ಜುಬಿನ್ ಗಾರ್ಗ್
| ಜುಬಿನ್ ಗಾರ್ಗ್ | |
|---|---|
೨೦೨೫ರಲ್ಲಿ ಜುಬಿನ್ ಗಾರ್ಗ್ | |
| ಹಿನ್ನೆಲೆ ಮಾಹಿತಿ | |
| ಜನ್ಮನಾಮ | ಜುಬಿನ್ ಬೋರಠಾಕೂರ್ |
| ಅಡ್ಡಹೆಸರು | |
| ಜನನ | ೧೮ ನವೆಂಬರ್ ೧೯೭೨ ತುುರಾ, ಮೆಘಾಲಯ, ಭಾರತ |
| ಮರಣ | ೧೯ ಸೆಪ್ಟೆಂಬರ್ ೨೦೨೫ (ವಯಸ್ಸು ೫೨) ಸಿಂಗಾಪುರ ಜನರಲ್ ಆಸ್ಪತ್ರೆ, ಬುಕಿತ್ ಮೆರಾ, ಸಿಂಗಾಪುರ |
| ಸಂಗೀತ ಶೈಲಿ |
|
| ವೃತ್ತಿ |
|
| ವಾದ್ಯಗಳು |
|
| ಸಕ್ರಿಯ ವರ್ಷಗಳು | 1992 – 2025 |
| Labels |
|
ಜುಬಿನ್ ಗಾರ್ಗ್ (ಆಂಗ್ಲ:Zubeen Garg; ೧೮ ನವೆಂಬರ್ ೧೯೭೨ – ೧೯ ಸೆಪ್ಟೆಂಬರ್ ೨೦೨೫) ಅಸ್ಸಾಂ, ಭಾರತದ ಪ್ರಸಿದ್ಧ ಗಾಯಕರಾಗಿದ್ದರು. ಅವರು ಸಂಗೀತ ನಿರ್ದೇಶಕ, ಗೀತ ರಚನೆಕಾರ, ಸಂಗೀತ ಸಂಯೋಜಕ, ಚಿತ್ರನಟ, ನಿರ್ಮಾಪಕ, ಚಿತ್ರ ನಿರ್ದೇಶಕ, ವಾದ್ಯಕಾರ, ಕವಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು.[೫]
ಅವರು ಅಸ್ಸಾಮಿ, ಹಿಂದಿ, ಬಂಗಾಳಿ, ಬೋಡೋ, ರಾಜಬಂಶಿ, ನೆಪಾಳಿ, ಭೋಜ್‌ಪುರಿ, ಉರ್ದು, ಒರಿಯಾ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂತೆ ಸುಮಾರು ೪೦ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದರು.
೧೯೯೨ರಲ್ಲಿ ಅವರ ಮೊದಲ ಆಲ್ಬಮ್ ಅನಾಮಿಕಾ ಪ್ರಕಟವಾಯಿತು.[೬] ಆ ನಂತರ ಅವರು ವೃತ್ತಿಪರ ಸಂಗೀತ ಲೋಕಕ್ಕೆ ಪ್ರವೇಶಿಸಿದರು.[೭]
೨೦೦೫ರಲ್ಲಿ ಬಂಗಾಳಿ ಚಲನಚಿತ್ರ ಶುಧು ತುಮಿಗೆ ಸಂಗೀತ ನಿರ್ದೇಶಕರಾಗಿ ಪ್ರಶಸ್ತಿ ಪಡೆದರು. ಹಿಂದಿ ಚಲನಚಿತ್ರ ಗ್ಯಾಂಗ್ಸ್ಟರ್ನ ಯಾ ಅಲಿ ಗೀತೆಗೆ ೨೦೦೬ರಲ್ಲಿ ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್ ಮತ್ತು ಸ್ಟಾರ್ಡಸ್ಟ್ ಅವಾರ್ಡ್ಗಳಲ್ಲಿ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿ ದೊರಕಿತು. ಇಂಗ್ಲಿಷ್-ಖಾಸಿ ಚಿತ್ರ Echoes of Silence ಗೆ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು.[೮]
೨೦೧೪ರಲ್ಲಿ ಆಧುನಿಕ ಅಸ್ಸಾಮಿ ಸಂಗೀತದಲ್ಲಿ ಹೊಸ ಧಾರೆಯನ್ನು ತಂದಕ್ಕಾಗಿ ಅವರಿಗೆ "ರೆನೆಸಾನ್ಸ್ ಅಸ್ಸಾಂ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ೨೦೨೪ರಲ್ಲಿ ಮೆಘಾಲಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಿ.ಲಿಟ್ ಪದವಿ ನೀಡಿತು. ೨೦೨೫ರಲ್ಲಿ ಭೂಪೇನ್ ಹಜಾರಿಕಾ ಪ್ರಶಸ್ತಿಯನ್ನು ನೀಡಲಾಯಿತು.
