ಚಂಬಾ ಜಿಲ್ಲೆ
ಚಂಬಾ ಜಿಲ್ಲೆ | |
---|---|
ಹಿಮಾಚಲ ಪ್ರದೇಶದ ಜಿಲ್ಲೆ | |
ಮೇಲೆ ಎಡಕ್ಕಿಂದ ಪ್ರದಕ್ಷಿಣಾಕಾರವಾಗಿ: ಲಕ್ಷಣಾ ದೇವಿ ದೇವಾಲಯ, ಭರ್ಮೌರ್, ಖಜ್ಜಿಯಾರ್‌ನಲ್ಲಿನ ಹುಲ್ಲುಗಾವಲು, ಸಾಚ್ ಕಣಿವೆಮಾರ್ಗ, ಮಣಿಮಹೇಶ್ ಸರೋವರ, ಡಾಲ್‍ಹೌಸಿ ಹತ್ತಿರದ ಪರ್ವತಗಳು | |
![]() ಹಿಮಾಚಲ ಪ್ರದೇಶದಲ್ಲಿ ನೆಲೆ | |
ದೇಶ | ![]() |
ರಾಜ್ಯ | [[File:|23x15px|border |alt=|link=]] Himachal Pradesh |
ವಿಭಾಗ | ಚಂಬಾ |
ಪ್ರಧಾನ ಕಾರ್ಯಾಲಯ | ಚಂಬಾ |
ತಾಲ್ಲೂಕುಗಳು | 7 |
Government | |
• ಲೋಕ ಸಭಾ ಕ್ಷೇತ್ರಗಳು | 1 |
• ವಿಧಾನಸಭಾ ಕ್ಷೇತ್ರಗಳು | 5 |
Area | |
• ಒಟ್ಟು | ೬,೫೨೨ km2 (೨೫೧೮ sq mi) |
Population (2011) | |
• ಒಟ್ಟು | ೫,೧೯,೦೮೦ |
• Density | ೮೦/km2 (೨೧೦/sq mi) |
Time zone | UTC+05:30 (ಐಎಸ್‍ಟಿ) |
Website | http://hpchamba.nic.in/ |
ಚಂಬಾ ಎನ್ನುವುದು ಹಿಮಾಚಲ ಪ್ರದೇಶದ ಒಂದು ಜಿಲ್ಲೆ; ಈ ಜಿಲ್ಲೆ ಹಿಮಾಲಯ ಮತ್ತು ಶಿವಾಲಿಕ ಪರ್ವತಗಳ ಮಧ್ಯೆ ರಾವಿ ಮತ್ತು ಚಂದ್ರಭಾಗಾ ನದಿಗಳಿಂದಾದ ಕಣಿವೆಯಲ್ಲಿದೆ. ಪಶ್ಚಿಮಕ್ಕೆ ಕಾಶ್ಮೀರ, ಪೂರ್ವಕ್ಕೆ ಲಡಾಖ್ ಮತ್ತು ಲಾಹೌಲ್, ದಕ್ಷಿಣಕ್ಕೆ ಕಾಂಗಡಾ ಮತ್ತು ಗುರುದಾಸಪುರ ಜಿಲ್ಲೆಗಳಿವೆ. ಎಷ್ಟೋ ಕಡೆ ಈ ಭಾಗದ ಎತ್ತರ 2,000'-2,100'. 10,000' ಎತ್ತರದವರೆಗೆ ಮಾನವ ವಸತಿಗಳಿವೆ. ಚಂಬಾ, ಭರ್ಮೌರ್, ಚುರಾಹ್, ಭಟಿಯಾತ್ ಮತ್ತು ಪಾಂಗೀ ಇಲ್ಲಿಯ ತಾಲ್ಲೂಕುಗಳು. ಚಂಬಾ ಪ್ರದೇಶ ಅರಣ್ಯಮಯವಾಗಿ ದುರ್ಗಮವಾಗಿದ್ದರೂ ರಮಣೀಯವಾದ್ದು.
