ವಿಷಯಕ್ಕೆ ಹೋಗು

ಜಾನ್ ಕಾಬಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
John Cabot
Giovanni Caboto
John Cabot in traditional Venetian garb – mural painting by Giustino Menescardi (1762), in the Sala dello Scudo in the Doge's Palace, Venice
ಹುಟ್ಟುc.1450
ಸಾವುc.1499
ಬೇರೆ ಹೆಸರುGiovanni Caboto, Zuan Chabotto, Giovanni Chabotte, Juan Caboto, Jean Caboto
ಉದ್ಯೋಗsMaritime explorer
ಹೆಸರುವಾಸಿFirst European since the Norse colonization of North America to explore coastal parts of North America
ಹೆಂಡತಿ/ಗಂಡMattea (m. circa 1470)
ಮಕ್ಕಳುLudovico, Sebastian, and Sancto[]
ಸಂಬಂಧಿಕರುCatalina de Medrano (daughter-in-law)

ಜಾನ್ ಕಾಬಟ್(1450-1499). ಇಟಲಿಯ ನಾವಿಕ ಮತ್ತು ಭೂ ಪರಿಶೋಧಕ. ಜಿನೋವದಲ್ಲಿ ಹುಟ್ಟಿ 1461ರಲ್ಲಿ ವೆನಿಸಿಗೆ ವಲಸೆ ಹೋದ. ಈತನಿಗೆ ಇಟಲಿಯ ಪೌರಹಕ್ಕುಗಳು ಲಭ್ಯವಾದ್ದು 1476ರಲ್ಲಿ. ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಈತ ನೌಕಾವ್ಯಾಪಾರದಲ್ಲಿ ನಿರತನಾಗಿದ್ದ. 1484ರಲ್ಲಿ ಇಂಗ್ಲೆಂಡಿಗೆ ತೆರಳಿ, ಬ್ರಿಸ್ಟಲಿನ ವರ್ತಕಪಂಗಡದ ಆಶ್ರಯಪಡೆದ. ಯೂರೋಪಿನ ಪಶ್ಚಿಮಕ್ಕಿದ್ದ ರಾಷ್ಟ್ರಗಳೊಂದಿಗೆ ಒಂದು ನೌಕಾವ್ಯಾಪಾರ ಮಾರ್ಗವನ್ನು ಶೋಧನೆ ಮಾಡಬೇಕೆಂಬುದು ಇವನ ಗುರಿಯಾಗಿದ್ದಂತೆ ತೋರುತ್ತವೆ. ಇದಕ್ಕೆ ಇಂಗ್ಲಿಷರ ಸಹಾಯ ಯಾಚಿಸಿ ಇಂಗ್ಲೆಂಡಿಗೆ ಹೋದ. ಬ್ರಿಸ್ಟಲಿನ ವರ್ತಕಪಂಗಡದ ಸಹಾಯದಿಂದ ಚಕ್ರವರ್ತಿ 7ನೆಯ ಹೆನ್ರಿಯಿಂದ ನೌಕಾಯಾನದ ಸನ್ನದನ್ನು 1496ರಲ್ಲಿ ಪಡೆದು 1497ರ ಮೇ 2ರಂದು ಬ್ರಿಸ್ಟಲಿನಿಂದ ಹೊರಟ ಈತ ಬ್ರಿಟನ್ ದ್ವೀಪದ ಭೂಶಿರವನ್ನು ತಲುಪಿದ್ದು ಜೂನ್ 24ರಂದು. ಅದನ್ನು ಏಷ್ಯಖಂಡದ ಈಶಾನ್ಯಭಾಗವೆಂದು ತಪ್ಪು ತಿಳಿದು ಸೆಂಟ್ ಲಾರೆನ್ಸ್ ಕೊಲ್ಲಿಯ ತೀರಪ್ರದೇಶದಲ್ಲಿ ಸಂಚರಿಸಿ ಅನಂತರ ಇಂಗ್ಲೆಂಡಿಗೆ ಮರಳಿದ. ಇದರಿಂದ ಸಂಪ್ರೀತನಾದ ಚಕ್ರವರ್ತಿಯಿಂದ ಇವನಿಗೆ 10 ಪೌಂ. ಬಹುಮಾನವೂ 20 ಪೌಂ. ವಾರ್ಷಿಕವೇತನವೂ ದೊರಕಿದುವು. ಲಂಡನ್ ಮತ್ತು ಬ್ರಿಸ್ಟಲಿನ ವರ್ತಕರ ನೆರೆವಿನಿಂದ (1498) ಈತ ಮತ್ತೊಂದು ನೌಕಾಯಾನಕ್ಕೆ ಸನ್ನದನ್ನು ಪಡೆದ. ಇವನ ನೌಕಾತಂಡ ಬಿರುಗಾಳಿಗೀಡಾಗಿ ಐರ್ಲೆಂಡ್ ದಡವನ್ನು ಮುಟ್ಟಿತು. ಅನಂತರ ನೌಕಾಯಾನ ಮುಂದುವರಿಸಿದರೂ ಆ ವಿಷಯವಾಗಿ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಒಟ್ಟಿನಲ್ಲಿ ಪೌರಸ್ತ್ಯ ದೇಶಗಳೊಡನೆ ವ್ಯಾಪಾರಸಂಪರ್ಕಕ್ಕಾಗಿ ಹತ್ತಿರದ ಮಾರ್ಗವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಸಫಲನಾಗದೆ ಬರಿಗೈಯಿಂದ ಇಂಗ್ಲೆಂಡಿಗೆ ಹಿಂತಿರುಗಿದ. 1499ರಲ್ಲಿ ಬ್ರಿಟನಿನಿಂದ ವರ್ಷಾಶನ ಪಡೆದದ್ದಕ್ಕೆ ದಾಖಲೆಯುಂಟು, ಆಮೇಲೆ ಇವನ ಬಗ್ಗೆ ಇತಿಹಾಸದಲ್ಲಿ ಯಾವ ಮಾಹಿತಿಯೂ ದೊರಕುವುದಿಲ್ಲ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • "John Cabot: A Man of the Renaissance". National Film Board of Canada (in ಇಂಗ್ಲಿಷ್). Retrieved 2025-07-04.
  • "John Cabot". Historica Canada (in ಇಂಗ್ಲಿಷ್). Retrieved 2025-07-04.
  • "The Cabot Project". University of Bristol (in ಇಂಗ್ಲಿಷ್). Retrieved 2025-07-04.
  • Hartig, O. (1908). "John and Sebastian Cabot". The Catholic Encyclopedia (in ಇಂಗ್ಲಿಷ್). New Advent. Retrieved 2025-07-04.
  • "George Prowse Writings and Correspondence on John Cabot". Dartmouth College Library (in ಇಂಗ್ಲಿಷ್). Retrieved 2025-07-04.
  1. "Catholic Encyclopedia 'John & Sebastian Cabot'". newadvent. 2007. Retrieved 17 May 2008.