ಚರ್ಚೆಪುಟ:ತ್ರೇತಾಯುಗ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
                           ದ್ರಾವಿಡ ರಾಮಾಯಣ
             ( ಮಿಥ್ಯ ಭೂಮಿಯನ್ನು ಬಿರಿದು ಮೊಳೆತ ಸತ್ಯಕಥೆ )
               ಭಾರತದಲ್ಲಿ ಯಾರೂ ನೆಲಸಿಲ್ಲದ ಕಾಲವೊಂದಿತ್ತು. ಮುಂದೆ ದಕ್ಷಿಣ ಆಫ್ರೀಕದಿಂದ ಬಂದು ನೆಲೆಸಿದ ದ್ರವಿಡರು ಇಲ್ಲಿನ ಮೂಲನಿವಾಸಿಗಳಾಗಿ ಶಾಂತಿ ನೆಮ್ಮದಿಯಿಂದಿದ್ದ ಸಂಪತ್ಭರಿತ ನಾಗರೀಕತೆ ಬಾಷೆ ಐಸಿರಿಯ ಜೀವನ ಪದ್ಧತಿಯಲ್ಲಿ ತಮಗೆ ವಿರೋಧಿಗಳಿಲ್ಲದೆಲೇ ಯುದ್ಧವೇನೆಂದರಿಯದ ಸುಮಾರು ೫೦೦ (ಐನೂರು) ವರ್ಷ ಕಾಲವಾದಿಂದೆ ಕ್ರಿ ಪೂ ೩೭೨೦, ಅಂದರೆ ಈಗಿನ ಕಾಲಮಾನ ೫೭೨೦ ಹಿಂದೆ ಆರ್ಯರು ಮಧ್ಯೆ ಏಷ್ಯದಿಂದ ಬುಲೂಚಿಸ್ಥಾನದ ಮೂಲಕ ಸಿಂಧ್ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸಿದರು. 
              ಸಿಂಧೂ ನದಿ ಬಯಲಿನ ನಾಗರೀಕತೆಯ ಬಗ್ಗೆ ಏಳು ದಶಕಗಳಿಂದೆ ಗೊಚರಿಸಿತು. ಆ ಹರಪ್ಪ ಮೊಹೆಂಜೋದಾರೋದಲ್ಲಿ ಉತ್ಖನಗಳಿಂದ ಬೆಳಕಿಗೆ ಬಂದ ವಿವರಗಳು ಹೀಗಿದೆ, ವ್ಯೆವಸ್ಥಿತ ನಗರ ಯೋಜನೆ, ಮಹಡಿ ಮನೆಗಳು, ೯ ಒಂಬತ್ತು ಮೀಟರ್ ಅಗಲದ ರಸ್ತೆಗಳು, ಒಳಚರಂಡಿ ವ್ಯೆವಸ್ಥೆ, ಗಂಡು ಹೆಣ್ಣಿಗೆ ಬೇರೆ ಬೇರೆ ಸಾರ್ವಜನಿಕ ಸ್ನಾನದಕೊಳಗಳು ಕಂಭಗಳಿಂದ ಕೂಡಿದ ಸಭಾಂಗಣ ಮಂಟಪ ೫ ಐದು ಕಿಲೋಮೀಟರ್ ಪರಿಧಿಯ ಗೋಡೆಯಿಂದ ಸುತ್ತುವರಿದಿತ್ತು. 
             ಅವಶೇಷಗಳಲ್ಲಿ ದೊರೆತಿರುವ ೩೨೫ ( ಮೂನ್ನೂರೈಪ್ಪತೈದು )ಅಸ್ತಿಪಂಜರಗಳು ದ್ರಾವಿಡರ, ಸಿಂಧಿ, ಗುಜರಾತಿ, ವ್ಯೆಕ್ತಿ ಲಕ್ಷಣಗಳನ್ನೇ ಹೋಲುತ್ತದೆ. ಅದರಲ್ಲಿ ಯಾವ ಸಂಶಯವಿಲ್ಲ. 
            ಆರ್ಯರು ಯುದ್ಧ ಕಲೆಯರಿತ ಅವರು ಅಲ್ಪಸಂಖ್ಯಾತ ಜನ ದ್ರವಿಡ ಅಥವಾ ದ್ರಮಿಳ ಮೂಲ ನಿವಾಸಿಗಳ ಮೇಲೆ ಯುದ್ಧ ಮಾಡಿ ಆ ನೆಲವನ್ನು ಆಕ್ರಮಿಸಿಕೊಂಡರು. ದ್ರಮಿಳರನ್ನು ದಕ್ಷಿಣಕ್ಕೆ ಅಟ್ಟಿದರು ತಮ್ಮ ಕುಲ ಕಸುಬಾದ ಪಶು ಸಂಗೋಪನೆ ದನಕಾಯುವ (ದನ ಮೇಯಿಸುವುದು) ಸಂಗೋಪನೆ ಕಸುಬನ್ನೇ ಮುಂದುವರಿಸಿಕೊಂಡು ತಮ್ಮ ಪ್ರಾಬಲ್ಯವನ್ನೇ ಉತ್ತರ ಭಾರತದಲ್ಲಿ ಸ್ಥಾಪಿಸಿಕೊಂಡರು. ದ್ರವಿಡರೂ ತಮ್ಮ ಸಂಸ್ಕೃತಿ ಹಿರಿಮೆಯ ನಾಗರೀಕತೆ ತತ್ವಙ್ಞಾನ ಪರಂಪರೆ ಇತಿಹಾಸ ಜೀವನದ ಆದರ್ಶಗಳನ್ನು ಬಿಟ್ಟು ದಿಕ್ಕು ದೆಶೆ ಕಾಣದೇ ಭಾರತದ ಮೂಲೆ ಮೂಲೆಗೆ ಅಂದರೆ, ಗುಜರಾತ್, ಅಸ್ಸಾಂ, ಬಿಹಾರ, ನಾಗಲ್ಯಾಂಡ್, ತ್ರಿಪುರ, ದಕ್ಷಿಣ ಬಂಗಾಳ, ಒರಿಸ್ಸಾ ಇಂದಿನ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಸಿಂಹಳ ಹೀಗೆ ದಾರಿತಪ್ಪಿ ಹಂಚಿಹೋದರು. ಮುಂದೆ ನಮ್ಮ ನಾಗರೀಕತೆ, ಆಸ್ತಿ, ಸಂಪತ್ತು, ಸಂಸ್ಕೃತಿಯ ನಾಶಮಾಡಿದ ಆ ಆರ್ಯರಿಗೂ ದಕ್ಷಿಣ ದ್ರಾವಿಡ (ದ್ರಮಿಳ)ರಿಗೂ ದ್ವೇಷಬೆಳೆಯುತ್ತಲೇ ಇತ್ತು.
             ದ್ರಾವಿಡರ ಬಣ್ಣ ಕಪ್ಪು, ಚಪ್ಪ್ಟೆಯಾದ ಮೂಗು, ಗಿಡ್ಡವಾದ ಆಕಾರ ಈ ವ್ಯೆತ್ಯಾಸ ಈಗಲೂ ಕಾಣಬಹುದು. ಆದರೆ, ನಗರಗಳಲ್ಲ, ನಾಗರೀಕತೆ ಬೆಳದಂತೆ ಈಗ ತುಸು ಬದಲಾಗಿದೆ. ಆರ್ಯರು ತಮಗೆ ಬೇಕಾದಾಗ ಶೂದ್ರರೆಂಬ ಅನಾರ್ಯರ, ದಾಸರ, ಪಣಿಗಳ, ದಸ್ಸ್ಯುಗಳನ್ನು ಎತ್ತಿನಂತೆ ದುಡಿಯಲು, ಗಾಣಗಳಲ್ಲಿ, ಬಾರದ ಕಲ್ಲುಗಳನ್ನು ಹೊರಲು ಹಿಡಿದುಕೊಂಡು ಹೋಗುತ್ತಿದ್ದರು. ಹೆಣ್ಣುಗಳಿಗೆ ಮದುವೆಗೆ ಬಳುವಳಿಯಾಗಿ ೧೦೦ ಅಥವಾ ೫೦ ಜನ ಅನಾರ್ಯ, ದಾಸ, ಪಣಿ, ದಸ್ಸ್ಯು ಸೇವಕರನ್ನು ಬಳುವಳಿಯಾಗಿ ಕಳಿಸುತಿದ್ದರು. ಅವರಾರೆಂದರೆ ದಕ್ಷಿಣದಿಂದ ಬಲತ್ಕಾರವಾಗಿ ಒದ್ದು ಬಡಿದು ಎಳೆದುಕೊಂಡು ಹೋಗುತ್ತಿದ್ದರು. ಕೇಳಲು ಯಾವನಾಡಿಯು ಇರಲಿಲ್ಲ. ಅಲ್ಲಿ ಚಾಟಿಗಳಿಂದ ಹೊಡೆದು ತಮ್ಮ ಕೆಲಸಗಳಿಗೆ ಬಳಿಸಿಕೊಳ್ಳುತಿದ್ದರು. ದಾಸ, ದಸ್ಸ್ಯು, ಪಣಿ ಮತ್ತು ಮ್ಲೇಚ್ಚರು ( ಶೂದ್ರ )ಇರುವುದೇ ಮೇಲ್ ವರ್ಗದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಜನರಿಗೆ ದುಡಿಯುವುದಕೆಂದು ವೇದ ಉಪನಿಷತ್ತು ಗೀತೆಯಲ್ಲಿದೆ ಎನ್ನುತಿದ್ದರು.
             ಈ ದ್ರಾವಿಡರು ಆಂದರೆ, ದಕ್ಷಿಣದಲ್ಲಿ ಮೂಲ ದ್ರಾವಿಡ

