ವಿಷಯಕ್ಕೆ ಹೋಗು

ಚಲನೆಯ ನರಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಬೇನೆಯಿರುವ ಜನರನ್ನು ತೋರಿಸುವ ೧೮೪೧ರ ಒಂದು ಚಿತ್ರ

ಚಲನೆಯ ನರಳಿಕೆ ಎಂದರೆ ಪ್ರವಾಸ ಕಾಲದಲ್ಲಿ ಬಹುಜನರಲ್ಲಿ ತೋರಿಬರಬಹುದಾದ ದೈಹಿಕ ಸಂಕಟ (ಮೋಷನ್ ಸಿಕ್‌ನೆಸ್). ಹಡಗು, ವಿಮಾನ, ಮೋಟಾರು ಇಲ್ಲವೆ ರೈಲಿನಲ್ಲಿ ಕುಳಿತು ಚಲಿಸುವ ಸಂದರ್ಭದಲ್ಲಿ, ನೇರ ಇಲ್ಲವೇ ವಕ್ರಗತಿಯಲ್ಲಿ ವೇಗವರ್ಧನೆ ನಡೆಯುತ್ತಿರುವಾಗ, ಒಳಗಿವಿಯ ಪಡಸಾಲೆಯೊಳಗಿರುವ (ವೆಸ್ಟಿಬ್ಯೂಲ್) ಅರ್ಧವೃತ್ತ ನಾಳಗಳಲ್ಲಿನ ಗ್ರಾಹಕಗಳ (receptors) ಮೇಲೆ ಅದರ ಪರಿಣಾಮವಾಗಿ ಅವು ಉದ್ದೀಪನಗೊಳ್ಳುತ್ತವೆ. ಪದೇ ಪದೇ ಉರುಳುವ, ತಿರುಗುವ ಇಲ್ಲವೇ ಮೇಲೆ ಕೆಳಗೆ ಉಂಟಾಗುವ ಚಲನೆ ಇದಕ್ಕೆ ಬಹುಮುಖ್ಯ ಕಾರಣ.[] ಉಯ್ಯಾಲೆಯಾಡುವುದು, ಅಪ್ಪಾಲೆತಿಪ್ಪಾಲೆ ತಿರುಗುವುದು, ಜಾತ್ರೆ, ವಸ್ತು ಪ್ರದರ್ಶನಗಳಲ್ಲಿ ಸಾಮಾನ್ಯವಾಗಿರುವ ರಾಟೆ ಚಕ್ರಗಳಲ್ಲಿ ಕುಳಿತು ಚಲಿಸುವುದು, ಇಂಥ ಸಂದರ್ಭಗಳಲ್ಲೂ ಇದು ಕಂಡುಬರುತ್ತದೆ.

ಯಾರಿಗೆ ಬರುವುದು, ಬರಲಾರದು

[ಬದಲಾಯಿಸಿ]

ಕಿವುಡ-ಮೂಗರಿಗೂ, ಕಿವಿಯ ಪಡಸಾಲೆ ನಾಶ ಮಾಡಲ್ಪಟ್ಟವರಿಗೂ ಈ ರೋಗ ಬರಲಾರದು. ತೀರ ಎಳೆಯರು ಮತ್ತು ವೃದ್ಧರು ಚಲನೆಯ ನರಳಿಕೆಯನ್ನು ಅಷ್ಟಾಗಿ ಅನುಭವಿಸುವುದಿಲ್ಲ. ತೀವ್ರತೆರನಾದ ಅರೆತಲೆನೋವಿರುವವರು ಈ ನರಳಿಕೆಯನ್ನು ಪ್ರವಾಸ ಆರಂಭವಾಗುತ್ತಿದ್ದಂತೆಯೇ ಅನುಭವಿಸತೊಡಗುವರು. ಅದರ ಬಗ್ಗೆ ಇರುವ ಭೀತಿ ನರಳಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.

ಲಕ್ಷಣಗಳು

[ಬದಲಾಯಿಸಿ]

