ಚಂದ್ರಪುಷ್ಪ
ಗೋಚರ
| ಐಪೋಮಿಯಾ ಆಲ್ಬಾ | |
|---|---|
| Conservation status | |
| Scientific classification | |
| ಸಾಮ್ರಾಜ್ಯ: | ಪ್ಲಾಂಟೇ |
| ಏಕಮೂಲ ವರ್ಗ: | ಹೂಬಿಡುವ ಸಸ್ಯ |
| ಏಕಮೂಲ ವರ್ಗ: | ಯೂಡಿಕಾಟ್‌ಗಳು |
| ಏಕಮೂಲ ವರ್ಗ: | ಆಸ್ಟರಿಡ್ಸ್ |
| ಗಣ: | ಸೊಲನೇಲೀಸ್ |
| ಕುಟುಂಬ: | ಕನ್ವಾಲ್ವುಲೇಸೀ |
| ಕುಲ: | ಐಪೋಮಿಯಾ |
| ಪ್ರಜಾತಿ: | ಐ. ಆಲ್ಬಾ
|
| Binomial name | |
| ಐಪೋಮಿಯಾ ಆಲ್ಬಾ | |
ಚಂದ್ರಪುಷ್ಪ ಎನ್ನುವುದು ಕನ್ವಾಲ್ವುಲೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಐಪೋಮಿಯಾ ಆಲ್ಬಾ ಇದರ ಶಾಸ್ತ್ರೀಯ ಹೆಸರು. ಇದು ಅಮೆರಿಕದ ಉಷ್ಣಪ್ರದೇಶಗಳ (tropical America) ಮೂಲವಾಸಿ. ಭಾರತದಲ್ಲಿ ಉದ್ಯಾನಗಳಲ್ಲಿ ಅಂದಕ್ಕೆಂದು ಬೆಳೆಸಲಾಗುತ್ತದೆ.
ಗುಣಲಕ್ಷಣಗಳು
[ಬದಲಾಯಿಸಿ]ಇದೊಂದು ಬಹುವಾರ್ಷಿಕ ಬಳ್ಳಿ. ಇದರ ಕಾಂಡದಲ್ಲಿ ಬಿಳಿಯ ಬಣ್ಣದ ಹಾಲ್ನೊರೆಯಿದೆ. ಎಲೆಗಳು ಹೃದಯಾಕಾರದವು. ಹೂಗಳಿಗೆ ಸುವಾಸನೆ ಉಂಟು. ಅವುಗಳ ಬಣ್ಣ ಬಿಳಿ ಇಲ್ಲವೆ ಉದಾ, ಬಲು ಆಕರ್ಷಕವಾಗಿವೆ. ರಾತ್ರಿ ಅರಳಿ ಮರುಬೆಳಗ್ಗೆ ಬಾಡುತ್ತವೆ.
ಸಸ್ಯವೃದ್ಧಿ
[ಬದಲಾಯಿಸಿ]ಚಂದ್ರಪುಷ್ಪವನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಕೆಲವೊಮ್ಮೆ ಕಾಂಡ ತುಂಡುಗಳಿಂದ ಬೆಳೆಸುವುದೂ ಉಂಟು.
ಉಪಯೋಗಗಳು
[ಬದಲಾಯಿಸಿ]ಇದಕ್ಕೆ ಅಲಂಕಾರ ಪ್ರಾಮುಖ್ಯವೊಂದೇ ಅಲ್ಲದೆ ಬೇರೆ ಉಪಯೋಗಗಳೂ ಇವೆ. ಇದರ ಎಳೆಯ ಎಲೆ ಮತ್ತು ಪುಷ್ಪಪಾತ್ರೆಗಳನ್ನು ತರಕಾರಿಯಾಗಿ ಬಳಸುವುದಿದೆ. ಇದರ ಬೇರಿನ ತೊಗಟೆಯನ್ನು ವಿರೇಚಕವಾಗಿ ಉಪಯೋಗಿಸುವುದುಂಟು.
ಉಲ್ಲೇಖಗಳು
[ಬದಲಾಯಿಸಿ]- ↑ Canteiro, C. (2021). "Ipomoea alba". IUCN Red List of Threatened Species. 2021: e.T126421388A158506713. doi:10.2305/IUCN.UK.2021-1.RLTS.T126421388A158506713.en. Retrieved 18 November 2021.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: