ವಿಷಯಕ್ಕೆ ಹೋಗು

ಚಿಕನ್ (ಕಸೂತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chikankari hand-embroidery
ಭಾರತದ ಕರಕುಶಲ ಕುಶಲಕರ್ಮಿಗಳಿಂದ ಸಾಂಪ್ರದಾಯಿಕ ಚಿಕನ್‌ಕರಿ ಕೈ-ಕಸೂತಿ

ಚಿಕನ್‌ಕರಿ ಭಾರತದ ಲಕ್ನೋದ ಸಾಂಪ್ರದಾಯಿಕ ಕಸೂತಿ ಶೈಲಿಯಾಗಿದೆ. ಈ ಕಸೂತಿಯನ್ನು ದಾರ ಅಥವಾ ತಂತಿಯನ್ನು ಬಳಸಿ ಮಾಡಲಾಗುತ್ತದೆ. ಇದು ಲಕ್ನೋದ ಅತ್ಯಂತ ಪ್ರಸಿದ್ಧ ಜವಳಿ ಅಲಂಕಾರ ಶೈಲಿಗಳಲ್ಲಿ ಒಂದಾಗಿದೆ. ಚಿಕನ್‌ಕರಿ ಆಧಾರಿತ ಉತ್ಪನ್ನಗಳಿಗೆ ಲಕ್ನೋದ ಚೌಕ್‌ನಲ್ಲಿ ಪ್ರಮುಖ ಮಾರುಕಟ್ಟೆ ಇದೆ . ಇದರ ಉತ್ಪಾದನೆಯು ಮುಖ್ಯವಾಗಿ ಲಕ್ನೋ ಮತ್ತು ಪಕ್ಕದ ಜಿಲ್ಲೆಗಳಲ್ಲಿ ನೆಲೆಗೊಂಡಿದೆ.

೩ ನೇ ಶತಮಾನದಷ್ಟು ಹಿಂದೆಯೇ ಭಾರತದಲ್ಲಿ ಚಿಕನ್ ಕಸೂತಿಗೆ ಹೋಲುವ ಕಸೂತಿಯ ಬಗ್ಗೆ ಮೆಗಾಸ್ತನೀಸ್ ಉಲ್ಲೇಖಗಳನ್ನು ನೀಡಿದ್ದಾನೆ. ಅವನು ಭಾರತೀಯರು ಹೂವುಳ್ಳ ಮಸ್ಲಿನ್‌ಗಳನ್ನು ಬಳಸುತ್ತಿದ್ದರು ಎಂದು ಉಲ್ಲೇಖಿಸಿದ್ದಾನೆ. ಆದರೆ ಅವನು ಉಲ್ಲೇಖಿಸಿದ ಕಸೂತಿ ಮಾದರಿಗಳಲ್ಲಿ ಚಿಕನ್‌ನ ವಿಶಿಷ್ಟ ಲಕ್ಷಣಗಳಾದ ಬಣ್ಣ ಅಥವಾ ಯಾವುದೇ ಗಮನಾರ್ಹ ಅಲಂಕಾರ ಇರಲಿಲ್ಲ.[] ಲೈಲಾ ತ್ಯಾಬ್ಜಿಯವರ ಪ್ರಕಾರ, ಮೊಘಲ್ ಆಸ್ಥಾನದಲ್ಲಿ ಪರ್ಷಿಯನ್ ಕುಲೀನರ ಸಂಸ್ಕೃತಿಯ ಭಾಗವಾಗಿ ಭಾರತಕ್ಕೆ ಬಂದ ಶಿರಾಜ್‌ನ ಬಿಳಿ ಕಸೂತಿಯಿಂದ ಚಿಕನ್‌ಕರಿ ಹುಟ್ಟಿಕೊಂಡಿದೆ.[] ಕುಡಿಯುವ ನೀರಿಗೆ ಪ್ರತಿಯಾಗಿ ಒಬ್ಬ ಪ್ರಯಾಣಿಕನು ರೈತನಿಗೆ ಚಿಕನ್ ಕಲಿಸಿದ ಬಗ್ಗೆ ಒಂದು ಕಥೆಯೂ ಇದೆ. ಅತ್ಯಂತ ಜನಪ್ರಿಯ ಮೂಲ ಕಥೆಯೆಂದರೆ ಭಾರತಕ್ಕೆ ಚಿಕನ್‌ಕರಿಯನ್ನು ಪರಿಚಯಿಸಿದ ಕೀರ್ತಿ ಮೊಘಲ್ ಸಾಮ್ರಾಜ್ಞಿ ಮತ್ತು ಜಹಾಂಗೀರ್‌ನ ಪತ್ನಿ ನೂರ್ ಜಹಾನ್‌ಗೆ ಸಲ್ಲುತ್ತದೆ.[][]

