ಚಂದ್ರಗಿರಿ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಗಿರಿ ಕೋಟೆಯು ಒಂದು ಐತಿಹಾಸಿಕ ಕೋಟೆಯಾಗಿದ್ದು, ೧೧ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಚಂದ್ರಗಿರಿ, ತಿರುಪತಿ ಜಿಲ್ಲೆಯ ಆಂಧ್ರಪ್ರದೇಶದಲ್ಲಿದೆ. ವಿಜಯನಗರದ ಚಕ್ರವರ್ತಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಇದನ್ನು ೧೧ ನೇ ಶತಮಾನದಲ್ಲಿ ಯಾದವ ದೊರೆಗಳಿಂದ ನಿರ್ಮಿಸಲ್ಪಟ್ಟಿತ್ತು.[೧] ೧೪೬೦ ರಲ್ಲಿ.ಎ.ಡಿ. ಓದ್ರಾ ಗಜಪತಿ ಕಪಿಲೇಂದ್ರ ದೇವ್ ಚಂದ್ರಗಿರಿ ಕೋಟೆಯನ್ನು ವಶಪಡಿಸಿಕೊಂಡರು.

ಚಂದ್ರಗಿರಿ ಕೋಟೆಯ ಗೋಡೆ

ಇತಿಹಾಸ[ಬದಲಾಯಿಸಿ]

ಚಂದ್ರಗಿರಿಯು ಸುಮಾರು ಮೂರು ಶತಮಾನಗಳ ಕಾಲ ರಾಜಮನೆತನದ ಆಳ್ವಿಕೆಯಲ್ಲಿತ್ತು. ೧೩೬೭ ರಲ್ಲಿ ವಿಜಯನಗರಯಾದವ ಆಡಳಿತಗಾರರ ನಿಯಂತ್ರಣಕ್ಕೆ ಒಳಪಟ್ಟಿತು. ಇದು ಸಾಳ್ವ ನರಸಿಂಹದೇವರಾಯನ ಆಳ್ವಿಕೆಯಲ್ಲಿ ೧೫೬೦ ರ ಸಮಯದಲ್ಲಿ ಪ್ರಾಮುಖ್ಯತೆಗೆ ಬಂದಿತು. ನಂತರ, ಅತ್ಯಂತ ಪ್ರಸಿದ್ಧವಾದ ವಿಜಯನಗರ ಸಾಮ್ರಾಟ ಶ್ರೀಕೃಷ್ಣದೇವರಾಯ, ಪೆನುಕೊಂಡದಲ್ಲಿ ಅವನ ಪಟ್ಟಾಭಿಷೇಕದವರೆಗೂ ರಾಜಕುಮಾರನಾಗಿ ಈ ಕೋಟೆಯಲ್ಲಿ ಅಳ್ವಿಕೆನಡೆಸಿದನು.[೨] ಈ ಕೋಟೆಯಲ್ಲಿ ಅವನು ತನ್ನ ಭಾವಿ ರಾಣಿ ಚಿನ್ನಾದೇವಿಯನ್ನು ಭೇಟಿಯಾದನು. ಚಂದ್ರಗಿರಿ ವಿಜಯನಗರ ಸಾಮ್ರಾಜ್ಯದ ೪ನೇ ರಾಜಧಾನಿಯಾಗಿತ್ತು. ಗೋಲ್ಕೊಂಡ ಸುಲ್ತಾನರು ಪೆನುಕೊಂಡದ ಮೇಲೆ ದಾಳಿ ಮಾಡಿದಾಗ ರಾಯರು ತಮ್ಮ ರಾಜಧಾನಿಯನ್ನು ಇಲ್ಲಿಗೆ ಬದಲಾಯಿಸಿದರು. ೧೬೪೬ ರಲ್ಲಿ ಕೋಟೆಯನ್ನು ಗೋಲ್ಕೊಂಡ ಪ್ರದೇಶಕ್ಕೆ ಸೇರಿಸಲಾಯಿತು ಮತ್ತು ನಂತರ ಮೈಸೂರು ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು. ಇದು ೧೭೯೨ ರಿಂದ ಮರೆಯಾಯಿತು. ರಾಜ ಮಹಲ್ ಅರಮನೆಯು ಈಗ ಪುರಾತತ್ವ ವಸ್ತುಸಂಗ್ರಹಾಲಯವಾಗಿದೆ. ಅರಮನೆಯು ವಿಜಯನಗರ ಅವಧಿಯ ಇಂಡೋ-ಸಾರ್ಸೆನ್ ವಾಸ್ತುಶೈಲಿಗೆ ಒಂದು ಉದಾಹರಣೆಯಾಗಿದೆ. ಕಿರೀಟದ ಗೋಪುರಗಳು ಹಿಂದೂ ವಾಸ್ತುಶಿಲ್ಪದ ಅಂಶಗಳನ್ನು ಪ್ರತಿನಿಧಿಸುತ್ತವೆ. ಅರಮನೆಯನ್ನು ಕಲ್ಲು, ಇಟ್ಟಿಗೆ, ಸುಣ್ಣದ ಗಾರೆ ಮತ್ತು ಮರದ ರಹಿತವಾಗಿ ಬಳಸಿ ನಿರ್ಮಿಸಲಾಗಿದೆ. ವಿಜಯನಗರ ರಾಜರ ಆಶ್ರಯದಲ್ಲಿ ಈ ಕೋಟೆಯಲ್ಲಿ ಕೆಲವು ಪ್ರಮುಖ ಕಾವ್ಯಗಳು ಅಥವಾ ಮಹಾಕಾವ್ಯಗಳನ್ನು ಬರೆಯಲಾಗಿದೆ. ಕೋಟೆಯ ಒಳಗೆ ಎಂಟು ದೇವಾಲಯಗಳು, ರಾಜ ಮಹಲ್, ರಾಣಿ ಮಹಲ್ ಮತ್ತು ಇತರ ಪಾಳುಬಿದ್ದ ರಚನೆಗಳು. ಕೋಟೆಯ ಒಳಭಾಗದಲ್ಲಿ ರಾಜ ಮಹಲ್ ಮತ್ತು ರಾಣಿ ಮಹಲ್ ಅನ್ನು ೩೦ ವರ್ಷಗಳಿಗೂ ಹೆಚ್ಚು ಕಾಲ ಉತ್ತಮವಾಗಿ ನಿರ್ವಹಿಸಲಾಗಿದೆ ಮತ್ತು ರಾಜ ಮಹಲ್ ಅನ್ನು ಅರೆಕೊಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಆರ್ಕಿಯಾಲಾಜಿಕಲ್ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ವಸ್ತುಸಂಗ್ರಹಾಲಯವು ಕೋಟೆ, ಮುಖ್ಯ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶದ ಇತರ ರಚನೆಗಳ ಮಾದರಿಗಳನ್ನು ಹೊಂದಿದೆ. ಈ ಎರಡೂ ಕಟ್ಟಡಗಳನ್ನು ಮರವನ್ನು ಬಳಸದೆ ನಿರ್ಮಿಸಲಾಗಿದ್ದು, ಸುಣ್ಣ, ಇಟ್ಟಿಗೆ ಮತ್ತು ಗಾರೆ ಮಾತ್ರ ಬಳಸಲಾಗಿದೆ. ರಾಣಿ ಮಹಲ್ ಸಮತಟ್ಟಾದ ಮೇಲ್ಛಾವಣಿಯನ್ನು ಹೊಂದಿದೆ ಮತ್ತು ತಳಮಟ್ಟದಲ್ಲಿ ಇದು ಸ್ಥಿರವಾಗಿದೆ ಮತ್ತು ಶಿಲಾಶಾಸನದ ಪುರಾವೆಗಳು ಈ ಕಟ್ಟಡವನ್ನು ಕಮಾಂಡರ್ ಕ್ವಾರ್ಟರ್ಸ್ ಆಗಿಯೂ ಬಳಸಲಾಗಿದೆ ಎಂದು ಹೇಳುತ್ತದೆ.

