ವಿಷಯಕ್ಕೆ ಹೋಗು

ಚೌಮೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ತಟ್ಟೆಯಲ್ಲಿ ಚೌಮೀನ್

ಚೌಮೀನ್ ಜೋರಾಗಿ ಕಲಕಿ ಕರಿಯಲಾಗುವ ಚೈನೀಸ್ ನೂಡಲ್‍ಗಳ ಖಾದ್ಯವಾಗಿದೆ. ಇದು ತರಕಾರಿಗಳು ಮತ್ತು ಕೆಲವೊಮ್ಮೆ ಮಾಂಸ ಅಥವಾ ಟೋಫ಼ುವನ್ನು ಹೊಂದಿರುತ್ತದೆ. ಈ ಖಾದ್ಯವು ಚೈನಾದ ವಲಸಗಿರಾದ್ಯಂತ ಜನಪ್ರಿಯವಾಗಿದೆ ಮತ್ತು ವಿದೇಶದಲ್ಲಿನ ಬಹುತೇಕ ಚೈನೀಸ್ ರೆಸ್ಟೊರೆಂಟ್‍ಗಳ ಖಾದ್ಯಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತದೆ.[] ಇದು ವಿಶೇಷವಾಗಿ ಭಾರತ,[] ನೇಪಾಳ,[] ಯುಕೆ,[] ಮತ್ತು ಅಮೇರಿಕದಲ್ಲಿ[] ಜನಪ್ರಿಯವಾಗಿದೆ.

ಭಾರತದಲ್ಲಿ, ಇದನ್ನು ಕೊಲ್ಕತ್ತಾದಲ್ಲಿನ ಚೀನಿ ಜನರು ಪರಿಚಯಿಸಿದರು. ಸಾಮಾನ್ಯವಾಗಿ ಇದನ್ನು ಹಾಗೆಯೇ ಅಥವಾ ಗ್ರೇವಿಯೊಂದಿಗೆ ನೀಡಲಾಗುತ್ತದೆ. ಸಸ್ಯಾಹಾರಿ ಆಹಾರಕ್ಕೆ ಹೊಂದಿ ತೃಪ್ತಿಪಡಿಸಲು ತರಕಾರಿ ಚೌಮೀನ್ (ವೆಜ್ ಚೌಮೀನ್) ಎಂಬ ಒಂದು ಭಾರತೀಯ ವಿಧವಿದೆ. ಇದು ಎಲೆಕೋಸು, ಕಳಲೆ, ಬಟಾಣಿ, ಹಸಿರು ಮೆಣಸಿನಕಾಯಿ ಮತ್ತು ಗಜ್ಜರಿಯೊಂದಿಗೆ ನೂಡಲ್ಸ್‌ನ್ನು ಹೊಂದಿರುತ್ತದೆ. ನವ ದೆಹಲಿ ಪ್ರದೇಶದಲ್ಲಿ, ನೂಡಲ್ಸ್ ಮತ್ತು ತರಕಾರಿಗಳ ಮಿಶ್ರಣದ ಜೊತೆಗೆ ಚೌಮೀನ್ ಕೆಲವೊಮ್ಮೆ ಪನೀರ್‌ನ್ನು ಒಳಗೊಂಡಿರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Cho, Lily (2010). Eating Chinese. University of Toronto Press. p. 51. ISBN 9781442659995.
  2. Ahuja, Aashna (2015-11-27). "Indian Chinese Cuisine: India's Love Affair with Chinese Food". NDTV. Archived from the original on 2016-01-03. Retrieved 2016-02-03.
  3. Bindloss, Joseph (2010). Nepal: Country Guide Series, Lonely Planet guidebooks. Lonely Planet. p. 65. ISBN 9781742203614.
  4. Mason, Laura (2004). Food Culture in Great Britain. Greenwood Publishing Group. p. 163. ISBN 9780313327988.
  5. Aggarwal, Uma (2013). America's Favorite Recipes. iUniverse. p. 199. ISBN 9781475977868.
"https://kn.wikipedia.org/w/index.php?title=ಚೌಮೀನ್&oldid=1000025" ಇಂದ ಪಡೆಯಲ್ಪಟ್ಟಿದೆ