ವಿಷಯಕ್ಕೆ ಹೋಗು

ಚಾರ್ಲ್ಸ್ ದ ಸಿಂಪಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರ್ಲ್ಸ್ III 893-923ರಲ್ಲಿ ಫ್ರಾನ್ಸಿನ ದೊರೆಯಾಗಿದ್ದ. ಚಾರ್ಲ್ಸ್ ದ ಸಿಂಪಲ್ ಎಂದು ಇವನ ಹೆಸರು. ಇವನು ಎರಡನೆಯ ಲೂಯಿಯ ಮರಣೋತ್ತರ ಪುತ್ರ.[೧] ಇವನ ಜನನ 879ರಲ್ಲಿ ಆಯಿತು. ಚಕ್ರವರ್ತಿ ಮೂರನೆಯ ಚಾರ್ಲ್ಸ್ (ದಿ ಫ್ಯಾಟ್) ಪದಚ್ಯುತಿಗೊಂಡಾಗ (887) ಈತ ತೀರ ಎಳೆಯವನೆಂಬ ಕಾರಣದಿಂದ ಇವನಿಗೆ ಸಿಂಹಾಸನ ದೊರಕಲಿಲ್ಲ. ಅಡೊನ ಆಡಳಿತ ನಡೆದಾಗ ಕೆಲವು ಪ್ರತಿಷ್ಠಿತರು ರೇಮ್ಸ್‌ನಲ್ಲಿ ಈತನಿಗೆ ಪಟ್ಟ ಕಟ್ಟಿದರು. ಸಮ್ರಾಟ ಆರ್ನೆಲ್ಫನ ಬೆಂಬಲವೂ ಈತನಿಗೆ ದೊರೆಯಿತು.[೨] ಆಡೊ ಇವನಿಗೆ ರಾಜ್ಯದ ಕೆಲವು ಭಾಗಗಳನ್ನು ಬಿಟ್ಟುಕೊಟ್ಟ. 898ರಲ್ಲಿ ಆಡೊ ಸತ್ತಾಗ ಇಡೀ ರಾಜ್ಯಕ್ಕೆ ಈತ ದೊರೆಯಾದ.[೩] ನಾರ್ಮನರ ಜೊತೆ ಒಪ್ಪಂದ ಮಾಡಿಕೊಂಡು ಅವರಲ್ಲಿ ಅನೇಕರನ್ನು ಕ್ರೈಸ್ತಮತಕ್ಕೆ ಪರಿವರ್ತಿಸಿದ್ದು ಇವನ ಹಿರಿಯ ಕೃತಿ (911). 922ರಲ್ಲಿ ಪ್ರಮುಖರು ರಾಬರ್ಟನನ್ನು ದೊರೆಯಾಗಿ ಆರಿಸಿದರು. ಚಾರ್ಲ್ಸ್ ಅವನ ಮೇಲೆ ಯುದ್ಧ ಮಾಡಿ ಅವನನ್ನು ಕೊಂದನಾದರೂ ಅನಂತರ ಸೆರೆ ಸಿಕ್ಕ.[೪] ಬಂಧನದಲ್ಲೇ ಆತ ತೀರಿಕೊಂಡ.

ಉಲ್ಲೇಖಗಳು

[ಬದಲಾಯಿಸಿ]
  1. ↑ Schwennicke, Detlev; Isenburg, Wilhelm Karl von; Freytag von Loringhoven, Frank (1984). Europäische Stammtafeln: Stammtafeln zur Geschichte der europäischen Staaten: neue Folge [European family tables: Family tables on the history of European states: new series] (in ಜರ್ಮನ್). Vol. Bd. 2, Die ausserdeutschen Staaten: die regierenden Häuser der übrigen Staaten europas [Vol. 2, The non-German states: the ruling houses of the other European states]. Marburg: Verlag von J. A. Stargardt. Tafel 1. OCLC 750595132.
  2. ↑ Mann IV, pg. 55
  3. ↑ Michel Parisse, "Lotharingia", The New Cambridge Medieval History, III: c. 900–c. 1024, ed. Timothy Reuter (Cambridge: Cambridge University Press, 2005), 313–15.
  4. ↑ Jean Dunbabin, "West Francia: The Kingdom", The New Cambridge Medieval History, III: c. 900–c. 1024, ed. Timothy Reuter (Cambridge: Cambridge University Press, 2005), 378–79.

ಗ್ರಂಥಸೂಚಿ

[ಬದಲಾಯಿಸಿ]