ಜಗನ್ನಾಥದಾಸರು

ವಿಕಿಪೀಡಿಯ ಇಂದ
Jump to navigation Jump to search

ಜಗನ್ನಾಥದಾಸರು(೧೭೨೮-೧೮೦೯) ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗವಟ್ಟಿಯಲ್ಲಿ, ೧೭೨೮ರಲ್ಲಿ (ಕೀಲಕನಾಮ ಸಂವತ್ಸರ - ಶ್ರಾವಣ ಶುದ್ಧ ಬಿದಿಗೆ) ಜನಿಸಿದರು. ಮಾಧ್ವ ಬ್ರಾಹ್ಮಣ ಮನೆತನ ಇವರದು. ತಂದೆ ನರಸಿಂಹಾಚಾರ್ಯರು, ತಾಯಿಯ ಹೆಸರು ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮ ಸ್ವೀಕರಿಸಿರಲಿಲ್ಲವೆಂದು ತಿಳಿದುಬಂದಿದೆ. ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದು ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ ನದಿಯಲ್ಲಿ ದೊರೆತ ಫಲಕದಿಂದ ಈ ಅಂಕಿತ ದೊರಕಿತೆಂದು ಹೇಳಲಾಗುತ್ತದೆ. ಮಾನ್ವಿಯಲ್ಲಿ ಜಗನ್ನಾಥದಾಸರ ಬೃಂದಾವನವನವಿದೆ.

ಜೀವನ[ಬದಲಾಯಿಸಿ]

ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮದಲ್ಲಿ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದರೆಂದು ತಿಳಿದುಬಂದಿದೆ. ಶ್ರೀನಿವಾಸನ ವಿದ್ಯಾಭ್ಯಾಸ ಮಂತ್ರಾಲಯದ ಸುಪ್ರಸಿಧ್ಧ ಶ್ರೀ ರಾಘವೇಂದ್ರ ಸ್ವಾಮಿಗಳವರ ಶ್ರೀ ಮಠದ ಪೀಠದಲ್ಲಿ ಅಂದು ವಿರಾಜಮಾನರಾಗಿದ್ದ ಶ್ರೀ ವರದೇಂದ್ರ ತೀರ್ಥ ಶ್ರೀಪಾದಂಗಳವರಲ್ಲಿ ನಡೆದಿದ್ದು, “ಆಚಾರ್ಯ” ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬಂದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನಪ೦ಡಿತರೆಂದು ಪ್ರಸಿದ್ಧರಾದರು. ಇವರು ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದೂ ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ ನದಿಯಲ್ಲಿ ದೊರೆತ ಫಲಕದಿಂದ ಈ ಅಂಕಿತ ದೊರಕಿತೆಂದು ಹೇಳಲಾಗುತ್ತದೆ. ಮಾನ್ವಿಯಲ್ಲಿ ಜಗನ್ನಾಥದಾಸರ ಕಂಭ ಇದೆ.

ಕೃತಿಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  • ಹರಿಕಥಾಮೃತಸಾರ
  • ೧೯೪ ಕೀರ್ತನೆಗಳು :ಅರಿತವರಿಗತಿ ಸುಲಭ ಹರಿಯ ಪೂಜೆ, ದಾಸೋಹಂ ತವ ದಾಸೋಹಂ
  • ೧೯ ತತ್ವ ಸುವ್ವಾಲಿಗಳು
  • ೨ ಉಗಾಭೋಗಗಳು
  • ೩ ಸುಳಾದಿಗಳು
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಬಾಹ್ಯಕೊಂಡಿಗಳು[ಬದಲಾಯಿಸಿ]