ಜಂಬು ನೇರಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಂಬುನೇರಳೆ

ಜಂಬು ನೇರಳೆಯನ್ನು ಕನ್ನಡದಲ್ಲಿ "ಜಂಬುನೇರಲು" ಎಂದು ಸಹ ಕರೆಯುತ್ತಾರೆ. ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲೊಂದು. ಇದು ಔಷಧೀಯ ಗುಣಗಳನ್ನು ಹೊಂದಿದೆ.ಇದು ಹಣ್ಣಾಗುವ ಕಾಲ ಮಾರ್ಚ್- ಮೇ- ಅಕ್ಟೋಬರ್- ನವೆಂಬರ್.

ಪೌಷ್ಟಿಕಾಂಶಗಳು[ಬದಲಾಯಿಸಿ]

ಈ ಹಣ್ಣು ಸಸಾರಜನಕ, ಕೊಬ್ಬು, ನಾರು, ಸುಣ್ಣ, ರಂಜಕ, ಥಿಯಾಮಿನ್, ರಿಬೋಫ್ಲಾವಿನ್.

ಔಷಧೀಯ ಗುಣಗಳು[ಬದಲಾಯಿಸಿ]

 1. ಬಂಧಕ ಗುಣವುಳ್ಳ ತೊಗಟೇಯಿಂದ ಗಾಯ ಗುಣವಾಗುತ್ತದೆ. [೧]
 2. ಬಾಯಿಹುಣ್ಣಿಗೆ ತೊಗಟೆ ಕಷಾಯ ಪರಿಣಾಮಕಾರಿ.
 3. ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ, ಮಧುಮೇಹ, ಮಲಬದ್ಧತೆ, ಜ್ವರ, ಕೆಮ್ಮು, ತಲೆನೋವು ಇತ್ಯಾದಿಗಳ ನಿವಾರಣೆಗೆ ಸಸ್ಯಭಾಗಗಳ ಬಳಕೆ.
 4. ಜಾಂಬು ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ, ಜೀರ್ಣ ಕ್ರಿಯೆಯನ್ನು ಸುಧಾರಿಸಿ, ಮಲಬದ್ಡತೆ ಸಮಸ್ಯೆಯನ್ನು ಬೇಗ ತಡೆಯುತ್ತದೆ.
 5. ಮಧುಮೇಹ ಕಾಯಿಲೆ ಇರುವವರು ಈ ಜಾಂಬು ಹಣ್ಣು ಸೇವನೆ ಮಾಡಿದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು.
 6. ಜಾಂಬು ಹಣ್ಣು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಏಂಕೆದರೆ ಇದರಲ್ಲಿ ವಿಟಮಿನ್ ಸಿ ಅಂಶವು ಹೆಚ್ಚಾಗಿರುತ್ತದೆ.
 7. ಜಾಂಬು ಹಣ್ಣು ತಿನ್ನುವುದರಿಂದ ದೇಹದ ಉಷ್ಣಾಂಶವು ಕಡಿಮೆಯಾಗುವುದರ ಜೊತೆಗೆ ಕೆಲವು ಅಪಾಯಕಾರಿಯಾದ ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ.
 8. ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಬೇಡವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
 9. ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯವು ಸಹ ಉತ್ತಮವಾಗಿರುತ್ತದೆ.
 10. ಜಾಂಬು ಹಣ್ಣು ತಿನ್ನುವುದರಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಸೋಂಕನ್ನು ಬಹಳ ಬೇಗ ನಿವಾರಿಸುತ್ತದೆ.
 11. ದೇಹದಲ್ಲಿರುವ ವಿಷತ್ವವನ್ನು ಕಡಿಮೆ ಮಾಡುವ ಗುಣವನ್ನು ಜಾಂಬು ಹಣ್ಣು ಹೊಂದಿದೆ. ಜಾಂಬು ಹಣ್ಣು ಅನೇಕ ರೀತಿಯ ಔಷಧೀಯ ಗುಣವನ್ನು ಹೊಂದಿದೆ.[೨]

ಆಹಾರ ಪದಾರ್ಥಗಳು[ಬದಲಾಯಿಸಿ]

ಈ ಹಣ್ಣನ್ನು ಸಾಸ್, ಸಿರಪ್, ಜೆಲ್ಲಿ, ಮದ್ಯ, ಉಪ್ಪಿನಕಾಯಿ ಮಾಡುವುದಕ್ಕು ಬಳಸುತ್ತಾರೆ.

ಸಸ್ಯಮೂಲ, ಸ್ವರೂಪ[ಬದಲಾಯಿಸಿ]

ಇದೊಂದು ಹಣ್ಣಿನ ಸಸ್ಯ. ಈ ಸಸ್ಯವು ೧೨-೧೫ ಮೀಟರ್ ಎತ್ತರ ಬೆಳೆದು ದಟ್ಟವಾದ ವಿಶಾಲ ಹಂದರ ಹೊಂದುವ ನಿತ್ಯಹರಿದ್ವರ್ಣಿ. ಇದು ಚೂಪಾದ ಉದ್ದನೆಯ ಹಸಿರೆಲೆಗಳನ್ನು ಹೊಂದಿರುತ್ತದೆ. ಮರದ ಕಾಂಡ ಮತ್ತು ಬೆಳೆದ ರೆಂಬೆಗಳಿಗೆ ಅಂಟಿಕೊಂಡು ಅರಳುವ ಗುಲಾಬಿ-ನೇರಳೆ ವರ್ಣ. ಗುಲಾಬಿ, ಕೆಂಪು ಅಥವಾ ಬಿಳಿ ಬಣ್ಣದ ನುಣುಪಾದ ಗಂಟೆಯಾಕಾರದ ಹಣ್ಣಿನಲ್ಲಿ ಮೆದುವಾದ ಬಿಳಿ ತಿರುಳು. ಒಂದೆರದು ಬೀಜಗಳು, ಕೆಲವೊಮ್ಮೆ ಬೀಜರಹಿತ ಕೂಡ ಕಂಡು ಬರುತ್ತದೆ.

ಸಸ್ಯ ಪಾಲನೆ[ಬದಲಾಯಿಸಿ]

ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಅಡಿಕೆ ತೋಟಗಳಲ್ಲಿ ಕಂಡು ಬರುತ್ತದೆ. ಸೂಕ್ತ ವಾತಾವರಣದಲ್ಲಿ ವೇಗವಾಗಿ ಬೆಳೆಯುತ್ತದೆ. ಇದು ಉಷ್ಣವಲಯದ ಸಸ್ಯವಾಗಿದ್ದು ಹೆಚ್ಚು ಮಳೆ ಮತ್ತು ತೇವಾಂಶವನ್ನು ಬಯಸುತ್ತದೆ. ಮರಳು ಮಿಶ್ರಿತ ಗೋಡುಮಣ್ಣು ಉತ್ತಮ. ಬೀಜಗಳಿಂದ, ಮೊಗ್ಗು ಕಸಿ ವಿಧಾನದಿಂದ ಸಸ್ಯಭಿವೃದ್ಧಿ ಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

 1. ಪಶ್ಚಿಮ ಘಟ್ಟದ ಕಾಡು ಹಣ್ಣುಗಳು, ಶ್ರೀ ವಿನಾಯಕ ಭಟ್, ಡಾ.. ಅನಿಲ್ ಅಬ್ಬಿ, ಟ್ರಾಪಿಕಲ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್, ಪು.ಸಂ. ೪೦
 2. https://www.newnewskannada.com/2020/05/17/learn-about-the-health-benefits-of-consuming-jamba-fruit/[permanent dead link]