ವಿಷಯಕ್ಕೆ ಹೋಗು

ಜಿ ಜೆ ಆರ್ ಕೃಷ್ಣನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lalgudi G. J. R. Krishnan
ಲಾಲ್ಗುಡಿ ಜಿ ಜೆ ಆರ್ ಕೃಷ್ಣನ್
ಹಿನ್ನೆಲೆ ಮಾಹಿತಿ
ಜನನ೧೫ ಏಪ್ರಿಲ್ ೧೯೬೦
ಚೆನ್ನೈ, ಭಾರತ
ಸಂಗೀತ ಶೈಲಿಶಾಸ್ತ್ರೀಯ, ಫ್ಯೂಷನ್
ವೃತ್ತಿಪಿಟೀಲು ವಾದಕ, ಸಂಗೀತ ಸಂಯೋಜಕರು
ವಾದ್ಯಗಳುಪಿಟೀಲು
ಸಕ್ರಿಯ ವರ್ಷಗಳು೧೯೭೩ ರಿಂದ
ಅಧೀಕೃತ ಜಾಲತಾಣhttp://www.lalgudigjrkrishnan.com/

ಜಿ ಜೆ ಆರ್ ಕೃಷ್ಣನ್ ಅಥವಾ ಲಾಲ್ಗುಡಿ ಕೃಷ್ಣನ್ ಎಂದು ಜನಪ್ರಿಯವಾಗಿರುವ ಲಾಲ್ಗುಡಿ ಗೋಪಾಲ ಜಯರಾಮನ್ ರಾಧಾಕೃಷ್ಣನ್ ಅವರು ಕರ್ನಾಟಕ ಸಂಗೀತದ ಪಿಟೀಲು ವಾದಕ, ಗಾಯಕ ಮತ್ತು ಸಂಗೀತ ಸಂಯೋಜಕರು. [] ಅವರು ಲಾಲ್ಗುಡಿ ಜಿ. ಜಯರಾಮನ್ ಅವರ ಮಗ ಮತ್ತು ಶಿಷ್ಯರು. ಕೃಷ್ಣನ್ ಲಾಲ್ಗುಡಿ ಸಂಗೀತ ಪರಂಪರೆಯನ್ನು ಪೋಷಿಸಿದ್ದಾರೆ ಮತ್ತು ಪ್ರಚಾರ ಮಾಡಿದ್ದಾರೆ. ಜೊತೆಗೆ ತಮ್ಮದೇ ಆದ ಕಲಾತ್ಮಕ ಅಂಶಗಳನ್ನು ಸಹ ಸಂಯೋಜಿಸಿದ್ದಾರೆ. ಅವರ ಶೈಲಿಯನ್ನು ತಂತ್ರ, ಭಾವ, ಲಯ ಮತ್ತು ಪಿಟೀಲು ಮಾನವ ಧ್ವನಿಯನ್ನು ನಿಕಟವಾಗಿ ಅನುಕರಿಸಬೇಕು ಎಂಬ ಕಲ್ಪನೆಗೆ ತಾತ್ವಿಕ ಬದ್ಧತೆಯಿಂದ ವ್ಯಾಖ್ಯಾನಿಸಲಾಗಿದೆ. ಲಾಲ್ಗುಡಿ ಕೃಷ್ಣನ್ ಅವರಿಗೆ ೨೦೧೫ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಇದು ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಜನರಿಗೆ ನೀಡಲಾಗುವ ಅತ್ಯುನ್ನತ ಭಾರತೀಯ ಮನ್ನಣೆಯಾಗಿದೆ. ಅವರ ಸಹೋದರಿ ಲಾಲ್ಗುಡಿ ವಿಜಯಲಕ್ಷ್ಮಿ ಅವರೊಂದಿಗೆ, ಈ ಜೋಡಿಗೆ ೨೦೨೨ ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯಿಂದ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿಯ ಗೌರವವನ್ನು ಸ್ವೀಕರಿಸಿದರು. [] ಇದನ್ನು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. []

ಆರಂಭಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]

ಲಾಲ್ಗುಡಿ ಕೃಷ್ಣನ್ ಅವರು ಪಿಟೀಲು ಮಾಂತ್ರಿಕ ಲಾಲ್ಗುಡಿ ಜಯರಾಮನ್ ಮತ್ತು ರಾಜಲಕ್ಷ್ಮಿ ಅವರಿಗೆ ಜನಿಸಿದರು.

ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವೆಚ್ಚದ ಲೆಕ್ಕಪತ್ರಗಾರ ಮತ್ತು ಕಂಪನಿ ಕಾರ್ಯದರ್ಶಿ ಹುದ್ದೆಯಲ್ಲಿದ್ದರೂ, ಕೃಷ್ಣನ್ ತಮ್ಮ ಜೀವನವನ್ನು ಸಂಗೀತದ ವೃತ್ತಿಜೀವನಕ್ಕೆ ಮುಡಿಪಾಗಿಟ್ಟಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

 ಲಾಲ್ಗುಡಿ ಜಿಜೆಆರ್ ಕೃಷ್ಣನ್ ೧೯೭೩ರಲ್ಲಿ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅವರ ತಂದೆಯಂತೆಯೇ ಅವರ ಶೈಲಿಯು ಗಾಯನಕ್ಕೆ ಹತ್ತಿರವಾದ ಗಾಯನ ಶೈಲಿಯಾಗಿದೆ. ಅವರು ಪ್ರಪಂಚದಾದ್ಯಂತ ಸಂಗೀತ ಪ್ರವಾಸಗಳಲ್ಲಿ ವ್ಯಾಪಕವಾಗಿ ಪ್ರಯಾಣಿಸುತ್ತಾರೆ.

ಕೃಷ್ಣನ್ ಅವರು ಸಾಮಾನ್ಯವಾಗಿ ತಮ್ಮ ಸೋದರಿಯಾದ ಲಲ್ಗುಡಿ ವಿಜಯಲಕ್ಷ್ಮಿಯೊಂದಿಗೆ ಕಾರ್ಯಕ್ರಮಗಳನ್ನು ನೀಡುತ್ತಾರೆ.

ಇವರ ಕಾರ್ಯಕ್ರಮಗಳು

[ಬದಲಾಯಿಸಿ]
  • ಲಿಂಕನ್ ಸೆಂಟರ್, ನ್ಯೂಯಾರ್ಕ್.
  • ಜೂನ್ ೨೦೦೪ರಲ್ಲಿ ಸಿಂಗಪುರ್ ಕಲೆಗಳ ಉತ್ಸವದಲ್ಲಿ ಸಮಾನ್ವಯ, "ಸುನಾದ ಪ್ರವಾದಮ್".
  • ಅಮ್ಸ್ಟರ್‌ಡಮ್ ಟ್ರೊಪಿಕ್ ಸಂಸ್ಥೆ.
  • ಈಂಟೋ ಆಮ್ಸ್‌ಟರ್ಡಮ್ ಉತ್ಸವಕ್ಕಾಗಿ ಕಾಂಸೆಟ್ಗೆಹೌ -ಆಮ್ಸ್‌ಟರ್ಡಮ್.
  • ಸ್ಮಿತ್ಸೋನಿಯನ್ ಸಂಸ್ಥೆ-ವಾಷಿಂಗ್ಟನ್, ಯುಎಸ್‌ಎ.
  • ಪೂರ್ವದ ಯುಎಸ್‌ಎಸ್‌ಆರ್‌ನಲ್ಲಿ ಭಾರತದ ಉತ್ಸವ ಕಾರ್ಯಕ್ರಮ.
  • ಪರ್ಸೆಲ್ ರೂಮ್, ಲಂಡನ್.

ಪ್ರಶಸ್ತಿಗಳು

[ಬದಲಾಯಿಸಿ]

ಕೃಷ್ಣನ್ ಅವರು ಪಡೆದಿರುವ ಪ್ರಶಸ್ತಿಗಳು:

ಉಲ್ಲೇಖಗಳು

[ಬದಲಾಯಿಸಿ]
  1. "Indian Heritage – Profiles of Artistes, Composers, Musicologists – K".
  2. "Music Academy announces Sangita Kalanidhi awards for three years". The Hindu (in Indian English). 22 ಮೇ 2022. ISSN 0971-751X. Retrieved 23 ಮೇ 2024.
  3. "Sangita Kalanidhi - Music Academy". musicacademymadras.in. Retrieved 23 ಮೇ 2024.
  4. "Indira Sivasailam Foundation". isfoundation.in. Retrieved 10 ಜೂನ್ 2021.
  5. "Sangeet Natak Akademi: President confers Sangeet Natak Akademi award, fellowship | Delhi News – Times of India". The Times of India (in ಇಂಗ್ಲಿಷ್). PTI. 4 ಅಕ್ಟೋಬರ್ 2016. Retrieved 7 ಜೂನ್ 2021."Sangeet Natak Akademi: President confers Sangeet Natak Akademi award, fellowship | Delhi News – Times of India". The Times of India. PTI. 4 October 2016. Retrieved 7 June 2021.
  6. Srihari, Gudipoodi (3 ಡಿಸೆಂಬರ್ 2009). "Under the spotlight". The Hindu (in Indian English). ISSN 0971-751X. Retrieved 7 ಜೂನ್ 2021.
  7. "Sri Krishna Gana Sabha – Sangeetha Choodamanis". krishnaganasabha.org. Archived from the original on 27 ಅಕ್ಟೋಬರ್ 2019.