ಚಕ್ರವರ್ತಿ ಸೂಲಿಬೆಲೆ

ವಿಕಿಪೀಡಿಯ ಇಂದ
Jump to navigation Jump to search


[citation needed]

ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕರು, ಅಂಕಣಕಾರರು. ಸಾಮಾಜಿಕ ಕಾರ್ಯಕರ್ತರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಜನನ[ಬದಲಾಯಿಸಿ]

ಹುಟ್ಟಿದ್ದು ಏಪ್ರಿಲ್ ೯, ೧೯೮೦ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ. ಮಿಥುನ್ ಚಕ್ರವರ್ತಿ ಅಂತಲೂ ಕರೆಯಲ್ಪಡುವ ಇವರು ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರುವ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಒಂದು ಸಣ್ಣ ಗ್ರಾಮದಲ್ಲಿ. ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಡಿ.ಎಸ್.ಶೇಟ್ ರವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

 • ಬೆಂಗಳೂರಿನ ಸುಪ್ರಸಿದ್ಧ ಜೈನ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಇವರು, ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. .
 • ಬಾಲ ವಿಹಾರದಿಂದ ಹೈಸ್ಕೂಲ್ನ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತು ೫ನೆಯ ತರಗತಿಯಲ್ಲಿ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗಕ್ಕೆಪ್ರಭಾವಿತರಾಗಿ, ೮ನೆಯ ತರಗತಿಯಲ್ಲಿ ಅಣು ವಿದ್ಯುತ್ ಬಗ್ಗೆ ಲೇಖನ ಬರೆದು ಪ್ರಶಂಸೆಗೆ ಒಳಗಾದವರು.

ರಾಮಕೃಷ್ಣ ಆಶ್ರಮದ ಸಂಪರ್ಕ[ಬದಲಾಯಿಸಿ]

 • ಸ್ವಾಮಿ ವಿವೇಕಾನಂದರ ಲೇಖನಗಳ ಪ್ರಭಾವಕ್ಕೆ ಒಳಗಾದ ಇವರು ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಹೊತ್ತೊಯ್ಯುವ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದರು. ಶ್ರೀ ರಾಮಕೃಷ್ಣ ಆಶ್ರಮದ ಯತಿ ವರೇಣ್ಯರಾದ ಶ್ರೀ ಸ್ವಾಮಿ ಹರ್ಷಾನಂದಜಿ, ಶ್ರೀ ಸ್ವಾಮಿ ಪುರುಷೋತ್ತಮಾನಂದಜಿ, ಶ್ರೀ ಸ್ವಾಮಿ ಜಗದಾತ್ಮಾನಂದಜಿ ಇವರುಗಳ ನಿಕಟ ಸಂಪರ್ಕವನ್ನು ಹೊಂದಿದರು.
 • ಶ್ರೀ ಸ್ವಾಮಿ ವಿವೇಕಾನಂದರ ಚೀತೋಹಾರಿ ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ದೇಶದ ಉದ್ದಗಲಕ್ಕೂ ಶ್ರಮಿಸುತ್ತಿದ್ದಾರೆ. ಪ್ರಪಂಚದಲ್ಲಿ ಭಾರತದ ಪ್ರತಿಭೆಯನ್ನು ಕೇವಲವಾಗಿ ಕಾಣುವ ಕಂಗಳಲ್ಲಿಯ ಪೊರೆಯನ್ನು ತೆರೆದು ಭಾರತದ ಪ್ರಾಚೀನ ಭವ್ಯ ಇತಿಹಾಸದ ಪರಂಪರೆಯ ಕೀರ್ತಿಯನ್ನು ಸಾರುತ್ತಾ ಬರುತ್ತಿದ್ದಾರೆ.

ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶ[ಬದಲಾಯಿಸಿ]

 • ವಿದ್ಯಾಭ್ಯಾಸ ಮುಗಿಸಿದ ನಂತರ ಇವರು ರಾಜೀವ್ ದೀಕ್ಷಿತರ ಆಜಾದಿ ಬಜಾವ್ ಆಂದೋಲನದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶಿಸಿದರು. ಸ್ವದೇಶಿ ಆಂದೋಲನಕ್ಕೂ ಸೇರ್ಪಡೆಯಾದರು. ಸ್ವದೇಶಿ ವಸ್ತುಗಳನ್ನು ಬಳಸ ಬೇಕೆಂದು ಪ್ರಚಾರ ಹಾಗು ರಾಷ್ಟ್ರೀಯತೆಯ ಪ್ರಸಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡರು.
 • ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವವನ್ನು ಹೊಂದಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ಸಂಸ್ಕಾರ ಭಾರತಿಯ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಮುಂದೆ ಪತಂಜಲಿ ಯೋಗಪೀಠದೊಂದಿಗೆ ಸಂಪರ್ಕ ಬೆಳೆಯಿತು. ಭಾರತ್ ಸ್ವಾಭಿಮಾನ್ ರಾಜ್ಯ ಪ್ರಭಾರಿ ಹುದ್ದೆಗೆ ಆಯ್ಕೆಯಾದ ಇವರು ಬಾಬಾ ರಾಮ್ದೇವ್ ರವರ ಹೋರಾಟಗಳಿಗೆ ಕೈಜೋಡಿಸಿದರು.
 • ಉಪನ್ಯಾಸಗಳ ಮೂಲಕ ಭಾರತದ ಯುವ ಜನಾಂಗದಲ್ಲಿ ಅಡಗಿರುವ ಸುಪ್ತ ದೇಶ ಭಕ್ತಿಯನ್ನು ಹೊರ ತಂದು ಪ್ರೇರೇಪಿಸುವ ಹಲವಾರು ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಮುದ್ರಣ ಮಾಧ್ಯಮ[ಬದಲಾಯಿಸಿ]

 1. ಹೊಸ ಸ್ವಾತಂತ್ರ್ಯದ ಬೆಳಕು ಎಂಬ ಸ್ವದೇಶಿ ಆಂದೋಲನದ ಮುಖ ಪತ್ರಿಕೆಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
 2. ಮೇರಾ ಭಾರತ್ ಮಹಾನ್ ಎಂಬ ಕಿರು ಅಂಕಣವನ್ನು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಾರಂಭಿಸಿದರು.
 3. ವಿಜಯ ಕರ್ನಾಟಕದಲ್ಲಿಯೇ ಹೋಂಗೆ ಕಾಮ್ಯಾಬ್ ಎಂಬ ಅಂಕಣವನ್ನು ಬರೆಯುತ್ತಾ ಬಂದರು.
 4. ಗರ್ವ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡರು.
 5. ಲೈಫ್ ಸ್ಕ್ಯಾನ್ ಎನ್ನುವ ಸರಣಿ ಅಂಕಣವನ್ನು ಕರ್ಮವೀರ ಪತ್ರಿಕೆಯಲ್ಲಿ ಬರೆದಿದ್ದಾರೆ. ಇದಲ್ಲದೆ ಸುಭಾಷ್ ಚಂದ್ರ ಬೋಸ್, ಐನ್‌ಸ್ಟೀನ್ ಹಾಗೂ ಸಚಿನ್ ತಂಡೂಲ್ಕರ್ ಈ ಎಲ್ಲರ ಕುರಿತು ಲೇಖನಗಳನ್ನು ಸೃಷ್ಟಿಸಿದ್ದರು.
 6. ಜಾಗೋ ಭಾರತ್ ಎಂಬ ಸರಣಿ ಅಂಕಣವನ್ನು ವಿಜಯವಾಣಿ ದಿನ ಪತ್ರಿಕೆಯಲ್ಲಿ ಲಿಖಿಸುತ್ತಿದ್ದರು.