ರಾಣಿ ಮಹಲ್

ಈ ಕೋಟೆಯು ಬ್ರಿಟಿಷರಿಗೆ ಸೇಂಟ್ ಜಾರ್ಜ್ ಕೋಟೆಯ ಭೂಮಿಯನ್ನು ನೀಡುವ ಒಪ್ಪಂದಕ್ಕೆ ವಿಜಯನಗರದ ರಾಜ ಶ್ರೀ ರಂಗರಾಯರು ಆಗಸ್ಟ್ ೧೬೩೯ ರಲ್ಲಿ ಸಹಿ ಹಾಕಿದರು.

ವ್ಯಾಸತೀರ್ಥ[ಬದಲಾಯಿಸಿ]

ಋಷಿ ವ್ಯಾಸತೀರ್ಥರು ಇಲ್ಲಿ ನೆಲೆಸುತ್ತಿದ್ದರು ಮತ್ತು ರಾಜ ಸಾಳುವ ನರಸಿಂಹ ದೇವರಾಯರ ಆಧ್ಯಾತ್ಮಿಕ ಸಲಹೆಗಾರರಾಗಿದ್ದರು ಮತ್ತು ಅವರಿಗೆ ತಿರುಮಲ ದೇವಸ್ಥಾನದಲ್ಲಿ ಪೂಜೆಯನ್ನು ವಹಿಸಲಾಯಿತು. ವ್ಯಾಸತೀರ್ಥರು ಎರಡನೇ ನರಸಿಂಹರಾಯರ ಆಸ್ಥಾನದಲ್ಲಿ ಚಂದ್ರಗಿರಿಯಲ್ಲಿಯೇ ಇದ್ದರು. ಕೋಟೆಯು ಪ್ರಸಿದ್ಧ ತಿರುಪತಿ ದೇವಸ್ಥಾನದಿಂದ ೧೧ ಕಿಮೀ ದೂರದಲ್ಲಿದೆ ಮತ್ತು ಈ ಕೋಟೆಯಿಂದ ದೇವಾಲಯಕ್ಕೆ ಕಾಲುದಾರಿ ಇದೆ,ಇದು ಋಷಿಯು ಇಲ್ಲಿ ನೆಲೆಸಿದ ಕುರುಹಾಗಿದೆ.

ಶ್ರೀವಾರಿ ಮೆಟ್ಟು[ಬದಲಾಯಿಸಿ]

ಪ್ರಸಿದ್ಧ ಶ್ರೀವಾರಿ ಮೆಟ್ಟು, ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರಸಿದ್ಧವಾದ ನಡಿಗೆಯ ದಾರಿಗಳಲ್ಲಿ ಒಂದು ಈ ಕೋಟೆಯಿಂದ ಪ್ರಾರಂಭವಾಗುತ್ತದೆ ಮತ್ತು ಇದನ್ನು ಮೂಲತಃ ವಿಜಯನಗರ ಸಾಮ್ರಾಜ್ಯದ ರಾಜಮನೆತನದವರು ಬಳಸುತ್ತಿದ್ದರು,ನಂತರ ಇದು ಸಾರ್ವಜನಿಕರ ಬಳಕೆಯ ಮಾರ್ಗವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://templesinindiainfo.com/chandragiri-fort-sound-and-light-show-timings-historical/
  2. https://timesofindia.indiatimes.com/travel/Tirupati/Chandragiri-Fort/ps47148174.cms