ಜಾನ್ ಜೇ ಚಾಪ್‍ಮನ್
ಗೋಚರ

ಜಾನ್ ಜೇ ಚಾಪ್‍ಮನ್ (1862-1933) ಅಮೆರಿಕದ ಒಬ್ಬ ಬರಹಗಾರ, ಕವಿ, ಪ್ರಬಂಧಕಾರ ಮತ್ತು ವಕೀಲ.[೧]
ಜೀವನ, ಕೃತಿಗಳು
[ಬದಲಾಯಿಸಿ]ಈತ ಹುಟ್ಟಿದ್ದು ನ್ಯೂಯಾರ್ಕ್ ನಗರದಲ್ಲಿ ಮಾರ್ಚ್ ೨ ೧೮೬೨ರಂದು.[೨] 1884 ರಲ್ಲಿ ಹಾರ್ವಡ್ ವಿಶ್ವವಿದ್ಯಾಲಯದ ಪದವೀಧರನಾಗಿ 1888ರಲ್ಲಿ ನ್ಯೂಯಾರ್ಕಿನ ವಕೀಲ ಸಂಘಕ್ಕೆ ದಾಖಲಾದ. 1898ರ ವರೆಗೂ ಸಕ್ರಿಯವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದ. ಅನಂತರ ಬರೆಯಲು ಮೊದಲು ಮಾಡಿದ. ಈತನ ವೈಶಿಷ್ಟ್ಯಪೂರಿತ ಪ್ರಬಂಧಗಳು ಗಮನವನ್ನು ಸೆಳೆದುವು. ಎಮರ್‌ಸನ್ ಅಂಡ್ ಅದರ್ ಎಸ್ಸೇಸ್ (1898); ಕಾಸಸ್ ಅಂಡ್ ಕಾನ್‌ಸಿಕ್ವೆನ್ಸಸ್ (1898); ದ ಮೇಯ್ಡ್ಸ್ ಫರ್‌ಗಿವ್‌ನೆಸ್ (ಕಾವ್ಯ ನಾಟಕ -1908); ಲರ್ನಿಂಗ್ ಅಂಡ್ ಅದರ್ ಎಸ್ಸೇಸ್ (1910); ದ ಟ್ರೀಸನ್ ಅಂಡ್ ಡೆತ್ ಆಫ್ ಬೆನೆಡಿಕ್ಟ್ ಆರ್ನಲ್ಡ್ (ನಾಟಕ -1910); ವಿಲಿಯಮ್ ಲಾಯ್ಡ್ ಗ್ಯಾರಿಸನ್ (1913); ನೋಟ್ಸ್ ಆನ್ ರಿಲಿಜನ್ (1915); ದ ಗ್ರೀಕ್ ಜೀನಿಯಸ್ (1915); ಎ ಗ್ಲಾನ್ಸ್ ಟು ವರ್ಡ್ ಷೇಕ್ಸ್‌ಪಿಯರ್ (1922); ಲೆಟರ್ಸ್ ಅಂಡ್ ರಿಲಿಜನ್ (1924); ಡಾಂಟೆ (1927)-ಇವು ಈತನ ಕೆಲವು ಕೃತಿಗಳು.
ಉಲ್ಲೇಖಗಳು
[ಬದಲಾಯಿಸಿ]- ↑ "JOHN J. CHAPMAN, AUTHOR, POET, DIES; New Yo;ker Succumbs to Long Illness at Age of 71 in Poughkeepsie Hospital. ABANDONED LAW TO WRITE Was Central Figure in Several Controversies Funeral in This City Next Wednesday". The New York Times. 5 November 1933. Retrieved 12 October 2017.
- ↑ "Retrospections." In John Jay Chapman and his Letters, De Wolfe Howe (ed.), Houghton Mifflin Company, 1937.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Works by John Jay Chapman at Project Gutenberg
- Works by or about ಜಾನ್ ಜೇ ಚಾಪ್‍ಮನ್ at Internet Archive
- Works by ಜಾನ್ ಜೇ ಚಾಪ್‍ಮನ್ at LibriVox (public domain audiobooks)


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: