ವಿಷಯಕ್ಕೆ ಹೋಗು

ಚಪ್ಪಟೆ ಮೀನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಪ್ಪಟೆ ಮೀನುಗಳು
Temporal range: Late Paleocene–Recent[]
ಪ್ಲೇಸ್ (ಪ್ಲ್ಯೂರೊನೆಕ್ಟೆಸ್ ಪ್ಲಟೆಸಾ), ಚಪ್ಪಟೆಮೀನುಗಳ ಮೊದಲ ಹೆಸರಿಸಿದ ಪ್ರಜಾತಿ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯಾ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಕರಾಂಗಿಫ಼ಾರ್ಮಿಸ್
ಉಪಗಣ: ಪ್ಲೂರೊನೆಕ್ಟಾಯ್ಡೆಯ್
Cuvier, 1817[]
Type species
ಪ್ಲ್ಯೂರೊನೆಕ್ಟೆಸ್ ಪ್ಲಟೆಸಾ
Synonyms
  • ಹೆಟೆರೊಸಮೇಟಾ Jordan & Evermann, 1896
  • ಪ್ಲ್ಯೂರೊನೆಕ್ಟಿಫ಼ಾರ್ಮಿಸ್ Regan, 1910
  • ಸೋಲೆಯ್‍ಫ಼ಾರ್ಮಿಸ್ Regan, 1910
  • ಪಾಲಿನೆಮಾಯ್ಡೆಯ್ Regan, 1909
  • ಪ್ಲ್ಯೂರೊನೆಕ್ಟಾಯ್ಡಿಯೊ Girard et al, 2020

ಚಪ್ಪಟೆ ಮೀನುಗಳು ಎನ್ನುವುದು ಪ್ಲೂರೊನೆಕ್ಟಿಫಾರ್ಮೀಸ್ (ಹೆಟಿರೋಸೊಮೇಟ) ಗಣದ ಬೋತಿಡೀ, ಪ್ಲೂರೊನೆಕ್ಟಿಡೀ, ಸೋಲೈಯಿಡೀ ಮತ್ತು ಸೈನೋಗ್ಲಾಸಿಡಿ ಕುಟುಂಬಗಳಿಗೆ ಸೇರಿದ ನಂಗು, ಟರ್ಬಟ್, ಹ್ಯಾಲಿಬಟ್ ಮುಂತಾದ ಸಾಗರವಾಸಿ ಮೀನುಗಳಿಗಿರುವ ಸಾಮಾನ್ಯ ಹೆಸರು (ಫ್ಲಾಟ್ ಫಿಷಸ್). ಹೆಸರೇ ಸೂಚಿಸುವಂತೆ ಚಪ್ಪಟೆಯಾಗಿರುವ ಇದಕ್ಕೆ ಎರಡು ಕಣ್ಣುಗಳು ತಲೆಯ ಒಂದೇ ಪಾರ್ಶ್ವದಲ್ಲಿರುವುದರಿಂದ ಇವು ಇತರ ಮೀನುಗಳಿಗಿಂತ ಭಿನ್ನವಾಗಿವೆ. ಪ್ರೌಢಜೀವಿಗಳು ಕಣ್ಣಿರುವ ಪಾರ್ಶ್ವವನ್ನು ಮೇಲ್ಮುಖ ಮಾಡಿಕೊಂಡು ನೀರಿನ ತಳದಲ್ಲಿ ವಾಸಿಸುತ್ತವೆ.[] ದೇಹದ ಈ ಪಾರ್ಶ್ವದಲ್ಲಿ ವಿವಿಧ ಬಣ್ಣಗಳನ್ನು ಕಾಣಬಹುದು. ಇವು ಸಾಧಾರಣವಾಗಿ ಸಾಗರತಳದ ಬಣ್ಣವನ್ನೇ ಹೋಲುತ್ತವೆ. ನೆಲದ ಕಡೆ ತಿರುಗಿರುವ ಪಾರ್ಶ್ವ ಬಿಳುಪಾಗಿರುತ್ತದೆ. ಈ ಭಾಗವನ್ನು ಬೆಳಕಿಗೆ ಒಡ್ಡಿದಾಗ ಅಲ್ಲಿ ಸ್ವಲ್ಪಮಟ್ಟಿನ ಬಣ್ಣ ಕಾಣಿಸಿಕೊಳ್ಳುವುದುಂಟು.

