ಚಂದ್ರಗಿರಿ (ಶ್ರವಣಬೆಳಗೊಳ)

ಚಂದ್ರಗಿರಿ ಎನ್ನುವುದು ಶ್ರವಣಬೆಳಗೊಳದ ಎರಡು ಬೆಟ್ಟಗಳಲ್ಲಿ ಒಂದು. ಇದನ್ನು ಚಿಕ್ಕ ಬೆಟ್ಟವೆಂದು ಕರೆಯುತ್ತಾರೆ. ಮತ್ತೊಂದು ಬೆಟ್ಟ ಇಂದ್ರಗಿರಿ.[೧] ಚಂದ್ರಗಿರಿ ಶಿಖರದ ಎತ್ತರ ಸಮುದ್ರಮಟ್ಟದಿಂದ 3,052'. ಈ ಬೆಟ್ಟದ ಮೇಲೆ 13 ಬಸದಿಗಳಿವೆ. ಎಲ್ಲವೂ ದ್ರಾವಿಡ ಶೈಲಿಯಲ್ಲಿ ಕಟ್ಟಿದವು. ಇದರಲ್ಲಿ ಕೆಲವು 8ನೆಯ ಶತಮಾನದಷ್ಟು ಪುರಾತನವಾದವು. ಶಾಂತಿನಾಥ ಬಸದಿ, ಪಾರ್ಶ್ವನಾಥ ಬಸದಿ, ಚಂದ್ರಗುಪ್ತ ಬಸದಿ, ಚಂದ್ರಪ್ರಭ ಬಸದಿ, ಚಾವುಂಡರಾಯ ಬಸದಿ-ಇವು ಇಲ್ಲಿರುವ ಬಸದಿಗಳಲ್ಲಿ ಕೆಲವು. ಕೂಗೆ ಬ್ರಹ್ಮದೇವರ ಕಂಬ, ಮಹಾನವಮಿ ಮಂಟಪ, ಭರತೇಶ್ವರ ವಿಗ್ರಹ, ಇರುವೆ ಬ್ರಹ್ಮದೇವರ ಗುಡಿ, ಕಂಚಿನ ದೊಣೆ, ಲಕ್ಕಿದೊಣೆ, ಭದ್ರಬಾಹು ಗುಹೆ, ಚಾವುಂಡರಾಯನ ಬಂಡೆ-ಇವೂ ಪ್ರೇಕ್ಷಣೀಯ.
ಉತ್ತರ ಭಾರತದಲ್ಲಿ ಕ್ಷಾಮ ಸಂಭವಿಸಿದಾಗ ಭದ್ರಬಾಹು ಮುನಿಯ ನೇತೃತ್ವದಲ್ಲಿ ಜೈನಸಂಘ ದಕ್ಷಿಣಕ್ಕೆ ವಲಸೆ ಬಂದು ಶ್ರವಣಬೆಳಗೊಳದಲ್ಲಿ ಬೀಡುಬಿಟ್ಟು ವಿಷಯವನ್ನೊಳಗೊಂಡ ಪ್ರಸಿದ್ಧ ಶಾಸನ ಇರುವುದು ಚಂದ್ರಗಿರಿಯ ಬೆಟ್ಟದ ಮೇಲೆಯೇ.[೨] ಚಂದ್ರಗುಪ್ತ ಮೌರ್ಯ ತನ್ನ ಕೊನೆಗಾಲವನ್ನು ಇಲ್ಲಿಯೇ ಕಳೆದನೆಂದು ನಂಬಲಾಗಿದೆ.[೩] ಈ ಬೆಟ್ಟದ ಬಂಡೆಗಳ ಮೇಲಣ ಶಾಸನಗಳು ಕನ್ನಡ ಲಿಪಿ, ಭಾಷೆ, ಸಾಹಿತ್ಯ ಕುರಿತ ವಿಚಾರಗಳ ಮೇಲೆ ವಿಶೇಷವಾದ ಬೆಳಕು ಬೀರುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ JHC (2011-12-17). "Indragiri". Jain Heritage Centres (in ಅಮೆರಿಕನ್ ಇಂಗ್ಲಿಷ್). Retrieved 2024-12-27.
- ↑ Mookerji 1988, p. 40.
- ↑ Rice 1889, p. 5.
ಗ್ರಂಥಸೂಚಿ
[ಬದಲಾಯಿಸಿ]- Mookerji, Radha Kumud (1988) [first published in 1966], Chandragupta Maurya and his times (4th ed.), Motilal Banarsidass, ISBN 81-208-0433-3
- Rice, B. Lewis (1889). Inscriptions at Sravana Belgola: a chief seat of the Jains, (Archaeological Survey of Mysore). Bangalore : Mysore Govt. Central Press.
