ಚಾಚು ತೊಲೆ

ಚಾಚು ತೊಲೆ ಎಂದರೆ ಒಂದು ಕೊನೆ ಭದ್ರವಾಗಿ ಧರಿಸಲ್ಪಟ್ಟಿದ್ದು ಉಳಿದ ಭಾಗ ವಸ್ತುವನ್ನು ಹೊರಲು ಅಥವಾ ತೂಗು ಹೊರೆಯನ್ನು ಧರಿಸಲು ಮುಕ್ತವಾಗಿರುವ ತೊಲೆ (ಕ್ಯಾಂಟಿಲಿವರ್), ಕಿಟಕಿಗಳ ಮೇಲೆ ಹೊರಚಾಚಿಕೊಂಡಿರುವ ಚಜ್ಜ. ಕಾರ್ಖಾನೆ, ರೈಲ್ವೆ, ವಿಮಾನ ನಿಲ್ದಾಣ, ಮುಂತಾದೆಡೆಗಳಲ್ಲಿನ ಚಾವಣಿ, ವಿಶಿಷ್ಟ ನಮೂನೆಯ ಸೇತುವೆಗಳು, ತುಲಾ ಯಂತ್ರಗಳು ಇತ್ಯಾದಿಗಳನ್ನು ಚಾಚು ತೊಲೆ ತತ್ತ್ವವನ್ನು ಆಧರಿಸಿ ನಿರ್ಮಿಸಲಾಗಿದೆ.
ಕ್ವಿಬೆಕ್‌ನಲ್ಲಿರುವ ರೈಲು ಮಾರ್ಗದ ಸೇತುವೆ ಪ್ರಪಂಚದಲ್ಲಿನ ಅತಿ ಉದ್ದದ ಚಾಚು ತೊಲೆ ರಚನೆ (1918). ಇದರ ವಿಸ್ತೃತಿ (ಸ್ಪ್ಯಾನ್) 548.64ಮೀ. ಜನ ಹಾಗೂ ದೊಡ್ಡ ವಾಹನಗಳ ಅನಿರ್ಬಂಧಿತ ಪ್ರವೇಶ, ನಿರ್ಗಮನ ಅವಿಚ್ಛಿನ್ನವಾಗಿ ನಡೆಯುತ್ತಿರುವಂಥ ರೈಲ್ವೇ ನಿಲ್ದಾಣ, ವಿಮಾಣ ನಿಲ್ದಾಣ, ಗೋದಾಮುಗಳು, ಕಾರ್ಖಾನೆಗಳು ಮುಂತಾದೆಡೆಗಳಲ್ಲಿ ಚಾಚು ತೊಲೆ ತತ್ತ್ವದ ಮೇಲೆ ಆಧರಿಸಿ ರಚಿಸಿದ ಚಾವಣಿಗಳು ಹೆಚ್ಚು ಉಪಯುಕ್ತ. ಈ ತತ್ತ್ವವನ್ನು ವಿಸ್ತರಿಸಿದ್ದೇ ಆದರೆ ಧ್ವಜಸ್ತಂಭ, ಗಡಿಯಾರ ಕಂಬ ಮುಂತಾದವನ್ನು ಕೂಡ ಊರ್ಧ್ವ ವಿನ್ಯಾಸದ ಚಾಚುತೊಲೆಗಳು ಎಂದು ಪರಿಗಣಿಸಬಹುದು.
ಲೀಡ್ಸ್‌ನ ಎಲೆಂಡ್ ರೋಡ್ ಕ್ರೀಡಾಂಗಣದ ಈಸ್ಟ್ ಸ್ಟ್ಯಾಂಡ್, ಮುಕ್ತಾಯವಾದಾಗ, ಪ್ರಪಂಚದಲ್ಲಿನ ಅತಿ ದೊಡ್ಡ ಚಾಚು ತೊಲೆ ಸ್ಟ್ಯಾಂಡ್ ಆಗಿತ್ತು ಮತ್ತು ೧೭,೦೦೦ ಪ್ರೇಕ್ಷಕರನ್ನು ಹಿಡಿಸಬಲ್ಲದ್ದಾಗಿತ್ತು.[೧]
ಉಲ್ಲೇಖಗಳು
[ಬದಲಾಯಿಸಿ]- ↑ "GMI Construction wins £5.5M Design and Build Contract for Leeds United Football Club's Elland Road East Stand". Construction News. 6 February 1992. Retrieved 24 September 2012.
