ಚಫ್
| ಚಫ್ | |
|---|---|
| Scientific classification | |
| ಕ್ಷೇತ್ರ: | ಯೂಕ್ಯಾರ್ಯೋಟಾ |
| ಸಾಮ್ರಾಜ್ಯ: | ಅನಿಮೇಲಿಯಾ |
| ವಿಭಾಗ: | ಕಾರ್ಡೇಟಾ |
| ವರ್ಗ: | ಏವೀಸ್ |
| ಗಣ: | ಪ್ಯಾಸರಿಫ಼ಾರ್ಮೀಸ್ |
| ಕುಟುಂಬ: | ಕಾರ್ವಿಡೀ |
| ಉಪಕುಟುಂಬ: | ಪಿರೋಕೊರ್‍ಯಾಸಿನೇ |
| ಕುಲ: | ಪಿರೋಕೊರ್‍ಯಾಕ್ಸ್ Tunstall, 1771 |
| Type species | |
| ಕೆಂಪು ಕೊಕ್ಕಿನ ಚಫ್[೧] Linnaeus, 1758
| |
| ಪ್ರಭೇದಗಳು | |
|
ಕೆಂಪು ಕೊಕ್ಕಿನ ಚಫ್ (ಪಿರೋಕೊರ್ಯಾಕ್ಸ್ ಪಿರೋಕೊರ್‍ಯಾಕ್ಸ್) | |
ಆಲ್ಪೈನ್ ಚಫ್
ಕೆಂಪು ಕೊಕ್ಕಿನ ಚಫ್ ಎರಡೂ ಪ್ರಭೇದಗಳು | |
ಚಫ್ ಎನ್ನುವುದು ಕಾರ್ವಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಹಕ್ಕಿ. ಯೂರೋಪ್ ಮತ್ತು ನೈಋತ್ಯ ಏಷ್ಯದ ಪರ್ವತಶ್ರೇಣಿಗಳ ಶಿಖರಗಳಲ್ಲಿ ವಾಸಿಸುತ್ತದೆ. ಕಾಗೆಗೆ ಹತ್ತಿರ ಸಂಬಂಧಿ. ಚಫ್ ಜಾತಿಯ ವೈಜ್ಞಾನಿಕ ಹೆಸರು ಪಿರೋಕೊರ‍್ಯಾಕ್ಸ್ (Pyrrhocorax). ಇದರಲ್ಲಿ ಎರಡು ಪ್ರಭೇದಗಳಿವೆ. ಒಂದು ಯೂರೋಪಿನ ಸಮುದ್ರತೀರದ ಪ್ರಪಾತಗಳಲ್ಲಿ ಕಾಣದೊರೆಯುವ ಸಾಮಾನ್ಯ ಚಫ್ (ಪಿರೋಕೊರ್ಯಾಕ್ಸ್ ಪಿರೋಕೊರ‍್ಯಾಕ್ಸ್). ಇನ್ನೊಂದು ಆಲ್ಪ್ಸ್ ಪರ್ವತಗಳಲ್ಲಿ ವಾಸಿಸುವ ಆಲ್ಪೈನ್ ಚಫ್ (ಪಿರೋಕೊರ್ಯಾಕ್ಸ್ ಗ್ರ್ಯಾಕ್ಯುಲಸ್).[೨]
ದೈಹಿಕ ಲಕ್ಷಣಗಳು
[ಬದಲಾಯಿಸಿ]ಎರಡು ಬಗೆಯ ಹಕ್ಕಿಗಳೂ ಕಾಗೆಯಂತೆಯೇ ಕಪ್ಪು ಬಣ್ಣದವು. ಆದರೆ ಗಾತ್ರದಲ್ಲಿ ಮಾತ್ರ ಚಿಕ್ಕವು. ಚಫ್ ಕೊಕ್ಕೂ ಬೇರೆ ರೀತಿಯದು. ಇದು ತೆಳುವಾಗಿ ಚೂಪಾಗಿರುವುದಲ್ಲದೆ ಕೆಳಮುಖವಾಗಿ ಬಾಗಿದೆ. ಕೊಕ್ಕಿನ ಬಣ್ಣ ಸಾಮಾನ್ಯ ಚಫ್ ಹಕ್ಕಿಯಲ್ಲಿ ಕೆಂಪು ಮತ್ತು ಆಲ್ಪೈನ್ ಚಫ್ ಹಕ್ಕಿಯಲ್ಲಿ ಹಳದಿ. ತಮ್ಮ ಹಾರುವಿಕೆಯ ಸಾಮರ್ಥ್ಯದಿಂದ ಎರಡು ಬಗೆಗಳೂ ಆಗಸದ ದೊಂಬರು ಎನಿಸಿಕೊಂಡಿವೆ. ಒಂಟೊಂಟಿಯಾಗಿ ಇಲ್ಲವೇ ಗುಂಪುಗಳಲ್ಲಿ ತಾವು ವಾಸಿಸುವ ಪ್ರಪಾತಗಳ ಸುತ್ತ ಚಕ್ರಾಕಾರದಲ್ಲಿ ಸುತ್ತುವುದು, ಸರ‍್ರನೆ ಮೇಲೇರುವುದು, ರೆಕ್ಕೆಗಳನ್ನು ಮುಚ್ಚಿಕೊಂಡು ಥಟ್ಟನೆ ಧುಮುಕಿ ಕೆಳಗಿಳಿಯುವುದು, ಲಾಗ ಹಾಕುವುದು ಮುಂತಾದವನ್ನೆಲ್ಲ ಮಾಡುತ್ತ ಹಾರಾಡುತ್ತವೆ.
ಆಹಾರ
[ಬದಲಾಯಿಸಿ]ಚಫ್‌ಗಳು ಕೀಟಾಹಾರಿಗಳು.
ಸಂತಾನವೃದ್ಧಿ
[ಬದಲಾಯಿಸಿ]ಇವು ಪರ್ವತಗಳ ಬಂಡೆದೊಗರುಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಡುತ್ತವೆ.[೩] ಮೊಟ್ಟೆಯಿಡುವ ಕಾಲ ಏಪ್ರಿಲ್-ಮೇ ತಿಂಗಳು, ಮೊಟ್ಟೆಗಳ ಸಂಖ್ಯೆ 3-6.[೪] ಮೊಟ್ಟೆಯೊಡೆದು ಹೊರಬರುವ ಮರಿಗಳು 35-40 ದಿವಸಗಳ ಅನಂತರ ತಾಯಿಯಿಂದ ಬೇರೆಯಾಗಿ ವಾಸಿಸತೊಡಗುತ್ತವೆ. ಚಫ್‌ಗಳ ಆಯಸ್ಸು ಸುಮಾರು 15 ವರ್ಷಗಳು.
ಉಲ್ಲೇಖಗಳು
[ಬದಲಾಯಿಸಿ]- ↑ "Corvidae". aviansystematics.org. The Trust for Avian Systematics. Retrieved 2023-07-16.
- ↑ Gill, Frank; Donsker, David; Rasmussen, Pamela, eds. (August 2024). "Crows, mudnesters, birds-of-paradise". IOC World Bird List Version 14.2. International Ornithologists' Union. Retrieved 16 October 2024.
- ↑ Snow, David; Perrins, Christopher M, eds. (1998). The Birds of the Western Palearctic concise edition (2 volumes). Oxford: Oxford University Press. ISBN 0-19-854099-X. 1466–68
- ↑ Madge, Steve; Burn, Hilary (1994). Crows and Jays: A Guide to the Crows, Jays and Magpies of the World. A & C Black. pp. 132–135. ISBN 0-7136-3999-7.
