ವಿಷಯಕ್ಕೆ ಹೋಗು

ಜಾರ್ಜ್ ಗ್ರೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜ್ ಗ್ರೀನ್ (1793-1841) ಒಬ್ಬ ಇಂಗ್ಲಿಷ್ ಗಣಿತಜ್ಞ. ಗಣಿತೀಯ ಭೌತಶಾಸ್ತ್ರಕ್ಕೆ ಇವನ ಕೊಡುಗೆ ಅಪಾರ.

ಜೀವನ, ಸಾಧನೆಗಳು

[ಬದಲಾಯಿಸಿ]

ವೃತ್ತಿಯಿಂದ ಗಿರಣಿ ಕೆಲಸವನ್ನು ಅನುಸರಿಸಿದರೂ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚಿನ ಅಭ್ಯಾಸವನ್ನು ತಾನೇ ಮಾಡಿಕೊಂಡ. ಭೌತಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಈತ ಅನುಸರಿಸುತ್ತಿದ್ದುದು ಒಂದು ಸಾಧಾರಣ ಮಾರ್ಗ. ಆ್ಯನ್ ಎಸ್ಸೆ ಆನ್ ದಿ ಅಪ್ಲಿಕೇಷನ್ ಆಫ಼್ ಮ್ಯಾಥ್‌ಮ್ಯಾಟಿಕಲ್ ಅನಾಲಿಸಿಸ್ ಟು ದ ಥಿಯೊರೀಸ್ ಆಫ್ ಎಲೆಕ್ಟ್ರಿಸಿಟಿ ಆಂಡ್ ಮ್ಯಾಗ್ನೆಟಿಸಮ್ ಎಂಬ ಪ್ರೌಢಪ್ರಬಂಧವನ್ನು ರಚಿಸಿ ನಾಟಿಂಗ್‌ಹ್ಯಾಮಿನಲ್ಲಿ ಈತ ಪ್ರಕಟಿಸಿದ (1828).[][] ಈ ಪ್ರಬಂಧದಲ್ಲಿ ಫ್ರೆಂಚ್ ಗಣಿತಜ್ಞ ಎಸ್.ಡಿ ಪಾಯ್‍ಸಾನನ (1781-1840) ವಿದ್ಯುತ್ ಮತ್ತು ಕಾಂತವಿಭಾಗಗಳ ಸಂಶೋಧನೆಯನ್ನು ಕುರಿತಂತೆ ಪ್ರಸಾಮಾನ್ಯೀಕರಣಗಳನ್ನೂ, ವಿವರಣೆಗಳನ್ನೂ ಗ್ರೀನ್ ನೀಡಿದ್ದಾನೆ. ವಿದ್ಯುತ್ ಮತ್ತು ಕಾಂತ ಪ್ರಕರಣಗಳಲ್ಲಿ ಕಾಣಬರುವ ಪೊಟೆನ್ಶಿಯಲ್ (ವಿಭವ) ಎಂಬ ಪದವನ್ನು ಮೊಟ್ಟಮೊದಲಿಗೆ ಬಳಸಿದ್ದು ಈತನೇ. ಈ ಎರಡೂ ಕ್ಷೇತ್ರಗಳನ್ನು ಕುರಿತಂತೆ ವಿಭವದ ಗುಣಧರ್ಮಗಳನ್ನು ತಿಳಿಸುವ ಪ್ರಮೇಯವನ್ನು ಪ್ರತಿಪಾದಿಸಿದ. ಸ್ಕಾಟ್‌ಲೆಂಡಿನ ಗಣಿತಜ್ಞ ಲಾರ್ಡ್ ಕೆಲ್ವಿನ್ (1824-1907) ಗ್ರೀನನ ಪ್ರೌಢಪ್ರಬಂಧಗಳನ್ನು 1846ರಲ್ಲಿ ಪುನರ್‌ಮುದ್ರಿಸುವವರೆಗೂ ಅದರ ವಿಷಯ ಬಹಳ ಮಂದಿಗೆ ತಿಳಿದಿರಲಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. This 1828 essay can be found in Mathematical papers of the late George Green, edited by N. M. Ferrers. The website for this is given below.
  2. Cannell, D.M. (1999). "George Green: An Enigmatic Mathematician". American Mathematical Monthly. 106 (2): 136–151. doi:10.2307/2589050. JSTOR 2589050.


ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: