ವಿಷಯಕ್ಕೆ ಹೋಗು

ಚಾಮೀರಾಪ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಮೀರಾಪ್ಸ್ ಹ್ಯೂಮಿಲಿಸ್
ಚಾಮೀರಾಪ್ಸ್ ಹ್ಯೂಮಿಲಿಸ್ ಪ್ರಭೇದ ಹ್ಯೂಮಿಲಿಸ್, ಜ಼ಿಂಗರೊ, ಸಿಸಿಲಿ
ನೈಋತ್ಯ ಸ್ಪೇನ್‍ನಲ್ಲಿ ಸಿ. ಹ್ಯೂಮಿಲಿಸ್‍ನ ದೊಡ್ಡ ಏಕಪ್ರಜಾತಿ ಜಮೀನು.
Conservation status
Scientific classification e
ಸಾಮ್ರಾಜ್ಯ: ಪ್ಲಾಂಟೇ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಏಕದಳ ಸಸ್ಯ
ಏಕಮೂಲ ವರ್ಗ: ಕಾಮೆಲಿನಿಡ್ಸ್
ಗಣ: ಅರೆಕೇಲೀಸ್
ಕುಟುಂಬ: ಅರೆಕೇಸೀ
ಉಪಕುಟುಂಬ: ಕಾರಿಫ಼ಾಯ್ಡಿಯೇ
ಪಂಗಡ: ಟ್ರ್ಯಾಕಿಕಾರ್ಪಿಯೇ
ಕುಲ: ಚಾಮೀರಾಪ್ಸ್
L.
ಪ್ರಜಾತಿ:
ಚ. ಹ್ಯೂಮಿಲಿಸ್
Binomial name
ಚಾಮೀರಾಪ್ಸ್ ಹ್ಯೂಮಿಲಿಸ್
L.
ವಿತರಣಾ ಭೂಪಟ
Synonyms

ಈ ಕೆಳಗಿನದನ್ನು ಸೇರಿದಂತೆ ಹಲವು:

  • ಚಾಮೀರಾಪ್ಸ್ ಎಲಿಗೆನ್ಸ್ Hook. f.[]

ಚಾಮೀರಾಪ್ಸ್ ಎನ್ನುವುದು ಅರೆಕೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಇದು ಅತ್ಯಂತ ಶೀತ ಪರಿಸರದಲ್ಲಿ ಬೆಳೆಯಬಲ್ಲ ತಾಳೆ ಜಾತಿಯ ಮರಗಳಲ್ಲಿ ಒಂದು ಮತ್ತು ಇದನ್ನು ಸಮಶೀತೋಷ್ಣ ವಾಯುಗುಣಗಳಲ್ಲಿ ಭೂದೃಶ್ಯ ತೋಟಗಾರಿಕೆ ಮಾಡಲು ಬಳಸಲಾಗುತ್ತದೆ.[][]

ವಿವರಗಳು

[ಬದಲಾಯಿಸಿ]

ಗ್ರೀಕ್ ಭಾಷೆಯಲ್ಲಿ ಚಾಮೀರಾಪ್ಸ್ ಎಂದರೆ ಕುಳ್ಳಾದ ಪೊದೆ ಎಂದರ್ಥ. ಇದು ತೆಂಗು ಜಾತಿಯ ಸಸ್ಯಗಳಲ್ಲೆಲ್ಲ ಬಹುಗಟ್ಟಿಮುಟ್ಟಾದುದು. ಇದನ್ನು ಉದ್ಯಾನವನಗಳಲ್ಲಿ ಮತ್ತು ಗಾಜಿನ ಮನೆಗಳಲ್ಲಿ ಬೆಳೆಸಲಾಗುತ್ತದೆ. ಇದರ ಕಾಂಡದಿಂದ ಪಡೆಯಲಾಗುವ ನಾರಿನಿಂದ ಜಮಖಾನ, ಕಾಲು ಒರೆಸುವ ತಟ್ಟು ಮುಂತಾದುವನ್ನು ತಯಾರಿಸುವುದುಂಟು. ಇದು 4'-20' ಎತ್ತರದ ಗಿಡ. ಕಾಂಡ ಒಂಟಿಯಾಗಿರುತ್ತದೆ ಇಲ್ಲವೆ ಕವಲೊಡೆದಿರುತ್ತದೆ. ತೆಂಗಿನಲ್ಲಿರುವಂತೆಯೆ ಎಲೆಗಳು (ಗರಿಗಳು) ಕಾಂಡದ ತುದಿಯಲ್ಲಿ ಕಿರೀಟದಂತೆ ಜೋಡಣೆಗೊಂಡಿವೆ. ಒಂದೊಂದು ಎಲೆಯೂ ಬೀಸಣಿಗೆಯಾಕಾರದ್ದು. ಪ್ರತಿಯೊಂದರಲ್ಲೂ ಉದ್ದನೆಯ ಒಂದು ತೊಟ್ಟು, ಅದರ ತುದಿಯಲ್ಲಿ ಕೈಯಲ್ಲಿನ ಬೆರಳುಗಳಂತೆ ಜೋಡಣೆಗೊಂಡಿರುವ ಕವಚಗಳಿಂದ ಆವೃತವಾಗಿದೆ. ಹೂಗಳು ಚಿಕ್ಕ ಗಾತ್ರದವು; ಅವುಗಳ ಬಣ್ಣ ಹಳದಿ. ಹಣ್ಣು ಗೋಳಾಕಾರದ್ದು. ಹಣ್ಣಿನ ಬಣ್ಣ ಹಳದಿ ಇಲ್ಲವೆ ಕೆಂಪು. ಚಾಮೀರಾಪ್ಸ್ ಜಾತಿಯಲ್ಲಿ ಹ್ಯೂಮಿಲಿಸ್ ಮತ್ತು ಎಕ್ಸೆಲ್ಸ ಎಂಬ ಎರಡು ಪ್ರಭೇದಗಳಿವೆ. ಇವನ್ನು ಬೀಜಗಳಿಂದ ಇಲ್ಲವೆ ಮೋಸುಗಳಿಂದ (ಸಕರ್ಸ್) ವೃದ್ಧಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Gardiner, L.M.; Véla, E. (2017). "Chamaerops humilis". IUCN Red List of Threatened Species. 2017 e.T13164373A95532812. doi:10.2305/IUCN.UK.2017-3.RLTS.T13164373A95532812.en. Retrieved 19 November 2021.
  2. Hook. f. Rep. Progr. Condition Roy. Bot. Gard. Kew 1882: 64 1884
  3. Herrera, J. 1989. On the reproductive biology of the dwarf palm, Chamaerops humilis, in southern Spain.
  4. S. H. Jenkins (2 October 2013). Mediterranean Coastal Pollution: Proceedings of a Conference Held in Palma, Mallorca, 24-27 September, 1979. Elsevier. pp. 489–. ISBN 978-1-4831-5107-6.





ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: