ವಿಷಯಕ್ಕೆ ಹೋಗು

ಚಾಲ್ರ್ಸ್‌ ಅಗಸ್ಟಿನ್ ಡಿ ಕೂಲಂಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಲ್ರ್ಸ್‌ ಅಗಸ್ಟಿನ್ ಡಿ ಕೂಲಂಬ್
Portrait by Hippolyte Lecomte (1894 copy)
ಜನನ(೧೭೩೬-೦೬-೧೪)೧೪ ಜೂನ್ ೧೭೩೬
Angoulême, Angoumois, France
ಮರಣ23 August 1806(1806-08-23) (aged 70)
Paris, France
ರಾಷ್ಟ್ರೀಯತೆಫ್ರೆಂಚ್
ಅಭ್ಯಸಿಸಿದ ವಿದ್ಯಾಪೀಠÉcole royale du génie de Mézières
ಪ್ರಸಿದ್ಧಿಗೆ ಕಾರಣTorsion balance
Coulomb's law
Coulomb friction
Coulomb damping
Mohr–Coulomb theory

ಚಾಲ್ರ್ಸ್‌ ಅಗಸ್ಟಿನ್ ಡಿ ಕೂಲಂಬ್ 1736 - 1806. ಫ್ರೆಂಚ್ ಭೌತವಿಜ್ಞಾನಿ, ವಿದ್ಯುದ್ವಿಜ್ಞಾನದಲ್ಲಿ ಆದಿ ಪರಿಶೋಧಕ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

1736ರ ಜೂನ್ 14ರಂದು ಅಂಗೋಲೆಮೆ ಎಂಬಲ್ಲಿ ಜನಿಸಿದ. ಫ್ರೆಂಚ್ ಸೇನೆಯಲ್ಲಿ ಇಂಜಿನಿಯರಾಗಿ 9 ವರ್ಷ ವೆಸ್ಟ್ ಇಂಡೀಸಿನಲ್ಲಿ ಕೆಲಸ ಮಾಡಿದ. ಅಲ್ಲಿದ್ದಾಗಲೇ ಈತ ವಿಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನು ಬರೆದಿದ್ದ. ಅಲ್ಲಿಂದ ಫ್ರಾನ್ಸಿಗೆ ಮರಳಿಬಂದಾಗ ಈತನ ಆರೋಗ್ಯ ಬಹಳ ಕುಗ್ಗಿತ್ತು. 1789ರಲ್ಲಿ ಫ್ರಾನ್ಸಿನಲ್ಲಿ ಕ್ರಾಂತಿ ತಲೆದೋರಿತು. ಆಗ ಈತ ಬ್ಲೋಯ್ ಪಟ್ಟಣದಲ್ಲಿದ್ದ ತನ್ನ ಚಿಕ್ಕ ತೋಟಕ್ಕೆ ಹೋಗಿ ಪೂರ್ಣ ಕಾಲವನ್ನು ವಿಜ್ಞಾನ ಸಂಶೋಧನೆಗೆ ಉಪಯೋಗಿಸಲಾರಂಭಿಸಿದ.

ಸಂಶೋಧನೆ

[ಬದಲಾಯಿಸಿ]

