ವಿಷಯಕ್ಕೆ ಹೋಗು

ಛೋಯಿಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಛೋಯಿಲಾ
ಕೋಳಿಮಾಂಸದ ಛೋಯಿಲಾ; ನೇವಾರಿ ಪಾಕಶೈಲಿ
ಮೂಲ
ಮೂಲ ಸ್ಥಳನೇಪಾಳ
ಪ್ರಾಂತ್ಯ ಅಥವಾ ರಾಜ್ಯನೇಪಾಳ ಮಂಡಲ
ನಿರ್ಮಾತೃನೇವಾರ್
ನಮೂನೆಮಾಂಸದ ಖಾದ್ಯ

ಛೋಯಿಲಾ ಜಾಲರಿ ಮೇಲೆ ಸುಟ್ಟ ಮಸಾಲೆಭರಿತ ಎಮ್ಮೆ ಮಾಂಸವನ್ನು ಹೊಂದಿರುವ ಒಂದು ವಿಶಿಷ್ಟ ನೇವಾರಿ ಖಾದ್ಯವಾಗಿದೆ.[] ಈ ಖಾದ್ಯವು ಸಾಂಪ್ರದಾಯಿಕವಾಗಿ ಎಮ್ಮೆ ಮಾಂಸದಿಂದ ಜನಪ್ರಿಯವಾಗಿದೆಯಾದರೂ, ಇತ್ತೀಚಿನ ದಿನಗಳಲ್ಲಿ ಕುರಿಮಾಂಸ, ಕೋಳಿಮಾಂಸ, ಬಾತುಕೋಳಿ ಮಾಂಸ ಮತ್ತು ಅಣಬೆಯನ್ನು ಕೂಡ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಛಿಯುರಾದೊಂದಿಗೆ (ಅಕ್ಕಿಯ ತೆಳು ಬಿಲ್ಲೆಗಳು) ತಿನ್ನಲ್ಪಡುವ ಈ ಖಾದ್ಯವು ಬಹಳ ಖಾರ, ಬಿಸಿ ಮತ್ತು ಬಾಯಿಯಲ್ಲಿ ನೀರು ಬರಿಸುವಂಥದ್ದಾಗಿರುತ್ತದೆ.

ನೇವಾರಿ ಸಮುದಾಯದಲ್ಲಿ ಹಬ್ಬಗಳ ಸಂದರ್ಭದಲ್ಲಿ ಇದನ್ನು ಹಲವಾರು ಇತರ ಘಟಕಾಂಶಗಳೊಂದಿಗೆ ಆಹಾರದ ಅಗತ್ಯ ಭಾಗವೆಂದು ಪರಿಗಣಿಸಲಾಗುತ್ತದೆ. ಇದು ಸಮಯ್ ಬಜಿ ಖಾದ್ಯದ ಮುಖ್ಯವಾದ ಘಟಕಾಂಶ ಕೂಡ ಆಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Choila receive limelight in New Delhi". ReportersNepal.com. 27 January 2011. Archived from the original on 9 February 2011. Retrieved 3 August 2011.


"https://kn.wikipedia.org/w/index.php?title=ಛೋಯಿಲಾ&oldid=994933" ಇಂದ ಪಡೆಯಲ್ಪಟ್ಟಿದೆ