ಚಿಕನ್ ಬಿಳಿ ಕಸೂತಿ ( ವೈಟ್‌ವರ್ಕ್ ) ಯ ಒಂದು ವಿಧವಾಗಿ ಪ್ರಾರಂಭವಾಯಿತು.[]

ತಂತ್ರ

[ಬದಲಾಯಿಸಿ]

ಚಿಕನ್ ಕಸೂತಿಯ ತಂತ್ರವನ್ನು ಚಿಕನ್‍ಕರಿ ಎಂದು ಕರೆಯಲಾಗುತ್ತದೆ ( चिकनकारी چکن کاری ). ಚಿಕನ್‍ಕರಿ ಎಂಬುದು ಹತ್ತಿ, ಚಾಂದೇರಿ, ಮಸ್ಲಿನ್, ಜಾರ್ಜೆಟ್, ವಿಸ್ಕೋಸ್, ರೇಷ್ಮೆ, ಆರ್ಗನ್ಜಾ, ನೆಟ್ ಮುಂತಾದ ವಿವಿಧ ಜವಳಿ ಬಟ್ಟೆಗಳ ಮೇಲೆ ಸೂಕ್ಷ್ಮ ಮತ್ತು ಕಲಾತ್ಮಕವಾಗಿ ಮಾಡಿದ ಕೈ ಕಸೂತಿಯಾಗಿದೆ. ಬಿಳಿ ದಾರವನ್ನು ತಿಳಿ ಮಸ್ಲಿನ್ ಮತ್ತು ಹತ್ತಿ ಉಡುಪುಗಳ ತಂಪಾದ, ನೀಲಿಬಣ್ಣದ ಛಾಯೆಗಳ ಮೇಲೆ ಕಸೂತಿ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕನ್ ಕಸೂತಿಯನ್ನು ಬಣ್ಣಬಣ್ಣದ ಮತ್ತು ರೇಷ್ಮೆ ದಾರಗಳಿಂದ ಮಾಡಲಾಗುತ್ತದೆ. ಇದು ಫ್ಯಾಷನ್ ಪ್ರವೃತ್ತಿಗಳಿಗೆ ಅನುಗುಣವಾಗಿರುತ್ತದೆ ಮತ್ತು ಚಿಕನ್‍ಕರಿಯನ್ನು ನವೀಕೃತವಾಗಿರಿಸುತ್ತದೆ. ಲಕ್ನೋ ಇಂದು ಚಿಕನ್‍ಕರಿ ಉದ್ಯಮದ ಹೃದಯಭಾಗವಾಗಿದ್ದು, ಈ ವಿಧವನ್ನು ಲಕ್ನವಿ ಚಿಕನ್ ಎಂದು ಕರೆಯಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಚಿಕನ್ ಕಸೂತಿಯು ಮುಕೈಶ್, ಕಾಮದಾನಿ, ಬದ್ಲಾ, ಮಿನುಗು, ಮಣಿ ಮತ್ತು ಕನ್ನಡಿ ಕೆಲಸಗಳಂತಹ ಹೆಚ್ಚುವರಿ ಅಲಂಕಾರಗಳನ್ನು ಅಳವಡಿಸಿಕೊಂಡಿದ್ದು, ಇದು ಅದಕ್ಕೆ ಶ್ರೀಮಂತ ನೋಟವನ್ನು ನೀಡುತ್ತದೆ. ಚಿಕನ್ ಕಸೂತಿಯನ್ನು ಹೆಚ್ಚಾಗಿ ಹತ್ತಿ, ಅರೆ-ಜಾರ್ಜೆಟ್, ಶುದ್ಧ ಜಾರ್ಜೆಟ್, ಕ್ರೇಪ್, ಶಿಫೋನ್, ರೇಷ್ಮೆ ಮತ್ತು ಹಗುರವಾದ ಮತ್ತು ಕಸೂತಿಗೆ ಒತ್ತು ನೀಡುವ ಯಾವುದೇ ಇತರ ಬಟ್ಟೆಯ ಮೇಲೆ ಮಾಡಲಾಗುತ್ತದೆ. ಬಟ್ಟೆ ತುಂಬಾ ದಪ್ಪ ಅಥವಾ ಗಟ್ಟಿಯಾಗಿರಬಾರದು, ಇಲ್ಲದಿದ್ದರೆ ಕಸೂತಿಯ ಸೂಜಿ ಅದನ್ನು ಚುಚ್ಚುವುದಿಲ್ಲ. ಪಾರದರ್ಶಕ ಬಟ್ಟೆಯನ್ನು ಬಳಸಿ ಹೊಲಿದರೆ ಬಟ್ಟೆಯ ಹಿಂಭಾಗದಲ್ಲಿರುವ ಹೊಲಿಗೆಗಳ ನೆರಳು ಮುಂಭಾಗದಲ್ಲಿ ಕಾಣುತ್ತದೆ . ಇದು ಈ ತಂತ್ರದ ವಿಶಿಷ್ಟ ಲಕ್ಷಣವಾಗಿದೆ.

ಈ ಕಸೂತಿಗೆ ಒಂದು ಅಥವಾ ಹೆಚ್ಚಿನ ಮಾದರಿಯ ಚಿತ್ತಾರವಿರುವ ಬ್ಲಾಕ್‌ಗಳನ್ನು ಮೊದಲು ಬಳಸಲಾಗುತ್ತದೆ. ಕಸೂತಿಯ ಬಟ್ಟೆಯ ಮೇಲೆ ಈ ಬ್ಲಾಕ್‌ಗಳ ಚಿತ್ತಾರವನ್ನು ನಕಲು ಮಾಡಲಾಗುತ್ತದೆ. ಕಸೂತಿ ಮಾಡುವವನು ಆ ನಕಲು ಮಾದರಿಯ ಮೇಲೆ ಹೊಲಿಯುತ್ತಾನೆ. ನಂತರ ಮುದ್ರಿತ ಮಾದರಿಯ ಎಲ್ಲಾ ಕುರುಹುಗಳನ್ನು ತೆಗೆದುಹಾಕಲು ಹೊಲಿದ ಬಟ್ಟೆಯನ್ನು ಜಾಗರೂಕತೆಯಿಂದ ತೊಳೆಯಲಾಗುತ್ತದೆ. ಚಿಕನ್ಕರಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ:

  • ವಿನ್ಯಾಸ
  • ಕೆತ್ತನೆ
  • ಬ್ಲಾಕ್ ಮುದ್ರಣ
  • ಕಸೂತಿ
  • ತೊಳೆಯುವುದು ಮತ್ತು ಮುಗಿಸುವುದು

ಹೊಲಿಗೆಗಳು

[ಬದಲಾಯಿಸಿ]

ರಚಿಸಲಾದ ವಿನ್ಯಾಸಗಳು ಬಳಸಿದ ದಾರಗಳ ದಪ್ಪವನ್ನು ಅವಲಂಬಿಸಿರುತ್ತದೆ. ಕೆಲವು ಹೊಲಿಗೆಗಳಲ್ಲಿ ಬ್ಯಾಕ್‌ಸ್ಟಿಚ್, ಚೈನ್ ಸ್ಟಿಚ್ ಮತ್ತು ಹೆಮ್‌ಸ್ಟಿಚ್ ಸೇರಿವೆ.. ಸಾಮಾನ್ಯವಾಗಿ ಕಸೂತಿ ಮಾಡುವವರು ಸೂಜಿಯನ್ನು ಬಳಸಿಕೊಂಡು ಬಟ್ಟೆಯಲ್ಲಿ ಎಳೆಗಳನ್ನು ಬೇರ್ಪಡಿಸುವ ಮೂಲಕ ಜಾಲರಿಯಂತಹ ವಿಭಾಗಗಳನ್ನು ರಚಿಸುತ್ತಾರೆ ಮತ್ತು ನಂತರ ಸ್ಥಳಗಳ ಸುತ್ತಲೂ ಕೆಲಸ ಮಾಡುತ್ತಾರೆ. ಇದು ೩೨ ಹೊಲಿಗೆಗಳನ್ನು ಒಳಗೊಂಡಿದೆ:[]