ದೃಶ್ಯ ಮಾಧ್ಯಮ[ಬದಲಾಯಿಸಿ]

 1. ಈ ಟೀವಿ ಕನ್ನಡದಲ್ಲಿ ನಿವೇದನ ಎಂಬ ಕಾರ್ಯಕ್ರಮದ ನಿರೂಪಣೆ ಹಾಗು ಇದೆ ಮಾಧ್ಯಮದಲ್ಲಿ ತೀರ್ಥ ಯಾತ್ರೆ ಎಂಬ ಕಾರ್ಯಕ್ರಮಕ್ಕೂ ಸಹ ತಮ್ಮ ನಿರೂಪಣೆಯಿಂದ ಜನರ ಮನ ಗೆದ್ದಿದ್ದಾರೆ. ಅಲ್ಲದೆ, ವಿಶೇಷ ಸಂದರ್ಭಗಳ ನೇರ ಪ್ರಸಾರ ಕಾರ್ಯಕ್ರಮ ಗಳಲ್ಲಿ ನಿರೂಪಣೆ.
 2. ಜೀ ಕನ್ನಡ ವಾಹಿನಿಸಂಧ್ಯಾರಾಧನೆ ಕಾರ್ಯಕ್ರಮದ ನಿರ್ವಹಣೆ ಹಾಗು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದರು.
 3. ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಚಿಂತನ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.
 4. ಕಸ್ತೂರಿ ವಾಹಿನಿಯಲ್ಲಿ ಜಾಣರ ಜಗಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಇವರ ವಿಚಾರಧಾರೆ ಮೆಚ್ಚತಕ್ಕದ್ದು.
 5. ಉದಯ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಹರಟೆ ಸಂಚಿಕೆಗಳಲ್ಲಿ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳುತ್ತಿದ್ದರು.
 6. ಕನ್ನಡದ ಪ್ರಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ನಾಗಾಭರಣ ನಿರ್ದೇಶನದ, ಸ್ವಾಮಿ ವಿವೇಕಾನಂದ ಪ್ರೇರಣೆ ಕುರಿತಾದ ಹೀರೋ ಕಿರು ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರಚಿಸಿದ್ದಾರೆ.
 7. ವಿವಿಧ ವಾಹಿನಿಗಳ ಪ್ಯಾನೆಲ್ ಡಿಸ್ಕಷನ್‌ಗಳಲ್ಲಿ ಭಾಗಿ.

ಶ್ರವಣ ಮಾಧ್ಯಮ[ಬದಲಾಯಿಸಿ]

ಬೆಂಗಳೂರು ಆಕಾಶವಾಣಿಜ್ಞಾನವಾಣಿ ವಾಹಿನಿಯಲ್ಲಿ ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯದ ಸರಣಿ ಉಪನ್ಯಾಸ ಮತ್ತು ಇತರ ಉಪನ್ಯಾಸಗಳನ್ನು ನೀಡಿದ್ದಾರೆ.

ಉಪನ್ಯಾಸಕರಾಗಿ[ಬದಲಾಯಿಸಿ]

