ವಿಷಯಕ್ಕೆ ಹೋಗು

ಜಾರ್ಜ್ ಚಾಮರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇಮ್ಸ್ ಟ್ಯಾನಾಕ್ ರಚಿಸಿದ ಚಾಮರ್ಸ್‌ನ ಭಾವಚಿತ್ರ, 1824

ಜಾರ್ಜ್ ಚಾಮರ್ಸ್ (1742-1825) ಸ್ಕಾಟ್‌ಲೆಂಡಿನ ಒಬ್ಬ ಪ್ರಾಚೀನಾನ್ವೇಷಕ, ಇತಿಹಾಸಕಾರ, ರಾಜಕೀಯ ಬರೆಹಗಾರ.

ಜೀವನ, ಸಾಧನೆಗಳು

[ಬದಲಾಯಿಸಿ]

ಜನಿಸಿದ್ದು ಸ್ಕಾಟ್‌ಲೆಂಡಿನ ಮರಿ ಕೌಂಟಿಯ ಫೊಕಾಬರ್ಸ್‌ನಲ್ಲಿ. ಆಬರ್‌ಡೀನ್ ಮತ್ತು ಎಡಿನ್‌ಬರೊಗಳಲ್ಲಿ ವಿದ್ಯಾಭ್ಯಾಸ ಮುಗಿಸಿ[] 1763ರಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನದ ಮೇರಿಲ್ಯಾಂಡಿಗೆ ವಲಸೆ ಹೋಗಿ ವಕೀಲಿವೃತ್ತಿಯಲ್ಲಿ ನಿರತನಾದ. ಅಮೆರಿಕದಲ್ಲಿ ಆಂತರಿಕ ಯುದ್ಧ ಪ್ರಾರಂಭವಾದಾಗ ಇಂಗ್ಲೆಂಡಿಗೆ ಹಿಂತಿರುಗಿದ. ಅನಂತರ ಪೊಲಿಟಿಕಲ್ ಆನಲ್ಸ್ ಆಫ್ ದ ಪ್ರೆಸೆಂಟ್ ಯುನೈಟೆಡ್ ಕಾಲೊನೀಸ್ ಎಂಬ ಗ್ರಂಥವನ್ನು ಪ್ರಕಟಿಸಿದ (1780). ಈತ ಪ್ರಸಿದ್ಧನಾದ್ದು ಕ್ಯಾಲೆಡೋನಿಯ: ಆರ್ ಎನ್ ಅಕೌಂಟ್, ಹಿಸ್ಟಾರಿಕಲ್ ಅಂಡ್ ಟೋಪೊಗ್ರಾಫಿಕಲ್ ಆಫ್ ನಾರ್ತ್ ಬ್ರಿಟನ್ ಎಂಬ ಗ್ರಂಥದಿಂದ. ಇದು ಬ್ರಿಟನ್ನಿನ ಪ್ರಾಚೀನ ವಸ್ತುಮ್ ವಿಷಯಗಳಿಗೆ ಮೀಸಲಾದ ಹೆಬ್ಬೊತ್ತಗೆ. 1807 ರಿಂದ 24ರ ಅವಧಿಯಲ್ಲಿ ಈ ಗ್ರಂಥದ ಮೂರು ಸಂಪುಟಗಳನ್ನು ಹೊರತಂದ. ಆದರೆ ತನ್ನ ಜೀವಿತಕಾಲದಲ್ಲಿ ಈ ಸರಣಿಯನ್ನು ಮುಗಿಸಲಾಗಲಿಲ್ಲ. ಅನೇಕ ರಾಜಕೀಯ ಗ್ರಂಥಗಳ ಜೊತೆಗೆ ಕೆಲವು ಜೀವನ ಚರಿತ್ರೆಗಳನ್ನೂ ಈತ ರಚಿಸಿದ್ದಾನೆ. ಡಫೋ (1785), ಅಲನ್ ರ‍್ಯಾಮ್‌ಸೇ (1800), ಸರ್ ಡೇವಿಡ್ ಲಿಂಡ್‌ಸೇ (1806), ಮತ್ತು ಮೇರಿ, ಕ್ವೀನ್ ಆಫ್ ಸ್ಕಾಟ್ಸ್ (1818)-ಇವು ಈತನ ಪ್ರಸಿದ್ಧ ಜೀವನಚರಿತ್ರೆಗಳು. 1786ರಿಂದ ಸಾಯುವ ತನಕ ಚಾಮರ್ಸ್ ಪ್ರಿವಿ ಕೌನ್ಸಿಲಿನ ವಾಣಿಜ್ಯೋದ್ಯಮ ಸಮಿತಿಯ ಮುಖ್ಯ ಕರಣಿಕನಾಗಿ ಕೆಲಸಮಾಡುತ್ತಿದ್ದ.

ಉಲ್ಲೇಖಗಳು

[ಬದಲಾಯಿಸಿ]
  1.  Macdonald, James (1911). "Chalmers, George" . In Chisholm, Hugh (ed.). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |HIDE_PARAMETER= and |separator= (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]





ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: