ಚರ್ಚೆಪುಟ:ಅಧ್ಯಾತ್ಮಪ್ರಕಾಶ ಕಾರ್ಯಾಲಯ, ಹೊಳೆನರಸೀಪುರ

ವಿಕಿಪೀಡಿಯ ಇಂದ
Jump to navigation Jump to search

ಈ ಪುಟವನ್ನು ಕಾಪಿರೈಟು ಹೊಂದಿರುವ ಪುಟಗಳಿಂದ ನಕಲು ಪಡಿಸಲಾಗಿದೆ. ಇದನ್ನು ಈ ಟೂಲ್‌ನಿಂದ ತಿಳಿದುಕೊಳ್ಳಬಹುದು. --ಗೋಪಾಲಕೃಷ್ಣ (ಚರ್ಚೆ) ೧೭:೫೭, ೧೯ ಜುಲೈ ೨೦೧೮ (UTC)

  • ಈ ಬಗೆಯ ಕಾಪಿರೈಟ್ ಇರುವ ಪುಟಗಳು ನೂರಕ್ಕೆ ೭೫ ಭಾಗ ಇಂಗ್ಲಿಸಹ ಮತ್ತು ಇತರೆ ಭಾಷೆಗಳಲ್ಲೂ ಇರುತ್ತವೆ. ಉದಾಹರಣೆಗೆ ಇಸ್ರೋ ಹಾರಿಸಿದ ಎಲ್ಲಾ ಅಗ್ನಿ ಮತ್ತು ಪೊಲಅರ ಉಪಗ್ರಹ ಉಡಾವಣೆಯ ಜಿಸ್‍ಎಲ್‍ವಿ ಇತ್ತ್ಯಧಿ ಎಲ್ಲಾ ಮಾಹಿತಿಗಳಿಗೂ ಇಸ್ರೊ ತನ್ನ ಕಾಪಿರೈಟ್ ಇದೆ ಎಂದೇ ಹಾಕಿದೆ. ಮತ್ತು ಎಲ್ಲ ಕಡೆ ಇರಯವ ಕಾಪಿರೈಟ್ ಗಳಲ್ಲಿ ನಿಯಮ ಏನೆಂದರೆ ಅದನ್ನು ಹಾಗೆಯೇ ಆಗಲಿ ಅಥವಾ ಬದಲಾಯಿಸಿಯಾಗಲಿ ತೆಗೆದುಕೊಳ್ಳಬಾರದು ಎಂದು ಇರುತ್ತದೆ, ನೀವು ವಾಕ್ಯ ಬದಲಾಯಿಸಿತೆಗೆದುಕೊಂಡರೂ ಅದು ಅವರ ನಿಯಮದ ಉಲ್ಲಂಘನೆ ಆಗುವುದು. ನಿಮ್ಮ ಹೇಳಿಕೆಯಂತೆ ಹಾಗಾಗಿ ಈಗಾಗಲೆ ಹಾಕಿರುವ ಎಲ್ಲಾ ಪುಟಗಳೂ ೭೫% ಆ ನಿಯಮಕ್ಕೆ ವಿರೋಧವಾಗುವುದು. "you may not reproduce, transmit, adapt, distribute, sell, modify or publish or otherwise use any of the material on this website without our prior written consent" ಇದು ಪತ್ರಿಕೆಯವರು ಹಾಕಿಕೊಳ್ಳುವ ನಿಯಮ. ಇಂಗ್ಲಿಷನಲ್ಲಿ ಹಾಕಿರವ ೧೦೦ಕ್ಕೆ ೯೦ ಭಾಗ ಪತ್ರಿಕೆಗಳ ರೆಫರೆನ್ಸ್ ಹಾಕಿದೆ ಹಾಗಿದ್ದರೆ ಅವಕ್ಕೆ ವಿನಾಯತಿ ಹೇಗೆ ಬಂತು?
  • ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿಸಿದ ವಿಷಯಗಳನ್ನು ಸ್ವಂತ ಲಾಭಕ್ಕಲ್ಲದೆ ಉಪಯೋಗಿಸಲು ಕಾಪಿರೈಟ್ ನಿಯಮದಲ್ಲಿ ಅವಕಾಶವಿದೆ. ಅದನ್ನು ಸರಿಯಾಗಿ ತಿಳಿದುಕೊಳ್ಳಿ . ಇಲ್ಲದಿದ್ದರೆ ಈಗ ವಿಕಿಪೀಡಿಯಾಗಳಿಗೆ ಹಾಕಿರುವ ಎಲ್ಲಾ ಮಾಹಿತಿಗಳನ್ನೂ ತೆಗೆಯಬೇಕಾಗುವುದು. ಅಷ್ಠೇ ಅಲ್ಲ ಇನ್ನೂ ಅನೇಕ ವಿನಾಯಿತಿಗಳಿವೆ ಅವನ್ನು ತಿಳಿದುಕೊಳ್ಳಿ. ಇಲ್ಲದಿದ್ದೆರೆ ನಿಮ್ಮಹಾಗೆ, ನಿಮ್ಮ ಮಿತ್ರರ ಹಾಗೆ ಏನೂ ಕೆಲಸ ಮಾಡದೆ, ತಕರಾರು ಹಾಕುವ ಕಲ್ಲು ಹೋಡೆಯುವ, ಕೆಲಸ ಮಾಡಿದರೆ ಇಲ್ಲಿ ಯಾರೂ ಸಂಪಾದನೆ ಮಾಡಲು ಬರುವುದಿಲ್ಲ. ಈಗ ಎರಡು ಮೂರು ಜನ ಮಾತ್ರಾ ನೆಪ ಮಾತ್ರಕ್ಕೆ ಸಂಪಾದನೆ ಮಾಡುವವರು ಇದ್ದಾರೆ. ಇನ್ನು ಮುಂದೆ 'ಕತ್ತರಿ ಹಾಕುವ ಕೆಲಸ ಮಾಡುವ' ನೀವಿಬ್ಬರೇ ಇರಬೇಕಾಗುವುದು. ನೀವು ಮತ್ತು ನಿಮ್ಮ ಮಿತ್ರರು ಹಾಕಿದ ಎಲ್ಲಾ ಪುಟಗಳೂ ಕಾಪಿರೈಟ್ ಇರುವುದೇ ಆಗಿವೆ. ಎಲ್ಲಾ ಕ್ರೀಡಾ ಪಟುಗಳ ಮತ್ತು ಪ್ರಸಿದ್ಧ ವ್ಯಕ್ಕಿಗಳ ವಿವರಗಳೆಲ್ಲಾ ಪತ್ರೆಕೆಗಳಿಂದ ತೆಗೆದುಕೊಂಡವೇ. ಅವನ್ನೆಲ್ಲಾ ಅಳಿಸುತ್ತೀರಾ?? ಸರಿಯಾಗಿ ನಿಯಮ ತಿಳಿದುಕೊಳ್ಳಿ. ಯಾವುದೋ ಕೆಲವು ಯ್ಯಾಪ್ ಗಳನ್ನು ತಿಳಿದುಕೊಂಡ ಮಾತ್ರಕ್ಕೆ ಎಲ್ಲಾ ತಿಳಿದಂತೆ ಆಗುವುದಿಲ್ಲ. "ನಿಮ್ಮ ಹೆಸರು,ನಿಮ್ಮ ತಂದೆಯ ಹೆಸರು, ಹುಟ್ಟಿದ ದಿನಾಂಕ ನಿಮ್ಮ ವಿದ್ಯಾಭ್ಯಾಸ" ಈ ವೈಯುಕ್ತಿಕ ವಿವರವನ್ನು ಪತ್ರಿಕೆಯವರು ಪ್ರಕಟಿಸಿದರೆ ಅವರು ಬರೆದುಕೊಂಡ ಮಾತ್ರಕ್ಕೆ ಅವರಿಗೆ ಕಾಪಿರೈಟ್ ಬರುವುದೇ?"
  • ಮೊನ್ನೆ ಸೀಮಾದಾಸ್ ಪುಟ ವನ್ನು ತೆಲಗಿನ ಪಾಲಗಿರಿಯವರು ಸೃಷ್ಟಿಸಿದರು, ಸೀಮಾದಾಸ್ ೪೦೦ ಮೀಟರ್ ಓಟದಲ್ಲಿ ಚಿನ್ನ ಗೆದ್ದರು ಎಂದೂ ಅವರ ತಂದೆ ತಾಯಿಯ ವಿಷಯ ಎಲ್ಲಾ ಪತ್ರಿಕೆಯವರೂ ಹಾಕಿದ್ದರು. ಅದನ್ನು ನಿಮ್ಮ ಪ್ರಕಾರ ವಿಕಿಪೀಡಿಯಾಕ್ಕೆ ಹಾಕುವಹಾಗಿಲ್ಲ. ಏಕೆಂದರೆ ಅದು ಪತ್ರಿಕೆಗಳ ಕಾಪಿ ರೈಟ್ ಆಗುತ್ತದೆ. ಆದರೆ ಆಗ ನೀವು ತಕರಾರು ತೆಗೆದಿಲ್ಲ ಏಕೆ? ಏಕೆಂದರೆ ಪಾಲಗಿರಿಯವರು ಕಂಪ್ಯೂಟರ್ ತಜ್ಞರು. ಅದೇ ನಾನು ಹಾಕಿದ್ದರೆ ತಕರಾರು ತೆಗೆಯುತ್ತಿದ್ದಿರಿ. ನಿಮ್ಮಂಥಾ ಮೂರ್ಖರು ಇರುವವರೆಗೂ ವಿಕಿಪೀಡಿಯಾಕ್ಕೆ ಸಂಪಾದಸಕರ ಸಿಗುವುದಿಲ್ಲ ಎಂದು ಬೇಸರರದಿಂದ ಹೇಳಬೇಕಾಗುವುದು. ಒಬ್ಬ ಭಾರತೀಯ ಹುಡುಗಿ ಸಾಧನೆ ಮಾಡಿ ಓಟದಲ್ಲಿ ಚಿನ್ನ ಗೆದ್ದು ಇತಿಹಾಸದ ಸೃಷ್ಟಿಸಿದರೆ ಅದನ್ನು ಕನ್ನಡ ವಿಕಿಗೆ ಹಾಕುವ ಯೋಗ್ಯತೆ ನಿಮಗೂ ಇಲ್ಲ, ನಿಮ್ಮ ಸ್ನೇಹಿತರಿಗೂ ಇಲ್ಲ! ನಿಮಗೆ ನಾಚಕೆಯೂ ಇಲ್ಲ! ಒಬ್ಬ ತೆಲುಗರು ಕನ್ನಡದಲ್ಲಿ ಆ ಪುಟ ತರೆಯಬೇಕಾಯಿತು. ನಾನು ಏನು ಮಾಡಿದರೂ ನೀವು ತಕರಾರು ತೆಗೆಯುತ್ತೀರಿ, ಕಲ್ಲು ಹೊಡೆಯುತ್ತೀರಿ ಎಂದೇ ಸೀಮಾದಾಸ್ ಪುಟ ನಾನು ತೆರೆಯಲಿಲ್ಲ. ಆದರೆ ನಿಮಗೆ ಏನೂ ಕೆಲಸ ಮಾಡದೆ ಕಾನೂನು ಸರಿಯಾಗಿ ತಿಳಿಯದೆ ತಕರಾರು ಮಾಡಲು ನಾಚಿಕೆಯೂ ಇಲ್ಲ. ಪತ್ರಿಕೆಯವರು "ಸೂರ್ಯನು ಪೂರ್ವದಲ್ಲಿ ಹುಟ್ಟತ್ತಾನೆ" ಎಂದು ಪ್ರಕಟಿಸದರೆ ಅದು ಅವರಿಗೆ ಕಾಪಿರೈಟ್ ಬಂದಿದೆ ಇನ್ನು ಯಾರೂ ಆ ವಾಕ್ಯ ಬರೆಯುವಮತಿಲ್ಲ ಎನ್ನುವ ಆಪಭ್ರಂಶುಗಳು ನೀವು. ಪುಸ್ತಕಗಳಿಂದ ತೆಗೆದುಕೊಂಡರೂ ಕೆಲವು ವಾಕ್ಯ ಹಾಗೆಯೇ ತೆಗೆದು ಕೊಳ್ಳಬೇಕಾಗುತ್ತದೆ. ಬದಲಾಯಿಸಿದರೂ- ಅದೇ ವಿಷಯ ಹಾಕಿದರೆ ಅದು ಕಾಪಿರೈಟಿಗೆ ವಿರುದ್ಧವಾಗುವುದು. ಆದರೆ ವಿಕಿಪೀಡಿಯಾ ತುಂಬಾ ಪತ್ರಿಕೆಯ ಯಾ ಪುಸ್ತಕದ ವಸ್ತುವೇ ಇರುವುದು. ಯಾರೂ ಸ್ವಂತ ವಿಚಾರ ಇಲ್ಲಿ ಬರೆಯುವ ಹಾಗಿಲ್ಲ. ಅದಕ್ಕಾಗಿ ನೀವೂ ನಿಮ್ಮ ಮಿತ್ರರೂ ಇಬ್ಬರೂ ತಿಂಗಳಿಗೆ ಒಂದು ಪುಟವನ್ನು ಸೃಷ್ಠಿಮಾಡದೆ - ತಕರಾರು ನೀತಿ- ಎಂದರೆ ಕಲ್ಲು ಹೊಡಯುವ ನೀತಿ ಅನುಸರಿಸುತ್ತಿದ್ದೀರಾ? ಇಷ್ಟು ನಾನು ಹೇಳಿದರೂ ನಿಮಗೆ ತಿಳುವಳಿಕೆ ಬರದಿದ್ದರೆ ಎಲ್ಲದಕ್ಕೂ "ರದ್ದು ಬಾವುಟ ಹಾರಿಸಿ"! ಹಾಗೆ ಮಾಡುವುದಿಲ್ಲ ನೀವು. ಕಂಪ್ಯೂಟರ್ ತಿಳಿದವರು ಎಂದರೆ ಅವರು ಉಲ್ಲೇಖ ಹಾಕದಿದ್ದರೂ ಸರಿ, ಅವ್ಯವಸ್ಥೆ ಇದ್ದರೂ ಸರಿ. ಅವರಿಗೆ ವಿನಾಯತಿ. ಇದಕ್ಕೆ ಆಧಾರ ಇದೆ. ಹೇಳಲು ಇಷ್ಟ ಇಲ್ಲ. ಈಗ ನೀವು ಮಾಡಿದ ಕಾಪಿ ರೈಟ್ ಅಪ್ಲಿಕೇಶನ್ ಟೆಸ್ಟನ್ನು ಬೇರೆ ಎಲ್ಲದಕ್ಕೂ ಮಾಡಿ. ಆಧಾರವಿಲ್ಲದೆ ಬರೆದಿದ್ದರೆ ರದ್ದು ಬಾವುಟ ಹಾರಿಸಿ. ಬೇಸರದಿಂದ/ Bschandrasgr (ಚರ್ಚೆ) ೧೯:೧೭, ೧೯ ಜುಲೈ ೨೦೧೮ (UTC)

ಸೂಚನೆ[ಬದಲಾಯಿಸಿ]

  • ಯಾವುದೇ ಸಾರ್ವಜನಿಕ ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ಸಾರ್ವಜನಿಕ ಸ್ವತ್ತು. ಮತ್ತು ಆ ಬಗೆಯ ಸಂಸ್ಥೆಗಳು ತಮ್ಮ ಆ ಮಾಹಿತಿಗಳನ್ನು ಸಾರ್ಜನಿಕರಿಗಾಗಿಯೇ ಬಿಡುಗಡೆಮಾಡುತ್ತವೆ. ಅದು ಶಿಕ್ಷಣ ಸಂಸ್ಥೆ ಇರಬಹುದು, ಬ್ಯಾಂಕುಗಗಳು ಇರಬಹುದು, ಸಂಸತ್ತು ಇರಬಹುದು ಅಥವಾ ವಿಧಾನ ಸಬೆ ಇರಬಹುದು. ಹಾಗೆಯೇ ಸಾರ್ಜನಿಕ ವ್ಯಕ್ತಿಗಳ ವಿಷಯವಿರಬಹುದು. ಅದನ್ನು ಪತ್ರಿಕೆಯವರೂ ಇತರರೂ ಬಳಸಬಹುದು. ಯಾವುದಾದರೂ ಒಳ್ಳೆಯ ತಿಳಿದ ವಕೀಲರನ್ನು ಕೇಳಿ. ಸಾರ್ಜನಿಕರಿಗೆ ಬಿಡುಗಡೆಮಾಡಿದ ವಿಶಿಷ್ಟ ವಸ್ತುಗಳ ಮಾಹಿತಿಯೂ ಹಾಗೆಯೇ. ಉದಾಹರಣೆಗೆ ಲ್ಯಾಪ್ ಟಾಪ್, ಮೊಬೈಲು ಇತ್ತಯಾದಿ ಅವರು ಕಾಪಿರೈಟ್ ಇದೆ ಎಂದು ಬರೆದುಕೊಂಡಿರುತ್ತಾರೆ. ಆದರೂ ಆ ವಿವರಗಳನ್ನು ಪತ್ರಿಕೆಯವರೂ ವಿಮರ್ಶಕರೂ ಬಳಸಿಸಿಕೊಳ್ಳುತ್ತಾರೆ. ಕಾನೂನಿನ ಸೂಕ್ಕ್ಮ ವಿಚಾರಗಳನ್ನು ತಿಳಿದುಕೊಳ್ಳದೆ ಸುಮ್ಮನೆ ಮಾಡಲು ಕೆಲಸವಿಲ್ಲದವರ ಹಾಗೆ ಅನಗತ್ಯ ತಕರಾರು ತೆಗೆಯಬೇಡಿ. ಇಲ್ಲಿ ವಿವರಿಸಿದ ಸಂಸ್ಥೆ ತನ್ನ ಚಟುವಟಿಕೆಗಳನ್ನು ಸಾರ್ಜನಿಕರಿಗಾಗಿಯೇ ಬಿಡುಗಡೆಮಾಡಿದೆ. ನಾಸಾ ಇಸ್ರೋ ಎಲ್ಲಾ ತಮ್ಮ ಬೆಬ್‍ಸೈಟಿನಲ್ಲಿ ಎಲ್ಲಾಮಾಹಿತಿಗಳೀಗೂ ತಮ್ಮ ಕಾಪಿರೈಟ್ ಇದೆ ಎಂದೇ ಹಾಕಿದ್ದಾರೆ. ಸಾರ್ವಜನಿಕ ಘಟನೆಗಳು, ಉಪನ್ಯಾಸಗಳು ಇವನ್ನು ಎಲ್ಲಾ ಪತ್ರಿಕೆಯವರೂ ಪ್ರಕಟಿಸಿರುತ್ತಾರೆ. ಅವರಿಗೆಲ್ಲಾ ಪ್ರತಿಯೊಂದು -ನೂರಾರು ಪತ್ರಿಕೆಗಳಿಗೆ ಸಮಾನವಾಗಿ ಕಾಪಿರೈಟ್ ಬರಲು ಸಾಧ್ಯವಿಲ್ಲ. ಯಾವುದೇ ವಿಷಯಕ್ಕೆ ಒಬ್ಬರಿಗೆ ಮಾತ್ರಾ ಕಾಪಿರೈಟ್ ಬರಬಹುದು, ಅದೂ ಅವರ ಸ್ವಂತ ಪರಿಶ್ರಮದ್ದಾದರೆ ಮಾತ್ರಾ. ಗುರುರಾಜ ಕರಜಗಿಯವರು ಪ್ರಜಾವಾಣಿಯಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ ಪದ್ಯಗಳನ್ನು ಹಾಕಿ ವ್ಯಾಖ್ಯಾನ ಬರೆಯುತ್ತಿದ್ದಾರೆ, ಬಹುತೇಕ ಅದಕ್ಕೆ ಹಣವನ್ನೂ ಪಡೆಯುತ್ತಿದ್ದಾರೆ. ಆ ಕಗ್ಗದ ಪದ್ಯಗಳಿಗೆ ಈಗಾಗಲೆ ಸರ್ಕಾರದ ಸಂಸ್ಕೃತಿ ಇಲಾಖೆಯವರು ಕಾಪಿರೈಟ್ ಹಾಕಿಕೊಂಡಿದ್ದಾರೆ. ಅವರು ಹೇಗೆ ಅದನ್ನು ಬಳಸಿದರು? ನಿಮ್ಮ ತಜ್ಞರಾದ ಯಜಮಾನಿಕೆ ಮಿತ್ರರು, ನನಗೆ ಅದನ್ನು ವಿಕಿಗೆ ಹಾಕಲು ತಕರಾರು ಹಾಕಿದರು. ವೆಬ್‍ಸೈಟಿನಲ್ಲಿ ಕಾಪಿರೈಟ‍್ ಇದೆ ಎಂದು ಹಾಕದಿದ್ದರೂ, ಹಾಕಿದೆ ಎಂದು ತಿಳಿದುಕೊಳ್ಲಬೆಕು ಎಂಬ ಅಧಿಕ ಪ್ರಸಂಗದ ಉಪದೇಶ ಮಾಡಿ, ತಾವೂ ಕಾಪಿರೈಟ್ ಪರಿಶೀಲನೆ ಮಾಡದೆ, ಆ ಕಗ್ಗದ ಪುಟಕ್ಕೆ "ಕಾಪಿರೈಟ್ ಸಮಸ್ಯೆ" ಎಂದು ಬಾವುಟ ಹಾಕಿದರು. ನೀವು ಈಗ ಲಕ್ಷಾಂತರ ಖರ್ಚು ಮಾಡಿದರೂ ಒಬ್ಬ ಸಂಪಾದಕರನ್ನೂ ತಯಾರಿಸಲು ಆಗಿಲ್ಲ. ನಿಮಗೂ ಮುಖ್ಯವಾದ ವಿಷಯದ ಮೇಲೆ ಒಂದು ಪುಟ ಲೇಖನ ಸೃಷ್ಟಿಸುವ ಯೋಗ್ಯತೆ ಇಲ್ಲ. ಆದರೂ "ಕೆಲವು ಅಪ್ಲಿಕೇಶನ್ ತಿಳಿದಿರುವ ಜಂಬಕ್ಕೆ" ಅನಗತ್ಯ ತಕರಾರು ತೆಗೆದು ಕಲ್ಲು ಹೊಡೆಯುವ ಕೆಲಸ ಮಾಡಿ ವಿಕಿವಿಭಾಗಕ್ಕೆ ಸೇವೆ ಮಾಡುತ್ತಿದ್ದೀರಿ. ಆತ್ಮವಿಮರ್ಶೆ ಮಾಡಿಕೊಳ್ಳಿ. ವಿಕಿ ಸಂಪಾದನೆಗೆ ನಿಮ್ಮ ಕಾಣಿಕೆ ಎಷ್ಟು? ಖರ್ಚು ಎಷ್ಟು? ನಿಮ್ಮವBschandrasgr (ಚರ್ಚೆ) ೦೩:೨೮, ೨೦ ಜುಲೈ ೨೦೧೮ (UTC)

ಉತ್ತರ[ಬದಲಾಯಿಸಿ]