ಮೊಟ್ಟೆಯೊಡೆದು ಬರುವ ಮರಿಮೀನುಗಳು ಇತರ ಜಾತಿಯ ಮೀನಿನ ಮರಿಗಳಂತೆಯೇ ಒಂದೊಂದು ಪಾರ್ಶ್ವದಲ್ಲೂ ಒಂದೊಂದು ಕಣ್ಣನ್ನು ಹೊಂದಿದ್ದು ಸಮರೂಪದ್ದಾಗಿರುತ್ತವೆ. ಇವು ಮೊದಮೊದಲು ನೀರಿನಲ್ಲಿ ಈಜಾಡುತ್ತ ಕಾಲ ಕಳೆಯುತ್ತವೆ. ಕಾಲಕ್ರಮದಲ್ಲಿ ಒಂದು ಪಾರ್ಶ್ವದ ಕಣ್ಣು, ತಲೆಯನ್ನು ಸುತ್ತುವರಿದುಕೊಂಡು ಇನ್ನೊಂದು ಪಾರ್ಶ್ವಕ್ಕೆ ಸಾಗಿ ಬರುತ್ತದೆ; ಕೆಲವು ರೆಕ್ಕೆಗಳು ಸ್ಥಾನ ಬದಲಾಯಿಸುತ್ತವೆ. ಕಡೆಗೆ, ಮೀನುಗಳು ಎರಡು ಕಣ್ಣುಗಳಿರುವ ಪಾರ್ಶ್ವವನ್ನು ಮೇಲ್ಮುಖ ಮಾಡಿಕೊಂಡು ನೀರಿನ ತಳ ಸೇರುತ್ತವೆ.[][] ಅನೇಕ ಚಪ್ಪಟೆ ಮೀನುಗಳಲ್ಲಿ ಬೆನ್ನಿನ ರೆಕ್ಕೆ (dorsal fin) ತಲೆಯ ತನಕ ಮುಂದಕ್ಕೆ ಚಾಚಿ ಬೆಳೆದುಕೊಳ್ಳುತ್ತದೆ. ಕಣ್ಣುಗಳು ತಲೆಯ ಒಂದೇ ಪಾರ್ಶ್ವದಲ್ಲಿದ್ದರೂ ಬೇರೆ ಬೇರೆ ದಿಕ್ಕಿನಲ್ಲಿ ಸ್ವತಂತ್ರವಾಗಿ ತಿರುಗಬಲ್ಲವು. ಚಪ್ಪಟೆ ಮೀನಿನ ಒಂದು ಉದಾಹರಣೆಯೆಂದರೆ ಫ್ಲೌಂಡರ್.

ಉಲ್ಲೇಖಗಳು

[ಬದಲಾಯಿಸಿ]
  1. Chapleau, Francois; Amaoka, Kunio (1998). Paxton, J.R.; Eschmeyer, W.N. (eds.). Encyclopedia of Fishes. San Diego: Academic Press. xxx. ISBN 0-12-547665-5.
  2. Scudder, Samuel Hubbard (1882). Nomenclator Zoologicus: An Alphabetical List of All Generic Names that Have Been Employed by Naturalists for Recent and Fossil Animals from the Earliest Times to the Close of the Year 1879 ... (in ಇಂಗ್ಲಿಷ್). U.S. Government Printing Office.
  3. Walrond C Carl . "Coastal fish - Fish of the open sea floor" Te Ara - the Encyclopedia of New Zealand. Updated 2 March 2009
  4. Bao, Baolong (2022). Flatfish Metamorphosis (1 ed.). Singapore: Springer. doi:10.1007/978-981-19-7859-3. ISBN 978-981-19-7858-6.
  5. Jabr, Feris (7 May 2014). "The Improbable—but True—Evolutionary Tale of Flatfishes". pbs.org. PBS NOVA. Retrieved 17 July 2025.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: