ಜಾನ್ ಎಲ್ಫಿನ್ ಸ್ಟನ್, ೧೩ ನೇ, ಎಲ್ಫಿನ್ ಸ್ಟನ್

ವಿಕಿಪೀಡಿಯ ಇಂದ
Jump to navigation Jump to search

(ಜನನ : (ಜೂನ್ ೨೩, ೧೮೦೭-ಮರಣ : ಜುಲೈ ೧೯, ೧೮೬೦)

ಜಾನ್ ಎಲ್ಫಿನ್ಸ್‌ಟನ್,[೧] ೧೩ ನೆಯ ಲಾರ್ಡ್ ಎಲ್ಫಿನ್ಸ್‌ಟನ್ ಪದವಿಗೆ ಸೇರಿದವರು. ೧೫೧೦ ರಲ್ಲಿ 'ಅರ್ಲ್ ' ಎಂಬ ಪದವಿಯ ನಿರ್ಮಾಣವನ್ನು ಮಾಡಲಾಗಿತ್ತು. ಅವರು ಎರಡು ಬಾರಿ 'ಸ್ಕಾಟಿಷ್ ಪಾರ್ಲಿಮೆಂಟ್' ಗೆ ಸದಸ್ಯರ ರೂಪದಲ್ಲಿ ಚುನಾಯಿತರಾಗಿ ಬಂದಿದ್ದರು. ಮೊದಲು, ಜನವರಿ, ೧೪, ೧೮೩೩ ರಿಂದ ಡಿಸೆಂಬರ್ ೨೯, ೧೮೩೪, ರವರೆಗೆ, ನಂತರ, ಸೆಪ್ಟೆಂಬರ್ ೮, ೧೮೪೭ ನಿಂದ, ಏಪ್ರಿಲ್ ೨೩, ೧೮೫೯ ವರೆಗೆ. ಅವರು, ಭಾರತದಲ್ಲಿದ್ದ ತಮ್ಮ ಕಾಲಾವಧಿಯಲ್ಲಿ ಮದ್ರಾಸ್ ಹಾಗೂ ಬೊಂಬಾಯಿನ ಗವರ್ನರ್ ಆಗಿದ್ದರು.

'ವಿಹಾರ್ ವಾಟರ್ ವರ್ಕ್ಸ್'ಸ್ಥಾಪಿಸಿದರು[ಬದಲಾಯಿಸಿ]

ಭಾರತದಲ್ಲಿ ಬ್ರಿಟಿಷ್ ನಾವಿಕ ವ್ಯಾಪಾರಿಗಳಿಂದ ಮೊಟ್ಟಮೊದಲು ಸ್ಥಾಪಿಸಲ್ಪಟ್ಟ, 'ಈಸ್ಟ್ ಇಂಡಿಯ ಕಂಪನಿ'ಯ ಕಾರ್ಯಾವಧಿಯಲ್ಲಿ ನೇಮಿಸಲ್ಪಟ್ಟ ಗವರ್ನರ್ ಗಳಲ್ಲಿ 'ಜಾನ್ ಲಾರ್ಡ್ ಎಲ್ಫಿನ್ ಸ್ಟನ್' ರವರು ಕೊನೆಯ ಗವರ್ನರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ೧೮೫೩ ರಿಂದ ೧೮೬೦ ರವರೆಗೆ, ಅವರು 'ಬೊಂಬಾಯಿನ ಗವರ್ನರ್' ಆಗಿದ್ದರು. ಬೊಂಬಾಯಿನಲ್ಲಿದ್ದ ಹಳೆಕೋಟೆಯನ್ನು ಉರುಳಿಸಿ, ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವಲ್ಲಿ ಅವರು ತಮ್ಮ ಯೋಗದಾನಮಾಡಿದ್ದರು. ಈ ಕೆಲಸವನ್ನು ಅವರ ನಂತರ ಬಂದ, ಗವರ್ನರ್, ಸರ್ ಬಾರ್ಟಲ್ ಫ್ರೆರ್, ಮುಂದುವರೆಸಿದರು. ಜನವರಿ ೧೮೫೬ ರಲ್ಲಿ, 'ಲಾರ್ಡ್ ಎಲ್ಫಿನ್ ಸ್ಟನ್' ರವರು, ಬೊಂಬಾಯಿಗೆ ಕುಡಿಯುವನೀರಿನ ಪೂರೈಕೆಗಾಗಿ, 'ವಿಹಾರ್ ವಾಟರ್ ವರ್ಕ್ಸ್', ಕೆಲಸವನ್ನು ಪ್ರಾರಂಭಿಸಿದರು. ಇದು ಇಂದಿನವರೆಗೂ ಸಮರ್ಪಕವಾಗಿ ನಡೆದುಕೊಂಡುಬರುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

  1. John Lord Elphinstone