ವಿಷಯಕ್ಕೆ ಹೋಗು

ಜಾನ್ ಕೆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಕೆರ್
John Kerr, c. 1860, photograph by Thomas Annan
ಜನನ(೧೮೨೪-೧೨-೧೭)೧೭ ಡಿಸೆಂಬರ್ ೧೮೨೪
Ardrossan, Scotland
ಮರಣ15 August 1907(1907-08-15) (aged 82)
Glasgow, Scotland
ಪ್ರಸಿದ್ಧಿಗೆ ಕಾರಣKerr effect

ಜಾನ್ ಕೆರ್ (1824-1907).ಸ್ಕಾಟ್‍ಲ್ಯಾಂಡ್‍ಭೌತವಿಜ್ಞಾನಿ. ಬೆಳಕು ಮತ್ತು ಸ್ಥಾಯೀ ವಿದ್ಯುತ್ ಕ್ಷೇತ್ರಗಳ ಪರಸ್ಪರ ಸಂಬಂಧವನ್ನು ಅನುಮಾನಿಸಿ ಮೊದಲು ಗುರುತಿಸಿದಾತ. ಸಾಮಾನ್ಯ ಗಾಜು, ಎಣ್ಣೆ ಮೊದಲಾದವು ಪಾರದರ್ಶಕಗಳಾಗಿದ್ದು ಬೆಳಕಿನ ಒಂದು ವರ್ಣದ ಒಂದು ಕಿರಣವನ್ನು ಒಂದೇ ನಿಶ್ಚಿರ ದಿಕ್ಕಿನಲ್ಲಿ ಹಾಯಗೊಡುತ್ತವೆ. ಆದರೆ ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಇಂಥ ಪಾರದರ್ಶಕ ವಸ್ತುಗಳನ್ನಿಟ್ಟರೆ ಮೇಲಿನ ಬೆಳಕಿನ ಕಿರಣ ಪೃಥಕ್ಕಾದ ಎರಡು ದಿಕ್ಕುಗಳಲ್ಲಿ ಚಲಿಸುತ್ತದೆ. ಇದನ್ನು ದ್ವಿರಿಫ್ರೇಕ್ಷಣ (ಡಬಲ್ ರಿಫ್ರಾಕ್ಷನ್) ಎನ್ನುತ್ತಾರೆ. ಕೆರ್ ಈ ವೈಚಿತ್ರ್ಯವನ್ನು 1875ರಲ್ಲಿ ತನ್ನ ಪ್ರಯೋಗಗಳ ಮೂಲಕ ತೋರಿಸಿದ. ಇದಕ್ಕೆ ಬೆಳಕಿನ ಕೆರ್ ಪರಿಣಾಮ ಎಂದು ಹೆಸರು. ಪರಸ್ಪರ ಲಂಬವಾದ ನಿಲುವುಳ್ಳ ಎರಡು ನಿಕ್ಕಲ್ ಆಶ್ರಯಗಳ ನಡುವೆ ನೈಟ್ರೋಬೆನ್ಜೀನನ್ನು ಇರಿಸಿ ಇದರ ಸುತ್ತಲೂ ಆವರ್ತಶೀಲ ವಿದ್ಯುತ್ ಕ್ಷೇತ್ರವನ್ನು ಉಂಟುಮಾಡಿದರೆ ಕಿರಣ ಬೆಳಕು ಕತ್ತಲುಗಳ ಕಣ್ಣು ಮುಚ್ಚಾಲೆಯಾಡುತ್ತದೆ. ಇದನ್ನು ಗಮನಿಸಿ ತಕ್ಕ ಅಳತೆಗಳಿಂದ ಬೆಳಕಿನ ವೇಗವನ್ನು ನಿರ್ಣಯಿಸಲಾಗಿದೆ (1926), ಮಾತ್ರವಲ್ಲದೆ ಕೆರ್ ಪರಿಣಾಮ ಕಾಂತಕ್ಷೇತ್ರ ಮತ್ತು ಬೆಳಕಿನ ಸಂಬಂಧದ ಪರಿಣಾಮವನ್ನು ಅನುಮಾನಿಸಲು ನೆರವಾಗಿದೆ.ಈತ ಮೆಟ್ರಿಕ್ ಪದ್ಧತಿಯ ಆರಂಭಿಕ ಪ್ರತಿಪಾದಕರಲ್ಲಿ ಒಬ್ಬರು.[][]

ಜಾನ್ ಕೆರ್ 1824 ರ ಡಿಸೆಂಬರ್ 17 ರಂದು ಸ್ಕಾಟ್ಲೆಂಡ್‌ನ ಆರ್ಡ್ರೊಸನ್‌ನಲ್ಲಿ ಜನಿಸಿದರು . ಅವರು 1841 ರಿಂದ 1846 ರವರೆಗೆ ಗ್ಲ್ಯಾಸ್ಗೋದಲ್ಲಿ ವಿದ್ಯಾರ್ಥಿಯಾಗಿದ್ದರು ಮತ್ತು 1849 ರಲ್ಲಿ ಎಡಿನ್‌ಬರ್ಗ್‌ನಲ್ಲಿರುವ ಥಿಯೋಲಾಜಿಕಲ್ ಕಾಲೇಜಿನಲ್ಲಿ, ಸ್ಕಾಟ್ಲೆಂಡ್‌ನ ಫ್ರೀ ಚರ್ಚ್‌ನಲ್ಲಿ ವಿದ್ಯಾರ್ಥಿಯಾಗಿದ್ದರು. 1857 ರಿಂದ ಅವರು ಗ್ಲ್ಯಾಸ್ಗೋದ ಫ್ರೀ ಚರ್ಚ್ ತರಬೇತಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿದ್ದರು. ಅವರು 1907 ರಲ್ಲಿ ಗ್ಲ್ಯಾಸ್ಗೋದಲ್ಲಿ ನಿಧನರಾದರು.[][] []

ಗೌರವಗಳು

[ಬದಲಾಯಿಸಿ]
  • ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಿಂದ ಗೌರವ ಎಲ್ಎಲ್.ಡಿ ( 1864)
  • ರಾಯಲ್ ಸೊಸೈಟಿಯ ಫೆಲೋ (1890)
  • ರಾಯಲ್ ಸೊಸೈಟಿಯ ರಾಯಲ್ ಪದಕ (1898)
  • ನಾಗರಿಕ ಪಟ್ಟಿ ಪಿಂಚಣಿ (1902)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. 1 2 ಉಲ್ಲೇಖ ದೋಷ: Invalid <ref> tag; no text was provided for refs named "ODNB".
  2. See Kerr, J. (1863) The Metric System, Its Prospects in this Country, Effingham Wilson (publisher)
  3. Steele, R. rev. Anita McConnell (2004) "Kerr, John (1824–1907)", Oxford Dictionary of National Biography, Oxford University Press. Retrieved 19 June 2005
  4. See the very brief biographical sketch in Lewis, E. P. (Editor), The Effects of a Magnetic Field on Radiation (1900), New York: American Book Company, page 64