2011ರ ಜನಗಣತಿ ಪ್ರಕಾರ, ಚಂಬಾ ಜಿಲ್ಲೆಯ ಜನಸಂಖ್ಯೆ 519,080 ಆಗಿದೆ.[೧] ಇದು ಸರಿಸುಮಾರು ಕೇಪ್ ವೆರ್ದೆ ದೇಶದ ಜನಸಂಖ್ಯೆಗೆ ಸಮವಾಗಿದೆ.[೨]
ಇತಿಹಾಸ, ದೇವಸ್ಥಾನಗಳು
[ಬದಲಾಯಿಸಿ]ಈ ಪ್ರದೇಶವನ್ನು ಕ್ರಿ.ಶ. 6ನೆಯ ಶತಮಾನದಲ್ಲಿ ಮೂಶಣ ವಂಶದವರು ಆಳುತ್ತಿದ್ದರೆಂಬುದು ಇಲ್ಲಿ ಸಿಕ್ಕಿರುವ ಶಾಸನದಿಂದ ಗೊತ್ತಾಗುತ್ತದೆ. ಚಂಬಾ ನಗರಕ್ಕೆ ಸುಮಾರು 25 ಮೈ. ದೂರದಲ್ಲಿರುವ ಬ್ರಹ್ಮೌರ್ (ಹಿಂದಿನ ಬ್ರಹ್ಮಪುರ)[೩][೪] ಎಂಬಲ್ಲಿ ಆ ವಂಶದ ಅಜಿತವರ್ಮ ರಾಜ 750ರಲ್ಲಿ ರಾಜ್ಯವಾಳುತ್ತಿದ್ದನೆನ್ನಲಾಗಿದೆ. ಆತನ ಅನಂತರ ಸುವರ್ಣವರ್ಮ ಮತ್ತು ಲಕ್ಷ್ಮೀವರ್ಮ ಪಟ್ಟಕ್ಕೆ ಬಂದರು. ತರುವಾಯ ಬಂದ ಸಜ್ಜನವರ್ಮ ಚಂಪಕಾ (ಚಂಬಾ) ನಗರವನ್ನು ಸ್ಥಾಪಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಎಂಬುದು ವೊಗೆಲ್ ಅವರ ಮತ. ಇದನ್ನು 10ನೆಯ ಶತಮಾನದ ಪೂರ್ವಾರ್ಧದಲ್ಲಿ ಸಾಹಿಲ್ ವರ್ಮ ಕಟ್ಟಿಸಿದನೆಂದೂ ಕೆಲವರ ಮತ.
11ನೆಯ ಶತಮಾನದಿಂದ ಚಂಬಾ ರಾಜ್ಯದ ಇತಿಹಾಸ ಹೆಚ್ಚಾಗಿ ತಿಳಿದುಬಂದಿಲ್ಲ. ಹಿಂದೆ ಅದು ಚಿಕ್ಕ ಸಂಸ್ಥಾನವಾಗಿತ್ತು. ಈಗ ಹಿಮಾಚಲ ಪ್ರದೇಶದ ಒಂದು ಭಾಗವಾಗಿದೆ.
ಚಂಬಾ ಪ್ರದೇಶದಲ್ಲಿ 8ನೆಯ ಶತಮಾನದಲ್ಲಿ ಬರೀ ಮರಗಳಿಂದ ನಿರ್ಮಿಸಲಾದ ದೇವಸ್ಥಾನಗಳು ಈಗಲೂ ಇವೆ. ಇವು ರಾಜ ಮೇರು ವರ್ಮನ ಕಾಲದಲ್ಲಿ ನಿರ್ಮಿತವಾದವೆನ್ನಲಾಗಿದೆ. ಬ್ರಹ್ಮೌರ್‌ನಲ್ಲಿ ಲಕ್ಷಣಾದೇವಿಯ ಮತ್ತು ಉದಯಪುರದಲ್ಲಿ ಮೃಕುಲ ದೇವಿಯ ಗುಡಿಗಳು ಪ್ರಾಚೀನವಾದುವು. ಗರ್ಭಗುಡಿಯಲ್ಲಿ ಮತ್ತು ಪ್ರವೇಶದ್ವಾರಗಳಲ್ಲಿರುವ ನಕ್ಷೆ ಕೆಲಸಗಳು ಸುಂದರವಾಗಿವೆ. ಇವುಗಳಲ್ಲಿ ಅಷ್ಟಧಾತುಗಳಿಂದ ಕೂಡಿದ ಮಹಿಷಾಸುರಮರ್ದಿನಿಯ ಮೂರ್ತಿ ಅತ್ಯಂತ ಗಮನಾರ್ಹವಾದ್ದು.
ಮೃಕುಲ ದೇವಿ ಮತ್ತು ಶಕ್ತಿ ದೇವಿಯ ಆಲಯಗಳ ನಕ್ಷೆ ಕೆಲಸ ಅಪ್ರತಿಮವಾದ್ದು. ಮೃಕುಲದೇವಿ ಗುಡಿಯಲ್ಲಿ ರಾಮಾಯಣ, ಮಹಾಭಾರತ ಪ್ರಸಂಗಗಳನ್ನೂ, ಶಿವ, ಪಾರ್ವತಿ, ನವಗ್ರಹ ಮತ್ತು ಲೋಹಪಾಲಮೂರ್ತಿಗಳನ್ನು ಸುಂದರವಾಗಿ ಕೆತ್ತಿದ್ದಾರೆ. ಎತ್ತರವಾದ ತ್ರಿಕೋನಾಕಾರದ ಚಪ್ಪರಗಳು ಮರದ ಈ ದೇವಸ್ಥಾನಗಳ ವೈಶಿಷ್ಟ್ಯ.
ಬ್ರಹ್ಮೌರದ ಮಧ್ಯಭಾಗದಲ್ಲಿ ಕಲ್ಲುಕಟ್ಟಡದ ಮಣಿಮಹೇಶ ದೇವಸ್ಥಾನದ ಶಿಖರ ಎತ್ತರವಾದ್ದು. ಅಲ್ಲಿ ಹಿತ್ತಾಳೆಯಲ್ಲಿ ಕೊರೆದ ನಂದಿಯ ಮೇಲೆ ಮೇರುವರ್ಮನ ಆಲೇಖವಿದೆ. ಹಾಗೆಯೇ ನರಸಿಂಹ ದೇವಸ್ಥಾನ, ಎಂಬತ್ತನಾಲ್ಕು ಸಿದ್ಧರ ಸಮಾಧಿ, ಗಣೇಶಮೂರ್ತಿ, ಸೂರ್ಯಮುಖಿ ಶಿವಲಿಂಗ ಇವೆ.
ಚಂಬಾದ ಶಿಲ್ಪಕಲೆಯಲ್ಲಿ ಉತ್ತಮ ಗುಪ್ತಶೈಲಿಯ ಮಾದರಿಯನ್ನೂ, ಸ್ಥಳೀಯ ಜನರ ಶೈಲಿಯನ್ನೂ ಕಾಣಬಹುದು. ಮೃಕುಲ ದೇವಿ ಮಂದಿರ ಕಾಶ್ಮೀರಿ ಕಲಾ ಶೈಲಿಯಲ್ಲಿ ಕಟ್ಟಲಾದ್ದು. ಚಂದ್ರಗುಪ್ತ ಮತ್ತು ತ್ರಿಮುಖರ ಶೈವಮಂದಿರಗಳನ್ನು ರಾಜ ಸಾಹಿಲ್ ವರ್ಮ ನಿರ್ಮಿಸಿದ್ದು. ಲಕ್ಷ್ಮಣ ವರ್ಮನೆಂಬ ರಾಜಕುಮಾರ 11ನೆಯ ಶತಮಾನದಲ್ಲಿ ಶ್ರೀ ಹರಿಹರ ದೇವಸ್ಥಾನವನ್ನು ಕಟ್ಟಿಸಿದ. ಸಾಹಿಲ್ಲವರ್ಮನ ಮಗಳಾದ ಚಂಪಾವತಿಯ ಪ್ರೀತ್ಯರ್ಥವಾಗಿ ಚಂಪೇಶ್ವರೀ ದೇವಸ್ಥಾನವನ್ನು ಕಟ್ಟಿಸಲಾಯಿತೆಂದು ಪ್ರತೀತಿ.
ಚಂಬಾದಲ್ಲಿ ರಾವಿ ನದೀತೀರದಲ್ಲಿರುವ ರಂಗಮಹಲಿನ ಭಿತ್ತಿಚಿತ್ರಗಳಲ್ಲಿ ರಾಮಾಯಣ, ಭಾಗವತ, ದುರ್ಗಾಸಪ್ತಶತಿಗಳ ಪ್ರಸಂಗಗಳ ಚಿತ್ರಣಗಳಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "District Census Handbook: Chamba" (PDF). censusindia.gov.in. Registrar General and Census Commissioner of India. 2011.
- ↑ US Directorate of Intelligence. "Country Comparison:Population". Archived from the original on 13 June 2007. Retrieved 1 October 2011.
Cape Verde 516,100 July 2011 est.
- ↑ Bernier, Ronald M. (1983). "Tradition and Invention in Himachal Pradesh Temple Arts". Artibus Asiae. 44 (1): 65–91. doi:10.2307/3249605. JSTOR 3249605.
- ↑ Reports of the Archaeological Survey of India: 1878-79, Alexander Cunningham, ASI, pages 109-112,
This article incorporates text from this source, which is in the public domain.
ಹೊರಗಿನ ಕೊಂಡಿಗಳು
[ಬದಲಾಯಿಸಿ]
