ಚರ್ಚೆಪುಟ:ಬಿ.ಆರ್.ಅಂಬೇಡ್ಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Saaptaajika.png ಈ ವಾರದ ಸಹಯೋಗEvolution-tasks.png ಬಿ.ಆರ್.ಅಂಬೇಡ್ಕರ್ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ

ಚರ್ಚೆಪುಟ:ಬಿ.ಆರ್.ಅಂಬೇಡ್ಕರ್/to do


ಅಂಬೇಡ್ಕರ್ ಅವರಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳೂ ಬಂದಿವೆ. ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಹುಟ್ಟಿದ ದಲಿತ ಚಳವಳಿಯನ್ನು ಅಂಬೇಡ್ಕರ್ ಚಿಂತನೆಗಳು ಬಹುವಾಗಿ ಪ್ರಭಾವಿಸಿವೆ. ಇಂಗ್ಲಿಷ್ ನ ಬಾಹ್ಯ ಸಂಪರ್ಕಗಳು ಸಾಕಷ್ಟಿವೆ. ಕನ್ನಡದ್ದನ್ನು ಹುಡುಕಿ ಸೇರಿಸಲು ಪ್ರಯತ್ನಿಸುತ್ತಿದ್ದೇನೆ.--Ismail 09:52, ೧೪ April ೨೦೦೬ (UTC)

ಗೀತೆ-ಗಾಂಧಿ-ಅಂಬೇಡ್ಕರ್[ಬದಲಾಯಿಸಿ]

ರವೀಂದ್ರ ಕೊಟಕಿ (ಸಂಗತ:.prajavani.೫-೩-೨೦೧೬)