ಆತ್ಮೀಯ ಬಿ. ಎಸ್. ಚಂದ್ರಶೇಖರರೇ, ದಯವಿಟ್ಟು ಗಮನಿಸಿ. ಇಲ್ಲಿ ನೀವು ಕಾಪಿರೈಟು ಇರುವ ವಿಷಯ ಹಾಕಿದ್ದೀರಿ ಮತ್ತು ನೀವೇ ಕಾಪಿ ಮಾಡಿದ್ದೀರಿ ಎಂದು ನಾನು ಹೇಳಿಲ್ಲ. ನಿಮ್ಮನ್ನು ಕೇಂದ್ರಿತವಾಗಿಯೂ ಹಾಕಿಲ್ಲ. ಈ ಟೂಲ್‌ನ ಮೂಲಕ ಲೇಖನದಲ್ಲಿ ಬೇರೆ ಮೂಲಗಳಿಂದ ಕಾಪಿ ಮಾಡಿ ಹಾಕಲಾಗಿದೆ ಎಂದು ತಿಳಿಸಿದೆ. ನೀವು ಹಿಂದೆ ಬೇರೆ ಯಾವುದಾದರೂ ಮೂಲಗಳಿಂದ ಕಾಪಿ ಮಾಡಿ ವಿಕಿಪೀಡಿಯಕ್ಕೆ ಹಾಕುತ್ತಿದ್ದಂತೆ ಈಗ ಹಾಕುತ್ತಿಲ್ಲ, ನಿಮ್ಮದೇ ವಾಕ್ಯಗಳಲ್ಲಿ ವಿಷಯವನ್ನು ಬರೆಯುತ್ತಿದ್ದೀರಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ನನ್ನಂತೆಯೆ ನೀವೂ ಬೇರೆ ಲೇಖನಗಳಿಗೆ ಹೋಗಿ. ಲೇಖನದ ಹೆಸರನ್ನು ಕಾಪಿ ಮಾಡಿ. ಈ ಟೂಲ್‌ಗೆ ಬನ್ನಿ. ಅಲ್ಲಿ en wikipedia ಬದಲು kn wikipedia ಕ್ಕೆ ಬದಲಾಯಿಸಿ. ಹಿಂದೆ ಕಾಪಿ ಮಾಡಿಟ್ಟಿರುವ ಕನ್ನಡ ವಿಕಿಪೀಡಿಯದ ಲೇಖನದ ಹೆಸರನ್ನು Page title ಎಂಬಲ್ಲಿ ಪೇಸ್ಟ್ ಮಾಡಿ submit ಕೊಡಿ. ಆಗ ನಿಮಗೆ ಕಾಪಿ ಮಾಡಿದ ವಿಷಯಗಳು ದೊರೆಯುತ್ತವೆ. ನೀವೂ ಇತರ ಲೇಖನಗಳಿಗೆ ಪ್ರಯತ್ನಿಸಿ. ಕಾಪಿ ಮಾಡಲಾಗಿದೆ ಎಂದು ನಿಮಗೆ ತೋರಿದ್ದಲ್ಲಿ ಚರ್ಚಾ ಪುಟದಲ್ಲಿ ಬರೆಯಿರಿ. ಎಲ್ಲರೂ ಚರ್ಚಿಸೋಣ. ಕಾಪಿ ಮಾಡುವವರ ವಿರುದ್ಧ ನಿಯಮಗಳನ್ನು ರಚಿಸೋಣ. ಕಾಪಿ ಮಾಡುವವರ ವಿರುದ್ಧ ಹೋರಾಡಿ ಕನ್ನಡ ವಿಕಿಪೀಡಿಯದಲ್ಲಿ ಉತ್ತಮ ಲೇಖನಗಳನ್ನು ಎಲ್ಲರೂ ರಚಿಸುವಂತೆ ಗಮನಹರಿಸೋಣ. ನಿಮ್ಮನ್ನು ಭೇಟಿ ಮಾಡಲು ಬಂದಾಗ ಈ ವಿಚಾರಗಳನ್ನು ಮಾತನಾಡೋಣ. ಈ ರೀತಿಯ ಕೆಲವು ವಿಷಯಗಳನ್ನೂ ಜೊತೆಗೆ ತಿಳಿದುಕೊಳ್ಳೋಣ. --ಗೋಪಾಲಕೃಷ್ಣ (ಚರ್ಚೆ) ೧೪:೪೬, ೨೦ ಜುಲೈ ೨೦೧೮ (UTC)