ಚರ್ಚೆಪುಟ:ರಾಹುಲ್ ಗಾಂಧಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ವ್ಯಕ್ತಿಯ ಬಗ್ಗೆ ಟೀಕೆ[ಬದಲಾಯಿಸಿ]

ಈ ಪ್ಯಾರಾ ಬಿಜೆಪಿ ಅಭಿಮಾನಿಗಳು ಅಥವಾ ಆ ಪಕ್ಷದವರು ಮಾಡುವ ಚುನಾವಣಾ ಪ್ರಚಾರದಂತಿದೆ; (ಚುನಾವಣಾ ಪ್ರಚಾರದ ಪಾಂಪ್ಲೆಟ್`ನಂತೆ). ಇದರಲ್ಲಿ ವಿಷಯ ತುಂಬಿದ ಸದಸ್ಯರು ರಾಹುಲ್ ಗಾಂಧಿಯ ಬಗ್ಗೆ ಅಸಮರ್ಥ ನಾಯಕನೆಂಬ ತಮ್ಮ ಸ್ವಂತ ಅಭಿಪ್ರಾಯ ಸೇರಿಸಿ ಅವರ ಬಗ್ಗೆ ಟೀಕೆ -ತಿರಸ್ಕಾರ ಭಾವನೆ ಉಂಟುಮಾಡುವ ಒಕ್ಕಣೆ ಸೇರಿಸಿದ್ದಾರೆ . ಒಂದು ವ್ಯಕ್ತಿ ಬಗೆಗೆ ಅದೂ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಯ ಬಗೆಗೆ ತಮ್ಮ ಸ್ವಂತ ಅಭಿಪ್ರಾಯ ಬರೆಯುವುದು, ಅದೂ ಒಂದು ವ್ಯಕ್ತಿಯನ್ನು ಹೀಗಳೆದು ಅಥವಾ ಟೀಕೆ ಮಾಡಿ ಬರೆಯುವುದು, ವಿಕಿಪೀಡಿಯಾ ನಿಯಮಕ್ಕೆ ಅನುಗುಣವಲ್ಲವೆಂದು ಭಾವಿಸುತ್ತೇನೆ. ಆ ಬಗೆಯ ರಾಜಕೀಯ ಟೀಕೆ- ಅಭಿಪ್ರಾಯಗಳನ್ನು ತಮ್ಮ ಸ್ವಂತ ಬ್ಲಾಗಿನಲ್ಲಿ ಬರೆಯಬಹುದು. ಸಂಪಾದಕ ಮಂಡಳಿಯವರು ಪರಿಶೀಲಿಸಲಿ ಎಂದು ಕೋರುತ್ತೇನೆ. -

Bschandrasgr ೧೬:೩೫, ೨೭ ಸೆಪ್ಟೆಂಬರ್ ೨೦೧೪ (UTC)