ಬಖಿಯಾ ಚಿಕನ್ ಕಸೂತಿಯಲ್ಲಿ ಮೊದಲು ತಾತ್ಕಾಲಿಕ ನಕಲು ಮಾದರಿ ಮಾಡಲಾಗುತ್ತಿದೆ
ಹಿಂಬದಿಯಿಂದ ಬಖಿಯಾ ಚಿಕನ್ ಕಸೂತಿ
  • ಚಿಕನ್‌ಕರಿ-ಟೆಪ್ಚಿ ಎಂಬುದು ಡಾರ್ನಿಂಗ್ ಹೊಲಿಗೆಯಾಗಿದ್ದು, ಇದರಲ್ಲಿ ಬಟ್ಟೆಯ ಬಲಭಾಗದಲ್ಲಿ ಆರು ಎಳೆಗಳನ್ನು ನಾಲ್ಕು ದಾರಗಳ ಮೇಲೆ ತೆಗೆದುಕೊಂಡು ಹೊಲಿದಾಗ ಒಂದು ರೇಖೆ ರೂಪುಗೊಳ್ಳುತ್ತದೆ. ಬಖಿಯಾ - 'ನೆರಳು ಕೆಲಸ' ಅಥವಾ ಭಾಕಿಯಾ ಚಿಕನ್‌ಕರಿಯ ಹೊಲಿಗೆಗಳಲ್ಲಿ ಒಂದಾಗಿದೆ. ನೆರಳು ಎಂಬ ಹೆಸರಿಗೆ ಕಾರಣವೆಂದರೆ ಕಸೂತಿಯನ್ನು ಬಟ್ಟೆಯ ಹಿಂದಿನ ಬದಿಯಲ್ಲಿ ಮಾಡಲಾಗುತ್ತದೆ ಮತ್ತು ಅದರ ನೆರಳನ್ನು ನಾವು ಮುಂದಿನಬದಿಯಲ್ಲಿ ನೋಡುತ್ತೇವೆ.[]
  • ಜ಼ನ್ಜೀರಾ
  • ರಹೇತ್
  • ಬನಾರಸಿ
  • ಖಟೌ
  • ಫಂಡಾ
  • ಮುರ್ರಿ ಎಂಬುದು ಚಿಕನ್ ವರ್ಕ್ ಮೋಟಿಫ್ ಗಳಲ್ಲಿ ಹೂವುಗಳ ಮಧ್ಯಭಾಗವನ್ನು ಕಸೂತಿ ಮಾಡಲು ಬಳಸುವ ಹೊಲಿಗೆಯ ರೂಪವಾಗಿದೆ. ಅವು ಸಾಮಾನ್ಯವಾಗಿ ಅಕ್ಕಿಯ ಆಕಾರದಲ್ಲಿರುವ ಫ್ರೆಂಚ್ ಗಂಟುಗಳಾಗಿವೆ. ಮುರ್ರಿ ಚಿಕನ್‌ಕರಿಯ ಅತ್ಯಂತ ಹಳೆಯ ಮತ್ತು ಹೆಚ್ಚು ಬೇಡಿಕೆಯ ರೂಪವಾಗಿದೆ. ಈ ಕಸೂತಿ ಮಾಡುವ ಕುಶಲಕರ್ಮಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಈ ಹೊಲಿಗೆಯ ಬಳಕೆ ಕ್ಷೀಣಿಸುತ್ತಿದೆ.
  • ಜಾಲಿ
  • ಟರ್ಪೈ
  • ದರ್ಜ್ದಾರಿ
  • ಪೆಚನಿ
  • ಬಿಜ್ಲಿ
  • ಘಸ್ಪಟ್ಟಿ
  • ಮಕ್ರಾ
  • ಕೌರಿ
  • ಹತ್ಕಾಡಿ
  • ಬಂಜ್ಕಾಲಿ
  • ಸಾಜಿ
  • ಕರಣ್ಪ್ಯಾ
  • ಕಪ್ಕಾಪಿ
  • ಮಂದ್ರಾಜ಼ಿ
  • ಬುಲ್ಬುಲ್-ಕಂದಕ
  • ತಾಜ್ ಮಹಲ್ಟಿ
  • ಜಂಜೀರಾ
  • ಕಂಗನ್'
  • ಧನಿಯಾ-ಪಟ್ಟಿ
  • ರೋಜನ್
  • ಮೆಹರ್ಕಿ
  • ಚನಪಟ್ಟಿ
  • ಬಾಲ್ಡಾ
  • ಜೋರಾ
  • ಕೀಲ್ ಕಂಗನ್
  • ಬುಲ್ ಬುಲ್
  • ಸಿಧೌಲ್
  • ಘಾಸ್ ಕಿ ಪ್ಯಾಟಿ

ಜಿಐ ಸ್ಥಿತಿ

[ಬದಲಾಯಿಸಿ]

ಡಿಸೆಂಬರ್ ೨೦೦೮ ರಲ್ಲಿ ಭೌಗೋಳಿಕ ಸೂಚನಾ ನೋಂದಣಿ (GIR) ಚಿಕನ್‌ಕರಿಗೆ ಭೌಗೋಳಿಕ ಸೂಚನಾ (GI) ಸ್ಥಾನಮಾನವನ್ನು ನೀಡಿತು. ಇದು ಲಕ್ನೋವನ್ನು ಚಿಕನ್‌ಕರಿಯ ವಿಶೇಷ ಕೇಂದ್ರವೆಂದು ಗುರುತಿಸಿತು.