( ದ್ರಮಿಳ ) ಬಾಷೆಯಿಂದ ತಮಿಳು ಮೊದಲು ಬೇರ್ಪಟ್ಟಿತು. ಬಹಳಕಾಲದ ತದನಂತರ ಪ್ರಾಂತಿಯ ಬಾಷೆಗಳು ಬೇರ್ಪಟ್ಟು ತಮ್ಮ ತಮ್ಮದೇ ಬಾಷೆಯನ್ನು ಸಂಸ್ಕೃತದೊಂದಿಗೆ ಮಿಶ್ರಿತವಾಗಿ ತೆಲಗು, ಕನ್ನಡ, ಮಾತನಾಡುವರಾದರೂ ಬೇರೆಯಾದರು. ಮಲೆಯಾಳಂ ಈಗ್ಗೆ ( ೬೦೦ ) ವರ್ಷದಿಂದೆ ತಮಿಳಿನಿಂದ ಬೇರ್ಪಟ್ಟಿತು. ಉತ್ತರ ಭಾರತದ ದ್ರಾವಿಡರೂ ಸಹಜವಾಗಿ ಆರ್ಯರಲ್ಲಿ ಬೆರೆತರು ತಮ್ಮ ಬಾಷೆಯನ್ನು ಮರೆತು ಹೋದರು. ತುಳು ಅದಕ್ಕೆ ಬಾಷೆಯಿದೆ ಲಿಪಿ ಇನ್ನೂ....ಯಿಲ್ಲ. ಈ ಬಾಷೆಗಳೂ ಪಂಚ ದ್ರಾವಿಡ ಬಾಷೆಯಾಗಿ ಉಳಿದಿದೆ.

             ತಮಿಳು ಮಾತ್ರ ತನ್ನತನವನ್ನು ಕಾಪಾಡಿಕೊಂಡು ಬಂದಿತ್ತು ಸಂಸ್ಕೃತದೊಂದಿಗೆ ಆ ಬಾಷೆ ಸಂಕರಣವಾಗದೇ ಬೆರೆಯದೇ ಹೊಯಿತು. ದಕ್ಷಿಣದಲ್ಲಿ ತಮಿಳರು ಮಾತ್ರ ಬೆರೆಯದೆ ಹೋದ ಕಾರಣ, ಅವರಲ್ಲಿ ಪರಿಶುದ್ಧ ( ಬೆರೆಯದ ) ಬಾಷೆಯಾಗಿತ್ತು. ಅದಕ್ಕೆ ತನ್ನದೇ ಆದ ಹಳೆಯ ಸಾಹಿತ್ಯ ಬಲವುಳ್ಳದಾಗಿತ್ತು.  
        ***{ ಉತ್ತರ ಭಾರತದ ಆರ್ಯರು ದಕ್ಷಿಣದಲ್ಲಿ ಬಂದು ನೆಲಸಿದ ಮೇಲೆ

" ಮುಂದೆ ಮಣಿ ಪ್ರವಾಳ "ಎಂಬ ಬೆಳವಣಿಗೆ ಬಂದು ಅಂದರೆ, ಮುತ್ತು ಮಣಿಗಳ ಜೋತೆ ಹವಳವನ್ನೂ, ಬೇರೆ ಬಣ್ಣದ ಮಣೀ ಪೋಣೀಸುವುದರಿಂದ ಶೋಭೆ ತರುವುದೆಂದು ಹೊಸದಾಗಿ ಬಂದ ಆರ್ಯರಿಂದ( ಬ್ರಾಹ್ಮಣರಿಂದ) ತಮಿಳಿನಲ್ಲಿ ಸಂಸ್ಕೃತವನ್ನು ಬೆರೆಸಿ ಬರೆಯ ತೊಡಗಿದರು. } ( ತಮಿಳಿನಲ್ಲಿ ಈಗಲೂ ಬೇರೆ ಬಾಷೆಗಳ ಬೆರಸದೇ ಜನಸಾಮಾನ್ಯರು ಮಾತನಾಡಲು ಸಾದ್ಯವಿದೆ ). ಮುಂದೆ ಮುಂದೆ ಅಲ್ಲಿಂದ ದ್ರಾವಿಡರಲ್ಲೇ ಕಚ್ಚಾಟ ಹುಟ್ಟಿಕೊಂಡವು.

             ತಮಿಳರು ಹಿಂದಿನಿಂದಲೂ ಬಂದ ವೇದ ಉಪನಿಷತ್ತುಗಳನ್ನು ಯಾಗ-ಯಙ್ಞಗಳನ್ನು ತಮಿಳರು ದಿಕ್ಕರಿಸುತ್ತಿದ್ದರು, ದಿಕ್ಕರಿಸುತ್ತಾ ಹೋದರು. ಇದರಿಂದ ಮತ್ತು ಇಂದಿನಂತೆ ಬಾಷೆಯಲ್ಲಿನ ಅಭಿಮಾನದಿಂದ ದಕ್ಷಿಣ ಭಾರತೀಯರಲ್ಲೇ ವಿರೋಧಿಗಳಾದರು.
             ಆರ್ಯರು ಹೀಗಿರುವಲ್ಲಿ ಆಗಾಗ ದಾಸ್ಯುಗಳನ್ನು ದಸ್ಸು 

ಮ್ಲೇಚ್ಚರರನ್ನು ಅಂದರೆ ಯಾಗ-ಯಙ್ಞಗಳನ್ನು ದಿಕ್ಕರಿಸುವ ಇವರನ್ನು ಸೇವಕರಾಗಿ ಹಿಡಿದುಕೊಂಡಿ ಹೋಗುತ್ತಿದ್ದರು. ಇವರಿಗೆ ಜನ ಬಲವಿಲ್ಲ ಹಣಬಲವಿಲ್ಲ ಆಯುಧಗಳಿಲ್ಲ ಅಲ್ಪಸಂಖ್ಯಾತರಾದ ( ದ್ರಮಿಳ )ತಮಿಳರು ದಾರಿ ಕಾಣದೇ ಇದ್ದರು.

             ಈ ಹೋರಾಟ ಮುನ್ನುಡಿ ಬರೆದವರು ರಾವಣನ ತಾತ 

ಈತನೆದುರೆ ಹಲವರನ್ನು ಹೆಣ್ಣು ಮಕ್ಕಳನ್ನು ಹಿಂಸಿಸುವುದ ನೋಡಿ ಇದಕ್ಕೆ ದಾರಿ ಕಂಡುಕೊಳ್ಳಲೇಬೇಕು ಎಂದು ತೀರ್ಮಾನಿಸಿ, ತನ್ನ ಮಗಳನ್ನು( ರಾವಣನ ತಾಯಿ ಕೈಕಸಿ ) ಕರೆದು ತಾಯೇ, ನಿನ್ನಿಂದ ನಮ್ಮ ಕುಲಕ್ಕೊಂದು ಉಪಕಾರವಾಗಬೇಕಿದೆ ನಿನ್ನಿಂದಲಿ ನಮ್ಮ ದುಃಖನೀಗುತ್ತದೆ . ನೀನು ಮಾಡುವುದಾದರೆ ನಾನು ಹೇಳುತ್ತೇನೆ ಎನ್ನುತ್ತಾನೆ.

          ಮಗಳೋ ಕೈಕಸಿ, ರೋಷವುಳ್ಳವಳು ತ್ಯಾಗಬುದ್ಧಿಯುಳ್ಳವಳು ಬಾಷಾಭಿಮಾನಿಯು ಆರ್ಯರ ಅಕ್ರಮಣ ಅರಿತವಳು ಕುಲಜನರ ದುಃಖದುಮ್ಮನ ಕಂಡವಳೂ ಸರಿ ಎನ್ನುತ್ತಾಳೆ.
          ಅಯ್ಯ, ಏನದು ಎನ್ನುತ್ತಾಳೆ ?. ಅವನು ಆ ಒಂದು ಸಿದ್ಧಾಂತವನ್ನು ತನ್ನ ಕುಲಜನರೆದುರು ಹೇಳುತ್ತಾನೆ. 
             ನೋಡಿ! ನನ್ನ ಕುಲ ಬಾಂಧವರೇ, ಈ ನನ್ನ ಮಗಳಿಗೆ ವರ್ಣ ಸಂಕರಣ ಮಾಡಿಸುತ್ತೇನೆ. ಇದರಿಂದ ಒಬ್ಬ ಶಕ್ತಿ ವೀರ್ಯವಂತ ಮಗನನ್ನು ಪಡೆದು ನಮ್ಮ ಕುಲಕ್ಕೆ ಬಂದಿರು ಕಷ್ಟಗಳು ನೀಗಲಿವೆ ನೀವು ಒಪ್ಪುವುದಾದರೆ ಎನ್ನುತ್ತಾನೆ. ಎಲ್ಲರು ಅಂಗೀಕರಿಸಿ ಒಪ್ಪುತ್ತಾರೆ. ಒಬ್ಬಮೇಧಾವಿ ಒಳ್ಳೆಙ್ಞಾನಿ ಸಕಲವಿದ್ಯೇ ಪಾರಂಗತ ಬ್ರಾಹ್ಮಣನಲ್ಲಿ ಇವಳನ್ನು ಕಳಿಸಿ ಅವನನ್ನೇ ಮದುವೆ ಮಾಡಿಕೊಳ್ಳುವಂತೆ ಆಕೆಗೆ ಪ್ರೋತ್ಸಾಹಕೊಟ್ಟು ದಾರಿಯನ್ನೂ ಹೇಳಿ ಕಳಿಸುತ್ತಾನೆ.( ಬ್ರಾಹ್ಮಣರೆಲ್ಲರು ಕೆಟ್ಟವರಲ್ಲ ಎಂಬುದನ್ನು ಒತ್ತಿ, ಒತ್ತಿ ಹೇಳಬಯಸುತ್ತೇನೆ.) ಆಕೆಯು ಕುದುರೆಯೇರಿ ಒಳ್ಳೆಯ ವಂಶಸ್ಥರನು ಹುಡಿಕಿ ಪುಲಸ್ಯಬ್ರಹ್ಮನ ವಂಶಕ್ಕೆ ಸೇರಿದ ವಿಶ್ರವಸ್ಸಿ ಆಶ್ರಮಕ್ಕೆ ಹೋಗಿ ಆ ಗುರುವನ್ನು ಕಾಣುತ್ತಾಳೆ. ಆತ ಮೊದಲು ಈ ಆಶ್ರಮವನ್ನು ದಸ್ಸ್ಯುಗಳು ಪ್ರವೇಶಿಸಬಾರದೆಂದು ತಡೆಯುತ್ತಾನೆ. ಆದರೆ ಆಕೆ ಬಿಡದೆ ತನ್ನಕುಲದ ಮೇಲೆ ನಡೆಯುವ ಹಿಂಸೆಯನ್ನು ದೌರ್ಜನ್ಯವನ್ನು ದಾಸ್ಯತ್ವವನ್ನೂ ದಾಸರಾಗಿ ದುಡಿಯುವ ಮಕ್ಕಳನ್ನು ಕಾರಣತೋರಿ ಒಪ್ಪಿಸುತ್ತಾಳೆ. ಆದರೆ, ಆತನ ಮಡದಿ, ಮಕ್ಕಳು, ಶಿಷ್ಯರು ಒಪ್ಪದೇ ದಿಕ್ಕರಿಸುತ್ತಾರೆ. ಬ್ರಾಹ್ಮಣರಾದ ನಾವು ದಾಸರಿಗೆ ಆಶ್ರಮದಲ್ಲಿ ಸ್ಥಳ ಜೋತೆಗೆ ಮದುವೆಯೇ ಎಂದು ಹಟ ಮಾಡುತ್ತಾರೆ. ಆತ ಮಹಾನ್ ಆತ ಬ್ರಾಹ್ಮಣನೆಂದರೆ ಹೇಗಿರಬೇಕು ಹೇಗಿರಬಾರದೆಂದು ಬ್ರಾಹ್ಮಣ್ಯದ ಬಗ್ಗೆ ಕುಲಂಕುಶವಾಗಿ ತಿಳುವಳಿಕೆ ಕೊಡುತ್ತಾನೆ. ಬೇರೆದಾರಿಯಿಲ್ಲದೆಲೇ ಮದುವೆ ನಡೆದು ಸಂತಸದಲ್ಲಿ ಜೀವನ ಸಾಗಿರಲು ಮೂರು ಗಂಡು ಮಗುವು ಒಂದು ಹೆಣ್ಣು ಮಗುವು ಆಗುತ್ತದೆ. ಅವರೆ ರಾವಣ ಕುಂಭಕರ್ಣ ವಿಭೀಷಣ ಮತ್ತು ಶೂರ್ಪಣಕಾರಾಗಿರುತ್ತಾರೆ. ಇವರುಗಳು ಬ್ರಾಹ್ಮಣ್ಯ ಪುರೋಹಿತ, ವೇದ, ಉಪನಿಷತ್, ಸಕಲ ಯುದ್ಧಕಲೆಗಳಲ್ಲಿ ಅತ್ತ್ಯೋನ್ನತ ಪರಿಣತಿ ಹೊಂದಿ ತಂದೆಯಿಂದಲೇ ಪ್ರಶಂಶೆಗೆ ಪಾತ್ರರಾಗುತ್ತಾರೆ. 
           ಇನ್ನೂ ತಾಯಿ ಮಕ್ಕಳಿಗೆ ಹೇಳಿದ ಆ ವಾಕ್ಯ ಪರಿಪಾಲನೆಗಾಗಿ ತನ್ನ ಗಂಡ ವಿಶ್ರವಸ್ಸಿಂಗೆ ವಿಧಾಯ ಹೇಳಿ ಆತನ ಉಪಕಾರಕ್ಕೆ ಕಂಬಿನಿಯಿಂದಲಿ ದುಃಖದಿಂದಲೀ ಬೀಳ್ಕೊಟ್ಟು ಮೊದಲಪತ್ನಿಯು ಬಹಳ ದುಃಖ ದುಮ್ಮನದಿಂದಲಿ ಕಳಿಸಿಕೊಡುತ್ತಾಳೆ. ಆತನ ಶಿಷ್ಯರೂ ತಾಯಿ ಮಕ್ಕಳು ಬೇರೆಯಾದಂತೆ ದುಃಖದಿ ದುಃಖಸಾಗರದಲ್ಲಿ ಮುಳುಗಿ ಹೋಗುತ್ತಾರೆ.
              ಅಲ್ಲಿಂದಲಿ ಹೊರಟು ತಮ್ಮ ದ್ಯೇಯಕ್ಕಾಗಿ ತಮ್ಮತಾಯಿ ನೆಲಕ್ಕೆ ಕಾಲಿಕ್ಕಿದಾಗಲೇ ಮಣ್ಣಿನ ಮಣ್ಣ್ ಸುಗಂಧ ವಾಸನೆ ಮೈರೋಮಂಚನ

ವಾಗುತ್ತದೆ. ಸುಂದರನೆಲ ಬನ ವನ್ಯಮೃಗಗಳು ಜಿಂಕೆಗಳ ನೆಗೆದಾಟ ಅಲ್ಲಲ್ಲಿ ಝರಿಝರಿಗಳು ಹೂವಿನ ಮಧುರ ಸುವಾಸನೆ ಕಣ್ ಮನಗಳ ಸಂತಸದಿ ತಣಿಸುತ್ತದೆ. ಮುಂದೆ ತಾತ, ದಾಯದಿಗಳು, ಬಂಧು, ಬಾಂದವರು, ನಾಡಜನರು ಪ್ರೇಮಪಾಶದಲ್ಲಿ ಕುಣಿದು ಕುಪ್ಪಳಿಸುತ್ತಾರೆ. ನಮ್ಮ ಕಷ್ಟಗಳೆಲ್ಲಾ ಇಂದಿಗೆ ತೀರಿತೆಂದು ಹಿರಿಹಿರಿ ಹಿಗ್ಗಿದರು. ಅವರಮಾತು ಸತ್ಯವೇ ಆಗಿತ್ತು.

              ಮುಂದೆ ಅವರ ಕಥೆಯಲ್ಲಿ ಮಾರ್ಪಾಡುಗಳು ಕಂಡವು ದಕ್ಷಿಣದ ದಾಸರು ದಸ್ಸ್ಯುಗಳು ಎಲ್ಲಾ ವಿದ್ಯೆಯನು ಅವರಿಂದ ಕಲಿತು ಅಲ್ಲಿ ಯಾವ ಒಬ್ಬ ಆರ್ಯನೂ ಪ್ರವೇಶಿಸದಂತೆ ಅವರನ್ನು ನೋಡಿದರೇ ನಡುಗುವಂತೆ ಪ್ರಕಾಶಮಾನವಾಗಿ ಬೆಳಗುತ್ತಾರೆ. ಯಾವ ಯಾಗ-ಯಙ್ಞವನಡೆಯದಂತೆ ಪಶು ವಧೆ ನಡೆಯದಂತೆ ನೋಡಿಕೊಂಡರು. ವಿಶ್ವಮಿತ್ರನ ಯಾಗಕ್ಕೆ ಮಾರೀಚ ಮತ್ತು ಸುಬಾಹು ಎಂಬ ರಾವಣನ ದಿಕ್ಕ್ಪಾಲಕರು ಅಡ್ಡಿಪಡಿಸುತ್ತಲೇ ಇರುತ್ತಾರೆ. ಗೊತ್ತಿಲ್ಲದೆ ನಡೆದರೇ ಸತ್ತದನದ ಮಾಂಸವನ್ನು ಅದರಲ್ಲಿ ಹಾಕಿಬಿಡುತ್ತಿದ್ದರು ಯಙ್ಞಗಳಲ್ಲಿ ಜೀವಂತ ಕುದುರೆ, ಹಸು, ಟಗರು, ಪ್ರಾಣಿಗಳನ್ನು ಹಾಕಬೇಕೆ ಹೊರತು ಸತ್ತಪ್ರಾಣಿಗಳ ಹಾಕಿದೆ ಯಙ್ಞನಾಶವೇ ಜೋತೆಗೆ ಋಷಿಗಳನ್ನು ಹಿಡಿದು ಬಡಿದು ಹಿಂಸೆ ಕೊಡುತ್ತಿದ್ದರು. ಇದು ದ್ರಾವಿಡರಿಗೆ ಮೊದಲಿಂದಲೂ ವಿರೋಧವಿತ್ತು. ಈ ವಿರೋಧದಿಂದ ಬೇಸತ್ತಾ ಋಷಿ ಮುನಿಗಳೆಲ್ಲಾ ಪ್ರಯತ್ನಗಳು ವ್ಯೆರ್ಥವಾಗಿ ಯಾರ‍್ಯಾರಲ್ಲೂ ಮೊರೆಯಿಟ್ಟರು ಅದು ಆ ಬಲಶಾಲಿಯಾದ ರಾವಣನ ಮುಂದೆ ನಿಶ್ಫಲವಾಯಿತು.
             ಹೀಗೆ ಬಹು ಕಾಲಗಳು ಹುರುಳುತಲಿರುವಲ್ಲಿ ದೇವರಲ್ಲಿ ಮೊರೆಯಿಟ್ಟಿರಲ್ಲಲ್ಲಿ ವಿಶ್ವಾಮಿತ್ರನೆಂಬ ಋಷಿ ರಾಮನೆಂಬ ರಾಜನು ವನವಾಸಕ್ಕೆ ಬಂದಿರುವಲ್ಲಿ ಅವನಲ್ಲಿ ಇದನ್ನು ಪ್ರಸ್ಥಾಪಿಸಿ ರಾವಣನನ್ನು ಕೊಲ್ಲಬೇಕೆಂದು ದಕ್ಷಿಣಕ್ಕೆ ಕರೆದು ಬರುತ್ತಾನೆ. ವಿಶ್ವಮಿತ್ರನೂ ರಾಮಮತ್ತು ಲಕ್ಷ್ಮಣರಿಗೆ ಬಲ-ಅತಿಬಲ ಎಂಬ ಮಂತ್ರವನ್ನೂ ತಂತ್ರವನ್ನೂ ಉಪದೇಶಿಸುತ್ತಾನೆ. ಆದರೆ, ರಾವಣನನ್ನು ಕೊಲ್ಲುವುದು ಸುಲಭದ ಮಾತಲ್ಲ. 
             ರಾವಣನು ಚಕ್ರವರ್ತಿಯಾಗಿ ಮೆರೆಯುತಿರುವಲ್ಲಿ ತನ್ನ ತಂಗಿಯ ಗಂಡ ತನ್ನ ತಂಗಿ ಶೂರ್ಪನಕಗೆ ಹಿಂಸೆ ಕೊಡುತ್ತಿರುತ್ತಾನೆ. ಇದನ್ನು ಗುಢಾಚಾರಿಗಳಿಂದ ಅರಿತ ರಾವಣ ತನ್ನ ಭಾವನನ್ನು ಕರೆದು ವಿಚಾರಿಸುತ್ತಾನೆ, ಆತನೋ, ಚಕ್ರೇಶ್ವರನಲ್ಲಿ ಕೆಟ್ಟದಾಗಿ ವರ್ತಿಸುತ್ತಾನೆ. ಕೋಪಗೊಂಡ ರಾವಣ ತನ್ನ ಎಡಕೈಯಿಂದ ಬೀಸಲು ಅದು ವಜ್ರಾಯುಧದಂತೆ ಪೆಟ್ಟುಬಿದ್ದು ಸ್ಥಳದಲ್ಲೇ ಮೃತ್ಯು ಹೊಂದುತ್ತಾನೆ. ಇದರಿಂದ ರಾವಣ ಬಹುಕಾಲ ದುಃಖದಲ್ಲಿ ಮುಳುಗಿರಲು ತಂಗಿಗೆ ಮುಖತೋರದಲೇ ಇರುವಲ್ಲಿ ತಂಗಿಯು ಅಣ್ಣನಲ್ಲಿ ಮೊರೆಯಿಡುತ್ತಾಳೆ. ಅಣ್ಣ, ನಿನ್ನದೇನು ತಪ್ಪಿಲ್ಲ ಬಾ ಹೊರಗೆ ಎಂದು ಕರೆದಾಗ ಒಲ್ಲದಾ ಮನಸ್ಸಿಂದ ಆಸ್ಥಾನಕ್ಕೆ ಬರುತ್ತಾನೆ. ಸಿಂಹಾಸನರೊಡನಾಗಿ ಆಸ್ಥಾನದ ಸಭಿಕರ ಮುಂದೆ ತನ್ನ ತಪ್ಪಿನ ಪ್ರಾಯಚ್ಚಿತ್ತವಾಗಿ ಮತ್ತು ಆಕೆಗೆ ಜೀವನಕೆಂದು ತನ್ನ ದಕ್ಷಿಣ ಭಾರತದ ಅಂಗ ವಿಂಧ್ಯಪರ್ವತದವರಿವಿಗೆ ಆಕೆಗೆ ರಾಜ್ಯಭಾರ ನಡೆಸಲು ಅಧಿಕಾರ ಕೊಡುತ್ತಾನೆ. 
            ಹೀಗಿರುವಲ್ಲಿ ರಾಮನು ಅಲ್ಲಿ ಆಶ್ರಮದ ಕುಟೀರವಕಟ್ಟಿರುವುದು ಗುಢಾಚಾರರಿಂದ ಅರಿತ ಶೂರ್ಪನಕ ಬರುತ್ತಾಳೆ. ಅವಳೋ ಯುವತಿ ಗಂಡನಿಲ್ಲದೇ ಒಬ್ಬಳೇ ಇರುವುದು ಆ ವೇದನೆಯು ಅರಿತವರಿಗೆ ಮಾತ್ರ ಗೊತ್ತು. ಮುಂದೆ ರಾಮನನ್ನು ಕೇಳುತ್ತಾಳೆ. ನನ್ನನು ಮದುವೆಯಾಗಿಯೆಂದು ಆತ ಒಲ್ಲೆಯೆಂದು, ನೀನು ಒಬ್ಬಂಟಿಗನಾದ ನನ್ನ ತಮ್ಮನನ್ನು ಕೇಳು ಎನ್ನುತ್ತಾನೆ. ಆತನೋ ನಾನು ದಾಸ್ಸ್ಯರನ್ನು ಮದುವೆಯಾಗಲಾರೆ ಎನ್ನುತ್ತಾನೆ. ಮತ್ತೆ ರಾಮನಲ್ಲಿ ಕೇಳಲಾಗಿ ರಾಮನು ಅವಳ ಬೆನ್ನಹಿಂದೆ ಬರೆದು ಇವಳ ಮೂಗು ಮತ್ತು ಕಿವಿಯನ್ನು ಕತ್ತರಿಸಿ ಬಿಡು ಎಂದು ಬರೆದಿರುತ್ತಾನೆ. ಇದು ಸ್ವಲ್ಪವಾದರೂ ನ್ಯಾಯವೇ ? ? ?.
     ದಶರಥನ ಮಗಳೂ ರಾಮನ ಸ್ವಂತ ತಂಗಿ ಶಾಂತದೇವಿಗೆ ಹೀಗಾಗಿದ್ದರೆ ರಾಮನೂ ಬಿಡುತ್ತಿದ್ದನೇ, ಆತನ ಪತಿ ಋಷ್ಯಶೃಂಗನೂ ಬಿಡುತ್ತಿದ್ದನೇ, ನೀವೇ ಯೋಚಿಸಿ ನಿಮ್ಮ ಮನಸ್ಸು ಒಪ್ಪುವುದೇ ನಿಮ್ಮ ಅಕ್ಕ ತಂಗಿಯರಿಗಾದರೇ ನೀವು ಬಿಡುವಿರೇ ಚಿಂತನೆಗೆಯಿಡುಮಾಡಿ ನೋಡಿ.
             ಆಕೆಯು ತನ್ನ ಅಣ್ಣನಲ್ಲಿ ತನಗಾದ ಅವಮಾನವನ್ನು ಸತ್ಯವನ್ನು ಮರೆ ಮಾಚದೇ ಹೇಳುತ್ತಾಳೆ. ಇದರಿತ ರಾವಣ ತನ್ನ ಸೈನ್ಯದೊಂದಿಗೆ ಹೊರಡುತ್ತಾನೆ. ಆಗಶೂರ್ಪನಕ ತನ್ನಾವಮಾನಕ್ಕೆ ತಕ್ಕಪ್ರಾಸ್ಥವಾಗಬೇಕೆಂದು ಒಂದು ಸಲಹೆ ನೀಡುತ್ತಾಳೆ. ಅದೇನೆಂದರೆ, ಸೀತೆಯನ್ನು ಅಪಹರಿಸಿ ತಂದರೆ ಆ ಹೆಂಡತಿಯಿಲ್ಲದ ವೇದನೆ ಆತನಿಗೆ ಅರಿವಾಗುತ್ತದೆ. ಎನ್ನುತ್ತಾಳೆ ಅದು ಸರಿ ಎಂದು ಸೇಡು ತೀರಿದಂತಾಗುವುದೆಂದು ನಂಬೀ......,ಆ ಸೀತೆಯನ್ನು ಅಪಹರಿಸುವ ಕೆಲಸಕ್ಕೆ ಇಳಿಯುತ್ತಾನೆ. ರಾವಣನ ಹೆಂಡತಿ ಮಂದೋದರಿ ಬೇಡವೆಂದು ತಡೆಯುತ್ತಾಳೆ. ಅದನ್ನು ಒಪ್ಪದೇ ಅಪಹರಿಸುವ ಕೆಲಸಕ್ಕೆ ಇಳಿಯುತ್ತಾನೆ. 
               ಅಪಹರಿಸಿ ತಂದ ಸೀತೆಯನ್ನು ಮುಟ್ಟದೇ ಬೇರೆಯಾಗಿ ಅಶ್ರಮದಲ್ಲಿ ಇಟ್ಟಿರುತ್ತಾನೆ. ಹೀಗೆ ಕಾಲಗಳು ಉರುಳುತ್ತಿರುವಲ್ಲಿ ರಾಮನು ತನ್ನ ರಾಣಿ ಸೀತೆಯನ್ನು ಹುಡುಕುತ್ತಾ ಅಗಸ್ಯ ಮುನಿ ಅಶ್ರಮಕ್ಕೆ ಬರುತ್ತಾನೆ. ಅಲ್ಲಿನ ತಮಿಳಿಗೆ ಮೂಲ ಪುರುಷನಾದ ಅಗಸ್ಯ ಮಹರ್ಷಿಯಿಂದ ಕೆಲವು ಅತಿಶಯವಾದ ಆಯುಧಗಳನ್ನು ಮಾಹಿತಿಯನ್ನು ಪಡೆದು ತೆಲಗು ಬಾಷೆಯವರಾದ ಜಾಂಭವರ ಸಹಾಯವನ್ನು ಕನ್ನಡಿಗರಾದ ವಾನರ ಆಂಜನೇಯ, ಸುಗ್ರೀವ, ಅಂಗಧ, ನಲ ಮತ್ತು ನೀಲರೆಂಬ ವಿಶ್ವಕರ್ಮರನ್ನು ಸೈನ್ಯವನ್ನು ಒಟ್ಟುಗೂಡಿಸಿ (  ಕನ್ನಡಿಗರನ್ನು ಕಪಿ ಕೋತಿಯೆಂದು ತೋರಿಸಿರುತ್ತಾರೆ. ತೆಲಗರನ್ನುಕರಡಿಯಂತೆ ತೋರಿತ್ತಾರೆ. ತಮಿಳರನ್ನು ರಕ್ಕಸರೆಂದು ತೋರಿರುವುದು. ಇವರು ಮಾತ್ರ ಮಾನವರಾಗಿದ್ದರು ಎಂಬುದು ಏಷ್ಟು ಸರಿ ನೀವೇ ಯೋಚಿಸಿ ! ) . ರಾವಣನ ಸ್ವಂತ ತಮ್ಮನನ್ನೇ ವಿಭೀಷಣ ತಮ್ಮ ಕಡೆಗೆ ಬರುವಂತೆಯು ಲಂಕಾದ್ವೀಪವನ್ನೂ ( ಸಿಂಹಳ ) ರಾಜ್ಯವನ್ನೇ ವಿಭೀಷಣನಿನಗೆ ಕೊಟ್ಟು ಪಟ್ಟಭಿಷೇಕ ಮಾಡುತ್ತೇವೆಂದು ಆಸ್ವಾಶನೆಕೊಟ್ಟು, ಆಶೆ ಅಮಿಷಗಳನ್ನು ಒಡ್ಡಿ ರಾವಣನ ರಾಜ್ಯದಲ್ಲಿರುವ ರಹಸ್ಯವಾದ ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾರೆ.
              ರಾವಣನ ಮೇಲೆ ಯುದ್ಧವನ್ನು ಸಾರಿ ಯುದ್ಧದ ದಿನಾಂಕವನ್ನು ಗೊತ್ತುಪಡಿಸುತ್ತಾರೆ. ಸೈನ್ಯವನ್ನು ಸೇರಿಸಿ ಯುದ್ಧ ಮಾಡಲು ಸಿದ್ಧತೆ ನಡೆಯುತ್ತಿರುವಲ್ಲಿ ಯುದ್ಧ ಕಂಕಣ ಶಾಸ್ತ್ರೋತ್ತರವಾಗಿ ಕಟ್ಟಲು ಈ ಕೈಂಕಾರ್ಯಯಕ್ಕೆ ಪುರೋಹಿತರನ್ನು ಹುಡುಕಲು ಸಜ್ಜಾಗುತ್ತಾರೆ ಹುಡುಕುತ್ತಾರೆ. ಆದರೆ, ದಕ್ಷಿಣದಲ್ಲಿ ಯಾರು ಪುರೋಹಿತರಿಲ್ಲದ ಕಾರಣ, ವಿಭೀಷಣನೂ ಒಂದು ಉಪಾಯವನ್ನು ಹೇಳುತ್ತಾನೆ. 
             ಪ್ರಭು ರಾಮ, ನನ್ನದೊಂದು ವಿನಂತಿ ಸ್ವೀಕರಿಸುವುದಾದರೆ ಸ್ವೀಕರಿಸಿ, ಇಲ್ಲವೆಂದರೆ ಬಿಟ್ಟು ಬಿಡಿ ನನ್ನ ಅಭ್ಯಂತರವೇನು ಇಲ್ಲ. ಈ ಸ್ಥಳದಲ್ಲಿ ಕೈಂಕಾರ್ಯವನ್ನು ಮಾಡಬಲ್ಲವರು ಯಾರು ಇಲ್ಲವೆಂದು ನಾವೇಲ್ಲರೂ ಬಲ್ಲೆವು. ಆದರೇ, ನಮ್ಮ ಅಣ್ಣ ರಾವಣನೋ ಒಳ್ಳೆ ಬ್ರಾಹ್ಮಣ್ಯವರಿತ ಪುರೋಹಿತ ವೇಧಾಂತಿ ಮೇಧಾವಿ ಙ್ಞಾನಿ ವಿಚಾರವಂತ ಸತ್ಯಸಂಧ ಯಾವ ಲೋಪ ದೋಷಗಳಿಲ್ಲದೇ ಮಾಡತಕ್ಕವನು. ನೀವು ಅವನನ್ನು ಆಹ್ವಾನಿಸಿದರೇ. ಆತ ಖಂಡಿತವಾಗಿ ಈ ಕಾರ್ಯವನ್ನು ಸುಗಮವಾಗಿ ಮಾಡಿಕೊಡಬಲ್ಲವ ಎನ್ನುತ್ತಾನೆ.
            ಸಭಿಕರಿಗೆಲ್ಲಾ ಎಲ್ಲರಿಗೂ ಆಶ್ಚರ್ಯ ಏನಿದೂ ರಾವಣನೇ, ಎಲ್ಲರೂ ನಿಟ್ಟೂಸಿರು ಬಿಡುತ್ತಾರೆ. ಏನಿದು ಹುಚ್ಚುತನ ಮಾತಿದು ನಮ್ಮ ವಿರೋಧಿಯ ಕೈಯಿಂದಲೀ ಯುದ್ಧ ಕಂಕಣವೇ ? . ಲಕ್ಷ್ಮಣನಿಗೆ ಅತ್ಯಂತ ಮಗದಾಶ್ಚರ್ಯ ! ಹೆದರಿಕೆಯಿಂದ ಅಂದು ಬೆಚ್ಚಿ ಬೀಳುತ್ತಾರೆ.
            ರಾಮನು ಮುಂಚೆಯೇ ಗುರು ವಿಶ್ವಾಮಿತ್ರರು, ಗುರು ಅಗಸ್ಯರು, ಆಧಿ ಜಾಂಬವರಿಂದ ರಾವಣನ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾನೆ ಆತನಿಗೆ ಗೊತ್ತಿರುತ್ತದೆ. ರಾವಣ ಸತ್ಯವ್ರತ ನೀತಿವಂತ ಆತ್ಮಙ್ಞಾನಿ ಅತನಿಂದ ಈ ವಿಷಯದಲ್ಲಿ ಏನೂ ತೊಂದರೆಯಾಗ ಲಾರದೆಂದು ಮೀನ ಮೇಷ ಏಣಿಸದೆ ಒಪ್ಪಿಗೆ ಕೊಡುತ್ತಾನೆ. 

