ಚಂದ್ರನಗರ
ಚಂದನ್‍ನಗರ
চন্দননগর ಚಂದರ್‌ನಗರ್ | |
---|---|
ನಗರ | |
ಮೇಲಿನಿಂದ ಪ್ರದಕ್ಷಿಣಾಕಾರವಾಗಿ: ಸೇಕ್ರೆಡ್ ಹಾರ್ಟ್ ಚರ್ಚ್, ನಂದೂಲಾಲ್ ದೇವಾಲಯ, ಟೂರ್ ಡೆ ಲಹೊರ್ಲೋಗ್, ಪಾತಾಲ್ ಬಾರಿ, ಇಂಸ್ಟಿಟ್ಯೂಟ್ ಡೆ ಚಂದರ್‌ನಗೋರ್ ಮತ್ತು ಚಂದನ್‍ನಗರ್ ಸ್ಟ್ರ್ಯಾಂಡ್ | |
Nickname: ಫ಼ರಸ್‌ಡಂಗಾ | |
Coordinates: 22°52′N 88°23′E / 22.87°N 88.38°E | |
ದೇಶ | ![]() |
ರಾಜ್ಯ | ![]() |
ವಿಭಾಗ | ಬರ್ದ್ವಾನ್ |
ಜಿಲ್ಲೆ | ಹೂಗ್ಲಿ |
ಉಪವಿಭಾಗ | ಚಂದನ್‍ನಗರ್ |
ಫ಼್ರೆಂಚ್ ವಸಾಹತು ಸಾಮ್ರಾಜ್ಯದ ಫ಼್ರೆಂಚ್ ಭಾರತೀಯ ವಸಾಹತು | 1696 |
ಭಾರತಕ್ಕೆ ವಾಸ್ತವವಾಗಿ ವರ್ಗಾವಣೆ | 2 ಫ಼ೆಬ್ರುವರಿ1951 |
ಭಾರತಕ್ಕೆ ಕಾನೂನುಬದ್ಧವಾಗಿ ವರ್ಗಾವಣೆ | 9 ಜೂನ್1952 |
ಪಶ್ಚಿಮ ಬಂಗಾಳದಲ್ಲಿ ಏಕೀಕೃತವಾಯಿತು | 2 ಅಕ್ಟೋಬರ್1954 |
Founded by | ಫ಼್ರೆಂಚ್ ಈಸ್ಟ್ ಇಂಡಿಯಾ ಕಂಪನಿ |
Named after | ಹೂಗ್ಲಿ ನದಿಯ ಬಾಗುವಿಕೆಯಿಂದ |
Government | |
• Type | ಮುನಿಸಿಪಲ್ ನಿಗಮ |
• Body | ಚಂದರ್‌ನಗರ್ ಮುನಿಸಿಪಲ್ ನಿಗಮ |
• ಮೇಯರ್ | ರಾಮ್ ಚಕ್ರಬೊರ್ತಿ |
Area | |
• Total | ೧೯ km2 (೭ sq mi) |
Elevation | ೯ m (೩೦ ft) |
Population (2011) | |
• Total | ೧,೬೬,೮೬೭ |
• Density | ೮೮೦೦/km2 (೨೩೦೦೦/sq mi) |
Demonym(s) | ಬಂಗಾಳಿ: ಚಂದನ್‍ನಗರಿ ಫ಼್ರೆಂಚ್: ಚಂದರ್‌ನಗೋರಿಯೆನ್(ನೆ) ಇಂಗಿಷ್: ಚಂದರ್‌ನಗೋರಿಯನ್ |
ಭಾಷೆಗಳು | |
• ಅಧಿಕೃತ |
|
Time zone | UTC+5:30 (ಐಎಸ್‍ಟಿ) |
ಪಿನ್ | 712136, 712137, 712138 |
ದೂರವಾಣಿ ಸಂಕೇತ | +91 33 |
Vehicle registration | WB |
ಲೋಕ ಸಭಾ ಕ್ಷೇತ್ರ | ಹೂಗ್ಲಿ |
ಸಂಸದೆ | ರಚನಾ ಬ್ಯಾನರ್ಜಿ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್) |
ವಿಧಾನಸಭಾ ಕ್ಷೇತ್ರ | ಚಂದನ್‍ನಗರ್ |
ಎಂಎಲ್ಎ | ಇಂದ್ರನೀಲ್ ಸೇನ್ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್) |
Website | http://heritagechandernagore.com/ |
ಚಂದ್ರನಗರ ಎನ್ನುವುದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಕಲ್ಕತ್ತದ ವಾಯುವ್ಯಕ್ಕೆ 21 ಮೈ. ದೂರದಲ್ಲಿ ಉ. ಅ. 220 52' ಮತ್ತು ಪೂ.ರೇ. 880 22' ನಲ್ಲಿ ಹೂಗ್ಲಿ ನದಿಯ ಬಲದಂಡೆಯ ಮೇಲಿರುವ ಈ ಪಟ್ಟಣ ಹಿಂದೆ ಫ್ರೆಂಚರ ವಸಾಹತುವಾಗಿತ್ತು. ಜನಸಂಖ್ಯೆ 166,867 (2011).
ಇತಿಹಾಸ
[ಬದಲಾಯಿಸಿ]ಯೂರೋಪಿನ ಅನೇಕ ದೇಶಗಳವರು ಭಾರತದೊಂದಿಗೆ ನೇರ ವ್ಯಾಪಾರ ಮಾಡಲು ಈ ದೇಶಕ್ಕೆ ಬಂದಾಗ ಫ್ರೆಂಚರೂ ಈ ದೇಶದ ವಿವಿಧ ಭಾಗಗಳಲ್ಲಿ ಕೋಠಿಗಳನ್ನು ಸ್ಥಾಪಿಸಿದರು. 1674ರಲ್ಲಿ ಅಥವಾ 1676ರಲ್ಲಿ ಫ್ರೆಂಚರ ವ್ಯಾಪಾರಕೋಠಿ ಆರಂಭವಾಯಿತು. 1688ರಲ್ಲಿ ಇವರು ಔರಂಗ್‍ಜ಼ೇಬ್‍ನಿಂದ ಚಂದ್ರನಗರ ಹಾಗೂ ಅದರ ಸುತ್ತಣ 3 1/2 ಚ.ಮೈ. ಪ್ರದೇಶವನ್ನು ಪಡೆದುಕೊಂಡರು. ತರುವಾಯ ಇಲ್ಲಿ ಒಂದು ಕೋಟೆಯನ್ನು ನಿರ್ಮಿಸಲಾಯಿತು. ಈ ಊರು ಹೂಗ್ಲಿ ನದಿಯ ದಂಡೆಯ ಮೇಲಿದ್ದುದರಿಂದ ನೌಕಾ ವ್ಯಾಪಾರಕ್ಕೂ ಅನುಕೂಲವಾಗಿತ್ತು. ಭಾರತದ ಇತರ ಕೆಲವು ಪ್ರದೇಶಗಳಂತೆ ಬಂಗಾಳದಲ್ಲೂ ಫ್ರೆಂಚರಿಗೂ ಬ್ರಿಟಿಷರಿಗೂ ರಾಜಕೀಯ ಪೈಪೋಟಿ ಏರ್ಪಟ್ಟಿತ್ತು. 1757ರಲ್ಲಿ ಬ್ರಿಟಿಷರು ಚಂದ್ರನಗರವನ್ನು ಮುತ್ತಿದರು. ಆಗ ಕ್ಲೈವ್ ಭೂಸೈನ್ಯದ ದಂಡನಾಯಕತ್ವವನ್ನೂ, ಅಡ್ಮಿರಲ್ ವ್ಯಾಟ್ಸನ್ ನೌಕಾಪಡೆಯ ನೇತೃತ್ವವನ್ನೂ ವಹಿಸಿದ್ದರು. ಚಂದ್ರನಗರ ಬ್ರಿಟಿಷರ ವಶವಾಯಿತು. ಬ್ರಿಟಿಷರು ಇಲ್ಲಿ ಅನೇಕ ಮನೆಗಳನ್ನು ನಾಶಮಾಡಿದರು, ಕೋಟೆಯನ್ನು ಹಾಳುಗೆಡವಿದರು. ಈ ಊರಿನ ಪತನದಿಂದ ಬಂಗಾಳದಲ್ಲಿ ಫ್ರೆಂಚರ ಬಲ ಕುಸಿಯಿತು.