  • ದೇಶದಲ್ಲಿ ಮೂರು ವಿಷಯಗಳು ಸದಾ ಚರ್ಚೆಗೆ ಒಳಪಡುತ್ತಲೇ ಇರುತ್ತವೆ. ಅವೇ ಗೀತೆಯ ಪ್ರಸ್ತುತತೆ, ಗಾಂಧಿವಾದ ಮತ್ತು ಅಂಬೇಡ್ಕರ್‌ ವಾದ. ಇದರಲ್ಲಿ ಗಾಂಧಿ ಗೀತೆಗೆ ಹತ್ತಿರವಾಗಿದ್ದರೆ, ಅಂಬೇಡ್ಕರ್ ಮೈಲಿಗಳ ದೂರದಲ್ಲಿ ನಿಲ್ಲುತ್ತಾರೆ. ಗೀತೆ ಏಕಕಾಲಕ್ಕೆ ಎರಡು ಬಗೆಯಲ್ಲಿ ಕಣ್ಣ ಎದುರಿಗೆ ನಿಲ್ಲುತ್ತದೆ. ಅದು ಭಾರತದಲ್ಲಿ ಬಹುಚರ್ಚಿತವಾಗುವುದರ ಜೊತೆಗೆ, ಅದನ್ನು ಸುಡಬೇಕು ಎಂಬ ಕಾಲಘಟ್ಟದಲ್ಲೇ ಅದು ಮಂಗಳಯಾನ ಮಾಡಿದ (ಸುನೀತಾ ವಿಲಿಯಮ್ಸ್ ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದರು) ಮೊದಲ ಧಾರ್ಮಿಕ ಗ್ರಂಥವಾಗಿ ಗಮನ ಸೆಳೆಯುತ್ತದೆ.
  • ಅಮೆರಿಕದ ಸೆನೆಟರ್ ತುಳಸಿ ಗಬ್ಬಾರ್ಡ್ ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುತ್ತಾರೆ. ಅಲ್ಲಿಗೆ ಗೀತೆ ಏಕಕಾಲಕ್ಕೆ ವಿಮರ್ಶೆಗೂ, ಪ್ರಶಂಸೆಗೂ ಒಳಪಡುತ್ತದೆ. ಯಾವುದು ವಿಮರ್ಶೆಗೆ ಹೆಚ್ಚು ಹೆಚ್ಚು ಒಳಪಡುತ್ತದೋ ಅದು ಜೀವಂತವಾಗಿರುವುದಕ್ಕೆ ಸಾಕ್ಷಿ. ಅಲ್ಲಿಗೆ ಗೀತೆಗೆ ಜೀವಂತಿಕೆ ಇದೆ! ಹಾಗೇ ಗಾಂಧಿವಾದ, ಅಂಬೇಡ್ಕರ್‌ ವಾದಗಳು ಜೀವಂತವಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಅವು ನಿರಂತರ ವಿಮರ್ಶೆಗೆ ಒಳಪಡುತ್ತಿರುವುದು.
  • ಗಾಂಧಿ- ಅಂಬೇಡ್ಕರ್ ಒಂದೇ (ದೀನ ದಲಿತರ) ವಿಚಾರವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಕಂಡವರು. ಇಬ್ಬರನ್ನೂ ಪ್ರೀತಿಸುವವರೂ ಇದ್ದಾರೆ, ಟೀಕಿಸುವವರೂ ಇದ್ದಾರೆ. ಪ್ರೀತಿ, ಟೀಕೆ ಎರಡೂ ಇದ್ದರೆ ಮಾತ್ರವೇ ವಾದಕ್ಕೆ ಮೌಲ್ಯ ದಕ್ಕುವುದು. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಗಾಂಧೀಜಿ ಬಗ್ಗೆ ನಿರ್ಭಯವಾಗಿ ಬರೆಯುವ ವಾತಾವರಣವಿದೆ, ಆದರೆ ಇದೇ ವಾತಾವರಣ ಅಂಬೇಡ್ಕರ್ ವಿಷಯದಲ್ಲಿ ಇದೆ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.
  • ಯಾಕೆಂದರೆ ಗಾಂಧೀಜಿ ಜಾತಿಯ ಸಂಕೋಲೆಯಲ್ಲಿ ಬಂದಿಯಾಗಿಲ್ಲ. ಗಾಂಧಿವಾದದ ವಾರಸುದಾರಿಕೆ ಯಾವುದೋ ಒಂದು ವರ್ಗ, ಜಾತಿ, ಧರ್ಮದವರ ಕೈಯಲ್ಲಿಲ್ಲ. ಹೀಗಾಗಿ ಗಾಂಧಿ, ಗಾಂಧಿವಾದ ದೇಶ, ಕಾಲಗಳ ಆಚೆಗೂ ವಿಸ್ತರಿಸಿ ನಿಂತಿದೆ. ಗಾಂಧಿ ‘ಮುನ್ನಾಭಾಯಿ ಎಂಬಿಬಿಎಸ್‌’ಗೂ ಸಿಗುತ್ತಾನೆ, ಸಾರ್ವಜನಿಕವಾಗಿ ಮೆಚ್ಚುಗೆಗೂ ಟೀಕೆಗೂ ಮುಕ್ತವಾಗಿ ಒಳಪಡುತ್ತಾನೆ. ಗಾಂಧಿವಾದದ ವಿಸ್ತರಣೆಯಲ್ಲಿ ಈ ಸಹಿಷ್ಣುತೆ ಪ್ರಮುಖ ಪಾತ್ರ ವಹಿಸುತ್ತದೆ.
  • ಅದೇ ಅಂಬೇಡ್ಕರ್‌ ವಾದಕ್ಕೆ ಬಂದಾಗ ಅದು ಕೇವಲ ಒಂದು ವರ್ಗದವರ ಕೈಯಲ್ಲಿ ಬಂದಿಯಾಗಿದೆ ಮತ್ತು ಅವರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಹೌದು, ಅಂಬೇಡ್ಕರ್ ಅವರು ಬದುಕಿನ ಕೊನೇ ಕ್ಷಣದವರೆಗೂ ಅಸಮಾನತೆಯ ವಿರುದ್ಧ ಹೋರಾಡಿ ಹೋರಾಡಿ ಅವರೂ ದಲಿತರಾಗಿಯೇ ವಿಧಿವಶರಾದರು.
  • ವಿಪರ್ಯಾಸವೆಂದರೆ ಅಂಬೇಡ್ಕರ್‌ ವಾದ ಕೂಡ ದಲಿತೀಕರಣವಾಗುತ್ತಿದೆ ಹೊರತು ಮುಕ್ತ ಸಾಮಾಜಿಕ ಚಿಂತನೆಯಾಗಿ ಸಮಾಜದ ಮಧ್ಯೆ ಸ್ಥಾನ ಪಡೆಯುತ್ತಿಲ್ಲ. ಅಂಬೇಡ್ಕರ್ ಜೀವಂತವಾಗಿದ್ದಾಗ ತಮ್ಮ ಚಿಂತನೆ ಮತ್ತು ವಾದಕ್ಕೆ ಅವರು ಮುಕ್ತರಾಗಿದ್ದರು. ಆದರೆ ಅವರ ಕಾಲಾನಂತರ ಅಂಬೇಡ್ಕರ್‌ ವಾದವು ಅಂಬೇಡ್ಕರ್‌ ವಾದಿಗಳ ಕೈಯಲ್ಲಿ ಸಿಕ್ಕಿ ಅವರ ಸಾಮಾಜಿಕ, ನವ ಸಮಾಜ ನಿರ್ಮಾಣದ ಆಶಯ ಇವೆಲ್ಲ ದಲಿತೀಕರಣವಾಗಿ ಹೋಗಿವೆ.
  • ಗಾಂಧಿವಾದಕ್ಕೆ ಸಿಕ್ಕ ವಿಶ್ವಮಾನ್ಯತೆ ಯಾಕೆ ಅಂಬೇಡ್ಕರ್‌ ವಾದಕ್ಕೆ ಸಿಗುತ್ತಿಲ್ಲ? ಉತ್ತರ, ಗಾಂಧಿ ಎಂಬ ಪಾತ್ರಧಾರಿ ಸಮಾಜದ ಮುಂದೆ ಮುಕ್ತರೂಪದಲ್ಲಿ ನಿಂತಿದ್ದಾನೆ, ಅವನನ್ನು ನೀವು ಹೇಗೆ ಬೇಕಾದರೂ ಸ್ವೀಕರಿಸಬಹುದು. ಆದರೆ ಅಂಬೇಡ್ಕರ್ ಪಾತ್ರಕ್ಕೆ ‘ದಲಿತ’ ಎಂಬ ಮೂರು ಅಕ್ಷರಗಳನ್ನು ಜೋಡಿಸಿ ನಿಲ್ಲಿಸಲಾಗಿದೆ. ಹೀಗಾಗಿ ಅಂಬೇಡ್ಕರ್‌ ವಾದವೆಂದರೆ ಅದು ದಲಿತರಿಗೆ ಮಾತ್ರ ಎಂಬಂತಾಗಿದೆ. ಅಂಬೇಡ್ಕರ್ ಹೆಸರಿನ ದುರ್ಬಳಕೆ ಕೂಡ ನಡೆಯುತ್ತಿದೆ.(:w:prajavani.net/article/ಗೀತೆ-ಗಾಂಧಿ-ಅಂಬೇಡ್ಕರ್|[[೧]])Bschandrasgr (ಚರ್ಚೆ) ೧೬:೦೫, ೭ ಏಪ್ರಿಲ್ ೨೦೧೬ (UTC)