ಚಗಚೆ
ಚಗಚೆ ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್‍ಪಿನಿಯಾಯ್ಡಿಯೇ ಉಪಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಮೂಲಿಕೆಗಿಡ. ಭಾರತಾದ್ಯಂತ ಒಂದು ಕಳೆಗಿಡವಾಗಿ ಬೆಳೆಯುತ್ತದೆ. ಕ್ಯಾಸಿಯ ಟೋರ ಇದರ ಶಾಸ್ತ್ರೀಯ ಹೆಸರು. ಗಂಡು ತಗಜೆ, ತರಗಸಿ, ಚಗತೆ ಪರ್ಯಾಯ ನಾಮಗಳು. ಇದರ ಅತ್ಯಂತ ಸಾಮಾನ್ಯ ಇಂಗ್ಲಿಷ್ ಹೆಸರೆಂದರೆ ಸಿಕಲ್ ಸೆನಾ.[೧] ಭಾರತದ ಮೈದಾನ ಸೀಮೆಗಳಲ್ಲೆಲ್ಲ ರಸ್ತೆಬದಿಗಳಲ್ಲಿ, ಪಾಳುಬಿದ್ದ ಸ್ಥಳಗಳಲ್ಲಿ, ಕಾಡಿನಲ್ಲಿ ಕುರುಚಲಾಗಿ ಬೆಳೆಯುವ ಪುಟ್ಟ ಗಿಡ ಇದು. ಇದರ ಸ್ಥಳೀಯ ವ್ಯಾಪ್ತಿ ಮಧ್ಯ ಅಮೇರಿಕಾದಲ್ಲಿದೆ.[೨]
| ಸೆನಾ ಟೋರಾ | |
|---|---|
| Scientific classification | |
| ಸಾಮ್ರಾಜ್ಯ: | ಪ್ಲಾಂಟೇ |
| ಏಕಮೂಲ ವರ್ಗ: | ಹೂಬಿಡುವ ಸಸ್ಯ |
| ಏಕಮೂಲ ವರ್ಗ: | ಯೂಡಿಕಾಟ್‌ಗಳು |
| ಏಕಮೂಲ ವರ್ಗ: | ರೋಜ಼ಿಡ್ಸ್ |
| ಗಣ: | ಫ಼್ಯಾಬೇಲೀಸ್ |
| ಕುಟುಂಬ: | ಫ಼್ಯಾಬೇಸಿಯೇ |
| ಉಪಕುಟುಂಬ: | ಸಿಸಾಲ್ಪಿನಿಯಾಯ್ಡಿಯೇ |
| ಕುಲ: | ಸೆನಾ |
| ಪ್ರಜಾತಿ: | ಸ. ಟೋರಾ
|
| Binomial name | |
| ಸೆನಾ ಟೋರಾ (L.) Roxb.
| |
ಸಸ್ಯದ ರಚನೆ
[ಬದಲಾಯಿಸಿ]ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ; ಹೂವುಗಳು ಸಂಯುಕ್ತ ಬಗೆಯವು. ಒಂದೊಂದು ಎಲೆಗಳ ಕಕ್ಷದಲ್ಲಿ ಜೊತೆಜೊತೆಯಾಗಿ ಅರಳುತ್ತವೆ. ಇವುಗಳ ಉದ್ದ ಸುಮಾರು 6"-9". ಚಪ್ಪಟೆಯಾದ ಹಾಗೂ ಕಪ್ಪುಬಣ್ಣದ ಬೀಜಗಳಿವೆ.
ಉಪಯೋಗಗಳು
[ಬದಲಾಯಿಸಿ]ಬೀಜಗಳಿಂದ ಒಂದು ಬಗೆಯ ನೀಲಿಬಣ್ಣವನ್ನು ಪಡೆಯುವುದಿದೆ. ಬೀಜಗಳನ್ನು ಕಾಫಿ ಬೀಜದ ಬದಲಾಗಿ ಉಪಯೋಗಿಸುವುದುಂಟು. ಅಧಿಕ ಮೊತ್ತದ ಪ್ರೋಟೀನ್ ಇರುವುದರಿಂದ ಬೀಜಗಳನ್ನು ದನಕರುಗಳ ಮೇವಾಗಿ ಬಳಸಬಹುದು. ಚಗಚೆಯ ಎಲೆಗಳ ರಸವನ್ನು ಹುಳಿಮಜ್ಜಿಗೆ, ನಿಂಬೆರಸ, ಕಳ್ಳಿಗಿಡದ ರಸ, ಗಂಜಲ, ಗರಗಲು ಗಿಡದ ರಸದೊಂದಿಗೆ ಸೇರಿಸಿ ಗಜಕರ್ಣ, ತುರಿ ಮುಂತಾದ ಚರ್ಮರೋಗಗಳಲ್ಲಿ ಬಳಸಲಾಗುತ್ತದೆ. ಚಗಚೆ ಕುಡಿಯ ತಂಬುಳಿ ಹಲವಾರು ಬಗೆಯ ಉದರರೋಗಗಳಿಗೆ ಒಳ್ಳೆಯ ಮದ್ದು.
ಉಲ್ಲೇಖಗಳು
[ಬದಲಾಯಿಸಿ]- ↑ "Senna tora". Natural Resources Conservation Service PLANTS Database. USDA. Retrieved 10 November 2015.
- ↑ "Senna tora (L.) Roxb". Plants of the World Online. Royal Botanic Gardens, Kew. Retrieved 7 May 2018.
ಹೊರಗಿನ ಕೊಂಡಿಗಳು
[ಬದಲಾಯಿಸಿ]- International Legume Database & Information Service (ILDIS) (2005): Senna tora (L.) Roxb.. Version 10.01, November 2005. Retrieved 2007-DEC-20.