ಜುಬಿನ್ ಗಾರ್ಗ್ ಬಹು ವಾದ್ಯಕಾರರಾಗಿದ್ದರು. ಅವರು ಢೋಲ್, ಗಿಟಾರ್, ಕೀಬೋರ್ಡ್, ತಬಲಾ, ಮ್ಯಾಂಡೋಲಿನ್, ಹಾರ್ಮೋನಿಯಂ ಮೊದಲಾದ ವಾದ್ಯಗಳನ್ನು ವಾದಿಸುತ್ತಿದ್ದರು. ಅಸ್ಸಾಂನ ಅತಿ ಹೆಚ್ಚು ಸಂಬಳ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದರು.
೩೩ ವರ್ಷಗಳ ವೃತ್ತಿ ಜೀವನದಲ್ಲಿ ಅವರು ೪೦ ಭಾಷೆಗಳಲ್ಲಿ ೩೮,೦೦೦ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದರು.[೯]
೧೯ ಸೆಪ್ಟೆಂಬರ್ ೨೦೨೫ರಂದು ಸಿಂಗಾಪುರದಲ್ಲಿ ಜುಬಿನ್ ಗಾರ್ಗ್ ನಿಧನರಾದರು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಜುಬಿನ್ ಗಾರ್ಗ್ ಫೇಸ್ಬುಕ್ನಲ್ಲಿ
- ಜುಬಿನ್ ಗಾರ್ಗ್ ಟ್ವಿಟರ್ನಲ್ಲಿ
- ಜುಬಿನ್ ಗಾರ್ಗ್ ಐ ಎಮ್ ಡಿ ಬಿನಲ್ಲಿ
ಉಲ್ಲೇಖಗಳು
[ಬದಲಾಯಿಸಿ]- ↑ Goswami, Darshana (2025-09-22). "The wonder boy called Goldie". Thumbprint NE. Retrieved 2025-09-22.
- ↑ Baruah, Sukrita (19 September 2025). "Zubeen da, voice of a generation, who listened to his own conscience". The Indian Express. Retrieved 20 September 2025.
- ↑ "Singer Zubeen Garg died in Singapore while swimming, not during scuba diving: report". The Hindu. 2 Oct 2025. Retrieved 5 Oct 2025.
- ↑ "Zubeen Garg is No More – Pratidin Time". Pratidin Time (in ಇಂಗ್ಲಿಷ್). 19 September 2025. Retrieved 19 September 2025.
- ↑ "ಜುಬಿನ್ ಗಾರ್ಗ್". xobdo.org. Retrieved 19 January 2013.
- ↑ "Zubeen's debut album Anamika". futuresounds.com. Retrieved 4 September 2015.
- ↑ "About Zubeen Garg". onlinesivasagar.com. Retrieved 19 January 2013.
- ↑ "Awards won by Zubeen Garg". gomolo.com. Archived from the original on 8 ಅಕ್ಟೋಬರ್ 2015. Retrieved 4 September 2015.
- ↑ "Thousands of fans bid adieu to Zubeen at Guwahati stadium". The Hindu. 21 September 2025. Retrieved 23 September 2025.