ೧೩ನೇ ವಯಸ್ಸಿನಲ್ಲೆ ರಾಜ್ಯ ೧೯- ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.


೫೦ ಓವರ್ ಕ್ರಿಕೆಟ್ ಪಂದ್ಯಗಳಲ್ಲಿ ಸ್ಮರಿತಿ ಮಂಡಾನ ನಂತರ ದ್ವಿಶತಕವನ್ನು ದಾಖಲಿಸಿದ ಎರಡನೇ ಮಹಿಳೆ ಎಂಬ ದಾಖಲೆಯನ್ನ ರೊಡ್ರಿಗಸ್‌ರವರು ಬರೆದರು. ಇವರು ೨೦೧೩ರ ನವೆಂಬರ್ನಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ಔರಂಗಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ೧೬೩ ಎಸೆತಗಳಲ್ಲಿ ೨೦೨ ರನ್ ಬಾರಿಸಿದರು. ಇದರಲ್ಲಿ ೨೧ ಬೌಂಡರಿಗಳನ್ನು ಒಳಗೊಂಡಿತ್ತು. ಈ ಪಂದ್ಯದ ಮೊದಲು, ಇವರು ಗುಜರಾತ್ ವಿರುದ್ಧ ನಡೆದ ಅಂಡರ್ ೧೯ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೪೨ ಎಸೆತಗಳಲ್ಲಿ ೧೭೮ ರನ್ ಬಾರಿಸಿದ್ದರು.[೪][೫][೬]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಫೆಭ್ರವರಿ ೧೩, ೨೦೧೮ರಲ್ಲಿ ದಕ್ಷಿಣ ಆಫ್ರಿಕಾದಲ್ಲಿದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಜೆಮಿಮಾ ರೊಡ್ರಿಗಸ್‌ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಮಾರ್ಚ್ ೧೨, ೨೦೧೮ರಲ್ಲಿ ವಡೋದರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೭][೮]


ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೦೪ ಪಂದ್ಯಗಳು[೯]
 • ಟಿ-೨೦ ಕ್ರಿಕೆಟ್ : ೧೯ ಪಂದ್ಯಗಳು

ಅರ್ಧ ಶತಕಗಳು[ಬದಲಾಯಿಸಿ]

 1. ಟಿ-೨೦ ಕ್ರಿಕೆಟ್‌ನಲ್ಲಿ : ೦೪


ಉಲ್ಲೇಖಗಳು[ಬದಲಾಯಿಸಿ]

 1. https://www.cricbuzz.com/profiles/13517/jemimah-rodrigues
 2. http://www.bcci.tv/player/5051/Jemimah-Rodrigues
 3. https://www.womenscriczone.com/interview-jemimah-rodrigues/
 4. https://timesofindia.indiatimes.com/sports/cricket/news/mumbai-girl-slams-double-ton-in-50-over-game/articleshow/61518614.cms
 5. http://www.wisdenindia.com/cricket-article/only-17-jemimah-rodrigues-already-spells-double-trouble/277243
 6. https://indianexpress.com/article/sports/cricket/jemimah-rodrigues-double-hundred-mumbai-saurashtra-4924109/
 7. http://www.espncricinfo.com/series/18087/scorecard/1123206/south-africa-women-vs-india-women-1st-t20i-ind-w-in-sa-2017-18
 8. http://www.espncricinfo.com/series/8674/scorecard/1131232/india-women-vs-australia-women-1st-odi-icc-womens-championship-2017-18-2021
 9. http://www.espncricinfo.com/india/content/player/883405.html