ತಿರುಚು ಮಾಪಕವನ್ನು ಇವನು ರಚಿಸಿದ್ದು 1777ರಲ್ಲಿ. ಇದೇ ಯಂತ್ರವನ್ನು ಮಿಚೆಲ್ ಎಂಬ ಇಂಗ್ಲೀಷ್ ಭೂವಿಜ್ಞಾನಿ ಆ ಮೊದಲೇ ಸ್ವತಂತ್ರವಾಗಿ ಕಂಡುಹಿಡಿದಿದ್ದ. ಇದರಲ್ಲಿ ಒಂದು ತೆಳುವಾದ ಮತ್ತು ಬಳುಕದ ತಂತು ಇದೆ. ತಂತುವಿನಲ್ಲಿ ಉಂಟಾಗುವ ತಿರುಚಿನಿಂದ ಬಲದ ಪರಿಮಾಣವನ್ನು ಅಳತೆಮಾಡಬಹುದು. ಈ ಮಾಪಕದ ಪ್ರಯೋಗದಿಂದ ವಿದ್ಯುದ್ವಿಜ್ಞಾನದಲ್ಲಿ ಉಪಯೋಗಿಸುವ ಮುಖ್ಯವಾದ ಒಂದು ನಿಯಮವನ್ನು ಕೂಲಂಬ್ ಕಂಡುಹಿಡಿದ. (1785). ಇದಕ್ಕೆ ಕೂಲಂಬನ ನಿಯಮ ಎಂದೇ ಹೆಸರು ಬಂದಿದೆ. ಇದರ ಪ್ರಕಾರ "ವಿದ್ಯುತ್ತಿನ ಆಕರ್ಷಣೆಯ ಅಥವಾ ವಿಕರ್ಷಣೆಯ ಬಲ ಎರಡು ವಿದ್ಯುದಾವೇಷಗಳ(ಎಲೆಕ್ಟ್ರಿಕ್ ಚಾರ್ಜಸ್) ಗುಣಲಬ್ದದ ನೇರ ಅನುಪಾತದಲ್ಲಿಯೂ ಅವುಗಳ ದೂರದ ವರ್ಗದ ವ್ಯಾಸ್ಥಾನುಪಾತದಲ್ಲಿಯೂ ಇದೆ" ಎಂದು ನಿರೂಪಿತವಾಗಿದೆ. ಈ ಕಾರಣದಿಂದ ಕೂಲಂಬ್ ಎನ್ನುವ ವಿದ್ಯುತ್ತಿನ ಏಕಮಾನವನ್ನು ಈತನ ಗೌರವಾರ್ಥವಾಗಿಯೇ ಇಡಲಾಗಿದೆ.[] ಇಷ್ಟಲ್ಲದೆ ಕೂಲಂಬ್ ಘರ್ಷಣೆ(1779). ಗಾಳಿಯಂತ್ರಗಳು (1781) ಮತ್ತು ಲೋಹ ಹಾಗೂ ರೇಷ್ಮೆ ಎಳೆಗಳ ತಿರುಚು ಸ್ಥಿತಿಸ್ಥಾಪಕತ್ವಗಳ(1784) ವಿಚಾರವಾಗಿ ಲೇಖನಗಳನ್ನು ಪ್ರಕಟಿಸಿದ್ದಾನೆ. ಈತ ಕಾಂತತ್ವವನ್ನು ಕುರಿತು ಕೂಡ ಸಂಶೋಧನೆಗಳನ್ನು ನಡೆಸಿ ಕಾಂತಬಲಮಾಪಕ ಮತ್ತು ಕಾಂತಬಲದರ್ಶಕಗಳನ್ನು ನಿರ್ಮಾಣ ಮಾಡಿದ್ದಾನೆ.

ಛಾಯಾಂಕಣ

[ಬದಲಾಯಿಸಿ]

ಆಡಳಿತದಲ್ಲಿ

[ಬದಲಾಯಿಸಿ]

ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಹೊಸ ಸರ್ಕಾರ ದಶಮಾನ ಅಳತೆ ಪದ್ಧತಿಯನ್ನು ಪರೀಕ್ಷಿಸಲು ರಚಿಸಿದ ಮಂಡಲಿಯಲ್ಲಿ ಈತನೂ ಒಬ್ಬ ಸದಸ್ಯನಾಗಿದ್ದ. 1802ರಲ್ಲಿ ಕೊಲಂಬನನ್ನು ಫ್ರಾನ್ಸ್ ದೇಶದ ಸಾರ್ವಜನಿಕ ಶಿಕ್ಷಣ ಕಾರ್ಯಕ್ಕೆ ಪರೀಕ್ಷಾಧಿಕಾರಿಯಾಗಿ ನೇಮಕ ಮಾಡಲಾಯಿತು.

ಕೊಲಂಬ್ ಗತಿಸಿದ್ದು 1806ರ ಆಗಸ್ಟ್ 23 ರಂದು ಪ್ಯಾರಿಸ್ ನಗರದಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. The "International Coulomb" was defined in modification of the International System of Electrical and Magnetic Units by the International Conference on Electrical Units and Standards (London, 1908) and adopted into the International System of Units in 1948. The name coulomb had already been used in earlier systems proposed by the British Science Association, hence the qualifier "international".