ಜಿ.ಎಚ್.ನಾಯಕ
ಜಿ.ಎಚ್.ನಾಯಕ | |
---|---|
![]() ಜಿ.ಎಚ್.ನಾಯಕ' | |
ಜನನ | ಸೆಪ್ಟಂಬರ್ 18, 1935 ಸೂರ್ವೆ,ಅಂಕೋಲ. |
ವೃತ್ತಿ | ಕವಿ, ಬರಹಗಾರ, ವಿಮರ್ಶಕರು , ಪ್ರಾಧ್ಯಾಪಕ. |
ರಾಷ್ಟ್ರೀಯತೆ | ಕರ್ನಾಟಕ ,ಭಾರತೀಯ. |
ಕಾಲ | ೨೦-೨೧ನೆಯ ಶತಮಾನ |
ವಿಷಯ | ಕನ್ನಡ ಭಾಷೆ |
ಪ್ರಭಾವಗಳು |
ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ . ಅವರು ೧೯೩೫ ಸೆಪ್ಟಂಬರ ೧೮ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಜೀವನದಲ್ಲಿರುವ ಇವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.
ಕೃತಿಗಳು[ಬದಲಾಯಿಸಿ]
- ಸಮಕಾಲೀನ (೧೯೭೩)
- ಅನಿವಾರ್ಯ (೧೯೮೦)
- ನಿರಪೇಕ್ಷೆ (೧೯೮೪)
- ನಿಜದನಿ (೧೯೮೮)
- ವಿನಯ ವಿಮರ್ಶೆ (೧೯೯೧)
- ಸಕಾಲಿಕ (೧೯೯೫)
- ಗುಣ ಗೌರವ (೨೦೦೨)
- ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
- ಕೃತಿ ಸಾಕ್ಷಿ (೨೦೦೬)
- ಸ್ಥಿತಿ ಪ್ರಜ್ಞೆ (೨೦೦೭)
- ಮತ್ತೆ ಮತ್ತೆ ಪಂಪ (೨೦೦೮)
- ಸಾಹಿತ್ಯ ಸಮೀಕ್ಷೆ (೨೦೦೯)
- ಉತ್ತರಾರ್ಧ (೨೦೧೧)
ಸಂಪಾದನೆ[ಬದಲಾಯಿಸಿ]
- ಕನ್ನಡ ಸಣ್ಣಕಥೆಗಳು
- ಹೊಸಗನ್ನಡ ಕವಿತೆಗಳು
- ಸಂವೇದನೆ (ಅಡಿಗರ ಗೌರವ ಗ್ರಂಥ)
- ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
- ಶತಮಾನದ ಕನ್ನಡ ಸಾಹಿತ್ಯ (ಸಂಪುಟ - ೧.೨)
ಆತ್ಮಕಥನ[ಬದಲಾಯಿಸಿ]
- ಬಾಳು
ಪ್ರಶಸ್ತಿಗಳು[ಬದಲಾಯಿಸಿ]
- ಉತ್ತರಾರ್ಧ ಕೃತಿಗೆ ೨೦೧೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .[೧]
- ನಿರಪೇಕ್ಷ ವಿಮರ್ಶಾ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ.
- ನಿಜದನಿ ವಿಮರ್ಶಾ ಕೃತಿಗೆ 'ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ' ಲಭಿಸಿವೆ.
- ಪಂಪ ಪ್ರಶಸ್ತಿ .[೨]