ಛಿತ್ಕುಲ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಛಿತ್ಕುಲ್ ಹಿಮಾಚಲ ಪ್ರದೇಶದ ಕಿನ್ನೋರ್ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಚಳಿಗಾಲದ ಅವಧಿಯಲ್ಲಿ, ಈ ಸ್ಥಳವು ಹಿಮದಿಂದ ಆವೃತವಾಗಿರುತ್ತದೆ ಮತ್ತು ಸ್ಥಳೀಯರು ಹಿಮಾಚಲದ ಕೆಳಗಿನ ಪ್ರದೇಶಗಳಿಗೆ ಸ್ಥಳಾಂತರವಾಗುತ್ತಾರೆ.

ಐಐಟಿ ದೆಹಲಿಯ ವಾತಾವರಣ ವಿಜ್ಞಾನಗಳ ಕೇಂದ್ರದ ಪ್ರಕಾರ, ಛಿತ್ಕುಲ್ ಭಾರತದಲ್ಲಿ ಅತ್ಯಂತ ಸ್ವಚ್ಛ ಗಾಳಿಯನ್ನು ಹೊಂದಿದೆ.[೧][೨]

ಬಸ್ಪಾ ನದಿಯ ದಂಡೆಯ ಮೇಲಿರುವ ಛಿತ್ಕುಲ್ ಬಸ್ಪಾ ಕಣಿವೆಯ ಮೊದಲ ಹಳ್ಳಿಯಾಗಿದೆ ಮತ್ತು ಹಳೆಯ ಭಾರತ-ಟಿಬೆಟ್ ವ್ಯಾಪಾರ ಮಾರ್ಗದಲ್ಲಿನ ಕೊನೆಯ ಹಳ್ಳಿಯಾಗಿದೆ. ಇದು ಪರವಾನಗಿ ಇಲ್ಲದೆಯೇ ಪ್ರಯಾಣಿಸಬಹುದಾದ ಭಾರತದಲ್ಲಿನ ಕೊನೆಯ ಸ್ಥಳವಾಗಿದೆ.[೩]

ಭೇಟಿಕಾರರ ಆಕರ್ಷಣೆಗಳು[ಬದಲಾಯಿಸಿ]

ಛಿತ್ಕುಲ್‍ನಲ್ಲಿ ವಿಶೇಷ ಆಸಕ್ತಿಯ ವಿಷಯಗಳೆಂದರೆ ಸ್ಲೇಟ್ ಅಥವಾ ಕಟ್ಟಿಗೆಯ ಹಲಗೆಯ ಛಾವಣಿಗಳ ಮನೆಗಳು, ಒಂದು ಬೌದ್ಧ ದೇವಾಲಯ ಮತ್ತು ಒಂದು ಸಣ್ಣ ಗೋಪುರ.

ಕಾಗ್ಯುಪಾ ದೇವಾಲಯವು ಶಾಕ್ಯಮುನಿ ಬುದ್ಧನ ಬಹಳ ಮೌಲ್ಯಯುತ ಹಳೆಯ ವಿಗ್ರಹ, ಜೀವನ ಮಂಡಲದ ಚಕ್ರ ಮತ್ತು ಬಾಗಿಲ ಎರಡೂ ಕಡೆಗೆ ನಾಲ್ಕು ದಿಕ್ಪಾಲಕ ರಾಜರನ್ನು ಹೊಂದಿದೆ. ವ್ಯವಹಾರ್ಯವಾಗಿ ಛಿತ್ಕುಲ್ ಪ್ರಸಿದ್ಧ ಕಿನ್ನರ್ ಕೈಲಾಶ್ ಪ್ರದಕ್ಷಿಣೆಯ ಕೊನೆಯ ಬಿಂದುವಾಗಿದೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Among metros, Delhi worst hit by PM2.5: Study". www.timesofindia.indiatimes.com. Retrieved 17 April 2016.
  2. "Kinnaur District In Himachal Pradesh Has The Cleanest Air In India, According To IIT!". indiatvnews.com. Retrieved 17 November 2017.
  3. "Chitkul, Kinnaur, Himachal Pradesh, India Tourist Information". Archived from the original on 15 ಫೆಬ್ರವರಿ 2013. Retrieved 20 January 2013. Check date values in: |archive-date= (help)

ಹೊರಗಿನ ಕೊಂಡಿಗಳು[ಬದಲಾಯಿಸಿ]