ಯೂರೋಪಿನಲ್ಲಿ ನಡೆದ ಏಳು ವರ್ಷಗಳ ಯುದ್ಧದ ಅನಂತರ ಏರ್ಪಟ್ಟ ಶಾಂತಿ ಕೌಲಿನಂತೆ 1765ರಲ್ಲಿ ಬ್ರಿಟಿಷರು ಚಂದ್ರನಗರವನ್ನು ಫ್ರೆಂಚರಿಗೆ ಹಿಂದಿರುಗಿಸಿದರಾದರೂ 1794ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ನಡುವೆ ಮತ್ತೆ ವಿರಸ ಬೆಳೆದಾಗ ಬ್ರಿಟಿಷರು ಈ ಊರನ್ನು ಪುನಃ ವಶಪಡಿಸಿಕೊಂಡರು. 1802ರಲ್ಲಿ ಆದ ಆಮಿಯೆನ್ಸ್ ಶಾಂತಿ ಕೌಲಾದಾಗ[೧] ಇದು ಮತ್ತೆ ಫ್ರೆಂಚರ ಕೈಸೇರಿತು. ಅದೇ ವರ್ಷ ಬ್ರಿಟಿಷರು ಪುನಃ ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ರೀತಿ ಪದೇ ಪದೇ ಇದರ ಒಡೆತನದಲ್ಲಿ ಬದಲಾವಣೆ ಆದ ಬಳಿಕ ಅಂತಿಮವಾಗಿ 1815ರ ಒಪ್ಪಂದಕ್ಕನುಗುಣವಾಗಿ ಇದು ಫ್ರೆಂಚರ ಕೈಸೇರಿತು. 1950ರ ವರೆಗೂ ಅವರ ವಶದಲ್ಲೇ ಉಳಿದಿತ್ತು.
ಡೂಪ್ಲೆಕ್ಸ್ ಫ್ರೆಂಚ್ ಭಾರತದ ಗವರ್ನರಾಗಿ ಬಂದಾಗ ಚಂದ್ರನಗರದ ಮಹತ್ತ್ವ ಅಧಿಕವಾಯಿತು. ಆಗ ಇದನ್ನು ಅಭಿವೃದ್ಧಿಗೊಳಿಸಲಾಯಿತು. ಆಗ ಇಟ್ಟಿಗೆಗಳನ್ನು ಬಳಸಿ 2,000 ಮನೆಗಳು ನಿರ್ಮಾಣವಾದುವು.[೨] ಗಣನೀಯ ಪ್ರಮಾಣದಲ್ಲಿ ವ್ಯಾಪಾರ ಬೆಳೆಯಿತು. 1884ರಲ್ಲಿ ಇಲ್ಲಿ ಒಂದು ದೊಡ್ಡ ರೋಮನ್ ಕ್ಯಾತೋಲಿಕ್ ಚರ್ಚ್ ನಿರ್ಮಾಣವಾಯಿತು.[೩] 1862ರಲ್ಲಿ ಸ್ಥಾಪಿಸಿದ ಡೂಪ್ಲೆಕ್ಸ್ ಕಾಲೇಜ್ ಈಗ ಒಂದು ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ. ಹಿಂದೆ ಸರ್ಕಾರ ಭವನವಾಗಿದ್ದ ಕಟ್ಟಡದಲ್ಲಿ ಈಗ ವಸ್ತುಸಂಗ್ರಹಾಲಯ, ಕಲಾಪ್ರದರ್ಶನಾಲಯ ಇವೆ.
ಕೆಲವು ವಿವರಗಳು
[ಬದಲಾಯಿಸಿ]ಕಳ್ಳ ಸಾಗಣೆದಾರರಿಗೂ, ತಲೆ ತಪ್ಪಿಸಿಕೊಳ್ಳುವವರಿಗೂ ಇದು ಹಿಂದೆ ಅನುಕೂಲವಾದ ಸ್ಥಳವಾಗಿತ್ತು. ಬ್ರಿಟಿಷ್ ಭಾರತದ ನಡುವೆ ಈ ಚಿಕ್ಕ ಫೆಂಚ್ ವಸಾಹತು ಇದ್ದದ್ದೂ, ಇಲ್ಲಿಂದ ಸುಲಭವಾಗಿ ಬಂಗಾಳ ಕೊಲ್ಲಿಯನ್ನು ಪ್ರವೇಶಿಸಿ ಇತರ ಪ್ರದೇಶಗಳಿಗೆ ಹೋಗಲು ಸುಲಭವಾಗಿದ್ದದ್ದೂ ಇದಕ್ಕೆ ಕಾರಣವಿರಬಹುದು. ಇದು ಬ್ರಿಟಿಷ್ ಭಾರತದಿಂದ ಸುತ್ತವರಿಯಲ್ಪಟ್ಟ ಪುಟ್ಟ ವಸಾಹತುವಾಗಿದ್ದರಿಂದ ಫ್ರೆಂಚರ ಪ್ರತ್ಯೇಕ ಆಡಳಿತದಲ್ಲಿ ಇದು ಪ್ರಗತಿ ಸಾಧಿಸಲಿಲ್ಲ. 1950ರಲ್ಲಿ ನಡೆಸಿದ ಜನಮತಗಣನೆಗೆ ಅನುಗುಣವಾಗಿ ಗಣರಾಜ್ಯ ಭಾರತದಲ್ಲಿ ಇದು ವಿಲೀನಗೊಂಡಿತು. 1951ರಲ್ಲಿ ಇದನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಗೆ ಸೇರಿಸಲಾಯಿತು. ಈ ಪಟ್ಟಣದ ನಿವಾಸಿಗಳಿಗೆ, ಪಾಂಡಿಚೆರಿಯ ನಿವಾಸಿಗಳಿಗೆ ನೀಡಿದಂತೆ, ಫ಼್ರೆಂಚ್ ರಾಷ್ಟ್ರೀಯತ್ವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ನೀಡಲಾಯಿತು.[೪] ೨ ಅಕ್ಟೋಬರ್ ೧೯೫೪ರಲ್ಲಿ ಚಂದನ್‍ನಗರವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಏಕೀಕರಿಸಲಾಯಿತು.