ವಿಷಯಕ್ಕೆ ಹೋಗು

ಚರ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರ್ಟ್‌ನ ಕೈ ಗಾತ್ರದ ಮಾದರಿ

ಚರ್ಟ್ ಎನ್ನುವುದು ಚಕಮಕಿ ಕಲ್ಲಿನಂಥ ಬೆಣಚುಕಲ್ಲು.[] ಸಾಮಾನ್ಯವಾಗಿ ಸುಣ್ಣಕಲ್ಲಿನಲ್ಲಿ ಸಿಕ್ಕುತ್ತದೆ. ಪುರಾತನ ಶಿಲಾಯುಧಗಳ ಬಳಕೆಯ ಕಾಲದಲ್ಲಿ ಆಯುಧಗಳನ್ನು ತಯಾರಿಸಲು ಚರ್ಟನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ಕಾಲದಲ್ಲಿ ಪಶ್ಚಿಮ ಯೂರೋಪ್, ಪ್ಯಾಲೆಸ್ಟೀನ್, ಸಿಂಧ್, ಪಶ್ಚಿಮ ರಾಜಸ್ಥಾನ ಮತ್ತು ಮಸ್ಕಿ (ರಾಯಚೂರು ಜಿಲ್ಲೆ) ಪ್ರದೇಶಗಳಲ್ಲಿ ಚಕಮಕಿ ಕಲ್ಲು ಅಲ್ಲದೆ ಜಾಸ್ಪರ್ ಬೆಣಚುಕಲ್ಲು ಮತ್ತು ಚಾಲ್ಸಿಡೋನಿ ಸಹ ಬಳಕೆಯಲ್ಲಿದ್ದುವಂತೆ. ಟಿ.ನರಸೀಪುರ ಉತ್ಖನನದಲ್ಲಿ ಚರ್ಟನ್ನು ಕೊರೆದು ತೆಗೆದ ಮಧ್ಯಭಾಗ ಸಿಕ್ಕಿದೆ. ಚರ್ಟಿನ ಪ್ರಧಾನ ಘಟಕ ಅಸ್ಫಟಿಕ ಸಿಲಿಕ. ಆದರೆ ಚರ್ಟ್ ಚಕಮಕಿ ಕಲ್ಲಿಗಿಂತ ಹೆಚ್ಚು ಇತರ ಅಶುದ್ಧತೆಗಳನ್ನು ಒಳಗೊಂಡಿರುವುದು. ಹೀಗಾಗಿ ಇದರ ಬಣ್ಣ ಬೂದು, ಕಂದು, ಕಪ್ಪು ಯಾವುದೂ ಆಗಬಹುದು.[][] ಸಾಪೇಕ್ಷವಾಗಿ ಅಧಿಕ ಕಬ್ಬಿಣಾಂಶವನ್ನು ಒಳಗೊಂಡಿರುವ ಚರ್ಟಿಗೆ ಜಾಸ್ಪರ್ ಎಂದು ಹೆಸರು.

ಉಲ್ಲೇಖಗಳು

[ಬದಲಾಯಿಸಿ]
  1. Knauth, L. Paul (1 June 1979). "A model for the origin of chert in limestone". Geology. 7 (6): 274–77. Bibcode:1979Geo.....7..274K. doi:10.1130/0091-7613(1979)7<274:AMFTOO>2.0.CO;2.
  2. W.L. Roberts, T.J. Campbell, G.R. Rapp Jr., "Encyclopedia of Mineralogy, Second Edition", 1990. ISBN 0-442-27681-8
  3. R.S. Mitchell, "Dictionary of Rocks", 1985. ISBN 0-442-26328-7


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚರ್ಟ್&oldid=1312328" ಇಂದ ಪಡೆಯಲ್ಪಟ್ಟಿದೆ