 1. ಸ್ವದೇಶಿ ಆಂದೋಲನಕ್ಕೆಂದು ಉಪನ್ಯಾಸಗಳನ್ನು ಪ್ರಾರಂಭಿಸಿದ ಇವರು ಇಂದಿಗೂ ದೇಶಭಕ್ತಿ, ರಾಷ್ಟ್ರೀಯ ಮನೋಭಾವವನ್ನು ಪ್ರಚೋದಿಸುವ ಅನೇಕ ಉಪನ್ಯಾಸಗಳನ್ನು ನೀಡುತ್ತಾ ಬರುತ್ತಿದ್ದಾರೆ. ಕರ್ನಾಟಕ ರಾಜ್ಯದ ಬಹುತೇಕ ಎಲ್ಲೆಡೆ ತಮ್ಮ ವಿಚಾರಧಾರೆಯನ್ನು ಹಂಚಿಕೊಂಡಿದ್ದಾರೆ.
 2. ಶಾಲಾ ಕಾಲೇಜಿಗಳು, ಧಾರ್ಮಿಕ ಸಭೆಗಳು, ಸಾರ್ವಜನಿಕ ಸಭೆಗಳು ಹೀಗೆ ಎಲ್ಲೆಡೆ ವಿವಿಧ ವರ್ಗ, ವಿಷಯಗಳ ಕುರಿತು ತಮ್ಮಲ್ಲಿರುವ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
 3. ಬೆಂಗಳೂರಿನ ಪ್ರತಿಷ್ಠಿತ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಭಗತ್‌ ಸಿಂಗ್‌, ಜಲಿಯನ್‌ವಾಲಾ ಬಾಗ್‌ ಹಾಗೂ ಮದನ್‌ ಲಾಲ್‌ ಧಿಂಗ್ರಾ ಕುರಿತ ಏಕದಿನ ಉಪನ್ಯಾಸ ಹಾಗೂ ಸ್ವಾಮಿ ವಿವೇಕಾನಂದ ಮತ್ತು ಸುಭಾಷ್‌ ಚಂದ್ರ ಬೋಸ್‌ ಕುರಿತ ಮೂರು ದಿನಗಳ ಸರಣಿ ಉಪನ್ಯಾಸಗಳನ್ನು ನೀಡಿದಾರೆ.

ಸ್ವತಂತ್ರ ಕೃತಿಗಳು[ಬದಲಾಯಿಸಿ]

 1. ಮೇರಾ ಭಾರತ್ ಮಹಾನ್
 2. ಪೆಪ್ಸಿ ಕೋಕ್ ಅಂತರಾಳ
 3. ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್
 4. ನೆಹರೂ ಪರದೆ ಸರಿಯಿತು
 5. ಸ್ವಾತಂತ್ರ್ಯ ಮಹಾ ಸಂಗ್ರಾಮ ೧೮೫೭- ಒಂದು ವಾಕ್ಚಿತ್ರ
 6. ಭಾರತ ಭಕ್ತ ವಿದ್ಯಾನಂದ
 7. ಸರದಾರ
 8. ಜಾಗೋ ಭಾರತ್ – ಅಂಕಣ ಬರಹ

ಅನುವಾದಿಸಿದ ಹಾಗು ಸಂಪಾದಿಸಿದ ಕೃತಿಗಳು[ಬದಲಾಯಿಸಿ]

 1. ಭಾರತ ಮಾತೆಯ ಕರೆ
 2. ಸ್ವದೇಶಿ ಮತ್ತು ಗೋ ಚಿಕಿತ್ಸೆ

ಸಾಮಾಜಿಕ ಚಟುವಟಿಕೆ[ಬದಲಾಯಿಸಿ]

 1. ರಾಷ್ಟ್ರ ಶಕ್ತಿ ಕೇಂದ್ರ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ಶಿಭಿರಗಳನ್ನು ಆಯೋಜಿಸಿದ್ದಾರೆ.
 2. ಜಾಗೋ ಭಾರತ್ ಎಂಬ ಕಾರ್ಯಕ್ರಮದಿಂದ ರಾಷ್ಟ್ರೀಯತೆಯನ್ನು ನಾಡ ಜನತೆಯಲ್ಲಿ, ವಿಷೇಶವಾಗಿ ಯುವಕರಲ್ಲಿ ಹೆಚ್ಚುಪಡಿಸುವ ಪ್ರಯತ್ನವನ್ನು ರಾಜ್ಯದೆಲ್ಲೆಡೆ ತಮ್ಮ ತಂಡದ ಸಹಿತ ದೇಶಭಕ್ತಿ ಗೀತೆಗಳ ಮೂಲಕ ಅತ್ಯಂತ ಉತ್ಸೂಕತೆಯಿಂದ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಗೋವಾ, ಮುಂಬಯಿಗಳಲ್ಲಿಯೂ ನೀಡುವುದರ ಮೂಲಕ ನಮ್ಮ ದೇಶದ ಕೀರ್ತಿಯನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.

ಉಲ್ಲೇಖನ[ಬದಲಾಯಿಸಿ]