ಜಿಂಕೆ ಪಾರ್ಕ್, ಲುಧಿಯಾನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ನೀಲನ್ ನಲ್ಲಿರು ಜಿಂಕೆ ಪಾರ್ಕ್ ನ ಹಸಿರು ಹೊದ್ದುಕೊಂಡಿರುವ ಸುತ್ತಮುತ್ತಲ ಪರಿಸರದಿಂದಾಗಿ ಒಳ್ಳೆಯ ಪಿಕ್ನಿಕ್ ತಾಣ. ಇಲ್ಲಿ ಬೃಹತ್ ಸಂಖ್ಯೆಯ ಜಿಂಕೆಗಳಿರುವ ಕಾರಣ ಇದನ್ನು ಜಿಂಕೆ ಪಾರ್ಕ್ ಎಂದು ಕರೆಯಲಾಗುತ್ತದೆ. ಲುಧಿಯಾನದಿಂದ 20 ಕಿ.ಮೀ. ದೂರದಲ್ಲಿರುವ ಈ ಪಾರ್ಕ್ ಗೆ ದಿನಾಲೂ ವಾಕಿಂಗ್, ಜಾಗಿಂಗ್ ಮತ್ತು ಕೌಟುಂಬಿಕ ಪಿಕ್ನಿಕ್ ಮಾಡಲು ಪ್ರವಾಸಿಗರು ಬರುತ್ತಾರೆ. ಈ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗಳು ಜಿಂಕೆ, ಸಾಂಬಾರ್, ಮುಳ್ಳುಹಂದಿ, ಬ್ಲ್ಯಾಕ್ ಬಕ್ ಮತ್ತು ಮೊಲಗಳನ್ನು ವೀಕ್ಷಿಸಬಹುದು. ಕೆಂಪುಗಿಣಿ, ಬೂದು ಕೌಜಗ ಮುಂತಾದ ವಿವಿಧ ಜಾತಿಯ ಪಕ್ಷಿಗಳು ಪ್ರವಾಸಿಗಳ ಕಣ್ಣೆದುರಿಗೆ ಹಾರುತ್ತಿರುತ್ತದೆ. ಪಂಜಾಬ್ ಸರ್ಕಾರದಿಂದ ನಿರ್ವಹಿಸಲ್ಪಡುವ ಈ ಉದ್ಯಾನ ಪ್ರವಾಸಿಗಳಿಗೆ ಮನೋರಂಜನೆ ಮತ್ತು ಮೋಜಿನ ಅನುಭವವನ್ನು ನೀಡುತ್ತದೆ.