ಚಕ್ಕೋತ ಸೊಪ್ಪು
ಗೋಚರ
ಆಟ್ರಿಪ್ಲೆಕ್ಸ್ ಹಾರ್ಟೆನ್ಸಿಸ್ | |
---|---|
![]() | |
"ಚೀನೊಪೋಡಿಯಂ ಹಾರ್ಟೆನ್ಸ್"ನ 1796ರ ವರ್ಣಚಿತ್ರ[೧] | |
Scientific classification ![]() | |
ಸಾಮ್ರಾಜ್ಯ: | ಪ್ಲಾಂಟೇ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡಿಕಾಟ್‌ಗಳು |
ಗಣ: | ಕ್ಯಾರ್ಯೋಫಿಲಾಲೀಸ್ |
ಕುಟುಂಬ: | ಅಮರ್‍ಯಾಂತೇಸೀ |
ಕುಲ: | ಆಟ್ರಿಪ್ಲೆಕ್ಸ್ |
ಪ್ರಜಾತಿ: | ಆ. ಹಾರ್ಟೆನ್ಸಿಸ್
|
Binomial name | |
ಆಟ್ರಿಪ್ಲೆಕ್ಸ್ ಹಾರ್ಟೆನ್ಸಿಸ್ | |
Synonyms[೩] | |
Synonymy
|
ಚಕ್ಕೋತ ಸೊಪ್ಪು ಅಮರ್‍ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಮೂಲಿಕೆಸಸ್ಯ. ಆಟ್ರಿಪ್ಲೆಕ್ಸ್ ಹಾರ್ಟೆನ್ಸಿಸ್ ಇದರ ಶಾಸ್ತ್ರೀಯ ಹೆಸರು. ಪ್ರಪಂಚದ ಉಪೋಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲೆಲ್ಲ ಇದರ ವ್ಯಾಪ್ತಿ ಉಂಟು. ಭಾರತದಲ್ಲಿ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಇದನ್ನು ಬೆಳೆಸಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದರ ಎಲೆ ಮತ್ತು ಎಳೆಯ ಕಾಂಡವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ.
ಸಸ್ಯದ ರಚನೆ
[ಬದಲಾಯಿಸಿ]ದಪ್ಪ ಹಾಗೂ ಮೆತು ತಿರುಳಿನ ಕಾಂಡ ಮತ್ತು ಎಲೆಗಳುಳ್ಳ ಪುಟ್ಟ ಗಿಡ ಇದು. ಎಲೆಗಳು ಹೃದಯ ಇಲ್ಲವೆ ತ್ರಿಕೋನಾಕಾರದವು. ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಉದ್ದ 10-23 ಸೆಂ.ಮೀ. ಅಂಚು ನಯವಾಗಿರಬಹುದು ಇಲ್ಲವೆ ದಂತಿತವಾಗಿರಬಹುದು. ಹೂಗಳು ಚಿಕ್ಕ ಗಾತ್ರದವು; ಅಂತ್ಯಾರಂಭಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.
ಬೇಸಾಯ
[ಬದಲಾಯಿಸಿ]ಚಕ್ಕೋತ ಸೊಪ್ಪನ್ನು ಯಾವ ಬಗೆಯ ಮಣ್ಣಿನಲ್ಲಾದರೂ ಬೆಳೆಯಬಹುದು. ಬಿತ್ತನೆ ಕಾಲ ಮಾರ್ಚ್ ತಿಂಗಳು. ಒಂದು ಎಕರೆಗೆ 2-2 1/2 ಕಿ.ಗ್ರಾಂ.. ಬೀಜ ಬೇಕಾಗುತ್ತದೆ. ಇದರ ಬೀಜ ಹಾಗೂ ಎಲೆಗಳಲ್ಲಿ ವಿಟಮಿನ್ ಎ ಅಧಿಕ ಮೊತ್ತದಲ್ಲಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Figure from Deutschlands Flora in Abbildungen. Author: Johann Georg Sturm. Painter: Jacob Sturm
- ↑ "Atriplex hortensis". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2008-03-23.
- ↑ The Plant List, Atriplex hortensis L.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: