ಚರ್ಚೆಪುಟ:ಈರಣ್ಣ ಮೂಲೀಮನಿ

ವಿಕಿಪೀಡಿಯ ಇಂದ
Jump to navigation Jump to search

೧."ಹೃದಯ ಹಾಡಿದೆ ನವ ಋತುಗಾನ "

---ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ)

ಹೃದಯ ಹಾಡಿದೆ ನವ ಋತುಗಾನ

ತಾಯಿ ಭವಾನಿಯ "ವಿಜಯ ಶ್ರೀ"ಗೆ

ಭಾವೋಲ್ಲಾಸ ಅರಳಿದೆ ಹೂಮನ

ಮೊಳಗಿದೆ ಕನ್ನಡ ದುಂದುಭಿಯ

ರಾಜ್ಯೋತ್ಸವ ,ತಾಯೋತ್ಸವ

ನಮ್ಮ ಕರ್ನಾಟಕ ರಾಜ್ಯೋತ್ಸವ //೧//

ಚಿನ್ನದ ಮಣ್ಣಲಿ ಚಂದನ ಹಾಸಿಗೆ

ಕನ್ನಡ ಕಬ್ಬಿಗ ಕಾವ್ಯದ ಕೃಷಿಗೆ

ಬಸವ ಪುರಂದರ ರಸ ಋಷಿ ಸ್ಪರ್ಶ

ಜಗದಗಲಕೂ ಹರಡಿದೆ ಆದರ್ಶ //೨//

ಮಲೆನಾಡಿನ ವನ ಹಸಿರಿನ ಐಸಿರಿ

ಬೆಡಗಿನ ಕೊಡಗಿನ ಕಾವೇರಿ

ನಯನ ಮನೋಹರ ಮೋಹಕ ಲಹರಿ

ಹೃನ್ಮನ ತಣಿಸುವ ಜೋಗದ ಧಾರೆಗೆ//೩//

ಕನ್ನಡ ಮಾತೆಯ ತನುಸಂಜಾತೆ

ಕ್ರಾಂತಿ ಕಹಳೆಯನೂದಿದ ವನಿತೆ

ಬೆಳವಡಿ,ಕಿತ್ತೂರಿನ ಗಾಥೆ

ಶೌರ್ಯದ ಮಡಿಲಿನ ಪುಣ್ಯ ಪುನೀತೆಗೆ//೪//

ಚೆಲುವಿನ ದಸರೆಯ ವೈಭವ ಸೊಬಗು

ನಾಡಿನ ಕನ್ನಡ ದೀವಿಗೆ ಬೆಳಗು

ಪ್ರಜ್ವಲಿಸಲಿ ಕನ್ನಡ ದೇವಳದಿ

ನಿತ್ಯ ಚೇತನದ ಕನ್ನಡ ಜ್ಯೋತಿಗೆ //೫//

೧೯೮೮ ರಲ್ಲಿ ಬರೆದ ಗೀತೆ ( ಎನ್.ಟಿ.ಟಿ.ಎಫ್ ನಲ್ಲಿ ಇರುವಾಗ ಬರೆದ ಗೀತೆ)

 • ಮನದಲುದಿಸಿದೆ ಸ್ಪಂದನ..*

ಮನದಲುದಿಸಿದೆ ಸ್ಪಂದನ ಪ್ರೇಮ ಪ್ರಮದೆಯ ಕಲ್ಪನ ಮಧುಚುಂಬನ,ರಸದೌತಣ,ಸಿಹಿಜೀವನ//ಪ//

ಮೊಗದಿ ನೋಟದ ಕಾಂತಿ ಕಿರಣ ಕದಡಿತೇ ಮನತಾಡನ ಮೋಹಸರಪಳಿ ಬಿಗಿಯುತಿರಲು ಬಂಧಿಯಾಯಿತೇ ಈ ಮನ//೧//

ಪಚ್ಚೆಹಸಿರಿನ ಸಸ್ಯಕಾನನ ಕರೆಸಿತೇ ಬೃಂದಾವನ ಭಾವಗಂಗೆಯ ಅಲೆಗಳುಕ್ಕಿ ಪ್ರೇಮಗಂಗೆ ಸಮರ್ಪಣ//೨//

ಯಾವ ಜನ್ಮದ ಬಂಧವಿಹುದೋ ಮಿಳಿತವಾದವೇ ತನುಮನ ಸ್ವರ್ಗವೇ ಧರೆಗಿಳಿಯುತಿಹುದೋ ಭವ್ಯ ಬಾಳಿನ ಬಂಧನ//೩//

 • ಈರಣ್ಣ ಮೂಲಿಮನಿ*

"ಕನ್ನಡ ಕುಟೀರ"-ದುಬೈ----ಈರಣ್ಣ ಮೂಲೀಮನಿ.[ಬದಲಾಯಿಸಿ]

http://www.youtube.com/watch?v=8Aobt5BvNU4&list=UUIv7O6mICz4D0bUaJx05clw

"ಬೆಳಗುತ ಬನ್ನಿರೆ ಕ‌ನ್ನಡಜ್ಯೋತಿಯ.."

ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ ಕನ್ನಡಾಂಬೆಗೆ,ನಾಡದೇವಿಗೆ... ಬೆಳಗುತ ಬನ್ನಿರೆ ಕನ್ನಡದಾರತಿ ಕನ್ನಡನಾಡಿನ ರಾಜ್ಯೋತ್ಸವಕೆ/ ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ//ಪ//

ನಾವು ಮೆಟ್ಟಿದ ನೆಲ,ಕನ್ನಡ ನುಡಿ ಬಲ ಪುಣ್ಯ ಪವಿತ್ರಿತ ಕಾವೇರಿಯ ಜಲ ಕನ್ನಡ ಕಸ್ತೂರಿ ಪರಿಮಳಕೆ ಪಸರಿಪ ಕನ್ನಡ ಕವಿಕುಲ ಜಗಕೆ//೧// ಕನ್ನಡಾಂಬೆಗೆ,ನಾಡದೇವಿಗೆ ಬೆಳಗುತ ಬನ್ನಿರೆ ಕನ್ನಡದಾರತಿ, ಕನ್ನಡಿಗರ ಈ ಮಿಲನೋತ್ಸವಕೆ//

ಕನ್ನಡ ನಾಡಿಗೆ ಕನ್ನಡ ನುಡಿಗೆ ಶೌರ್ಯವ ಮೆರೆದು ಕಹಳೆಯನೂದಿದ ಕಿತ್ತೂರವನಿತೆಗೆ ದುರ್ಗದ ಧೀರೆಗೆ ಈ ಜನ್ಮದಾತೆಗೆ ನಮೋ ನಮೋ//೨// ಕನ್ನಡಾಂಬೆಗೆ ನಾಡದೇವಿಗೆ ಬೆಳಗುತ ಬನ್ನಿರೆ ಕನ್ನಡದಾರತಿ,

ಕನ್ನಡ ಸಂಸ್ಕೃತಿ ಬೆಳಗುವ ದೀವಿಗೆ//

ಕನ್ನಡನುಡಿ ಭಾವೈಕ್ಯತೆ ಮೆರೆಯುವ ಮಿಲನ ಮಹೋತ್ಸವ ಈ ವೈಭವವು ಚಿಮ್ಮಲಿ ಹೊಮ್ಮಲಿ ಭಾವೋಲ್ಲಾಸದಿ ನವಕರ್ನಾಟಕ ವಿಜಯಿಭವ, ನವಕರ್ನಾಟಕ ವಿಜಯಿಭವ///೩// ವಿಜಯಿಭವ......,ವಿಜಯಿಭವ...,ವಿಜಯಿಭವ.....!

              -ಈರಣ್ಣ ಮೂಲೀಮನಿ.

