ವಿಷಯಕ್ಕೆ ಹೋಗು

ಚುಂಗಾ ಪಿಠಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂಗಾ ಪಿಠಾವನ್ನು ತಯಾರಿಸಲು ಬಿದಿರನ್ನು ಸುಡಲಾಗುತ್ತಿದೆ

ಚುಂಗಾ ಪಿಠಾ (ಸುಂಗಾ ಪಿಠಾ) ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದಲ್ಲಿ ತನ್ನ ಮೂಲವನ್ನು ಹೊಂದಿರುವ ಅಕ್ಕಿಯ ಒಂದು ಸಾಂಪ್ರದಾಯಿಕ ಬಿಲ್ಲೆಖಾದ್ಯ.[] ಬಿದಿರು ಮತ್ತು ಅಂಟಂಟಾದ ಅನ್ನ ಚುಂಗಾ ಪಿಠಾದ ಮುಖ್ಯ ಘಟಕಾಂಶಗಳಾಗಿದ್ದರೂ, ಇದನ್ನು ಬಿನ್ನಿ ಅಕ್ಕಿ, ಹಾಲು, ಸಕ್ಕರೆ, ಕೊಬ್ಬರಿ ಮತ್ತು ಅಕ್ಕಿ ಪುಡಿಯಿಂದ ಕೂಡ ತಯಾರಿಸಬಹುದು.[][] ಅಂಟು ಅನ್ನವನ್ನು ಎಳೆ ಬಿದಿರಿನೊಳಗೆ ತುಂಬಿ ಹೊಗೆಯಲ್ಲಿ ನಿಧಾನವಾಗಿ ಬೇಯಿಸಿ ಈ ಅನನ್ಯ ಖಾದ್ಯವನ್ನು ತಯಾರಿಸಲಾಗುತ್ತದೆ.[]

ಈ ಸಾಂಪ್ರದಾಯಿಕ ಖಾದ್ಯವು ಅಸ್ಸಾಮಿ ಜನರಲ್ಲಿಯೂ ಪ್ರಸಿದ್ಧವಾಗಿದೆ.[]

ಸಿಲ್ಹೆಟ್‍ನ ವಿವಿಧ ಬುಡಕಟ್ಟುಗಳು ಬಿದಿರನ್ನು ಕತ್ತರಿಸಿ ಅದರೊಳಗೆ ನೆನೆಸಿದ ಅಕ್ಕಿಯನ್ನು ಹಾಕುವ ಸಂಪ್ರದಾಯವನ್ನು ಹೊಂದಿದ್ದವು. ಕ್ರಮೇಣವಾಗಿ, ಈ ಆಹಾರವು ಗುಡ್ಡಗಾಡು ಪ್ರದೇಶದಿಂದ ಬಯಲಿನಲ್ಲಿ ವಾಸಿಸುವ ಸಿಲ್ಹೆಟಿಗಳಲ್ಲಿ ಜನಪ್ರಿಯವಾಗಲು ಶುರುವಾಯಿತು. ಕಾಲಕ್ರಮೇಣ, ಈ ಚುಂಗಾ (ಬಿದಿರಿನ ಕೊಳವೆ) ಖಾದ್ಯವು ಚುಂಗಾ ಪಿಠಾ ಎಂದು ಪರಿಚಿತವಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "সিলেটের ঐতিহ্যবাহী চুঙ্গাপুড়া পিঠার প্রধান উপকরণ ঢলুবাঁশ হারিয়ে যেতে চলেছে" (in Bengali). 13 December 2017. Retrieved 16 January 2016.
  2. Mohammed Al-Khusaibi; Nasser Al-Habsi; Mohammad Shafiur Rahman (eds.). Traditional Foods: History, Preparation, Processing and Safety. p. 132. Retrieved 22 March 2020.
  3. "The Beckoning Beauty of Barak". BIT MESRAr. 21 December 2017. Archived from the original on 5 ಜುಲೈ 2020. Retrieved 28 April 2020.
  4. "Food for thought: Understanding Bangladeshi cuisine". The Daily Star. February 24, 2017. Retrieved 29 April 2020.
  5. "Sunga Pitha". xobdo.org. Archived from the original on 22 ಮಾರ್ಚ್ 2020. Retrieved 22 March 2020.
  6. "ঐতিহ্যবাহী খাবার সিলেটের চুঙ্গা পিঠা". The Daily Ittefaq (in Bengali). Retrieved 13 January 2016.