ವಿಷಯಕ್ಕೆ ಹೋಗು

ಚಾಚು ಏಣಿನ ಜೋಡಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡದಿಂದ ಬಲಕ್ಕೆ: ಅರ್ಧ ಚಾಚು ಏಣು, ಮೈಟರ್ ಸೇರುವೆಯ ಅರ್ಧ ಚಾಚು ಏಣು, ಅಡ್ಡ ಚಾಚು ಏಣು ಮತ್ತು ಕೂಲು ಚಾಚು ಏಣು

ಚಾಚು ಏಣಿನ ಜೋಡಣೆ ಎಂದರೆ ಎರಡು ಫಲಕಗಳಲ್ಲಿ ಒಂದರ ಏಣು (edge) ಮತ್ತೊಂದರ ಏಣನ್ನು ದಾಟಿ ಸ್ವಲ್ಪ ಚಾಚಿರುವಂತೆ ಮೇಲಿರಿಸಿ ಅವುಗಳ ನಡುವೆ ರಿವೆಟ್ಟುಗಳ ಸಾಲಿನಿಂದ ಬಂಧಿಸಿ ಮಾಡಿದ ರಚನೆ (ಲ್ಯಾಪ್ ಜಾಯಿಂಟ್), ರಿವೆಟ್ಟಿಗಾಗಿ ಮಾಡಿದ ರಂಧ್ರದ ಅಂಚಿನಿಂದ ಆಚೆಗೆ ಕಡೆಯ ಪಕ್ಷ ರಿವೆಟ್ಟಿನ ವ್ಯಾಸದಷ್ಟಾದರೂ ಫಲಕದಲ್ಲಿ ಅರುಗು ಬಿಟ್ಟಿರಬೇಕೆಂದು ನಿಯಮ. ಫಲಕದ ಏಣಿಗೆ ಸಮಾಂತರದ ಸಾಲಿನಲ್ಲಿರುವ ರಿವೆಟ್ಟುಗಳ ಒಂದಕ್ಕೊಂದು ನಡುವಿನ ದೂರಕ್ಕೆ ಅಂತರಾಲ ಎಂದು ಹೆಸರು. ಸಾಮಾನ್ಯವಾಗಿ ಇದು ರಿವೆಟ್‌ನ ವ್ಯಾಸದ ಮೂರರಷ್ಟು ಇರುತ್ತದೆ. ಜೋಡಣೆಗೆ ಇರಬೇಕಾದ ಬಲಕ್ಕೆ ತಕ್ಕಂತೆ ಎರಡು ಅಥವಾ ಹೆಚ್ಚು ಸಾಲಿನ ರಿವೆಟ್ಟುಗಳಿಂದ ಫಲಕಗಳನ್ನು ಜೋಡಿಸಿರುವಾಗ, ಅಕ್ಕಪಕ್ಕದ ಸಾಲುಗಳ ರಿವೆಟ್ಟುಗಳು ಎದುರುಬದುರಾಗೇ ಇದ್ದರೆ ಅದಕ್ಕೆ ಸರಪಣಿ ಅಥವಾ ಸಮ್ಮುಖೀ ರಿವೆಟನ್ ಎಂದೂ, ಅಕ್ಕಪಕ್ಕದ ಸಾಲುಗಳ ರಿವೆಟ್ಟುಗಳು ಒಂದನ್ನೊಂದು ಎದುರಿಸದೆ ತಪ್ಪಿಸಿದಂತಿದ್ದರೆ ಅದಕ್ಕೆ ವಂಕಿ ಅಥವಾ ಅಸಮ್ಮುಖಿ ರಿವೆಟನ್ ಎಂದೂ ಹೆಸರುಂಟು.

ಹೀಗಿರುವ ಎರಡು ರಿವೆಟ್ ಸಾಲುಗಳ ಅಂತರ ಅಸಮ್ಮುಖೀ ರೀತಿಯದರಲ್ಲಿ ರಿವೆಟ್ ವ್ಯಾಸದ ಎರಡರಷ್ಟೂ, ಸಮ್ಮುಖೀ ರೀತಿಯದರಲ್ಲಿ ಅದಕ್ಕಿಂತ 6.mm. ರಷ್ಟು ಹೆಚ್ಚಾಗಿಯೂ ಇರುವುದು ವಾಡಿಕೆ. ಚಾಚು ಏಣಿನ ಜೋಡಣೆಗಳು ಎಳೆತಕ್ಕೆ ಒಳಪಟ್ಟರೆ ಪ್ರತಿಕ್ರಿಯೆ ಸರೇಖವಾಗಿಲ್ಲದೆ ಹೋಗುವುದರಿಂದ ಜೋಡಣೆಯ ಜಾಗದಲ್ಲಿ ಬಾಗುತ್ತವೆ. ಒತ್ತಡದ ದ್ರವವನ್ನೊಳಗೊಂಡ ಪಾತ್ರೆಗಳ ಫಲಕಗಳಲ್ಲಿ ಇಂಥ ಜೋಡಣೆಯಿದ್ದಾಗ ದ್ರವ ಸ್ರವಿಸುವುದನ್ನು ನಿವಾರಿಸಲು ಫಲಕದ ಅಂಚಿನ ಮೂಲೆಯಲ್ಲಿ ರಿವೆಟ್ ಶಿರದ ಕೆಳಭಾಗದ ಸುತ್ತಲೂ ಗಿಡಗಿ ಕಾಕನ ಮಾಡುವುದುಂಟು. ಇದಕ್ಕೆ ಅನುಕೂಲಿಸುವಂತೆ ಫಲಕಗಳ ಅಂಚನ್ನು ಲಂಬವಾಗಿರದೆ ತಲಕ್ಕೆ 800 ಇರುವಂತೆ ಹೆರೆದಿರಲಾಗುತ್ತದೆ.

ಮರ ಜೋಡಣೆಯ ಸಂಬಂಧವಾಗಿ, ಎರಡು ಉದ್ದ ಎಳೆರಚನೆಯ ಕಟ್ಟಿಗೆಯ ಫಲಕಗಳು ಅಂಟಿನಿಂದ ಜೋಡಿಸಲ್ಪಟ್ಟಿರುವ ಈ ಜೋಡಣೆಯು ಸಾಮರ್ಥ್ಯದಲ್ಲಿ ವಿಕಾರ ಬಲಗಳನ್ನು ಪ್ರತಿರೋಧಿಸುವಲ್ಲಿನ ಅತ್ಯಂತ ಪ್ರಬಲ ಜೋಡಣೆಗಳ ಪೈಕಿ ಒಂದು, ಮತ್ತು ವೆಜ್ಜ ಕೂರಂಚು ಜೋಡಣೆ ಹಾಗೂ ಇತರ ಸಾಮಾನ್ಯವಾಗಿ ಪರಿಚಿತವಿರುವ "ಪ್ರಬಲ" ಜೋಡಣೆಗಳನ್ನು ಕೂಡ ಮೀರಿಸುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]


ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: