ವಿಷಯಕ್ಕೆ ಹೋಗು

ಚಿಗುರಿದ ಕನಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಗುರಿದ ಕನಸು
ನಿರ್ದೇಶನನಾಗಾಭರಣ
ನಿರ್ಮಾಪಕಪಾರ್ವತಮ್ಮ_ರಾಜ್‍ಕುಮಾರ್
ಲೇಖಕಶಿವರಾಮ_ಕಾರಂತ
ಚಿತ್ರಕಥೆನಾಗಾಭರಣ & ಜಯಂತ್ ಕಾಯ್ಕಿಣಿ
ಪಾತ್ರವರ್ಗಶಿವರಾಜ್‍ಕುಮಾರ್_(ನಟ)
ರೇಖ ಉನ್ನಿ ಕೃಷ್ನನ್
ಅವಿನಾಶ್_(ನಟ)
ಸಂಗೀತವಿ._ಮನೋಹರ್
ಛಾಯಾಗ್ರಹಣಬಿ ಸಿ ಗೌರಿಶಂಕರ್
ಸಂಕಲನಎಸ್ ಮನೋಹರ್
ಬಿಡುಗಡೆಯಾಗಿದ್ದು೨ ಒಕ್ಟೊಬೆರ್ ೨೦೦೩
ಅವಧಿ೧೫೪ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಚಿಗುರಿದ ಕನಸು ೨೦೦೩ರಲ್ಲಿ ತೆರೆ ಕಂಡ , ನಾಗಾಭರಣ ನಿರ್ದೇಶಿಸಿದ ಚಲನಚಿತ್ರ. ಮುಖ್ಯ ಭೂಮಿಕೆಯಲ್ಲಿ ಶಿವರಾಜ್‍ಕುಮಾರ್_(ನಟ), ರೇಖ ಉನ್ನಿ ಕೃಷ್ನನ್, ಅವಿನಾಶ್_(ನಟ) ಇದ್ದಾರೆ. ಈ ಚಲನಚಿತ್ರವು ಕನ್ನಡ ಸಾಹಿತಿ, ಜ್ನಾನಪೀಠ ಪ್ರಶಸ್ತಿ ಪುರಸ್ಕ್ರುತ ಶಿವರಾಮ ಕಾರಂತರ ಚಿಗುರಿದ ಕನಸು ಕಾದಂಬರಿ ಆಧಾರಿತ ಚಲನಚಿತ್ರ.

ನಟ ವರ್ಗ

[ಬದಲಾಯಿಸಿ]

ಕಥಾವಸ್ತು

[ಬದಲಾಯಿಸಿ]

ಬನಾರಸ್ ಹಿಂದು ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗನ್ನು ಓದುತ್ತಿದ್ದ ಬಿ.ಶಂಕರ್(ಶಿವರಾಜ್‍ಕುಮಾರ್ (ನಟ)) ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಮಗನನ್ನು ಅತಿಯಾಗಿ ಪ್ರೀತಿಸುವ ತಂದೆ ಬಿ.ಸುಂದರ್ ರಾವ್(ಅನಂತ್ ನಾಗ್) ಹಾಗು ಕಿರಿಕಿರಿ ಮಾಡುವ, ಬೆದರಿಸುವ ತಾಯಿ. ಶಂಕರನ ತಮ್ಮ ವಿಮಾನ ಚಾಲಕ. ಶಂಕರನದು ತೃಪ್ತ ಜೀವನವಾದರೂ, ಮನಸ್ಸಿನ ಮೂಲೆಯಲ್ಲಿ ಒಂದು ಕೊರಗಿತ್ತು. ಶಂಕರನ ಗೆಳತಿ ವರಲಕ್ಷ್ಮಿ(ವಿದ್ಯಾ ವೆಂಕಟೇಶ್) ಕನ್ನಡತಿ. ವರಲಕ್ಷ್ಮಿಯೊಂದಿಗೆ ಕನ್ನಡ ಮಾತನಾಡಲು ಶಂಕರನಿಗೆ ಅವನ ಕಾಲೆಜಿನ ಸ್ನೇಹಿತ ಸೀತಾರಾಮು(ರಾಜು ಅನಂತಸ್ವಾಮಿ) ಕಲಿಸುತ್ತಾನೆ. ಶಂಕರನು ದೆಹಲಿಗೆ ಹಿಂದುರುಗಿದಾಗ ಅವನ ಅಮ್ಮ ಮದುವೆಯ ನಿಶ್ಚಯ ಮಾಡಲು ಮುಂದಾಗುತ್ತಾರೆ ಮತ್ತು ಮನಸ್ಸಿಲ್ಲದೆ ಮಧುಮಗಳನ್ನು ಬೇಟಿಯಾಗಲು ಶಂಕರನು ಹೋಗುತ್ತಾನೆ. ಔತಣ ಕೂಟದಲ್ಲಿನ ಸಂಭಾಷಣೆಯಿಂದ ತನ್ನ ಅಡ್ಡ ಹೆಸರು ಬಂಗಾಡಿ ಎಂದು ತಿಳಿಯುತ್ತದೆ. ಬಂಗಾಡಿ ಊರೋ ಅಥವಾ ವ್ಯಕ್ತಿಯೆಂದು ತಿಳಿಯದ ಶಂಕರ ಅದರ ಮಹತ್ವ ತಿಳಿಯಲು ಕಾತುರನಾಗಿರುತ್ತಾನೆ. ತನ್ನ ತಮ್ಮನ ಜೊತೆ ಸುಮ್ಮನೆ ಫೋನ್ ನಲ್ಲಿ ಕನ್ನಡ ಮಾತನಾಡುವುದನ್ನು ಅವನ ತಂದೆ ಕೇಳಿಸಿಕೊಳ್ಳುತ್ತಾರೆ. " ಮಗನೆ ಕನ್ನಡದಲ್ಲಿ ಮಾತಾಡು, ಇದನ್ನು ಕೇಳಿ ಬಹಳಷ್ಟು ವರ್ಷಗಳಾಗಿವೆ. " ಎಂದು ಶಂಕರನ ತಂದೆ ಹೇಳುತ್ತಾರೆ. ತಾನು ಕನ್ನಡಿಗನೆಂದು ಶಂಕರನಿಗೆ ತಿಳಿಯುತ್ತದೆ ಮತ್ತು ತನ್ನ ಹುಟ್ಟುನೆಲೆ ಬಗ್ಗೆ ತಿಳಿಯಿತೆಂದು ಸಂತೋಷ ಪಡುತ್ತಾನೆ. ಶಂಕರನ ಅಜ್ಜ ತನ್ನ ಹುಟ್ಟೂರನ್ನು ಬಿಟ್ಟು ಬಂದಿದ್ದು ಮತ್ತೆ ಅಲ್ಲಿಗೆ ಹಿಂದಿರುಗಿಲ್ಲ ಎಂದು ಶಂಕರನ ತಂದೆ ಹೇಳುತ್ತಾರೆ. ಶಂಕರನು ತನ್ನ ಹುಟ್ಟುನೆಲೆಯ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು ಇಚ್ಚಿಸುತ್ತಾನೆ.

ಧ್ವನಿಮುದ್ರಿಕೆ

[ಬದಲಾಯಿಸಿ]
ಸಂಖ್ಯೆ ಹಾಡು ಹಾಡುಗಾರರು ಅವಧಿ
ಓ ಆಜಾರೆ ಉದಿತ್ ನಾರಯಣ್, ಮಹಾಲಕ್ಶ್ಮಿ ಅಯ್ಯರ್
ಸಿಂಗಾರ ತೆನೆ ತೆನೆಯಲ್ಲ ಶಂಕರ್ ಮಹದೇವನ್, ನಂದಿತ
ಅಹ ಎನಿದೇನಿದೇನು ಉದಿತ್ ನಾರಯಣ್
ಅ ಆ ಇ ಇ ಈ ಎಸ್. ಪಿ. ಬಿ.
ಶುಭಯೋಗ ಕೂಡಿಬಂತಮ್ಮ ರಾಜೇಶ್ ಕೃಷ್ಣನ್,ನಂದಿತ
ಓ ಬಂಧುವೆ ರಾಜಕುಮಾರ್

ಉಲ್ಲೇಖಗಳು

[ಬದಲಾಯಿಸಿ]