ವಿಷಯಕ್ಕೆ ಹೋಗು

ಚಿಯೆಕೊ ಬೈಶೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಯೆಕೊ ಬೈಶೋ
倍賞 千恵子
2019ರಲ್ಲಿ ಟೋಕಿಯೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿಯೆಕೊ ಬೈಶೋ
ಜನನ (1941-06-29) June 29, 1941 (age 85)
ಕಿಟಾ, ಟೋಕಿಯೋ, ಜಪಾನ್
ವೃತ್ತಿಗಳುನಟಿ, ಗಾಯಕಿ, ಧ್ವನಿ ಕಲಾವಿದೆ
ಸಕ್ರಿಯ ವರ್ಷಗಳು1961–ಇಂದಿಗೂ
ಪತ್ನಿ/ಪತಿರೀಜಿರೊ ಕೊರೊಕು Reijirō Koroku (Q4678162)
ಜಾಲತಾಣbaisho-chieko.com

ಚಿಯೆಕೊ ಬೈಶೋ|倍賞 千恵子|Baishō Chieko|ಜನನ 29 ಜೂನ್ 1941}} ಜಪಾನಿನ ನಟಿ ಮತ್ತು ಗಾಯಕಿ.[][]

ಜಪಾನಿನಲ್ಲಿ ಅವರು 1969ರಿಂದ 1995ರವರೆಗೆ ಪ್ರಸಾರವಾದ ಒಟೊಕೊ ವಾ ತ್ಸುರೈ ಯೊ ಚಲನಚಿತ್ರ ಸರಣಿಯಲ್ಲಿ ಸಾಕುರಾ ಪಾತ್ರಕ್ಕಾಗಿ ಪ್ರಸಿದ್ಧರಾಗಿದ್ದಾರೆ.[] ಇದಲ್ಲದೆ, 1960ರ ದಶಕದಿಂದ ನಿರ್ದೇಶಕ ಯೋಜಿ ಯಮಾಡಾ ಅವರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು A Distant Cry from Spring (ವಸಂತದಿಂದ ದೂರದ ಕೂಗು) ಚಿತ್ರದ ಅಭಿನಯಕ್ಕಾಗಿ 5ನೇ ಹೋಚಿ ಫಿಲ್ಮ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.[]

ವೃತ್ತಿಜೀವನ

[ಬದಲಾಯಿಸಿ]

ಧ್ವನಿ ಅಭಿನಯ

[ಬದಲಾಯಿಸಿ]

ಅವರು ಕೆಲವೊಮ್ಮೆ ಧ್ವನಿ ಕಲಾವಿದೆಯಾಗಿ ಸಹ ಕಾರ್ಯನಿರ್ವಹಿಸಿದ್ದಾರೆ. ಉದಾಹರಣೆಗೆ, 2004ರಲ್ಲಿ ಬಿಡುಗಡೆಯಾದ Howl's Moving Castle ಚಿತ್ರದಲ್ಲಿ "ಸೋಫಿ" ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಚಿತ್ರವು ವಿವಿಧ ಭಾಷೆಗಳ ಡಬ್ಬಿಂಗ್‌ನಲ್ಲಿ ಯುವ ಮತ್ತು ವೃದ್ಧ ಸೋಫಿ ಪಾತ್ರಗಳಿಗೆ ವಿಭಿನ್ನ ಧ್ವನಿ ಕಲಾವಿದರನ್ನು ಬಳಸಿದರೂ, ಬೈಶೋ ಇಬ್ಬರಿಗೂ ಸ್ವತಃ ಧ್ವನಿ ನೀಡಿದ್ದಾರೆ. ಚಿತ್ರದ ಥೀಮ್ ಗೀತೆಯನ್ನು ಕೂಡ ಅವರು ಹಾಡಿದ್ದಾರೆ.[]

ಗಾಯನ ವೃತ್ತಿ

[ಬದಲಾಯಿಸಿ]

1962ರಲ್ಲಿ "Shitamachi no Taiyō" ಎಂಬ ಹಾಡಿನ ಮೂಲಕ ಅವರು ಗಾಯನ ವೃತ್ತಿಯನ್ನು ಆರಂಭಿಸಿದರು. ಈ ಹಾಡಿಗಾಗಿ ಅವರಿಗೆ ಜಪಾನ್ ರೆಕಾರ್ಡ್ ಪ್ರಶಸ್ತಿಯ "ನವೋದಯ ಕಲಾವಿದ ಪ್ರಶಸ್ತಿ" ಲಭಿಸಿತು.[][] 1965ರಲ್ಲಿ ಬಿಡುಗಡೆಯಾದ ಅವರ "Sayonara wa dance atoni" ಎಂಬ ಚಾ-ಚಾ ಶೈಲಿಯ ಗೀತೆಯ ಧುನಿ ನಂತರ 1992ರಲ್ಲಿ ಬಿಡುಗಡೆಯಾದ Moonlight Densetsu ಗೀತೆಗೆ ಪ್ರೇರಣೆಯಾಯಿತು. ಈ ಗೀತೆ Sailor Moon ಅನಿಮೆ ಸರಣಿಯ ಮೊದಲ ನಾಲ್ಕು ಋತುಗಳ ಥೀಮ್ ಗೀತೆಯಾಗಿತ್ತು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಅವರು ನಟಿ ಮಿತ್ಸುಕೋ ಬೈಶೋ ಅವರ ಅಕ್ಕರಾಗಿದ್ದಾರೆ.[]

ಅವರು ಜಪಾನಿನ ಸಂಗೀತ ಸಂಯೋಜಕ ರೀಜಿರೊ ಕೊರೊಕು ಅವರನ್ನು ವಿವಾಹವಾಗಿದ್ದಾರೆ.[]

ಗೌರವಗಳು

[ಬದಲಾಯಿಸಿ]
  • ಕಿನುಯೋ ತನಾಕಾ ಪ್ರಶಸ್ತಿ (2001)[]
  • ಮೆಡಲ್ ವಿತ್ ಪರ್ಪಲ್ ರಿಬ್ಬನ್ (2005)
  • ಆರ್ಡರ್ ಆಫ್ ದ ರೈಜಿಂಗ್ ಸನ್ – ನಾಲ್ಕನೇ ದರ್ಜೆ, ಗೋಲ್ಡ್ ರೇಸ್ ವಿತ್ ರೋಸೆಟ್ (2013)

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. 1 2 プロフィール [Profile] (in ಜಾಪನೀಸ್). Archived from the original on 18 August 2013. Retrieved 4 February 2013.
  2. 1 2 3 4 デジタル版 日本人名大辞典+Plus. "Baisho Chieko" (in ಜಾಪನೀಸ್). Archived from the original on 2013-09-29. Retrieved 2013-02-04.
  3. 報知映画賞ヒストリー (in ಜಾಪನೀಸ್). Cinema Hochi. Archived from the original on 2011-10-05. Retrieved 2010-01-18.
  4. "Sayonara wa Dance no Ato ni – Sailormusic.net".
  5. "デジタル版 日本人名大辞典+Plusの解説" [Digital dictionary of Japanese people] (in ಜಾಪನೀಸ್). Retrieved 4 February 2013.
  6. "釧路新聞". Archived from the original on 2013-01-22. Retrieved 2013-02-04.
  7. "田中絹代賞とは". Archived from the original on December 10, 2008. Retrieved April 3, 2021.