ಚಲನೆ ಪ್ರಾರಂಭವಾದ ಕೆಲವೇ ಮಿನಿಟುಗಳಲ್ಲಿ ಇಲ್ಲವೆ ಗಂಟೆಗಳಲ್ಲಿ ನರಳಿಕೆಯ ಲಕ್ಷಣಗಳು ತಲೆದೋರಿ ತೀವ್ರತೆ ಏರಿ ವ್ಯಕ್ತಿ ಬಿಳಿಚಿಕೊಂಡು ಬೆವರುತ್ತಾನೆ.[] ವಿಪರೀತ ಜೊಲ್ಲು ಬರುತ್ತ ಮೇಲೆ ಅದನ್ನು ನುಂಗುತ್ತ[] ಓಕರಿಕೆ ಉಂಟಾಗಿ ತಡೆಯುವುದಕ್ಕಾಗದೆ ಅವನಿಗೆ ಪದೇ ಪದೇ ವಾಂತಿ ಬಂದಂತಾಗುವುದು. ವಾಂತಿ ಮಾಡಲೂಬಹುದು. ವಿಪರೀತ ತಲೆ ಸುತ್ತುವಿಕೆ ತಲೆದೋರಿ ಮಂಪರು ಕವಿಯುವುದು, ತಲೆನೋವು ಕೂಡ ಬರುವುದು. ನರಳಿಕೆಯಲ್ಲಿ ಕಾಣಿಸಿಕೊಳ್ಳುವ ಓಕರಿಕೆ ಮತ್ತು ವಾಂತಿ ಕೆಲವು ಗಂಟೆಗಳವರೆಗೆ ಸಾಮಾನ್ಯವಾಗಿ ಇರಬಲ್ಲದು. ಸಮುದ್ರಯಾನದಲ್ಲಿ ಅದು ಕೆಲವು ದಿವಸಗಳವರೆಗೆ ಕೂಡ ಉಳಿಯಬಲ್ಲದು. ಚಲನೆಯ ತೀವ್ರತೆ ಮತ್ತು ಕಾಲಾವಧಿಯನ್ನು ಅವಲಂಬಿಸಿ ಗುಣಲಕ್ಷಣಗಳು ತೋರಿಬರುತ್ತವೆ. ಈ ತೊಡಕಿನಿಂದ ಬಳಲುವಾತ ಕ್ರಮೇಣ ಚಲನೆಗೆ ಹೊಂದಿಕೊಳ್ಳುವುದುಂಟು. ಚಲನೆಯ ನಿಲುಗಡೆಯಾದಾಗ ರೋಗಲಕ್ಷಣಗಳು ಮಾಯವಾಗುವುವು.

ಚಿಕಿತ್ಸೆ

[ಬದಲಾಯಿಸಿ]

ಈ ನರಳಿಕೆಯನ್ನು ಅನುಭವಿಸುವವರು ಪ್ರವಾಸವನ್ನು ಕೈಕೊಳ್ಳುವ ಮುನ್ನ ಹೆಚ್ಚು ಆಹಾರ ಮತ್ತು ಪಾನೀಯಗಳನ್ನು ಸೇವಿಸಬಾರದು. ಪ್ರವಾಸಕಾಲದಲ್ಲಿ ವೇದನೆ ಬರಬಹುದೆಂದು ತೋರಿಬಂದರೆ ತಲೆಯನ್ನು ದಿಂಬಿಗಾನಿಸಿ ಕಣ್ಣು ಮುಚ್ಚಬಹುದು; ಇಲ್ಲವೆ ಮಲಗಿಕೊಂಡು ವಾಂತಿಯನ್ನು ತಡೆಗಟ್ಟಬಹುದು; ಅಥವಾ ದೂರದ ವಸ್ತುವಿನತ್ತ ದೃಷ್ಟಿಯನ್ನು ಕೇಂದ್ರಿಕರಿಸುವುದರಿಂದ ಇಲ್ಲವೇ ತಂಗಾಳಿಗೆ ಮುಖ ತಿರುಗಿಸಿ ಉಸಿರಾಡುವುದರಿಂದ ಬಳಲಿಕೆ ಕಡಿಮೆ ಮಾಡಿಕೊಳ್ಳಬಹುದು.[][] ನಿಂಬೆಯ ಹಣ್ಣನ್ನು ಮೂಸುವುದರಿಂದ, ಅದರ ರಸವನ್ನು ನೇರ ನಾಲಗೆಯ ಮೇಲೆ ಬಿಟ್ಟುಕೊಳ್ಳುವುದರಿಂದ ಓಕರಿಕೆ, ವಾಂತಿ ಬಹಳಷ್ಟು ಕಡಿಮೆಯಾಗುತ್ತದೆ. ಸ್ಕೋಪಾಲಮೀನ್[] ಇಲ್ಲವೆ ಹಿಸ್ಟಮಿನ್ ರೋಧಕ ಔಷಧಿಗಳನ್ನು[] ಪ್ರವಾಸದ ಅರ್ಧ ಗಂಟೆಯ ಮೊದಲು ಇಲ್ಲವೆ ದೀರ್ಘಾವಧಿ ಪ್ರವಾಸ ಕಾಲದಲ್ಲಿ ಆಗಾಗ್ಗೆ ಸೇವಿಸಿ ಚಲನೆಯ ನರಳಿಕೆಯನ್ನು ತಡೆಗಟ್ಟಬಹುದು. ಹೈಯೊಸೀನ್, ಡಿ-ಆಂಫೆಟಮಿನ್, ಮೆಕ್ಲಿಜ಼ಿನ್,[] ಸೈಕ್ಲಿಜ಼ಿನ್,[] ಡೈಮೆನ್‍ಹೈಡ್ರಿನೇಟ್,[೧೦] ಸಿನಾರಿಜ಼ಿನ್,[೧೧] ಪ್ರೊಮೆಥಜ಼ಿನ್[೧೨] ಮುಂತಾದ ಗುಳಿಗೆಗಳು ನರಳಿಕೆಯನ್ನು ಹೆಚ್ಚು ಜನರಲ್ಲಿ ತಡೆಗಟ್ಟಲು ಸಹಾಯಕವಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Takov, V; Tadi, P (January 2019). Motion Sickness (in StatPearls). PMID 30969528.
  2. Keshavarz, Behrang; Hecht, Heiko; Lawson, Ben (2014). "Visually induced motion sickness: Characteristics, causes, and countermeasures". In Hale, K.S.; Stanney, K.M. (eds.). Handbook of Virtual Environments: Design, Implementation, and Applications, Second Edition. Human Factors and Ergonomics. Taylor & Francis. pp. 648–697. ISBN 978-1-4665-1184-2. Retrieved 2021-11-13.
  3. Hromatka, Bethann S.; Tung, Joyce Y.; Kiefer, Amy K.; Do, Chuong B.; Hinds, David A.; Eriksson, Nicholas (1 May 2015). "Genetic variants associated with motion sickness point to roles for inner ear development, neurological processes and glucose homeostasis". Human Molecular Genetics. 24 (9): 2700–2708. doi:10.1093/hmg/ddv028. PMC 4383869. PMID 25628336.
  4. Hemmerich, Wanja; Keshavarz, Behrang; Hecht, Heiko (2020-11-24). "Visually Induced Motion Sickness on the Horizon". Frontiers in Virtual Reality. 1. Frontiers Media SA. doi:10.3389/frvir.2020.582095. ISSN 2673-4192.
  5. Munafo, Justin; Wade, Michael G.; Stergiou, Nick; Stoffregen, Thomas A. (2016-12-14). Balasubramaniam, Ramesh (ed.). "The Rim and the Ancient Mariner: The Nautical Horizon Affects Postural Sway in Older Adults". PLOS ONE. 11 (12). Public Library of Science (PLoS): e0166900. Bibcode:2016PLoSO..1166900M. doi:10.1371/journal.pone.0166900. ISSN 1932-6203. PMC 5156431. PMID 27973576.{{cite journal}}: CS1 maint: article number as page number (link)
  6. "About hyoscine hydrobromide". nhs.uk. 24 October 2022. Archived from the original on 14 March 2023. Retrieved 14 March 2023.
  7. Golding, J. F. (2016). "Motion sickness". Neuro-Otology. Handbook of Clinical Neurology. Vol. 137. pp. 371–390. doi:10.1016/B978-0-444-63437-5.00027-3. ISBN 9780444634375. ISSN 0072-9752. PMID 27638085.
  8. "Meclizine Hydrochloride Monograph for Professionals". Drugs.com. American Society of Health-System Pharmacists. Retrieved 22 March 2019.
  9. "Cyclizine 50mg Tablets - Summary of Product Characteristics (SPC) - (eMC)". www.medicines.org.uk. 27 March 2015. Archived from the original on 20 December 2016. Retrieved 13 December 2016.
  10. Zabirowicz ES, Gan TJ (2019). "34 - Pharmacology of Postoperative Nausea and Vomiting". In Hemmings Jr HC, Talmage ED (eds.). Pharmacology and Physiology for Anesthesia (Second ed.). Elsevier Inc. pp. 671–692. doi:10.1016/B978-0-323-48110-6.00034-X. ISBN 978-0-323-48110-6. S2CID 81387334.
  11. Nicholson AN, Stone BM, Turner C, Mills SL (June 2002). "Central effects of cinnarizine: restricted use in aircrew". Aviation, Space, and Environmental Medicine. 73 (6): 570–4. PMID 12056673.
  12. "Promethazine Hydrochloride Monograph for Professionals". Drugs.com. American Society of Health-System Pharmacists. Retrieved 24 October 2018.