ಯ ಜಯ ಜಯ ಕನ್ನಡದೇವಿಯೇ//ಪ//

ಜಯ ಜಯ ಜಯ ಕನ್ನಡದೇವಿಯೇ ನಿನಗಿದೋ ಕನ್ನಡವುಲಿವ ಪುಷ್ಪ ಸಂತಸ ಹರಿಸುತ ಹಾಡುತ ವೈಭವ ಕಂಗಳು ಸುರಿಸಿದೆ ಆನಂದ ಭಾಷ್ಪ//೧//

ಶಿಲೆಯರಳಿಸಿತೋ ಬಾಲೆಯ ನರ್ತನ ಅಮರತ್ವದ ಕಲೆ ವಿಶ್ವದಿ ಮಾನ್ಯ ಪಾವನವೀ ನೆಲ ಸಿರಿ ಸಂಪದ ಜಲ ಕೃಷ್ಣೆ ತುಂಗೆ ಕಾವೇರಿಗೆ ಜನ್ಯ//೨//

ಕನ್ನಡ ದೀವಿಗೆ ಬೆಳಗಿದೆ ಭುವಿಗೆ ಕೋಗಿಲೆ ಹಾಡಿದೆ ಕವಿನುಡಿ ಧಾಟಿಗೆ ರಸ ಋಷಿ ನೀಡಿದ ಕಾವ್ಯದ ಕೊಡುಗೆ ಅಂದ ಚಂದ ಕನ್ನಡನುಡಿ ಸೃಷ್ಠಸೃಷ್ಠಿಗೆ//೩//

ಗುಡಿ ಗೋಪುರಗಳ ಸುಂದರ ಮಂದಿರ ಪುನರುತ್ಥಾನದ ಪುಣ್ಯದ ಆಗರ ಹಸಿರಿನ ಹೂಬನ ಮಲೆನಾಡಿನ ವನ ಸಾಗರದಲೆಗಳ ತೀರದ ತಾಣ//೪//

ಕನ್ನಡ ಕಸ್ತೂರಿಯ ಪರಿಮಳ ಹರಡಿದೆ ಎಲ್ಲೆಡೆ ಕನ್ನಡ ಸುಧೆಯ ಜಯ ಜಯ ಕನ್ನಡತಾಯ ಚರಣಕೆ ನಿನಗಿದೋ ಅರ್ಪಿತ ಕನ್ನಡ ಪುಷ್ಪ//೫//

ಕವಿ:ಈರಣ್ಣ ಮೂಲೀಮನಿ.

"ಜಯ ಜಯ ಕನ್ನಡದೇವಿಯೆ.."(ನಾಡಗೀತೆ)[ಬದಲಾಯಿಸಿ]

ಜಯ ಜಯ ಕನ್ನಡದೇವಿಯೆ..

ಜಯ ಜಯ ಜಯ ಜಯ ಕನ್ನಡ ದೇವಿಯೆ ನಿನಗಿದೋ ಕನ್ನಡ ಉಲಿವ ಪುಷ್ಪ/ ಸಂತಸ ಹರಿಸುತ ,ಹಾಡುತ ವೈಭವ ಕಂಗಳು ಸುರಿಸಿವೆ ಆನಂದ ಭಾಷ್ಪ.//ಪ//

ಶಿಲೆಯರಳಿಸಿತೋ ಬಾಲೆಯ ನರ್ತನ ಅಮರತ್ವದ ಕಲೆ ವಿಶ್ವದಿ ಮಾನ್ಯ ಪಾವನವೀ ನೆಲ ಸಿರಿ ಸಂಪದ ಜಲ ಕೃಷ್ಣೆ,ತುಂಗೆ ,ಕಾವೇರಿ ಗೆ ಜನ್ಯ//೧//

ಕನ್ನಡದೀವಿಗೆ ಬೆಳಗಿದೆ ಭುವಿಗೆ ಕೋಗಿಲೆ ಹಾಡಿದೆ ಕವಿನುಡಿ ಧಾಟಿಗೆ ರಸ ಋಷಿ ನೀಡಿದ ಕಾವ್ಯದ ಕೊಡುಗೆ ಅಂದ-ಚೆಂದದ ಕನ್ನಡನುಡಿ ಸೃಷ್ಠಿಗೆ//೨//

ಗುಡಿಗೋಪುರಗಳ ಸುಂದರಮಂದಿರ ಪುನರುತ್ಥಾನದ ಪುಣ್ಯದ ಆಗರ ಹಸಿರಿನ ಹೂಬನ ಮಲೆನಾಡಿನ ವನ ಸಾಗರದಲೆಗಳ ತೀರದ ತಾಣ//೩//

ಕನ್ನಡ ಕಸ್ತೂರಿಯ ಪರಿಮಳ ಹರಡಿದೆ ಎಲ್ಲೆಡೆ ಕನ್ನಡ ಸುಧೆಯ ಜಯ ಜಯ ಕನ್ನಡತಾಯ ಚರಣಕೆ ನಿನಗಿದೊ ಅರ್ಪಿತ ಕನ್ನಡ ಪುಷ್ಪ//೪//

   ***ಈರಣ್ಣ ಮೂಲೀಮನಿ, ಈರಣ್ಣ ಮೂಲೀಮನಿ (ಚರ್ಚೆ) ೧೦:೫೫, ೨೪ ಸೆಪ್ಟೆಂಬರ್ ೨೦೧೬ (UTC)

"ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ.."[ಬದಲಾಯಿಸಿ]

ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ.."

ಬೆಳಗುತ ಬನ್ನಿರೆ ಕ‌ನ್ನಡಜ್ಯೋತಿಯ ಕನ್ನಡಾಂಬೆಗೆ,ನಾಡದೇವಿಗೆ... ಬೆಳಗುತ ಬನ್ನಿರೆ ಕನ್ನಡದಾರತಿ ಕನ್ನಡನಾಡಿನ ರಾಜ್ಯೋತ್ಸವಕೆ/ ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ//ಪ//

ನಾವು ಮೆಟ್ಟಿದ ನೆಲ,ಕನ್ನಡ ನುಡಿ ಬಲ ಪುಣ್ಯ ಪವಿತ್ರಿತ ಕಾವೇರಿಯ ಜಲ ಕನ್ನಡ ಕಸ್ತೂರಿ ಪರಿಮಳಕೆ ಪಸರಿಪ ಕನ್ನಡ ಕವಿಕುಲ ಜಗಕೆ//೧// ಕನ್ನಡಾಂಬೆಗೆ,ನಾಡದೇವಿಗೆ ಬೆಳಗುತ ಬನ್ನಿರೆ ಕನ್ನಡದಾರತಿ, ಕನ್ನಡಿಗರ ಈ ಮಿಲನೋತ್ಸವಕೆ//

ಕನ್ನಡ ನಾಡಿಗೆ ಕನ್ನಡ ನುಡಿಗೆ ಶೌರ್ಯವ ಮೆರೆದು ಕಹಳೆಯನೂದಿದ ಕಿತ್ತೂರವನಿತೆಗೆ ದುರ್ಗದ ಧೀರೆಗೆ ಈ ಜನ್ಮದಾತೆಗೆ ನಮೋ ನಮೋ//೨// ಕನ್ನಡಾಂಬೆಗೆ ನಾಡದೇವಿಗೆ ಬೆಳಗುತ ಬನ್ನಿರೆ ಕನ್ನಡದಾರತಿ,

ಕನ್ನಡ ಸಂಸ್ಕೃತಿ ಬೆಳಗುವ ದೀವಿಗೆ//

ಕನ್ನಡನುಡಿ ಭಾವೈಕ್ಯತೆ ಮೆರೆಯುವ ಮಿಲನ ಮಹೋತ್ಸವ ಈ ವೈಭವವು ಚಿಮ್ಮಲಿ ಹೊಮ್ಮಲಿ ಭಾವೋಲ್ಲಾಸದಿ ನವಕರ್ನಾಟಕ ವಿಜಯಿಭವ, ನವಕರ್ನಾಟಕ ವಿಜಯಿಭವ///೩// ವಿಜಯಿಭವ......,ವಿಜಯಿಭವ...,ವಿಜಯಿಭವ.....!

               -ಈರಣ್ಣ ಮೂಲೀಮನಿ. ಈರಣ್ಣ ಮೂಲೀಮನಿ (ಚರ್ಚೆ) ೧೦:೫೮, ೨೪ ಸೆಪ್ಟೆಂಬರ್ ೨೦೧೬ (UTC)