[೫] ಇಲ್ಲಿ ಮುನಿಸಿಪಲ್ ಕಾರ್ಪೋರೇಷನ್ ಸ್ಥಾಪಿತವಾದ್ದು 1954ರಲ್ಲಿ. ಪಶ್ಚಿಮ ಬಂಗಾಳದ ಒಂದು ಭಾರಿ ಸೆಣಬಿನ ಗಿರಣಿ ಇಲ್ಲಿದೆ. ಕಲ್ಕತ್ತ ಮತ್ತ ಚಂದ್ರನಗರಗಳ ನಡುವೆ ರೈಲುಸಂಪರ್ಕವಿದೆ. ಬಟ್ಟೆ ನೇಯುವುದು, ಪೀಠೋಪಕರಣಗಳ ತಯಾರಿಕೆ ಇಲ್ಲಿಯ ಪ್ರಧಾನ ಕೈಗಾರಿಕೆಗಳು. ಚಂದ್ರನಗರ-ಚಿನ್‌ಸುರಾ ಮಾರ್ಗದ ನಡುವೆ, ಇದಕ್ಕೆ ಸಮೀಪದಲ್ಲೇ, ಗೋಸ್ವಾಮಿಘಾಟ್ ಬಳಿ ಕಾಳಿಯ ಒಂದು ಪ್ರಾಚೀನ ದೇವಾಲಯವುಂಟು. ಅದು ಈಗ ಜೀರ್ಣಾವಸ್ಥೆಯಲ್ಲಿದೆ. ಈ ಪಟ್ಟಣದ ಅನೇಕ ಕಟ್ಟಡಗಳು ಜೀರ್ಣವಾದ ಸ್ಥಿತಿಯಲ್ಲಿದ್ದು ಇವುಗಳಿಗೆ ಜೀರ್ಣೋದ್ಧಾರದ ಅಗತ್ಯವಿದೆ.[೬] ಇಲ್ಲಿಯ ವಾಯುಗುಣ ಕಲ್ಕತ್ತಕ್ಕಿಂತಲೂ ತಂಪಾದ್ದು. ಕಲ್ಕತ್ತವನ್ನು ಬಿಟ್ಟರೆ ಇತರ ಸ್ಥಳಗಳಿಗೂ, ಚಂದ್ರನಗರಕ್ಕೂ ನಡುವೆ ಈಗ ಗಣನೀಯ ವ್ಯಾಪಾರ ನಡೆಯುವುದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ "Official text – Treaty of Amiens, March 25, 1802 – Napoleon & Empire".
- ↑
One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 5 (11th ed.). Cambridge University Press. pp. 837–838.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help) - ↑ "Chandannagar's French Buildings Up For Restoration". outlookindia.com (in ಇಂಗ್ಲಿಷ್). Retrieved 2022-05-21.
- ↑ "Treaty to confirm the Cession of Chandernagore". Ministry of External Affairs. Archived from the original on 11 September 2021. Retrieved 11 September 2021.
- ↑ Bondyopadhyay, Biswanath (5 April 2024). Dictionary of Historical Places, Bengal, 1757 – 1947. Primus. p. 135. ISBN 978-93-80607-41-2.
- ↑ Chaudhury, Prasun (31 December 2017). "Chandernagore's French Correction". The Telegraph (in ಇಂಗ್ಲಿಷ್). Kolkota. Archived from the original on 6 August 2019. Retrieved 6 August 2019.

- Pages using gadget WikiMiniAtlas
- Pages with non-numeric formatnum arguments
- Pages using duplicate arguments in template calls
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- CS1 ಇಂಗ್ಲಿಷ್-language sources (en)
- Articles with short description
- Short description is different from Wikidata
- Pages using infobox settlement with bad settlement type
- Coordinates on Wikidata
- Pages using infobox settlement with possible demonym list
- ಪಶ್ಚಿಮ ಬಂಗಾಳದ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