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

೧೯೮೬ ರಲ್ಲಿ ಮುಜಾಫರ್ ಅಲಿ ನಿರ್ದೇಶನದ ಶಬಾನಾ ಅಜ್ಮಿ ಮತ್ತು ಫಾರೂಕ್ ಶೇಖ್ ನಟಿಸಿದ ಭಾರತೀಯ ಚಲನಚಿತ್ರ ಅಂಜುಮಾನ್ ಲಕ್ನೋದಲ್ಲಿ ಸೆಟ್ ಆಗಿದ್ದು, ಚಿಕನ್ ಕಸೂತಿ ಕಾರ್ಮಿಕರ ಸಮಸ್ಯೆಗಳನ್ನು ಇದು ತೋರ್ಪಡಿಸುತ್ತದೆ.[] ವಾಸ್ತವವಾಗಿ, ಫಾರೂಕ್ ಶೇಖ್ ಈ ಬಟ್ಟೆ ಮತ್ತು ಶೈಲಿಯಿಂದ ಎಷ್ಟು ಆಕರ್ಷಿತರಾಗಿದ್ದರು ಎಂದರೆ ಅವರು ತಮ್ಮ ಜೀವನದುದ್ದಕ್ಕೂ ಚಿಕನ್ ಕಸೂತಿಯ ಧರಿಸುತ್ತಿದ್ದರು ಮತ್ತು ಲಖ್ನವಿ ಚಿಕನ್ಕರಿಯ ಬ್ರಾಂಡ್ ರಾಯಭಾರಿಯಾಗಿ ಗುರುತಿಸಲ್ಪಟ್ಟರು.

ಉಲ್ಲೇಖಗಳು

[ಬದಲಾಯಿಸಿ]
  1. Manfredi, Paola (2004). "Chikankari of Lucknow". In Dhamija, Jasleen (ed.). Asian Embroidery (in ಇಂಗ್ಲಿಷ್). Abhinav Publications. ISBN 9788170174509.
  2. Manfredi, Paola (2004). "Chikankari of Lucknow". In Dhamija, Jasleen (ed.). Asian Embroidery (in ಇಂಗ್ಲಿಷ್). Abhinav Publications. ISBN 9788170174509.
  3. "Chikankari". Cultural India. Archived from the original on 2013-06-05. Retrieved 2013-08-11.
  4. Wilkinson-Weber, Clare M. (1999). Embroidering Lives: Women's Work and Skill in the Lucknow Embroidery Industry. State University of New York Press. pp. 12–13. ISBN 9780791440872.
  5. Wilkinson-Weber, Clare M. (1999). Embroidering Lives: Women's Work and Skill in the Lucknow Embroidery Industry. State University of New York Press. p. 24. ISBN 9780791440872.
  6. "Stitches in Chikankari". Hand-embroidery.com. Archived from the original on 14 June 2010. Retrieved 2013-08-11.
  7. Brijbhushan, Jamila (2006). Indian Embroidery. Publications Division, Ministry of Information and Broadcasting, Government of India. p. 46. ISBN 8123013698.
  8. Anuradha Dingwaney Needham; Rajeswari Sunder Rajan (28 December 2006). The Crisis of Secularism in India. Duke University Press. pp. 235–236. ISBN 0-8223-8841-3.


ಹೆಚ್ಚಿನ ಓದಿಗೆ

[ಬದಲಾಯಿಸಿ]
  • Singh, Veena (2004). Romancing With Chikankari. Tushar Publications.
  • Paine, Sheila (1989). Chikan embroidery: the floral whitework of India. Shire Publications. ISBN 0-7478-0009-X.
  • Rai, Ashok (1992). Chikankari Embrodery of Lucknow. National Institute of Design.
  • Tyabji, Laila (2007). Threads & Voices: Behind the Indian Textile Tradition (in ಇಂಗ್ಲಿಷ್). Marg Publications. ISBN 9788185026794.

ಬಾಹ್ಯ ಕೊಂಡಿಗಳು

[ಬದಲಾಯಿಸಿ]