ರಾವಣನೂ ಕರೆಯ ಮೇರೆಗೆ ಆತ್ಮಸಂತೋಷದಿಂದ ಬರುತ್ತಾನೆ. ಆತನ ಕರ್ತವ್ಯದಲ್ಲಿ ಯಾವ ಲೋಪವು ಬರದಂತೆ ನಿರ್ವಿಙ್ಞದಲ್ಲಿ ಕಂಕಣ ದಾರವನ್ನು ಕೈಗೆ ಕಟ್ಟುತ್ತಾನೆ ಕಟ್ಟುವಾಗ ರಾಮನಿಗೆ ಹೇಳುತ್ತಾನೆ. ಈ ನಿಮಿಷದಲ್ಲಿ ಕಂಕಣ ಕಟ್ಟಿಕೊಂಡರೇ, ಗೆಲವು ನಿನ್ನದೇ ಸಂದೇಹ ಬೇಡವೆಂದು ಹೇಳಿ, ಈ ಕಾಲಮೀರಿದರೆ ರಾವಣನಿಗೆ ಗೆಲುವು ಸಿಗುತ್ತದೆ. ಬೇಗ ಕಂಕಣ ಕಟ್ಟಿಕೂ ಎಂದು ಆ ಕ್ಷಣದಲ್ಲೇ ಕಂಕಣ ಕಟ್ಟುತ್ತಾನೆ.

             ರಾಮನೂ ಸಂತಸದಿಂದ ಪುರೋಹಿತರಿಗೆ ಕೊಡಬೇಕಾದ ಸನ್ಮಾನವನ್ನು ಕೊಟ್ಟು ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡು ರಾವಣನಿಗೆ ಬೀಳ್ಕೊಟ್ಟು ಕಳಿಸುತ್ತಾನೆ. ರಾಮನಾಗಲೀ, ರಾವಣನಾಗಲೀ ತಮ್ಮ ಸ್ವಂತ ಜೀವನದ ಸುಖ ದುಃಖದ ವಿಚಾರದಲ್ಲಿ ಏನೂ ಮಾತನಾಡುವುದಿಲ್ಲ.
            ದ್ರಾವಿಡ ರಾಜನನ್ನು ದ್ರಾವಿಡರನ್ನು ಆರ್ಯರು ತಮ್ಮ ಚಾಣಕ್ಯತನದಲ್ಲಿ ಸುಲಭದಲ್ಲಿ ಗೆಲ್ಲುತ್ತಾರೆ. ಆರ್ಯರ ಸಂಚು ಗೆಲುವಿನಲಿ ಮುಗಿಯುತ್ತದೆ. 
              
               ಮುಂದೆ ದ್ರಾವಿಡ ರಾಜನ ಕುಮಾರ ಬೋಧಿಧರ್ಮನಿಂದ ಚೀನಾಗೆ ಕುಂಫೂ, ಕರಾಟೆ ಮರ್ಮದ ಆ ಯುದ್ಧಕಲೆ ಹೋಯಿತೆನ್ನುವುದು ಸತ್ಯ ಇದು ಬೇರೆಮಾತು.

ಆತ್ಮೀಯರೇ,

                       ಇದು ಅಪ್ಪಟ ದ್ರಾವಿಡ-ಆರ್ಯರ ವೈಷ್ಯಂಯ ಯುದ್ಧವೇ ಹೊರತು ಯಾವ ದೇವರುಗಳ ಕರಡಿ ಕಪಿ ಕೋತಿಗಳಿಂದ ರಕ್ಕಸರ ಯುದ್ಧವಲ್ಲವೆಂದು ದೈರ್ಯವಾಗಿ ಹೇಳಬಹುದು.
                        ಇಂದು ನಾವುಗಳೆಲ್ಲರೂ ಎಲ್ಲಾ............... ಏಲ್ಲಾ ವೈಷಮ್ಯಗಳ ಬಿಟ್ಟು ಸತ್ಯ ನ್ಯಾಯ ಧರ್ಮಸಮ್ಮತವಾದ ಮಾನವೀಯತೆ ಬೆಳೆಸಲು ಮನುಷ್ಯರಾಗಲು ಸತ್ಪ್ರೆಜೆಯಾಗಿರಲು ಹೀಗೆ ಈ ದೇಶವನ್ನು ಶ್ರೀಮಂತಗೊಳಿಸುವಿರೆಂದು ನಂಬಿರುವ ನಿಮ್ಮ ಸ್ನೇಹಿತ.